ಆ ದಿನಗಳನೆಂತು ಮರೆಯಲಿ ನಾನು 3
ಹೊಳೆಯ ದಡದಿ ಕಲ್ಲನಾಯ್ದುತಂದು
ರಾಶಿಹಾಕಿ ಸುತ್ತ ಗೆಳೆಯರೆಲ್ಲ ಕುಳಿತು
ಕಲ್ಲ ಮೇಲೆ ಚಿಮ್ಮಿ ಕೈನೆಲಕೆ ಬಡಿದು
ಕಲ್ಲು ನೆಲೆಕೆ ಬೀಳದಂತೆ ಆತು ಹಿಡದು
ಕಲ್ಲಿನಾಟವಾಡಿ ಕೇಕೆಹಾಕಿ ನಕ್ಕು ನಲಿದ
ಆ ದಿನಗಳನೆಂತು ಮರೆಯಲಿ ನಾನು
ಜಗಲಿಮೇಲೆ ಪಗಡೆಹಾಸ ಹಾಸಿ ಸುತ್ತ ಕುಳಿತು
ದಾಳಹಾಕಿ ಮನೆಯನೆಣಿಸಿ ಕಾಯಿನೆಡೆಸುತಿಟ್ಟು
ಸೋತೊಡೆ ಹಾಸಕೆದರಿ ಓಡಿ, ಗೆದ್ದೊಡೆ ಕುಣಿದು
ಸಂಭ್ರಮಿಸಿದ ಆ ದಿನಗಳನೆಂತು ಮರೆಯಲಿ ನಾನು
ಜಗಳಗಂಟಿ ಕಾಯನಾಯ್ದು ಕಿತ್ತುತಂದು
ಒಂದರಿಂದಿನ್ನೊಂಕೆ ಜಗಳಹಚ್ಚಿ ಕುಳಿತು
ಒಂದಕ್ಕೊಂದು ಆವೇಶದಿ ಕಾದುಮಡಿದು
ಒಂದೊಂದೆ ತಲೆಯಂತೆ ನೆಲಕೆ ಉರುಳೆ
ವಿಜಯೋತ್ಸವದಿಂ ನಾವು ಮೆರೆಯುತ್ತಿದ್ದ
ಆ ದಿನಗಳನೆಂತು ಮರೆಯಲಿ ನಾನು
ಗುಲಗಂಜಿ, ಗಜ್ಜುಗ, ಹುಣುಸೆಪಿಕ್ಕ, ಹಾಲವಾಣ ಬೀಜವನಾಯ್ದುತಂದು
ಕವಡೆಯ ಒಟ್ಟುಮಾಡಿ ಮನೆಯ ಮಕ್ಕಳೆಲ್ಲಕೂಡಿಅಜ್ಜಿಯೊಡನೆ ಸೇರಿ
ಅಟುಗುಳಿ, ಚೌಕಾಬಾರ, ಹುಲಿ ಕುರಿ, ಹಾವು ಏಣಿ, ಕವಡೆಯಾಟವಾಡಿ
ನಾವೇ ಗೆಲ್ಲ ಬೇಕೆಂಬ ಛಲದಿ ಆಡಿ, ಸೋಲಿಗೊಪ್ಪದೆ ಪ್ರತಿಯಾಟ ಹೂಡಿ
ಗೆಲ್ಲುವಗಳಿಪುವರೆಗೂ ಆಡುತ್ತಿದ್ದ ಆ ದಿನಗಳನೆಂತು ಮರೆಯಲಿ ನಾನು
ನಾನೆಂದಿಗೂ ಮರೆಯಲಾಗದ ಆ ದಿನ ಇಂದಿಲ್ಲವಲ್ಲ
ನಾ ಮರೆಯಲಾಗದಾ ದಿನ ಮತ್ತೊಮ್ಮೆ ಬರುವುದೇ?
ಬೇಗ ಬರಲಿ ಆ ಮಧುರ ಕ್ಷಣ
ನಾ ಮರೆಯಲಾಗದಾ ದಿನ.
Comments
ಉ: ಆ ದಿನಗಳನೆಂತು ಮರೆಯಲಿ ನಾನು 3
In reply to ಉ: ಆ ದಿನಗಳನೆಂತು ಮರೆಯಲಿ ನಾನು 3 by venkatb83
ಉ: ಆ ದಿನಗಳನೆಂತು ಮರೆಯಲಿ ನಾನು 3