ಅ ಕಪ್ ಓಫ್ ಕಾಫಿ ... ಸಿಪ್ - ೪೮
ಸಿಪ್ - 48
ಮತ್ತದೇ ಆಕಾಶ, ನನ್ನನ್ನು ನೋಡುವ ಇಚ್ಛೆ ಇಲ್ಲದೆ ಕೋಟಿ ತಾರೆ ಗಳು ಮರೆಯಾಗಿದ್ದವು ಕಾರ್ಮುಗಿಲು ಮಳೆಯಾಗಿ ಹರಿದು ಖಾಲಿಯಾಗಿತ್ತು ಆಗಸದ ಒಡಲು. ಮಿಲಿಯನ್ ಕಿಲೋ ಮೀಟರ್ ದೂರದ ವರೆಗೆ ಸಾಗುವ ನೀಲನೋಟಕ್ಕೆ ಚಂದ್ರನ ಹೊರತು ಬೇರೆಯಾವುದೇ ವಸ್ತುವು ಗೋಚರಿಸದಾಯಿತು. ಅವನೊಬ್ಬ ನನ್ನನ್ನು ನೋಡಿ ನಗುತ್ತಿರುವನೋ, ನನಗಾಗಿ ಕರಗುತ್ತಿರುವನೋ ತಿಳಿಯುತ್ತಿಲ್ಲ, ಆದರೂ ಅವನ ಜೊತೆಗಿನ ಒಂಟಿ ಪಯಣ, ಮನದ ವಿರಹದ ಭಾವಗಳನ್ನು ಬಿಚ್ಚಲು ಶುರುಮಾಡಿಕೊಂಡು ಇವತ್ತಿಗೆ ಒಂದು ಅಮಾವಾಸ್ಯೆನಡುವೆ ಬಂದಿತ್ತು.
ಮೊದಲ ಹದಿನೈದು ದಿನಗಳು ನನ್ನ ಆಕೃತಿಯ ಪ್ರೇಮವನ್ನು ಅವನು ತನ್ನ ಕರಗುವೆಕೆಯಲ್ಲೇ ಮನವರಿಕೆ ಮಾಡಿಕೊಟ್ಟ.
ಹದಿನೈದು ದಿನದ ಹಿಂದೆ ಬೆಳಂಬೆಳಗ್ಗೆ ಆಕೃತಿಯು ಕರೆಮಾಡಿ ನನ್ನನು ಎಬ್ಬಿಸಿದ್ದಳು. ಯಾವಾಗಿನಂತೆ ಅವಳ ದನಿಯಲ್ಲಿ ಶ್ರಂಗಾರ ತುಂಬಿರದೆ ಯಾವುದೋ ವಿರಹ ಗೀತೆಯ ಆಲಾಪದಲ್ಲಿ ನನಗೆ ಕರೆ ಮಾಡಿದ್ದಳು.
"ವೈಭು ಎಲ್ಲಿದ್ದಿಯಾ ..?"
"ಪುಣೆ... ನಿನ್ನನ್ನು ತಬ್ಬಿ ಮಲಗಿದ್ದೇನೆ.."
"ನಿಜದ ಆಲಿಂಗನ ನನಗೇನೋ ದೂರವಾಗುತ್ತಿದೆ ಎನಿಸುತ್ತಿದೆ.."
"ಯಾಕೋ ರಾಜಾ..."
"ಸುನಿಲ್, ಕೊಯಂಬತ್ತೂರು ತಲುಪಿದ, ಸಂಜೆ ಚೆನ್ನೈ ಬರುವವನಿದ್ದಾನೆ ಅಂತೆ..."
"ಅಂದ್ರೆ...?"
"ನನ್ನನ್ನುಮುಖಾಮುಖಿ ಭೇಟಿ ಯಾಗ್ಬೇಕಂತೆ"
ಅವಳ ಈ ನುಡಿ ಕೇಳಿ ಮೌನಕ್ಕೆ ಜಾರಿದ್ದೆ.ಎರಡು ನಿಮಿಷ ಜಾರಿದರೂ ಒಂದು ಮಾತಿರಲಿಲ್ಲ. ಮೂರು ಬಾರಿ ನನ್ನಲ್ಲಿ "ವೈಭು ಯು ಆರ್ ಲಿಸ್ತೆನಿಂಗ್..?" ಎನ್ನುತ್ತಾ ಕರೆ ಕತ್ತರಿಸಿದ್ದಳು
ದಿನ ಇಡಿ ಮೌನದಲ್ಲಿದ್ದೆ. ಹದಿನೈದು ದಿನ ಹಿಂದೆ ತೆಕೊಂಡ ನಿರ್ಧಾರ ಇವತ್ತು ಮಂಕಾಗಿತ್ತು, ಮೊಡ್ಯುಲ್ ನಲ್ಲಿ ಯಾವುದೇ ಜ್ಞಾನ ಇರಲಿಲ್ಲ. ಸಾಧಿಸಿ ತೋರಿಸುವ ಹುಮಸ್ಸೂ ಇರಲಿಲ್ಲ. ಜೀವನ್ ನಾಲ್ಕಕ್ಕೆ ಆಫೀಸ್ ಬಿಟ್ಟ ಮೇಲೆ ಅದರ ತೀವ್ರತೆ ಇನ್ನೂ ಏರಿ ನನ್ನನ್ನು ಚುಚ್ಚಲು ಶುರುಮಾಡಿತು.
ರೂಮಿನಲ್ಲಿ ಬೈಕ್ ಇಟ್ಟು ನಡೆಯುತ್ತಾ ಆ ಬಂಡೆ ಸೇರಿದೆ. ಸೇರುವ ಮೊದಲು ಮನೆಗೆ ಕರೆ ಮಾಡಿ ಅವರಿಗೆ ನಾನು ಆರಾಮಾಗೆ ಇದ್ದೇನೆ ಎಂದು ತಿಳಿಸಿ ಮುಂದೆ ಬರುವ ಅಮ್ಮನ ಟೆನ್ಶನ್ ನ ಕರೆಯಿಂದ ತಪ್ಪಿಸಿಕ್ಕೊಂಡೆ. ಸಂಪೂರ್ಣ ಏಕಾಂತದ ಹುಡುಕಾಟದಲ್ಲಿ ನಾನು ಬಂಡೆ ತಲುಪಿದಾಗ ಆಕಾಶ ಖಾಲಿಯಾಗಿತ್ತು. ಚಂದಿರನು ಕರಗುತ್ತಾ ಅಮಾವಾಸ್ಯೆ ಯಲ್ಲಿ ಮರೆಯಾಗಿದ್ದ.
ನನ್ನ ಏಕಾಂತ ಭಂಗ ಮಾಡಲು ಯಾರು ಇರಲಿಲ್ಲ. ಕಣ್ಣು ಹಾಯಿಸಿದಷ್ಟು ದೂರ ಸಮಾನಂತರ ವಾಗಿ ಸಾಗುವ ಬಯಲು. ದಿಗಂತದಲ್ಲಿ ಅದನ್ನು ಸೇರುವ ಕರಿ ಆಗಸ. ದೂರದಲ್ಲಿ ಆಗೊಮ್ಮೆ ಈಗೊಮ್ಮೆ ಸುಳಿಯುವ ಹೈವೇ ಅಲ್ಲಿನ ಭಾರಿ ವಾಹನಗಳ ಟೈರ್ ಸದ್ದು, ನರಳುವ ಮನಸ್ಸಿಗೆ ಶ್ರುತಿ ಹಿಡಿದಿತ್ತು.
ಮೊದಲಿಗೆ ಆಕೃತಿಯನ್ನು ನಾನು ಕಳಕೊಳ್ಳುತ್ತೇನೆ ಎಂಬ ಭಯ ಆವರಿಸಿತು. ಇವತ್ತು ನಾನು ಆ ಎಂಎನ್ಸಿ ಗೆ ಕರೆ ಮಾಡಿ ಅವರ ಆಫರ್ ಅನ್ನು ಆಕ್ಸೆಪ್ಟ್ ಮಾಡುವಂತಿರಲಿಲ್ಲ. ಯಾವುದೋ ಸಾಧನೆಯ ಛಲದಲ್ಲಿ ನಾನು ಅದನ್ನು ಒಂದು ವಾರದ ಹಿಂದೆ ನಿರ್ಲಕ್ಷಿಸಿದ್ದೆ. ಇನ್ನು ನಾನು ಆಕೃತಿಯನ್ನು ಪಡೆಯುವುದು ಕಷ್ಟವೇ ಎಂದಾಗುತಿತ್ತು. ನಡ ನಡುವೆ ಮನೆಯ ಯಜಮಾನ ಗಣಪತಿ ದೊಡ್ಡಪ್ಪ ನನ್ನ ಪರವಾಗಿರುವುದು ಒಂದು ಆಶಾಕಿರಣ ಮೂಡಿಸುತ್ತಿತ್ತು. ಆದರೂ ಇವತ್ತು ಆಕೃತಿ ಮತ್ತು ಸುನಿಲ್ ನಡುವೆ ಏನಾಗ ಬಹುದೋ ಎಂಬ ಚಿಂತೆ ಕಾಡಲಾರಂಬಿಸಿತು. ಮತ್ತೆ ಮೌನ ಆವರಿಸಿತು.
ಸೈಲೆಂಟ್ ಅಲ್ಲಿ ಬಂಡೆಯ ಮೇಲಿದ್ದ ಮೊಬೈಲ್ ಮಿಂಚಲು ಶುರುವಾಯಿತು. ಕವಿದಿರುವ ಕತ್ತಲಿನ ನಡುವೆ ಅದು ಮಿನುಗುತಿತ್ತು. ಅದನ್ನು ನೋಡಿದೆ 'ಆಕೃತಿ' ಯ ಕರೆಯಾಗಿತ್ತು. ಒಂದು ಆಶಾಕಿರಣ ಜಾಗ್ರತ ವಾದಂತೆ ಆಯಿತು.
ಕರೆ ಎತ್ತಿ " " ಮೌನದಲ್ಲಿದ್ದೆ.
"ವೈಭೂ...." ನನ್ನ ಹೆಸರು ಕರೆದು ಅವಳೂ ಮೌನದಲ್ಲಿದ್ದಳು.
ತನ್ನ ನಿರ್ಧಾರ ನನಗೆ ಹೇಳಲಾಗದೆ ಅವಳೂ ಮೌನದಲ್ಲಿ ಇದ್ದಾಳೆ ಅಂದುಕೊಂಡೆ.
ಆ ಬದಿಯಲ್ಲಿ ಬಿಕ್ಕಳಿಕೆ ಹೆಚ್ಚಿತು. ನನ್ನ ಮೌನ ಮರೆ ಆಯಿತು.
"ರಾಜಾ, ಏನಾಯ್ತು...?"
"ವೈಭೂ... "ಎನ್ನುತ್ತಾ ಬಿಕ್ಕಳಿಕೆ ಇನ್ನು ಹೆಚ್ಚಿತು.
"ನೀನು ಅಳ್ತಾ ಇದ್ರೆ ನನಗೆ ಹೇಗೆ ಗೊತ್ತಾಗುತ್ತೆ...? ಏನಾಯ್ತು ...? ಸುನಿಲ್ ಎನೆಂದ...? ದೊಡ್ಡಪ್ಪ ಏನಂದ್ರು ...?"
ಅವಳು ಮತ್ತೆ ಮೌನ.
"ಹೇಳು ರಾಜಾ.. ಏನಾಯ್ತು...?"
"ಪೆರಿಯಪ್ಪಾ ...." ಮತ್ತೆ ಮೌನ ವಾದಳು.
"ಏನಾಯ್ತು ..?"
"ಪೆರಿಯಪ್ಪಾ ಹೋಸ್ಪಿಟಲ್ ನಲ್ಲಿ ಅಡ್ಮಿಟ್ ಆಗಿದ್ದರೆ... ಕೊಮದಲ್ಲಿದ್ದಾರೆ..."
"...??"
"ಸಂಜೆ ಸುನಿಲ್ ನನ್ನು ಕರಕ್ಕೊಂಡು ಬರಲು ಸ್ಟೇಶನ್ ಗೆ ಹೋಗಿದ್ದರು, ಮರಳುವಾಗ ಆಕ್ಸಿಡೆಂಟ್ ಆಯ್ತು, ಸಿರಿಯಸ್ ಅಂತೆ 10 % ಅವರು ಬಚಾವಾಗುವ ಸಾದ್ಯತೆ ಇದೆ ಅಷ್ಟೇ ..." ಎನ್ನುವಷ್ಟರಲ್ಲಿ ಬಿಕ್ಕಳಿಕೆ ಅತಿ ಆಯಿತು.
"ಯಾವ ಹೋಸ್ಪಿಟಲ್ ...?"
"ಅಪೋಲೋ ..."
"ನೀನು ಎಲ್ಲಿದ್ದಿಯಾ ...?"
"ಹೋಗ್ತಾ ಇದ್ದೇನೆ, ಇನ್ನೇನು ತಲುಪಿದೆ ಹೋಸ್ಪಿಟಲ್ ಗೆ"
"ಅಲ್ಲಿ ಯಾರಿದ್ದಾರೆ ..?"
"ಚಿಕ್ಕಪ್ಪ, ಮನೆಯವರೆಲ್ಲ ತಲುಪಿದ್ದಾರೆ... ನನಗೆ ವಿಷಯ ಗೊತ್ತದಷ್ಟೇ... ಅದಕ್ಕೆ ಈಗ ಹೊರಟೆ,ನಿನಗೆ ವಿಷಯ ತಿಳಿಸಲು ಫೋನ್ ಮಾಡಿದೆ"
"ಸರಿ ರಾಜಾ... ನಾನೂ ಬರ್ತಾ ಇದ್ದೇನೆ ಚೆನ್ನೈ ಗೆ"
"ಥಾಂಕ್ ಯು ವೈಭೂ.." ಎನ್ನುತ್ತಾ ಮತ್ತೆ ಅತ್ತಳು.
ಕರೆ ಕಟ್ ಮಾಡಿದೆ.
ಮೊಬೈಲ್ ಒಫ್ಫ್ ಆದಂತೆ ಕತ್ತಲೆ ಆವರಿಸಿತು. ಮೇಲೆ ನೋಡಿದೆ ಒಂದು ಚುಕ್ಕಿಯೂ ಮಿನುಗುತ್ತಿಲ್ಲ. ಚಂದಿರನ ಸುಳಿವಿಲ್ಲ. ನಮ್ಮ ಪ್ರೇಮಕ್ಕೆ ಚಂದಿರ ನಂತಿದ್ದ ದೊಡ್ಡಪ್ಪ ಅಸ್ತಮಿಸುವ ಹೊಸ್ತಿಲಲ್ಲಿ ಇದ್ದ. ಬೆಳಗ್ಗಿನ ದುಃಖ ಈಗ ನೂರು ಪಟ್ಟು ಹೆಚ್ಚಾಯಿತು. ಅದನ್ನು ಹೊರ ಹಾಕುವ ಮನಸ್ಸಾಗುತ್ತಿತ್ತು, ಆದರೆ ಅದಕ್ಕಾಗಿ ಸಮಯ ವ್ಯಯಿಸಿದರೆ ನನ್ನ ಬರುವಿಗೆಗಾಗಿ ಕಾಯುತ್ತಿರುವ ಅವರ ಉಸಿರು ನನ್ನನ್ನು ಬಿಟ್ಟು ಹೋಗುವುದು ಶೂರ್ ಇತ್ತು. ಮನಸ್ಸಿನ ದುಃಖ ದ ಬಗ್ಗೆ ಆಲೋಚಿಸದೇ ಅವರನ್ನು ಆದಷ್ಟು ಬೇಗ ಹೇಗೆ ಸೇರುವುದು ಎಂಬ ಬಗ್ಗೆ ಚಿಂತಿಸಲು ಶುರು ಮಾಡಿದೆ.
'ರಾತ್ರಿ ಹತ್ತಕ್ಕೆ ಮುಂಬೈ ಗೆ ಫ್ಲೈಟ್ ಇದೆ. ಮುಂಬೈ ನಿಂದ ಚೆನ್ನೈಗೆ ಮದ್ಯರಾತ್ರಿ , ಮುಂಜಾವಿನಲ್ಲೂ ಬೇಕಾದಷ್ಟು ಫ್ಲೈಟ್ ಗಳಿವೆ' ಎಂದು ಕರೆಗೆ ಉತ್ತರಿಸಿದ ಹೆಲ್ಪ್ ಲೈನ್ ನಂಬರ್ ಒಂದು ರೀತಿಯ ಸಾಂತ್ವನ ನೀಡಿತು ನನ್ನ ಮನಸ್ಸಿಗೆ.
**************
ಐ.ಸಿ.ಯು ನಲ್ಲಿ ಇಪ್ಪತ್ತು ನಿದ್ರಾವಸ್ತೆಯಲ್ಲಿ ಮಲಗಿರುವ ದೇಹದ ನಡುವಲ್ಲಿ ಅರವತ್ತರ ದೊಡ್ಡಪ್ಪನ ದೇಹವನ್ನು ಮಲಗಿಸಿದ್ದರು. ಏನೇನೋ ಒಬ್ಸೆರ್ವಶನ್ ಸಾಮಾಗ್ರಿಗಳನ್ನು ಇವರ ದೇಹಕ್ಕೆ ಚುಚ್ಚಿ ಇಟ್ಟಿದ್ದರು. ಒಕ್ಸಿಲೋಸ್ಕೋಪ್ ನಲ್ಲಿ ಬಿತ್ತರವಾಯುತಿದ್ದ ಗ್ರಾಫ್ ಇವರ ವಿಷಮ ಸ್ತಿತಿಯನ್ನು ಸಾರುತಿತ್ತು.
ಒಂದು ಬದಿಯಲ್ಲಿ ಸೂಜಿ ಚುಚ್ಚಿರುವ ಅವರ ಬಲ ಅಂಗೈಯನ್ನು ನನ್ನ ಅಂಗೈಯಲ್ಲಿ ಇಟ್ಟು ಚಲಿಸುತಿದ್ದ ಗ್ರಾಫ್ ನ ಏರಿಳಿತ ನೋಡುತ್ತಾ ಅವರ ಜೊತೆ ಕಳೆದ ಮಧುರ ಕ್ಷಣಗಳನ್ನು ನೆನಪಿಸಿದೆ. ಮನಸ್ಸಿಗೆ ಹತ್ತಿರವಾದ ವ್ಯಕ್ತಿಯೊಬ್ಬ ಇವತ್ತು ಮನಸ್ಸಿಂದ ದೂರ ಹಾರುವ ಬಯಕೆಯಲ್ಲಿದ್ದ.
ಅವರನ್ನು, ಅವರ ಕೈಯನ್ನು ಬಿಡುವ ಮನಸ್ಸಾಗಲಿಲ್ಲ. ನನ್ನಷ್ಟಕ್ಕೆ ಮೌನದಲ್ಲಿ ಅವರ ಎದೆಬಡಿತವನ್ನು ಆಲಿಸುತಿದ್ದೆ. ಅಲ್ಲಿ ಒಳಗಿದ್ದ ನನ್ನ್ ಗಳು ಒಮ್ಮೆ ನನ್ನನ್ನು ಒಮ್ಮೆ ಆ ಒಕ್ಸಿಲೋಸ್ಕೋಪ್ ಅನ್ನು ನೋಡುತಿದ್ದರು. ಮನೆಯವರು ಐ.ಸಿ.ಯು ಕೇರ್ ನ ಹೊರಗಿನ ಬೆಂಚಿನ ಮೇಲೆ ಕುಳಿತು ಅಳುತಿದ್ದರು. ಸುನಿಲ್ ನಿಗೆ ಮೂರನೇ ಮಾಳಿಗೆಯ ವಾರ್ಡ್ ಗೆ ಶಿಫ್ಟ್ ಮಾಡಿದ್ದರು. ಅವನಿಗೆ ಸಣ್ಣ ಪುಟ್ಟ ಗಾಯ ಗಳಾಗಿದ್ದವು. ಅಪಘಾತದ ತೀವ್ರತೆಗೆ ಭೋದ ತಪ್ಪಿತ್ತು. ಈಗ ಸುಧಾರಿಸಿ ಕೊಂಡಿದ್ದ.
ಗುಸ್ತಿನಲ್ಲಿದ್ದ ನನ್ನ್ ನನ್ನಲ್ಲಿ "ಟೈಮ್ ಓವರ್..." ಎಂದರು.
ಹೊರ ಹೋಗಲು ಮನಸ್ಸಿರಲಿಲ್ಲ.ಒನ್ ಮೋರ್ ಮಿನುಟ್ ಎನ್ನುತ್ತಾ ಅವರ ಕೈಯನ್ನು ಕಣ್ಣಿಗೆ ಒತ್ತಿಕೊಂಡೆ. ಮತ್ತೆ ಅದರ ಮೇಲೆ ಇನ್ನೊಂದು ಕೈ ಹಿಡಿದು ಅದನ್ನು ಭಂದಿಸಿದೆ.
ಒಂದು ನಿಮಿಷ ಜಾರಿತು. ಅವರ ಕೈಯನ್ನು ನಾನು ಹಾಸಿಗೆಯಲ್ಲಿ ಇಡುವಂತೆ ಒಕ್ಸಿಲೋಸ್ಕೊಪ್ ನ ಏರಿಳಿತ ಒಂದೇ ಮಟ್ಟಿನಲ್ಲಿ ಏರಿ ಇಳಿಯಲು ಶುರು ಮಾಡಿತು.
ನನ್ನ್ ಅಲ್ಲಿದ್ದ ಫೋನ್ ನಿಂದ ಡಾಕ್ಟರ್ ಗೆ ಕರೆ ಮಾಡಿದರು. ಬಂದು ಅವರ ಎದೆಯ ಮೇಲೆ ತಮ್ಮ ಅಂಗೈಯಿಂದ ಒತ್ತಲು ಶುರು ಮಾಡಿದರು. ನನಗೆ ಏನು ಮಾಡ ಬೇಕಂದು ತಿಳಿಯಲಿಲ್ಲ. ಅವರ ಕೈಯಲ್ಲಿ ಕೈ ಹಿಡಿದು ಅವರ ಕಣ್ಣನ್ನೇ ನೋಡುತಿದ್ದೆ.
ಒಂದು ಕ್ಷಣಕ್ಕೆ ಅವ್ವು ತೆರೆದುಕ್ಕೊಂಡಿತು. ಅವರು ಸರಿ ಹೊಂದಿದರು ಎನ್ನುವಷ್ಟರಲ್ಲಿ ನನ್ನ್ ಅವರ ಎದೆಯನ್ನು ಒತ್ತುತಿದ್ದ ಒತ್ತಡ ಕಡಿಮೆ ಮಾಡಿದರು. ಹತ್ತಿರದ ಒಕ್ಸಿಲೋಸ್ಕೊಪ್ ನಲ್ಲಿನ ಗ್ರಾಫ್ ನ ಏರಿಳಿತ ಕಮ್ಮಿ ಆಯಿತು.
ಆ ಕಣ್ಣುಗಳು ತೆರೆದೇ ಇತ್ತು. ಒಳಗೆ ಬಂದ ಡಾಕ್ಟರ್ ನನ್ನ ಕೈಯಲ್ಲಿರುವ ಅವರ ಕೈ ಹಿಡಿದು ನಾಡಿ ಪರೀಕ್ಷಿಸಿದರು.
ತೆರೆದ ಆ ಕಣ್ಣುಗಳನ್ನು ಮುಚ್ಚಿದರು, ದೇಹಕ್ಕೆ ಚುಚ್ಚಿರುವ ಎಲ್ಲ ಸೂಜಿಗಳನ್ನು ಬೇರ್ಪಡಿಸಿದರು.
ಅವರ ಮುಂಗೈ ಈಗ ಎಲ್ಲ ಬಂಧನ ಕಳಚಿ ಖಾಲಿಯಾಗಿತ್ತು. ಅವನ್ನು ತಬ್ಬಿ ಕೊಂಡೆ. ನನ್ನ್ ಮತ್ತು ಡಾಕ್ಟರ್ ಗಳಿಗೆ ಎರಡು ನಿಮಿಷ ಹಿಂದೆ ಜೀವ ಎಂದು ಕರೆಸಿಕೊಳ್ಳುತಿದ್ದ ಈಗ ನಿರ್ಜೀವ ವಾಗಿರುವ ಅವರ ದೇಹವನ್ನು ಆ ಬೆಡ್ ನಿಂದ ಸ್ಟ್ರೆಚರ್ ಗೆ ಹಾಕಲು ನೆರವಾದೆ.
ಸ್ಟ್ರೆಚರ್ ತಳ್ಳುತ್ತಾ ಐ.ಸಿ.ಯು ನಿಂದ ಹೊರಗೆ ಬಂದೆ. ಹೊರಗೆ ಬರೀ ಆಕ್ರಂದನ ತುಂಬಿತ್ತು. ಮನೆಯ ಒಂದು ಕೊಂಡಿ ಕಳಚಿತ್ತು.
********************
ಹದಿನೈದು ದಿನದ ಹಿಂದೆ ಖಾಲಿಯಾದ ಆಕಾಶ ಇವತ್ತೂ ಖಾಲಿಯಾಗಿತ್ತು ಆದರೆ ಇವತ್ತು ಚಂದಿರ ಪೂರ್ಣ ಪ್ರಕಾಶಮಾನವಾಗಿ ನಗುತ್ತಿದ್ದ. ದೊಡ್ಡಪ್ಪನ ಸಾವು, ಇವತ್ತಿನ ಮೋಸ ಕಲಸಿ ದೇಹದ ಒಳಗೆ ಒಂದು ಬಗೆಯ ಉಮ್ಮಳಿಕೆ ಉದ್ಭವ ವಾಗುತಿತ್ತು. ಮತ್ತೆ ಮನಸ್ಸು ಹುಚ್ಚಾಯಿತು. ಕಣ್ಣು ಮುಚ್ಚಿ ಆ ಕಲ್ಲಿನ ಮೇಲೆ ತೇಲಿ ಬರುತಿದ್ದ ಶೃತಿ ಒಳಗೆ ಸೇರಿ ಹೋದೆ.
ಮೂರು ನಿಮಿಷಗಳ ಮನಸ್ಸು ನಿರ್ಲಿಪ್ತವಾಗಿ ಏಕಾಂತದಲ್ಲಿ ಸಂಚರಿಸುತ್ತಿತ್ತು. ದೂರದ ಯಾರು ಇಲ್ಲದ ಲೋಕದಲ್ಲಿ ವಿಹರಿಸುತಿತ್ತು. ಸುತ್ತುತ್ತಿರುವ ಒಂಟಿ ಮನಸ್ಸಿಗೆ ಆಕೃತಿಯ ನೆನಪು ಹತ್ತಿ ಇನ್ನೂ ಅವಳು ನನಗೆ ಸಿಕ್ಕಳು ಎಂದು ಕೊರಗಲು ಶುರುಮಾಡಿತು ಮರುಕ್ಷಣದಲ್ಲಿ.
ಹನ್ನೆರಡು ದಿನಗಳ ಬಳಿಕ ಇವತ್ತು ಅದು ಮೊದಲ ಬಾರಿಗೆ ಧ್ಯಾನ ದಿಂದ ಹೊರಬಂದಿತ್ತು. ಇಷ್ಟು ದಿನ ಬರೀ ಆಕೃತಿಯ ಕುರಿತಾದ ಆಲೋಚನೆ ಯನ್ನು ನಿಯಂತ್ರಿಸುತಿದ್ದ ಧ್ಯಾನ ಇವತ್ತು ಜೀವನ್ ನ ಮೋಸ ಸೇರಿ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಜೀವನ್ ಮಾತ್ತು ಆಕೃತಿಯ ನಡುವೆ ಮನಸ್ಸೆಂಬ ಪೆಂಡುಲಂ ತೂಗುತಿತ್ತು. ಒಂದಕ್ಕೆ ಆಕ್ರಮಿಸದಂತೆ ದೂರ ತಳ್ಳಿದಾಗ ಅದು ಇನ್ನೊಂದರಲ್ಲಿ ಸೇರುತ್ತಿತ್ತು. ಮತ್ತೆ ಅಲ್ಲಿಂದ ಹಿಂದೆ ತಳ್ಳಿದಾಗ ಇಲ್ಲಿ ಸೇರುತ್ತಿತ್ತು.
ಮೂರೇ ನಿಮಿಷದಲ್ಲಿ ನಿರ್ಲಿಪ್ತ ಮನಸ್ಸಿನಲ್ಲಿ ಸಾವಿರ ಸುಳಿಗಳು ಎದ್ದವು. ಕಣ್ಣು ತೆರೆದೆ. ಪೂರ್ಣ ಚಂದಿರ ಇನ್ನೂ ನನ್ನನ್ನು ನೋಡಿ ನಗುತಿದ್ದ. ಅವನಲ್ಲಿ ಕೋಪ ಹೆಚ್ಚಾಗುತ್ತಿತ್ತು. ನಾನು ಇವತ್ತು ಶೂನ್ಯನಾಗಿರುವಾಗ ಅವನು ಮೈತುಂಬಿ ನಗುತಿದ್ದ.
ಬಂಡೆಯ ಮೇಲೆ ಅವನನ್ನೇ ನೋಡುತ್ತಾ ಮಲಗಿಕ್ಕೊಂಡೆ.
ದೊಡ್ಡಪ್ಪನ ನೆನಪಾಗುತಿತ್ತು, ಅವರಿಗೆ ಕೊಟ್ಟ ಮಾತಿನ ನೆನಪಾಗುತಿತ್ತು. ಆಕೃತಿಯ ಆಲಿಂಗನದ ನೆನಪಾಗುತಿತ್ತು. ಅವರ ಮನೆಯಲ್ಲಿ ಹಿಂದೆ ಇರುತಿದ್ದ ಉತ್ಸಾಹ ನೆನಪಾಗುತಿತ್ತು.
ಇವತ್ತು ಅವರು ಸತ್ತು ಹದಿನಾಲ್ಕನೇ ದಿನ, ಕಾರ್ಯಗಳೆಲ್ಲಾ ನಿನ್ನೆ ಮುಗಿದಿದ್ದವು. ಅವರು ಮಾಡಿರುವ ಒಳ್ಳೆಯ ಕೆಲಸ ಅವರ ಆತ್ಮಕ್ಕೆ ಮುಕ್ತಿ ಕೊಟ್ಟಿದೆ ಎಂದು ಒಳ ಮನಸ್ಸಿಗೆ ಅನಿಸುತಿತ್ತು. ಆದರೆ ನಡು ದಾರಿಯಲ್ಲಿ ನಮ್ಮ ಪ್ರೀತಿಯನ್ನು ಬಿಟ್ಟು ಹೋದದಕ್ಕೆ ಬೇಸರ ವೆನಿಸುತಿತ್ತು.
ಮೊಬೈಲ್ ತೆಗೆದು ಅದರಲ್ಲಿ, ಅವರ ಕೊನೆಯ ಭೇಟಿ. ಚೆನ್ನೈನ ಸಿಎಂಬಿಟಿ ಯಲ್ಲಿ ತೆಗೆದ ಫೋಟೋ ತೆರೆದು ನೋಡಿದೆ. ಆಕೃತಿ ಜೊತೆಗಿದ್ದಳು. ಅವಳಗಿಂತ ಎರಡು ಇಂಚು ಎತ್ತರ. ಒಂದು ಅಡಿ ತೋರ. ಝೂಮ್ ಮಾಡಿದೆ.
ಇಲ್ಲಿವರೆಗೆ ಆಕೃತಿಯ ನಗುವಿಗೆ ಝೂಮ್ ಮಾಡುತಿದ್ದ ನಾನು ಇವತ್ತು ಅವರ ಕಣ್ಣಿನ ತೀಕ್ಷ್ಣತೆಗೆ ಝೂಮ್ ಮಾಡುತಿದ್ದೆ. ಆ ಕಣ್ಣುಗಳು ನನ್ನ ಮೊಬೈಲ್ ಸ್ಕ್ರೀನ್ ಆವರಿಸಿತು.
ಅದೇ ಕಣ್ಣುಗಳು ತನ್ನ ಕೊನೆಯ ನೋಟದಲ್ಲಿ ನನ್ನನ್ನು ನೋಡಿದ್ದವು, ಭಾವನೆಗಳನ್ನು ವ್ಯಕ್ತ ಪಡಿಸಲಾಗದೆ ತೆರೆದೆ ಕೊಂಡಿತ್ತು. ಕೊನೆಗೆ ಬೇರೆಯವರು ಅವನ್ನು ಬಲವಂತದಲ್ಲಿ ಮುಚ್ಚಿದ್ದರು.
ಆ ಜೋಡಿ ಕಣ್ಣನ್ನೇ ನೋಡುತಿದ್ದೆ. ಈ ತೇಜಸ್ಸಿನ ಎದುರಿಗೆ ಮೇಲಿನ ಚಂದ್ರ ಮಂದವಾಗಿ ಬೆಳಕು ಚೆಲ್ಲುತಿದ್ದ.
ಒಮ್ಮೆಲೇ ಆ ಚಿತ್ರ ಮರೆ ಆಯಿತು.
"ಆಕೃತಿ ಕಾಲಿಂಗ್ !!"
"ಹಲೋ" ಹನ್ನೆರಡು ದಿನದ ಬಳಿಕ ಅವಳ ದನಿ ಕೇಳಿದ್ದೆ.
"ಹೇಗಿದ್ದಿಯಾ...?" ಎಂದು ಕೇಳಿದೆ.
"ಇದ್ದೇನೆ ವೈಭು, ಮನೆ ಎಲ್ಲಾ ಖಾಲಿ ಖಾಲಿ ಅನ್ಸುತ್ತೆ"
"..."
"ನೀನು ಹೇಗಿದ್ದೀಯ ...?"
"ಮನಸ್ಸೆಲ್ಲಾ ಖಾಲಿಖಾಲಿ ಅನಿಸುತ್ತಾ ಇದೆ.. ಹಲವು ವಿಚಾರ ಗಳಿವೆ ಮನಸಲ್ಲಿ ಅದರೂ ಒಂಟಿ ಯಾಗಿದೆ"
"ಏನಾಯ್ತು ...? ಮತ್ತೆ ವೇದಾಂತಿಯಂತೆ ಯಾಕೆ ಮಾತಾಡ್ತಾ ಇದ್ದೀಯ ..?"
"ಇನ್ನೇನು ಮಾಡ್ಲಿ..? ಮನಸ್ಸಿಗೆ ಹತ್ತಿರವಾದ ಮನಸ್ಸು ಮರೆಯಾಗಿರಲು.."
"ಪೆರಿಯಪ್ಪಾ ..?"
"ಪೆರಿಯಪ್ಪಾ ನೂ , ನೀನೂ.."
"ನಾನು ನಿನ್ ಜೊತೆಗೆ ಇರ್ತೇನೆ ವೈಭು..."
"ದೊಡ್ದಪ್ಪ ನಮ್ಮನ್ನು ಬಿಟ್ಟು ಹೋದ ಮೇಲೆ ಹೇಗೆ ಒಟ್ಟಿಗೆ ಇರಲು ಸಾದ್ಯ...?" ಎಂದೇ ನಾನು ನಿರಾಸೆಯಲ್ಲಿ.
"ಡಂಬು ನಾವು ಸೇರೇ ಸೇರ್ತೇವೆ.. ಇಷ್ಟೇನಾ ನಿನ್ನ ಪ್ರೀತಿ..?" ಎಂದಳು ತುಂಬು ವಿಶ್ವಾಸದಲ್ಲಿ ಇರುವ ಅವಳು.
"...."
"ವೈಭೂ, ಆದರೆ ಇನ್ನೂ ಒಂದು ವರ್ಷ ಕಾಯಬೇಕು.."
ಹಿಂದೆ ಮೂರು ತಿಂಗಳು ಕಾಯು ಎಂದು ನಾನು ಹೇಳಿದಾಗ ಕೋಪಿಸಿದ್ದ ಆಕೃತಿ ಇವತ್ತು ಇನ್ನೂ ಒಂದು ವರ್ಷದಲ್ಲಿ ಸೇರುತ್ತೇವೆ ಎಂದು ಹೇಳಲು ಒಮ್ಮೆ ಖುಷಿ ಒಮ್ಮೆ ದುಃಖ ವಾಯಿತು.
"ಒಂದು ವರ್ಷ ...?"
"ಹೌದು ವೈಭು, ನಮ್ಮ ಸಂಸ್ಕೃತಿಯಲ್ಲಿ ಸೂತಕದ ಒಂದು ವರ್ಷದ ವರೆಗೆ ಯಾವುದೇ ಶುಭ ಕಾರ್ಯ ಮಾಡುವಂತೆ ಇಲ್ಲ,ಇನ್ನೂ ಒಂದು ವರ್ಷ, ನೀನೂ ನನ್ನನ್ನು ಕಾಯ್ ಬೇಕು.. ಕಾಯ್ತಿಯಲ್ಲಾ..?"
"ಕಾಯ್ತೇನೆ ರಾಜಾ.. "
"ಏನಾಯ್ತು ನಿನ್ನ ಡ್ರೀಮ್ ಟೆಕ್ ಸಾಧನೆ...?"
"ಯಾವುದನ್ನು ಸಾಧಿಸ ಬೇಕು ಅಂದುಕೊಂಡಿದ್ನೋ, ಆ ಸಂಧರ್ಬ ಸಿಗಲೇ ಇಲ್ಲ, ಇನ್ನೂ ಸಿಗುವುದು ಇಲ್ಲ.."
"ಏನಾಯ್ತು ವೈಭು ..? ಸಂ ಥಿಂಗ್ ವ್ರೊಂಗ್..?"
"ಹೇಳ್ತಾ ಇದ್ದೆ ಅಲ್ಲ ನಮ್ ಪ್ರಾಜೆಕ್ಟ್ ಹೋಯ್ತು ಹೇಳಿ, ಆ ಪ್ರಾಜೆಕ್ಟ್ ಯಾಕೆ ಹೋಯ್ತು ಹೇಳಿ ಇವತ್ತು ಕಾರಣ ತಿಳಿಯಿತು.."
"ಏನಾಯ್ತು ..?"
"ಜೀವನ್ ಇಲ್ಲೂ ತನ್ನ ಅಸ್ತಿತ್ವ ತೋರಿಸುತ್ತಾ ನನ್ನನ್ನು ತೆರೆಮರೆಯಲ್ಲೇ ಇರಿಸಿ ಬಿಟ್ಟ"
"ಅಂದ್ರೆ ..?"
"ಅವನು ಕ್ಲೈಂಟ್ ಕಂಪೆನಿಗೆ ಜೋಯಿನ್ ಆದ.. ಹೋಗ್ತಾ ಹೋಗ್ತಾ ನಮ್ಮ ಮೊಡ್ಯುಲ್ ಅನ್ನು ಅವನ ಜೊತೆಗೆ ತೆಗೆದುಕೊಂಡು ಹೋದ"
"ಅಯ್ಯೋ ... ಪರವಾಗಿಲ್ಲ ವೈಭು ನೀನೂ ಬೇರೆ ಕಂಪೆನಿ ಟ್ರೈ ಮಾಡು, ನಿನಗೆ ಒಳ್ಳೆ ಕಂಪೆನಿ ಸಿಕ್ಕೆ ಸಿಕ್ಕುತ್ತೆ, ಈ ಒಂದು ವರ್ಷದಲ್ಲಿ ನೀನೂ ಸೆಟಲ್ ಆಗು.. ಮತ್ತೆ ನಿನ್ ಜೊತೆ ನಾನಿರ್ತೇನೆ" ಎಂದಳು ಆಕೃತಿ.
"ಲವ್ ಯು ರಾಜಾ, ನೀನೂ ನನ್ನ ಜೊತೆ ಗಿರುವಷ್ಟು ದಿನ ನನಗೆ ಯಾವುದೇ ಚಿಂತೆ ಇಲ್ಲ"
"ಬಾಯ್ ಕಣೋ..." ಎಂದು ಅವಳು ಕರೆ ಕತ್ತರಿಸಿದಳು.
ಮೇಲಿನ ಚಂದಿರ ಪ್ರಕಾಶಮಾನವಾಗಿ ನಗುತಿದ್ದ. ಅವನ ನಗುವಿನ ಕಾರಣ ನನಗೆ ಮನವರಿಕೆ ಆಗಿತ್ತು. ದೊಡ್ಡಪ್ಪ ಹೋಗ್ತಾ ಹೋಗ್ತಾ ನನಗೆ ಒಂದು ವರ್ಷದ ಗಡವು ಕೊಟ್ಟು ಹೋಗಿದ್ದರು, ಆದರೆ ಆ ಒಂದು ವರ್ಷದಲ್ಲಿ ನಾನು ನನ್ನ ಲೈಫ್ ನಲ್ಲಿ ಸೆಟಲ್ ಆಗಬೇಕು, ಸುನಿಲ್ ನೊಂದಿಗೆ ಮಾತಾಡಿ ನನ್ನ ಲೈನ್ ಕ್ಲೀರ್ ಮಾಡ್ಬೇಕು.
ಅವನನ್ನು ನೋಡುತ್ತಾ ಮತ್ತೆ ನಾನು ನಕ್ಕೆ. ಬಿಳಿ ಚಂದಿರನಲ್ಲಿ ಕರಿ ಬಿಂಬ ಮೂಡಲು ಶುರುವಾಯಿತು. ದೊಡ್ಡಪ್ಪ ಅಲ್ಲಿ ನಗುತಿದ್ದರು.
"ಪೆರಿಯಪ್ಪಾ ನಂಡ್ರೀ" ಎನ್ನುತ್ತಾ ಮತ್ತೆ ಮುಗುಳ ನಕ್ಕೆ. ಬಂಡೆ ಬಿಟ್ಟು ಮನೆಯೆಡೆಗೆ ಹೆಜ್ಜೆ ಹಾಕಿದೆ.
**************