ನನ್ನವಳು ನನ್ನ ನೋಡಿ ನಗುವಿನ ಆ ಅಂದ

ನನ್ನವಳು ನನ್ನ ನೋಡಿ ನಗುವಿನ ಆ ಅಂದ

ಕವನ

ನನ್ನವಳು ನನ್ನ ನೋಡಿ ನಗುವಿನ ಆ ಅಂದ


ಮನೆ ಮನಗಳ ತುಂಬೆಲ್ಲಾ ಶ್ರೀಗಂಧ


ಆ ಹುಣ್ಣಿಮೆಯ ಚಂದಮನು ಬಳಿ ಬಂದಾ


ನಿನ್ನವಳೇ ನನಗಿಂತ ಬಲು ಚಂದಾ ಎಂದ


 


ನನ್ನವಳ ಕಣ್ಣುಗಳ ಹೋಳಪನು ರ‍ವಿ ಕಂಡಾ


ನಿನ್ನವಳ ಕಣ್ಣುಗಳಲಿ ನಾ ಮುಳಗಲೇ ಎಂದ


ಕಣ್ಣ ಹುಬ್ಬುಗಳ ಸಿರಿ ಕಂಡ ಬೃಹ್ಮನು ಮನ ನೊಂದು


ಕಾಮನಬಿಲ್ಲಿಗೆ ಬೆಲೆ ಎಲ್ಲಿ ಭೂವಿಯಲಿ ಇನ್ಮುಂದೆ ಎಂದ


 


ನನ್ನವಳ ತುಟಿಗಳ ನಾಚಿಕೆಯ ನಡುಕದ


ಸವಿ ಉಂಡ ಸೂರ್ಯನ ಕಿರಣಗಳ ಅಂದ


ಆಗುಂಬೆಯ ಸೂರ್ಯಾಸ್ತವೇ ನಿಬ್ಬೆರಗಾಗಿ


ನಾಚಿ ನೊಡುತಿಹುದು ಎಂದ


ನನ್ನವಳ ಹಲ್ಲುಗಳ ಜೊಡನೆಯ ಅಂದ


ಸಹ್ಯಾದ್ರಿ ಗಿರಿ ಸಾಲುಗಳಿಗೆ


ಹೊಲಿಸದಿರುವುದೆ ಒಳಿತು ಎಂದ


 


ನನ್ನವಳ ಕೊರಳಿನ ಆಭರಣಗಳ ಶೃಂಗಾರವನು


ಮನಗಂಡ ಮನ್ಮಥನು ಅಂದಾ


ಆಭರಣಗಳ ಚಲುವು ನಿನ್ನವಳ ಕೊರಳಿನ ಅಂದದಿಂದ


ನನ್ನವಳ ಬಳಕುವ ನಡುವಿನ ಮಾಟವನು


ಕಂಡ ನಟರಾಜನು ಅಂದಾ


ನಾಟ್ಯಕ್ಕೆ ಇದುವೇ ಹೊಸದೊಂದು ಆಯಾಮವೆಂದ


ನನ್ನವಳು ಮುಡಿದ ಹೂವಿನ ಮಕರಂದ


ಹೂವಾಗಿ ಜನಿಸಿರುವುದೇ ಭಾಗ್ಯವಯಿತು ಎಂದ


ನನ್ನವಳ ಪಾದದಲಿನ ಗೊರಂಟಿಯ ಆ ಅಂದ


ಬಾನಲ್ಲಿನ ಚಿತ್ತಾರ ನಾಚಿ ನೀರಾಯಿತು ಎಂದ


 


ನನ್ನವಳ ಮುಂಗುರಳ ಮೇಲಿನ


ಬೆರಳುಗಳ ಚಲನವನು ಕಂಡ


ನಾದಬೃಹ್ಮನ ಸಂಗೀತದ ನಾದಗಳ


ಉಗಮ ಇಲ್ಲಿಂದನೆ ಸರಿ ಎಂದ


ಹಣೆಯ ಸಿಂಧೂರವ ಕನ್ನಡಿಯಲಿ


ತಿದ್ದುವ ಪರಿಯನ್ನು ಕಂಡ


ಪ್ರತಿ ಜನ್ಮ ಇವಳಿಗೆ ಮುಡಿಪಾಗಿರು


ನೀ ಪತಿಯಾಗಿ ಇನ್ಮೂಂದೆ ಎಂದ


 


ಸ್ನೇಹದಿಂದ


ಮಹಾಂತೇಶ(ಮಾನು)

Comments