ಆ ದಿನಗಳನೆಂತು ಮರೆಯಲಿ ನಾನು 4
ಕುಂಟಬಿಲ್ಲೆಗೆಂದು ಉಜ್ಜಿ ಉಜ್ಜಿ ಬಚ್ಚೆಗೈದು
ಮನೆಯ ಬರೆದು ಅಚೆ ನಿಂತು ಬಚ್ಚೆ ಚಿಮ್ಮಿ
ಗೆರೆಯ ತುಳಿಯದಂತೆ ಕುಂಟಿ ಮುಂದೆ ಸಾಗಿ
ಗೆರೆತುಳಿಯೆ ಔಟೌಟೆನುತಲೆಲ್ಲ ಒಗ್ಗೊರಳಲಿ ಕೂಗಿ
ಗೆರೆಯ ತುಳಿಯದಂತೆ ಮನೆಯನೆಲ್ಲ ದಾಟಿ
ಗೆದ್ದೆವೆಂದು ಕುಣಿದು ಕುಪ್ಪಳಿಸಿ ಹರ್ಷಸಿ ನಲಿದ
ನಲವಿನಾ ದಿನಗಳನೆಂತು ಮರೆಯಲಿ ನಾನು
ಚಿಣ್ಣರೊಡನೆ ಕೂಡಿ ಚಿನ್ನಿಕೋಲು, ಬುಗುರಿ,
ಗೋಲಿ, ಮರಕೋತಿಯಾಟವಾಡಿ
ಸಂಜೆ ಕಳೆಯೆ ಮನೆಗೆ ಬಂದು ಶ್ಲೋಕ ಪಠಿಸಿ,
ಭಜನೆಮಾಡಿ ದೇವಗೊಂದಿಸಿ
ವಾರ, ಮಾಸ, ತಿಥಿ, ನಕ್ಷತ್ರ, ಸಂವತ್ಸರ,
ಮಗ್ಗಿಯೊಂದನುಬಿಡದೆ ಬಾಯಿ ಪಾಠಹೇಳಿ
ಅಜ್ಜಿ ಸುತ್ತಾ ನಾವು ಕುಳಿತು
ಸವಿಯ ತುತ್ತಿಗಾಗಿ ಕೈಯ ಒಡ್ಡಿ ಹೊಟ್ಟೆಬಿರಿಯೆ ತಿಂದು
ಕೊನೆಯ ತುತ್ತಿಗಾಗಿ ನಾವು ಕಾದಾಡಿದ
ಆ ದಿನಗಳನೆಂತು ಮರೆಯಲಿ ನಾನು
ರವಿವಾರ ನಮ್ಮೂರ ಸಂತೆ, ಸೋಮವಾರ ಆಚೆಯೂರ ಸಂತೆ,
ಗುರುವಾರ ನೆರೆಯೂರ ಸಂತೆ, ಶನಿವಾರ ಮತ್ತೊಂದೂರ ಸಂತೆ,
ಸಂತೆಯೆಂದೊಡನೆ ಶಾಲೆಬಿಟ್ಟು ಅಪ್ಪನೊಡನೆ ಗಾಡಿಯೇರಿ ಸಾಗಿ
ಜನರನಡುವೆ ನುಸುಳಿ ತೂರಿ ಅಜ್ಜಿಗೆ, ಅಜ್ಜಗೆ, ಅಮ್ಮಗೆ, ಅಕ್ಕಗೆ,
ಅಣ್ಣಗೆ, ತಮ್ಮಗೆ, ತಂಗಿಗೆಂದು ಕಂಡುದೆಲ್ಲಾಯ್ದು ಕೊಂಡುತಂದು
ಎಲ್ಲರಿಗೆ ಕೊಟ್ಟು ತೃಪ್ತಿಪಟ್ಟ ಆ ದಿನಗಳನೆಂತು ಮರೆಯಲಿ ನಾನು
ನಾನೆಂದಿಗೂ ಮರೆಯಲಾಗದ ಆ ದಿನ ಇಂದಿಲ್ಲವಲ್ಲ
ನಾ ಮರೆಯಲಾಗದಾ ದಿನ ಮತ್ತೊಮ್ಮೆ ಬರುವುದೇ?
ಬೇಗ ಬರಲಿ ಆ ಮಧುರ ಕ್ಷಣ
ನಾ ಮರೆಯಲಾಗದಾ ದಿನ.
Comments
ಉ: ಆ ದಿನಗಳನೆಂತು ಮರೆಯಲಿ ನಾನು 4
In reply to ಉ: ಆ ದಿನಗಳನೆಂತು ಮರೆಯಲಿ ನಾನು 4 by H A Patil
ಉ: ಆ ದಿನಗಳನೆಂತು ಮರೆಯಲಿ ನಾನು 4
In reply to ಉ: ಆ ದಿನಗಳನೆಂತು ಮರೆಯಲಿ ನಾನು 4 by padma.A
ಉ: ಆ ದಿನಗಳನೆಂತು ಮರೆಯಲಿ ನಾನು 4
In reply to ಉ: ಆ ದಿನಗಳನೆಂತು ಮರೆಯಲಿ ನಾನು 4 by venkatb83
ಉ: ಆ ದಿನಗಳನೆಂತು ಮರೆಯಲಿ ನಾನು 4