ಹರಿದಾಸ ಸಾಹಿತ್ಯದ ಮೇಲೊಂದು ಪಕ್ಷಿನೋಟ

ಹರಿದಾಸ ಸಾಹಿತ್ಯದ ಮೇಲೊಂದು ಪಕ್ಷಿನೋಟ

ಇದು ಹಲವು ವರ್ಷಗಳ ಹಿಂದೆ ನಾನು ಒಂದು ಕನ್ನಡ ಸಾಹಿತ್ಯಾಸಕ್ತರ ಗುಂಪಿನಲ್ಲಿ ಹರಿದಾಸ ಸಾಹಿತ್ಯದ ಬಗ್ಗೆ ಮಾತಾಡಿದ್ದು. ಆಸಕ್ತರು ಕೇಳಬಹುದೆಂದು ಇಲ್ಲಿ ಹಾಕಿದ್ದೇನೆ. 

 
ಸುಮಾರು ೬೦೦ ವರ್ಷ ಜೀವಂತವಾಗಿದ್ದ ಹರಿದಾಸರ ಪರಂಪರೆಯ ಹಲವು ವಿಷಯ ಬಗ್ಗೆ - ಹರಿದಾಸ ಸಾಹಿತ್ಯದ ಹಿನ್ನಲೆ, ಹರಿದಾಸರ ಸಂಗೀತ ಪದ್ಧತಿ, ಶ್ರೀಪಾದರಾಯರು, ವ್ಯಾಸರಾಯರು , ಪುರಂದರದಾಸರು, ಕನಕದಾಸರು, ವಿಜಯದಾಸರು ಇವರೆಲ್ಲರ ಬಗೆಗೆ ಸ್ವಲ್ಪ ವಿವರಣೆಗಳು ಇಲ್ಲಿವೆ.
 
 
 ಈ ಭಾಷಣ ಮಾಡಿದ ನಂತರ ನಡೆಸಿದ ಓದಿನಿಂದಾಗಿ, ಆಗ ನನಗೆ ತಿಳಿದಿದ್ದಿಲ್ಲದ ಕೆಲವು ವಿಷಯಗಳು ನನಗೆ ಇನ್ನೂ ಸ್ಪಷ್ಟವಾಗಿವೆ. ಹಾಗಾಗಿ ಒಂದೆರಡು ಅಂಶಗಳಲ್ಲಿ ಸ್ವಲ್ಪ ತಪ್ಪು ನುಸುಳಿದೆ ಎನ್ನಿಸಿದರೂ, ಒಟ್ಟಾರೆ ನೋಡಿದರೆ ಈ ವಿಷಯದಲ್ಲಿ ಆಸಕ್ತಿ ಇದ್ದು ಮಾಹಿತಿ ತಿಳಿದಿಲ್ಲದವರಿಗೆ ಅನುಕೂಲವಾಗಬಹುದು ಎಂದು ಹಾಕುತ್ತಿದ್ದೇನೆ.
 
ಪುರಂದರ ಆರಾಧನೆಯ ಸಮಯದಲ್ಲೇ ಇದನ್ನು ಹಾಕಬೇಕಿತ್ತು, ಆಗಲಿಲ್ಲ. ತಡವಾದರೂ ಪರವಾಗಿಲ್ಲ! ಇಂದಿನ ದಿನವೇ ಶುಭದಿನವು ಅಂತ ಅವರೇ ಹೇಳಿಲ್ಲವೇ?
 
 
ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.
 
-ಹಂಸಾನಂದಿ
 
Rating
No votes yet