ಸರಸ್ವತಿ ಶಂಕರ್ ಅವರ ಹೊಸ ಕಾದಂಬರಿಯ ಬಿಡುಗಡೆ

ಸರಸ್ವತಿ ಶಂಕರ್ ಅವರ ಹೊಸ ಕಾದಂಬರಿಯ ಬಿಡುಗಡೆ

 ಶ್ರೀಮತಿ ಸರಸ್ವತಿ ಶಂಕರ್  ಅವರ ಕಾದಂಬರಿ "ಹೆಣ್ಣು-ಹೊನ್ನು" ಇದರ ಬಿಡುಗಡೆ ಸಮಾರಂಭ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ತಾ.೫-೨-೨೦೧೨ ಭಾನುವಾರ  ನೆರವೇರಿತು.ಬೆಂಗಳೂರು ದೂರದರ್ಶನದ ಸಹಾಯಕ ನಿಲಯ ನಿರ್ದೇಶಕರಾದ ಶ್ರೀ ಸಿ.ಎನ್.ರಾಮಚಂದ್ರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ  ಡಾ॥ಸಿ.ವೀರಣ್ಣ ಅವರು ಕೃತಿಯನ್ನು ಲೋಕಾರ್ಪಣ ಮಾಡಿದರು.ಮೈಸೂರಿನ ಸಂಗೀತ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ ಡಾ।।ಕಬ್ಬಿನಾಲೆ ವಸನ್ತ ಭಾರದ್ವಾಜ್ ಅವರು ಕೃತಿ ಪರಿಚಯ ಮಾಡಿದರು.ಕೃತಿಯ ಪ್ರಕಾಶಕ ರವಿ ಪ್ರಕಾಶನದ ಶ್ರೀ ಎಸ್.ಆರ್.ಸತ್ಯನಾರಾಯಣ ಅವರು ಸ್ವಾಗತಿಸಿದರು.ಕಾದಂಬರಿಗಾರ್ತಿ ಸರಸ್ವತಿ ಶಂಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಪ್ರೊ।।ಎಸ್.ಬಿ.ಸುಳ್ಯ ಅವರು ವಂದಿಸಿದರು. ಶ್ರೀ ಎಸ್.ಎನ್.ಪಂಜಾಜೆ ನಿರೂಪಿಸಿದರು.ಈ ಸಂದರ್ಭದಲ್ಲಿ ಭಾವಗೀತೆಗಳ ಗಾಯನವನ್ನೂ ಆಯೋಜಿಸಲಾಗಿತ್ತು.

ಸರಸ್ವತಿಯವರು ಈ ಮೊದಲು ಜ್ವಾಲೆ,ಬಿರುಗಾಳಿ [ಕಾದಂಬರಿಗಳು] ತೆನೆಗಳು,ಸುಮಸಂಚಯ[ಕಥಾಸಂಕಲನ] ಮತ್ತು ಚಿನ್ನದ ನಾಡಿಂದ ಹೊನ್ನ ದ್ವಾರದತ್ತ [ಪ್ರವಾಸ ಸಾಹಿತ್ಯ]ಎಂಬ ಕೃತಿಗಳನ್ನು ಬರೆದಿರುತ್ತಾರೆ.