ಅ ಕಪ್ ಓಫ್ ಕಾಫಿ ... ಸಿಪ್ - ೪೯
ಸಿಪ್ - 49
ಆಚೀಚೆ ನೋಡುವುದರಲ್ಲಿ ಇನ್ನೊಂದು ವರ್ಷ ಕೂಡಿತ್ತು ನನಗೆ. ಕಂಪ್ಯೂಟರ್ ನ ಬಲಮೂಲೆಯಲ್ಲಿ 2008 ತೋರಿಸಲು ಶುರುವಾಗಿ ಆಗಲೇ ಎರಡು ತಿಂಗಳು ಮುಂದೆ ಹೋಗಿದ್ದವು.
ಪ್ರಭಾ ಅತ್ತೆ ಊರಲ್ಲಿ ತನ್ನ ಪಾಲಿಗೆ ಬಂದ ಜಾಗವನ್ನು ಮಾರಿ ಬೆಂಗಳೂರಿನಲ್ಲಿ ಫ್ಲಾಟ್ ಖರೀದಿಸುವ ನಿರ್ಣಯಕ್ಕೆ ಬಂದಿದ್ದರು. ಅವರು ಅದನ್ನು ಊರಿನ ಪರಿಚಯದ ಒಬ್ಬರಿಗೆ ಮಾರಿ ಬೆಂಗಳೂರಿನಲ್ಲಿ ಫ್ಲಾಟ್ ಹುಡುಕಲು ಶುರುಮಾಡಿದರು. ಕೆಲವೇ ದಿನಗಳಲ್ಲಿ ಅವರಿಗೆ ಕಂಷ್ಟ್ರಕ್ಷನ್ ಹಂತದಲ್ಲಿರುವ ಒಳ್ಳೆಯ ಫ್ಲಾಟ್ ಕೊಂಡುಕೊಂಡರು ಜಯನಗರದಲ್ಲಿ. ಊರಿನಿಂದ ಪೂರ್ತಿ ಹಣ ಇವರಿಗೆ ಸಂದಾಯ ವಾಗಿರಲಿಲ್ಲ.ಅ ಹಣವನ್ನು ಪಾವತಿಸಲು ತಂದೆಯವರು ಬೆಂಗಳೂರಿಗೆ ಬಂದಾಗ ತಂಗಿಯ ಮನೆಯನ್ನು ನೋಡಿ ಖುಷಿ ಪಟ್ಟು ನನಗೆ ಕರೆಮಾಡಿದರು.
"ವೈಭು ಪ್ರಭಾ ಅತ್ತೆಯ ಫ್ಲಾಟ್ ಚೆನ್ನಾಗಿದೆಯೋ, ಈ ಅಪಾರ್ಟ್ ಮೆಂಟ್ ನಲ್ಲಿ ಕೆಲವು ಫ್ಲಾಟ್ ಗಳು ಇನ್ನೂ ಖಾಲಿ ಉಳಿದಿದೆ, ಬೆಲೆ ಏರ್ತಾ ಇದೆ ಒಂದು ನಾನು ನಿನ್ನ ಹೆಸರಿಗೆ ಬುಕ್ ಮಾಡ್ತಾ ಇದ್ದೇನೆ, ಅದರ ಕಂಷ್ಟ್ರಕ್ಷನ್ ಮುಗಿಯುವುದರಲ್ಲಿ ನಿನಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕ ಬಹುದು"
ಆರು ತಿಂಗಳಲ್ಲಿ ಕೆಲಸ ಹುಡುಕಿ ಸಿಕ್ಕದಿದ್ದರೂ ಒಂದಲ್ಲ ಒಂದು ದಿನ ನಾನು ಬೆಂಗಳೂರು ಸೇರುತ್ತೇನೆ ಎಂಬ ಪೂರ್ಣ ವಿಶ್ವಾಸದಲ್ಲಿ "ಸರಿಯಪ್ಪ ಒಳ್ಳೆ ಕೆಲಸ ಮಾಡಿದಿರಿ, ಬುಕ್ ಮಾಡಿ, ನನ್ನ ಹೆಸರಿನಲ್ಲೇ ಲೋನ್ ತೆಗದ್ರೆ ಆಯಿತು"
"ಆಯ್ತು, ಊರಿನ ಆ ಜಮೀನನ್ನು ಮಾರಿದರೆ ಆಯಿತು, ನಾವು ಇಲ್ಲಿ ಅದು ಯಾಕೆ ಅಲ್ಲಿ ಇರ್ಬೇಕು...? ಒಣ ಭೂಮಿ, ಇನ್ನು ಅಲ್ಲಿ ಭತ್ತ, ಕಬ್ಬು ಬೆಳೆದ ಹಾಗೆ ..." ಎಂದರು ಮೂವತ್ತು ವರ್ಷ ಅದನ್ನು ಉತ್ತು ಬೆಳೆಸಿ ದಣಿದ ಕೈ ಕಾಲುಗಳು.
"ಸರಿಯಪ್ಪಾ, ನೀವು ಅಲ್ಲೇ ಇರಿ ನಾನು ಈ ಶನಿವಾರ ಬರ್ತೇನೆ ಬೆಂಗಳೂರಿಗೆ ರಿಜಿಸ್ತ್ರಿ ಮಾಡಿಸಿ ಬಿಡೋಣ" ಅಂದೆ ಅದಕ್ಕೆ ತಂದೆಯವರು ಸಮ್ಮತಿಸಿದರು.
ಮುಂದಿನ ಶನಿವಾರ ಅದರ ರಿಜಿಸ್ತ್ರಿಗೆ ಬೆಂಗಳೂರಿಗೆ ಹೋಗಿ ನನ್ನ ಕೆಲಸ ಮುಗಿಸಿದೆ.
ಬೆಂಗಳೂರಿನಲ್ಲಿ ಭೇಟಿ ಮಾಡಲು ಹಲವು ಮುಖ ಗಳಿದ್ದವು, ಆದರೆ ಅದು ನೆನೆದದ್ದು ಜೀವನ್ ನ ಮುಖವನ್ನು, ಹೇಗೆ ಅವನನ್ನು ಮರೆಯುವುದು...
ಅವನ ನಂಬರ್ ಗೆ ಕರೆ ಮಾಡಿದೆ, ತಾಗಲಿಲ್ಲ.
ಅವನಿಗೆ ಮತ್ತು ಪ್ರೀತಿಗೆ ಮಾಡುವುದು ಒಂದೇ ಎಂದುಕೊಂಡು ಮರು ಕ್ಷಣ ಪ್ರೀತಿಗೆ ಕರೆ ಮಾಡಿದೆ.
"ಹಲ್ಲೋ ..."
" ಹೇ ಗೂಬೆ ಹೇಗಿದ್ದಿಯಾ...?"
"ಮಂಗಾ !!! ನೀನು ಹೇಗಿದ್ದೀಯ ಹೇಳು ... ಏನು ನನ್ನ ನೆನಪು ಮಾಡಿದ್ದು...?"
"ಎನಿಲಮ್ಮ ನಿನ್ನನ್ನು ನೋಡ್ಬೇಕು ಅನಿಸ್ತು ಅದಕ್ಕೆ ಬೆಂಗಳೂರಿಗೆ ಬಂದೆ ... ಎಲ್ಲಿದ್ದಿಯ ಹೇಳು.. ಭೇಟಿಯಾಗೋಣ"
"ಹಾಸ್ಟೆಲ್ ನಲ್ಲಿ..."
"ಇನ್ನೂ ಹಾಸ್ಟೆಲ್...? ಅವನೆಲ್ಲಿದ್ದಾನೆ ಪುಣ್ಯಾತ್ಮ ...?"
"ಹಾರೋದ..."
ಅವಳ ಮಾತು ಅರ್ಥ ವಾಗಲಿಲ್ಲ.
"ಭೇಟಿಯಾಗೋಣ, ಆಗ್ಲೇ ನಿಂಗೆ ಹೇಳ್ತೇನೆ..."
"ನೀನು ಜಾಗ ಹೇಳು ಅಲ್ಲಿ ಸಿಗ್ತೇನೆ" ಅಂದೆ ನಾನು
"ಸಿ.ಸಿ.ಡಿ ಅ ಕಪ್ ಆಫ್ ಕಾಫಿ ...?"
"ಯಾವ್ ಸಿ.ಸಿ.ಡಿ ...?"
"ಇಂದಿರಾನಗರ್ ..?"
"ಓಕೆ ಹಾಗಾದ್ರೆ ಸಂಜೆ ಆರಕ್ಕೆ ಅಲ್ಲೇ ಸಿಗ್ತೇನೆ"
ಸಂಜೆ ಆರಕ್ಕೆ ನನ್ನ ಎಲ್ಲ ಕೆಲಸ ಮುಗಿಸಿ ಇಂದಿರಾನಗರದಲ್ಲಿರುವ ಸಿ.ಸಿ.ಡಿ ತಲುಪಿದೆ.
ಸಲ್ಪದರಲ್ಲಿ ಅವಳು ಅಲ್ಲಿ ತಲುಪಿದ್ದಳು, ನನ್ನನ್ನು ನೋಡಿ "ಹೇಗಿದ್ದೀಯ ಮಂಗಾ...? ಏನಂತೆ ನಿನ್ನ ಡ್ರೀಮ್ ಟೆಕ್ ?"
"ಅದು ಅದರ ಪಾಡಿಗಿದೆ ನಾನು ನನ್ನ ಪಾಡಿಗಿದ್ದೇನೆ"
"ಆ ಆಕೃತಿ ...?"
"ಒಳಗೆ ಹೋಗಿ ಮಾತಾಡುವಾ ನಾ" ಎಂದು ಮಾತನ್ನು ಬೇರೆಡೆಗೆ ತಿರುಗಿಸಿದೆ.
ಒಳಗೆ ಹೋಗಿ ಅದೇ ನಮ್ಮಿಬ್ಬರ ಮೊದಲ ಭೇಟಿಯ ದಿನ ಆರ್ಡರ್ ಕೊಟ್ಟ ಎರಡು ಕಾಫ್ಫೀಚಿನೋ ಮತ್ತು ಎರಡು ಕೂಕೀಸ್ ಆರ್ಡರ್ ಕೊಟ್ಟು. ಮಾತು ಮುಂದುವರಿಸಿದೆವು.
"ಜೀವನ್ ...?" ಎಂದು ನಾನೇ ಶುರು ಮಾಡಿದೆ.
"ಹೋದ, ಮಕರಂದ ಹೀರಿ, ಹಾರಿ ಹೋದ, ಹೂವೀಗ ಒಂಟಿ."
"ಅಂದ್ರೆ..?"
"ಅವನಿಗೆ ಹಣ ಮುಕ್ಯವಾಗಿತ್ತು, ನನಗೆ ಪ್ರೀತಿ; ಅವನು ಬೆಂಗಳೂರಿಗೆ ಬಂದ ಎಂದಾಗ ಸಂಭ್ರಮಿಸಿದ್ದೆ, ಜೊತೆಯಾಗಿ ಕಳೆದ ಆ ಎರಡು ತಿಂಗಳು ಮರೆಯಲು ಸಾದ್ಯವಿಲ್ಲ ಅಷ್ಟು ಆತ್ಮೀಯವಾಗಿತ್ತು.
ಆದರೆ ಯಾರದ್ದೋ ಕೆಟ್ಟ ಕಣ್ಣು ನಮ್ಮ ಮೇಲೆ ಬಿತ್ತು"
"ಹೇ ಪ್ರೀತಿ ಒಗಟೋಗಟಾಗಿ ಮಾತನಾಡದೇ ಸೀದಾ ಏನಾಯ್ತು ಅಂತ ಹೇಳು.."
"ಅವನ ಜೋತೆಗಿದ್ದೆನಲ್ಲ ಆವಾಗ ಅವನ ಗುಣ ನನಗೆ ಸರಿಯಾಗಿ ಮನವರಿಕೆ ಯಾಗುತ್ತ ಹೋಯಿತು, ಅವನಿಗೆ ನಾನು ಬೇಕಿರಲಿಲ್ಲ, ಟ್ರೈಲ್ ನೋಡಲು ಒಂದು ಹೆಣ್ಣಿನ ಅವಶ್ಯಕತೆ ಇತ್ತು.ಒಂಟಿಯಾಗಿದ್ದೆ ನಾನು ಸಿಕ್ಕೆ, ಅನುಭವಿಸಿದ, ಹೋದ "
"ಹೇ ಗೂಬೆ, ಅವನು ನಿನ್ನನ್ನು ಇಷ್ಟ ಪಡ್ತಾನೆ... ನನಗೊತ್ತು ಅವನು ನಿನ್ನನ್ನು ಎಷ್ಟು ಇಷ್ಟ ಪಡ್ತಾನೆ ಹೇಳಿ"
"ಅವನಿಗೆ ನಾನು ಇಷ್ಟ ಇರಬಹುದು, ಆದರೆ ನನಗಿಂತ ಅವನಿಗೆ ಹಣ ಮುಕ್ಯ"
"ಹೌದು, ಹಣ ಸಂಪಾದನೆಯೇ ಅವನ ಮೂಲ ಧ್ಯೇಯ, ಆವನಿಗೆ ನೀನಂದ್ರು ಇಷ್ಟ ಇದೆ ಕಣೇ , ಸುಮ್ಮನೆ ನಿಮ್ಮಿಬ್ಬರ ನಡುವಲ್ಲಿ ಏನೋ ಮಿಸ್ ಅಂಡರ್ ಸ್ಟಾಡಿಂಗ್ ಆಗಿದೆ ಅನ್ಸುತ್ತೆ,ಏನಾಯ್ತಂತ ಬಿಡಿಸಿ ಹೇಳು"
"ಇಲ್ಲಿ ಬಂದು ಸಲ್ಪ ಸಮಯದಲ್ಲೇ ಯುಎಸ್ ಯುಕೆ ಹೇಳಿ ಮಾತನಾಡಲು ಶುರು ಮಾಡಿದ, ಅಲ್ಲಿ ಒಂದು ಡಾಲರ್ ಉಳಿಸಿದರೆ ಇಲ್ಲಿ ಐವತ್ತು ಉಳಿಸಿದಂತೆ ಎಂತೆಲ್ಲ ಕಂಪೇರ್ ಮಾಡಲು ಶುರುಮಾಡಿದ, ನಾನು ಹೋಗ್ತೇನೆ, ಎರಡು ವರ್ಷದಲ್ಲಿ ತಿರುಗಿ ಬರ್ತೇನೆ ಆವಾಗ ಮದುವೆ ಆಗುವ ಅನ್ನುತಿದ್ದ.
ನಾನು ನಿಂಜೊತೆ ಬರ್ತೀನಿ ಅಂದಿದಕ್ಕೆ ಸುಮ್ಮನೆ ಖರ್ಚು, ನೀನಿಲ್ಲೇ ಇರು ಅಂತಿದ್ದ.
ನನಗೆ ಅವನ ಜೊತೆ ಮದುವೆ ಆಗ ಬೇಕಂತಿತ್ತು ಅವನು ಹಣದ ನೆಪ ಒಡ್ಡಿ ನಾನು ಬಂದ ಮೇಲೆ ಮದುವೆ ಆಗೋಣ ಈಗ ಲಿವಿಂಗ್ ಟುಗೆದರ್ ನಡೆಸೋಣ ಒಬ್ಬರನೊಬ್ಬರು ಅರ್ಥೈಸಿ ಕೊಂಡರೆ ಮದುವೆಯ ನಂತರ ತೊಂದರೆ ಇರಲ್ಲ, ಅಂತಿದ್ದ. ನಾನು ಅವನಿಗೆ ಒಪ್ಪಿದೆ.
ಕೊನೆಗೆ ಒಂದು ದಿನ ನಾನು ಕೇಳಿಯೇ ಬಿಟ್ಟೆ ನಿನಗೆ ಯುಎಸ್ ಮುಕ್ಯನಾ ನಾನು ಎಂದು ಅದಕ್ಕವನು ಯುಎಸ್ ಎಂದು ಹೇಳಿ ಬಿಟ್ಟ.
ನನಗೆ ಬೇರೆ ಒಪ್ಶನ್ ಇರಲಿಲ್ಲ ಅವನನ್ನು ಹಾರಲು ಬಿಟ್ಟೆ, ನಾನು ಮನೆ ಬಿಟ್ಟೆ. ಬಂದು ಹಾಸ್ಟೆಲ್ ಸೇರಿದೆ."
"ಹುಡುಗಿಯರಿಗೆ ತಲೇನೆ ಇರಲ್ಲ, ಇಷ್ಟು ಸಣ್ಣ ವಿಷಯಕ್ಕೆ ಈ ರೀತಿ ಕೋಪಿಸಿ ಕೊಳ್ತಾರಾ, ಒಂದು ಪ್ರೇಮ ಕಾದಂಬರಿಗೆ ಅನಾವಶ್ಯಕವಾಗಿ ಟ್ರೇಜೆಡಿ ಎಂಡಿಂಗ್ ಕೊಟ್ಟಿಯಲ್ಲೇ...ನಾನು ಒಂದು ಪ್ರಶ್ನೆ ಕೇಳ್ತೇನೆ ನೇರ ಉತ್ತರ ಹೇಳ್ಬೇಕು"
"ಕೇಳು..."
"ಸದ್ಯಕ್ಕೆ ಹೊಸೋಬ್ಬ ಬಾಯ್ ಫ್ರೆಂಡ್ ಬೇರೆಯಾರನನ್ನದ್ರೂ ಹಿಡ್ಕೊಂದಿದ್ದಿಯಾ ...?"
"ಯಾಕೆ ಹೀಗೆ ಕೇಳ್ತಾ ಇದ್ದಿಯಾ...?"
"ನನ್ನ ಪ್ರಶ್ನೆಗೆ ಉತ್ತರ ಕೊಡು"
"ಇಲ್ಲ, ಯಾರು ಇಲ್ಲ ಅವನೇ ತುಂಬಿದ್ದಾನೆ ಮನಸಲ್ಲಿ"
"ಮತ್ಯಾಕಮ್ಮಾ ಈ ವಿರಹ ...?"
"ಅವನು ನನ್ನಿಂದ ರೋಸಿ ಹೋಗಿದ್ದಾನೆ, ನನ್ನ ಮಾತು ಕೇಳಲ್ಲ" ಅಂದಳು ಪ್ರೀತಿ.
"ಒಂದು ವೇಳೆ ಅವನನ್ನು ಒಪ್ಪಿಸಿದರೆ, ನಿನಗೆ ಒಪ್ಪಿಗೆ ಇದೆಯಲ್ಲ..."
"ಇದೆ"
"ನಿಮ್ಮಿಬ್ಬರನ್ನು ಒಂದು ಮಾಡಿಸುವ ಕೆಲಸ ನನ್ನದು, ನಿನ್ನ ಮೊದಲ ಪ್ರೀತಿಯನ್ನು ನನಗೆ ಉಳಿಸಲಾಗಲಿಲ್ಲ, ನನ್ನನ್ನು ಪ್ರೀತಿಸುವ ನಿನ್ನ ಎರಡನೇ ಪ್ರೀತಿಯನ್ನು ನಿನಗೆ ಕೊಡಿಸಲು ಸಾದ್ಯವಿರಲಿಲ್ಲ, ಕಡೆ ಪಕ್ಷ ನಿನ್ನ ಕಡೆಯ ಪ್ರೀತಿಯನ್ನು ನಿನಗೆ ದಕ್ಕಿಸಿಕೊಡುವ ಪ್ರಯತ್ನ ಮಾಡ್ತೇನೆ."
"ವೈಭೂ... ಹತ್ರ ಆಗ್ಬಿಟ್ಟಿ ಕಣೋ... ಐ ಲವ್ ಯು...ಇನ್ನು ಅವನು ಬೇಡ.. "
ಮೌನದಲ್ಲಿದ್ದೆ.
ಅವಳು "ಆಕೃತಿ ...? ಸುನಿಲ್ ಗೆ ಏನಾಯ್ತು...?"
"ಆ ವಿಚಾರ ಬಿಡು.." ಅಂದೆ ನಾನು.
"ನೋಡು ಆಕೃತಿ ಬಗ್ಗೆ ಕೇಳುವಾಗ ನೀನೂ ಮಾತು ಮುರೀತಾ ಇದ್ದೀಯ.. ಅಂದ್ರೆ ನಿಮ್ಮಿಬ್ಬರ ನಡುವಲ್ಲಿ ಏನು ಇಲ್ಲ ಅಂತಾಯ್ತಲ್ಲಾ..."
ನನ್ನಲ್ಲಿ ಬರೀ ಮೌನ ಒಂದೇ ಉತ್ತರ ವಾಗಿತ್ತು.
ಅವಳು ಮುಂದುವರಿಸಿದಳು. ಎದುರಲ್ಲಿದ್ದ ಗ್ಲಾಸನ್ನು ಹಿಡಿದ ನನ್ನ ಕೈಯನ್ನು ಆಲಂಗಿಸಿದಳು.
"ಚಿಲ್ ವೈಭು .. ನಾನಿದ್ದೇನೆ ನಿನಗೆ.. ನೀನೂ ಹೇಳ್ತಾ ಇದ್ದೀಯಲ್ಲ ಆಕೃತಿ ನಿನ್ನ ನಿಜ ಲವ್ ಆದ್ರೆ ಏನಾಯ್ತು ಪ್ರೀತಿ ನಿನ್ನ ಫಸ್ಟ್ ಲವ್ ಹೇಳಿ.. ಫಸ್ಟ್ ಲವ್ ಯಾವಾಗಲೂ ಸ್ಪೆಶಲಾಗಿರುತ್ತೆ, ಎಲ್ಲರಿಗೂ ಆ ಫಸ್ಟ್ ಲವ್ ಸಿಕ್ಕಲ್ಲಾ..."
ಇನ್ನೂ ಮೌನದಲ್ಲಿದ್ದೆ. ಅವಳ ಬಂಧನದಿಂದ ಕೈಯನ್ನು ಸಡಿಲಿಸಿದೆ.
"ಐ ಲವ್ ಯು ಡಂಬು.."
ಅವಳು ಡಂಬು ಎಂದು ಮೊದಲ ಬಾರಿಗೆ ನನ್ನನ್ನು ಕರೆದಿದ್ದಳು.
ಮನಸ್ಸೆಲ್ಲಾ ಪ್ರಶ್ನಾರ್ಥಕ ಚಿನ್ನೆ ಆಯಿತು. ಅವಳಲ್ಲಿ "ಪ್ರೀತಿ ಹೋಗೋಣ್ವಾ ಮನೆಗೆ.. ನನಗೆ ಬಸ್ಸಿಗೆ ಲೇಟ್ ಆಗುತ್ತೆ .." ಎನ್ನುತ್ತಾ ಕ್ರೆಡಿಟ್ ಕಾರ್ಡ್ ಅನ್ನು ವಾಲೆಟ್ ನಲ್ಲಿ ಇಟ್ಟೆ.
**********
ಪುಣೆಗೆ ಬಂದಾದ ನಂತರ ಜೀವನ್ ಅನ್ನು ಸಂಪರ್ಕಿಸಲು ಪ್ರಯತ್ನ ಪಟ್ಟೆ ಆಗಲಿಲ್ಲ, ಮೇಲ್ ಕಳುಹಿಸಿದೆ ಉತ್ತರವಿರಲಿಲ್ಲ, ಆರ್ಕುಟ್ ನಲ್ಲಿ ಅಕೌಂಟ್ ಡಿಲೀಟ್ ಮಾಡಿದ್ದ.
ಇನ್ನೊಂದು ಬದಿಯಲ್ಲಿ ಅವಿನಾಶ್ ನ ಕೇಟ್ ರಿಸಲ್ಟ್ ಬಂದಾಗಿತ್ತು, ಈ ಬಾರಿ ಅವನು ವರ್ಷ ಪೂರ್ತಿ ಪಟ್ಟ ಶ್ರಮಕ್ಕೆ ಒಳ್ಳೆಯ ಪ್ರತಿಫಲನೆ ಬಯಸುತಿದ್ದ. ಮೇನೇಜ್ಮೆಂಟ್ ಸೈಡಿಗೆ ತನ್ನ ಟ್ರಾಕ್ ಬದಲಿಸಲು ಶಪತ ತೊಟ್ಟಿದ್ದ, ಆದರೆ ರಿಸಲ್ಟ್ ಹೊರ ಬೀಳುವಾಗ ಎಲ್ಲ ತಲೆ ಕೆಳಗಾಗಿತ್ತು. ಅವನಿಗೆ ಕಳೆದ ಮೋಕ್ ಟೆಸ್ಟ್ ಗಿಂತಲೂ ಕಮ್ಮಿನ ಪೆರ್ಸೇನ್ಟೈಲ್ ಬಿದ್ದಿತ್ತು. ಇದರಿಂದ ಸಂಪೂರ್ಣ ವಾಗಿ ರೋಸಿ ಹೋಗಿದ್ದ.
"ಇನ್ನೊದು ವರ್ಷ ನನ್ನದು ದಂಡ ಆಯಿತು ಇಲ್ಲಿ ಪ್ರಾಜೆಕ್ಟ್ ಇಲ್ಲ ಹೊರ ಹೋಗಿ ಪ್ರಯತ್ನಿಸುವ ಹೇಳಿದರೆ ಆ ಸ್ಪೆಷಲ್ ಸ್ಕಿಲ್ ಬಿಟ್ಟು ಬೇರೇನೂ ಗೊತ್ತಿಲ್ಲ " ಎಂದ.
ಅವನನ್ನು ಸಮಾಧಾನಿಸಿ ಪ್ರಾಜೆಕ್ಟ್ ಇಲ್ಲೇ ಸಿಕ್ಕುತ್ತೆ ನೋಡು ಈಗ ಡ್ರೀಮ್ ಟೆಕ್ ಈ ರೀತಿಯಲ್ಲಿ ರೆಕ್ರುಟ್ ಮಾಡ್ತಾ ಇದ್ದಾರೆ ಅಂದೆ.
450 ಇದ್ದ ಪುಣೆಯ ಸಂಕೆ 550 ಕ್ಕೆ ತಲುಪಿತ್ತು. ಆದರೆ ನಮ್ಮ ಜೊತೆಗೆ ಜೋಯಿನ್ ಆದ ಯಿಎಲ್ಟಿಪಿ ಗಳಲ್ಲಿ ಈಗ ಪುಣೆಯಲ್ಲಿ ಯಾರು ಉಳಿದಿರಲಿಲ್ಲ. ಹೆಚ್ಚಿನವರು 40 % ಆಸೆಗೆ ಬೇರೆ ಕಂಪೆನಿಗೆ ಸೇರಿಯಾಗಿತ್ತು.
ಕಂಪೆನಿಯ ಶೆರ್ಸ್ಗಳು ಡೋಲಾಯಮಾನ ವಾಗಿದ್ದವು, ಈಗ ಅದಕ್ಕಾಗಿ ಪ್ರತಿವಾರ ರೆಕ್ರುಟ್ಮೆಂಟ್ ಶುರು ಮಾಡಲಾಗಿತ್ತು. ಇಲ್ಲಿ ಪ್ರತಿ ಸೋಮವಾರ ಐದರಿಂದ ಆರು ಮಂದಿ ಹೊಸ ಮುಖಗಳು ಕಾಣಲು ಆರಂಭಿಸಿದವು. ತನ್ನ ಇನ್ವೆಸ್ಟರ್ ರನ್ನು ಉಳಿಸಿಕೊಳ್ಳಲು ಎನಾದರೊಂದು ರೀತಿಯಲ್ಲಿ ಪ್ರಗತಿ ತೋರಿಸ ಬೇಕಿತ್ತು ಡ್ರೀಮ್ ಟೆಕ್ ಗೆ ಅದಕ್ಕೆ ಈ ರೀತಿಯಾಗಿ ತೋರಿಸುತಿತ್ತು. ಸಂಕೆ ಹೆಚ್ಚಿಸುವುದೇ ಇವರ ಪ್ರಿಯೋರಿಟಿ ಆದ ಹಾಗೆ ಕಾಣುತಿತ್ತು,ಗುಣಮಟ್ಟಕ್ಕೆ ಒತ್ತು ಕೊಡುತಿದ್ದ ಸಂಸ್ತೆ ಸಡನ್ ಆಗಿ ಈ ರೀತಿ ನಿರ್ಧಾರಗಳನ್ನು ತೆಗೆದು ತನ್ನಲ್ಲಿ ಉಳಿಸಿಕೊಂಡಿದ್ದ ಹಳೆ ಉದ್ಯೋಗಿಗಳಿಗೆ ಕಂಪೆನಿಯ ಕುರಿತು ಒಂದು ಕ್ಷಣಕ್ಕೆ ಚಿಂತಿಸುವಂತೆ ಮಾಡಿತು.
ಪ್ರತಿಯೊಬ್ಬರು ತಮ್ಮ ಇಷ್ಟಮಂದಿ, ಸಂಭಂದಿಗಳನ್ನು ರೆಫರ್ ಮಾಡಲು ಶುರುಮಾಡಿದರು. ರೆಫರ್ ಮಾಡಿದ ನೂರರಲ್ಲಿ ಅರುವತ್ತು ಮಂದಿಯನ್ನು ಕಣ್ಣು ಮುಚ್ಚಿಯೇ ಸ್ವೀಕರಿಸಲಾಗುತಿತ್ತು. ಎಂಪ್ಲೋಯೀಗಳು ತಮ್ಮ ಹತ್ತಿರದ ಸಂಭಂದಿಗಳನ್ನು ಮೊದಲು ಕಂಪೆನಿಗೆ ಇಂಟರ್ನ್ಶಿಪ್ ಹೇಳಿ ತಂದಿಟ್ಟು ಕೊಳ್ಳುತಿದ್ದರು, ಬಳಿಕ ಅವರು ಟ್ರೈನಿಯಾಗಿ , ನಂತರ ಪೆರ್ಮನೆಂಟ್ ಎಂಪ್ಲೋಯೀ ಆಗಿ ಪರಿವರ್ತಿತರಾಗುತಿದ್ದರು.
ಹೀಗಿರಲು ಒಂದು ದಿನ ಅಚಾನಕ್ಕಾಗಿ ಬಂದ ಒಂದು ಕರೆ ನನಗೆ ಡ್ರೀಮ್ ಟೆಕ್ ಮೇಲೆ ಅಸಯ್ಯ ಮೂಡಿಸಿತು.
ಕಾಲೇಜ್ ನಿಂದ ನನ್ನ ಜೂನಿಯರ್ ಸ್ಟೀಫನ್ ಕರೆ ಮಾಡಿದ್ದ. ಸ್ಟೀಫನ್ ನಮ್ಮ ಕಾಂಪೌಂಡ್ ಒವ್ನರ್ನ ಮಗ.
"ವೈಭು ನೀನು ಇನ್ನು ಡ್ರೀಮ್ ಟೆಕ್ ನಲ್ಲಿ ಇದ್ದಿಯಲ್ಲಾ...? ಹೇಗಿದೆ ಕಂಪೆನಿ...?"
"ಚೆನ್ನಾಗಿದೆ, ಏನು ಕರೆ ಮಾಡಿದ್ದು ಸ್ಟೀಫನ್ ...? ಹೇಗಿದ್ದೀಯ ...?"
"ನಾನು ಆರಾಮೋ, ಇನ್ನೇನು ಇಂಜಿನಿಯರಿಂಗ್ ಮುಗೀತ ಬಂತು. ಕೆಲಸ ಹುಡುಕಲು ಶುರು ಮಾಡಿದೆ, ನಿನ್ನ ಕಂಪೆನಿಯಲ್ಲಿ ಎಲ್ಲಾದರು ಏನಾದರು ಒಳ್ಳೆ ಆಫರ್ ಇದೆಯಾ ನೋಡೋಣ ಹೇಳಿ ಆ ಬಗ್ಗೆ ಇಂಟರ್ನೆಟ್ ನಲ್ಲಿ ಸರ್ಚ್ ಮಾಡುವಾಗ ಒಂದು ಲಿಂಕ್ ಸಿಕ್ತು, ಅದಕ್ಕೆ ನಾನು ಅಪ್ಲೈ ಮಾಡಿದೆ.
ಎರಡು ತಿಂಗಳ ನಂತರ ನಮಗೆ ಅರ್ಜೆಂಟ್ ರೆಕ್ವೈರ್ಮೆಂಟ್ ಇದೆ, 20 ದಿನದೊಳಗೆ ಸೇರಲು ರೆಡಿ ಇದ್ದವರಿಗೆ ಆಫರ್ ಲೆಟರ್ ಕೊಡುವುದಾಗಿ ತಿಳಿಸಿದರು. ನಾನು ಅದಕ್ಕೆ ಒಪ್ಪಿ ಮತ್ತೆ ರಿಪ್ಲೈ ಕಳಿಸಿದೆ. ಅದಕ್ಕೆ ಉತ್ತರಾನೂ ಬಂತು ಜುಲೈ ಫಸ್ಟ್ ವೀಕ್ ನಲ್ಲಿ ಜೋಯಿನಿಂಗ್ ದೆಟ್ಸ್ ಅಂತೆ"
"ಇಂಟರ್ವ್ಯೂ ಎಲ್ಲ ಆಯ್ತೇನೋ ...?"
"ಅದೇ ಹೇಳ್ತೇನೆ ಕೇಳು, .. ನಾನು ಅವರ ಹತ್ತಿರ ಹೀಗೆ ಕೇಳಿದೆ ಇಂಟರ್ವ್ಯೂ ಯಾವಾಗ? ಹೇಳಿ ಅದಕ್ಕೆ ಅವರು ಅದರ ಅಗತ್ಯ ಇಲ್ಲ, ನೀನು ನಮ್ಮ ಅಕೌಂಟ್ ಗೆ 2 ಲಕ್ಷ ಡಿಪೋಸಿಟ್ ಮಾಡಿದ ದಿನ ನಿನ್ನ ಕೈಯಲ್ಲಿ ಜೋಯಿನಿಂಗ್ ಲೆಟರ್ ಇರ್ತದೆ ಅಂದರು, ಅದಕ್ಕೆ ಹಣ ಕೊಡ್ಲಾ ಬೇಡ ಹೇಳಿ ಕೇಳಲಿಕ್ಕೆ ನಿನಗೆ ಕರೆ ಮಾಡಿದ್ದು"
"ಅದು ಯಾವುದೋ ಬೇನಾಮಿ ಕಂಪೆನಿ ಇರಬಹುದು ಅದಕ್ಕೆಲ್ಲ ಹಣ ಕಟ್ಟ ಬೇಡ ಆ ರೀತಿ ಇಲ್ಲಿ ಸೇರಿಸಿಕೊಳ್ಳಲು ಆಗುವುದಿಲ್ಲ, ಯಾರೋ ನಮ್ಮ ಕಂಪೆನಿಯ ಹೆಸರು ಹೇಳಿ ಹಣ ಮಾಡುತಿದ್ದಾರೆ. ಮೋಸ ಹೋಗಬೇಡ, ನಿನಗೆ ಒಳ್ಳೆ ಕಂಪೆನಿಯಲ್ಲೇ ಕೆಲಸ ಸಿಕ್ಕುತ್ತೆ"ಅಂದೆ
ಅವನು ಸರಿ ಎಂದು ಕರೆ ಕಟ್ ಮಾಡಿದ.
ಅವನ ಜೊತೆಗೆ ಮಾತಾಡಿದ ಬಳಿಕ ಯಾವುದೋ ಸಂಶಯ ಕಾಣಲಾರಮಬಿಸಿತು. ಈಚೆಗೆ ದೊಡ್ಡ ಕ್ವಾನ್ಟಿಟಿ ಯಲ್ಲಿ ಹೈರ್ ಮಾಡುತಿದ್ದರು, ಅವನು ಹೇಳಿದ ಮಾತು ಸತ್ಯ ವಾಗಿ ಇದ್ದರು ಇರಬಹುದು ಅಂದುಕ್ಕೊಂಡೆ. ಯಾರ ಬಳಿ ಕೇಳಿ ಬಗೆಹರಿಸಲಿ? ಆ ಸಮಯಕ್ಕೆ ಮೂಡಿದ ಹೆಸರು ಹರೀಶ್. ಹರೀಶ್ ಜೀವನ್ ಕೂತುಕೊಳ್ಳುತಿದ್ದ ಪ್ಲೇಸ್ ಗೆ ಬಂದ ಸಿನಿಯರ್ ಎಂಪ್ಲೋಯೀ. ಅವನು ತನ್ನ ನಾದಿನಿಯನ್ನು ಎರಡು ತಿಂಗಳ ಹಿಂದೆಯಷ್ಟೇ ಡ್ರೀಮ್ ಟೆಕ್ ಗೆ ಸೇರಿಸಿದ್ದ.
"ನನ್ನ ಒಬ್ಬ ಕಸಿನ್ ಇದ್ದಾನೆ, ಫ್ರೆಷೆರ್ ಅವನಿಗೆ ಡ್ರೀಮ್ ಟೆಕ್ ನಲ್ಲಿ ಸೇರಿಸಬೇಕು ಅನ್ಕೊಂಡಿದ್ದೇನೆ , ನಿಮಗೆ ಇಲ್ಲಿ ಯಾವ ರೀತಿ ಲೆಟರಲ್ ಎಂಟ್ರಿ ನಡೆಯುತ್ತಿದೆ ಎಂದು ಗೊತ್ತಿರಬಹುದು ಎಂದು ನಿಮ್ಮ ಬಳಿ ಕೆಳುತಿದ್ದೇನೆ,ಯಾವರೀತಿ ಅವನನ್ನು ಸೇರಿಸಿಕೊಳ್ಳಬಹುದು ...?"ಎಂದು ಕೇಳಿದೆ.
ಅವನು "ಬದಿಮನಿ ಯಲ್ಲಿ ಕೇಳು" ಎಂದು ಹೇಳಿ ಬಿಟ್ಟ.
ನಾನು ಅವನಲ್ಲಿ "ಒಂದು ಗುಟ್ಟಿನ ವಿಚಾರ ಕೇಳಬೇಕು ಅಂತಿದ್ದೇನೆ, ಏನೆಂದರೆ ಅವನಿಗೆ ಇಲ್ಲಿ ಕೆಲಸ ಸಿಕ್ಕಿದೆ ಅಂತೆ, ಆದರೆ ಹಣ ಕೇಳ್ತಾ ಇದ್ದರಂತೆ, ಹೀಗೊಂದು ಸಿಸ್ಟಮ್ ಇದೆಯಾ ಇಲ್ಲಿ...?"
ಅವನು ತಗ್ಗಿದ ದನಿಯಲ್ಲಿ "ಎಷ್ಟು ಕೇಳಿದ್ರು ...?" ಅವನಿಂದ ಗುಟ್ಟಲ್ಲೇ ಉತ್ತರ ಬಂತು.
ಕಳ್ಳನನ್ನು ಹಿಡಿಯಲು ಕಳ್ಳನಾಗ ಬೇಕಾಗುತ್ತದೆ, ಸುಳ್ಳನ ಬಾಯಿ ಬಿಡಿಸಲು ಸುಳ್ಳನಾಗಬೇಕಾಗುತ್ತದೆ
"ಎರಡು"
"ನಾನು 2.25 ಕೊಟ್ಟಿದ್ದೆ, ಅವಳಿಗೆ ಮಾರ್ಕ್ಸ್ ಕಮ್ಮಿ ಇತ್ತಲ್ಲ ಅದಕ್ಕೆ"
"ಹಣ ಕೊಡ ಬಹುದಾ...?"
"ಶೂರ್, ಈಗ ನಾದಿನಿ ನೋಡು ಆರಾಮಾಗಿ ಇದ್ದಾಳೆ,ಮೊದಲೆರಡು ತಿಂಗಳಿಗೆ ಟ್ರಿನಿ ಆಗಿರಬೇಕು, ಎರಡು ತಿಂಗಳಲ್ಲಿ ಪೆರ್ಮನೆಂಟ್ ಮಾಡಿಸುತ್ತಾರೆ. ಹೊರಗೆ ಕೆಲಸ ಹುಡುಕುವ ತೊಂದರೆ ಇಲ್ಲ ಹೇಳಿ ಹಣ ಹೋದರು ಪರವಾಗಿಲ್ಲ ಹೇಳಿ ನಾನು ಅವಳನ್ನು ಇಲ್ಲೇ ಸೇರಿಸಿದೆ"ಅಂದ.
ಮನಸಲ್ಲಿದ್ದ 'ಬ್ಯಾಕ್ ಡೋರ್ ಎಂಟ್ರಿ' ಎಂಬ ಕಲ್ಪನೆ ನಿಜವಾಯ್ತು.
ಅವರು ನನ್ನಲ್ಲಿ "ನಿನಗೆ ಹೇಗೆ ಗೊತ್ತಾಯ್ತು ಅವಳದ್ದು ಬ್ಯಾಕ್ಡೋರ್ ಎಂಟ್ರಿ ಹೇಳಿ..?"
"ಹೀಗೆ ಅನ್ಕೊಂಡೆ ನಿಮ್ಮದು ನಂದೇ ಕೇಸ್ ಇರಬಹುದು ಹೇಳಿ ಹಾಗೆ ಕೇಳಿದೆ"
"ಯಾರಿಗೂ ಹೇಳಬೇಡ, ಅವಳ ಪ್ರೋಬೇಶನ್ ಮುಗಿದ ಮೇಲೆ ಗೊತ್ತಾದ್ರೆ ಪರವಾಗಿಲ್ಲ, ಇಲ್ಲನ್ತಂದ್ರೆ ನಂಗು ಬದಿಮನಿಗೂ ತೊಂದರೆ ತಪ್ಪಿದಲ್ಲ... "ಅಂದ.
"ಯಾರಲ್ಲೂ ಹೇಳಲ್ಲ, ನನಗೆ ತಿಳಿಬೇಕಾದ ವಿಷಯ ತಿಳಿಯಿತಲ್ಲ .." ಎನ್ನುತ್ತಾ ಚೇರನ್ನು ನನ್ನ ಡೆಸ್ಕ್ ನೆಡೆಗೆ ಎಳೆದೆ.
ಬದಿಮನಿ ಈ ರೀತಿ ಅಡ್ಡ ದಾರಿ ಹಿಡಿಯುತ್ತಾನೆ ಎಂದು ತಿಳಿಯಲು ಖೇದ ವೆನಿಸಿತು.
**************
ಜೂನ್ ಮೊದಲಿನ ವಾರದಲ್ಲಿ ಭರದಿಂದ ಸಾಗುತಿದ್ದ ಎಂಪ್ಲೋಯೀ ಎಂಟ್ರಿ ಜುಲೈ ಮೊದಲ ವಾರ ಬಂದಾಗ ಚಿತ್ರಣ ಬದಲಾಗಿತ್ತು. ಅಮೆರಿಕಾದಲ್ಲಿ ರೆಸೆಶನ್ ಗಾಳಿ ಮೆಲ್ಲನೆ ಬೀಸಲು ಶುರು ಮಾಡಿತು. ಮೊದಲಿಗೆ ಹೊಸ ಹೈರಿಂಗ್ ಪ್ರೋಸೆಸ್ಸ್ ಅನ್ನು ನಿಲ್ಲಿಸಲಾಯಿತು.
ಎರಡನೆಯದಾಗಿ ಎಲ್ಲರಿಗೆ ಅಸ್ಸೆಸ್ಸ್ಮೆಂಟ್ ಎಂಬ ಚಕ್ರವ್ಯೂಹ ಕ್ಕೆ ಸಿಲುಕಿಸಲಾಯಿತು. ಇಲ್ಲಿ ಪ್ರತಿಯೊಬ್ಬನಿಗೂ ಸ್ಟ್ರಿಕ್ಟ್ ವಾರ್ನಿಂಗ್ ನೀಡಲಾಗಿತ್ತು ಮೂರು ಪ್ರಯತ್ನದಲ್ಲೇ ತನ್ನ ಪ್ರೈಮರಿ ಸ್ಕಿಲ್ ಅನ್ನು ಕಂಪ್ಲೀಟ್ ಮಾಡ ಬೇಕಿತ್ತು. ಬೆಂಚಲ್ಲಿ ಇದ್ದ ನಾವಿಬ್ಬರು ನಮ್ಮ ಪ್ರೈಮರಿ ಸ್ಕಿಲ್ ಗೆ ಎನ್ರೋಲ್ ಆದೆವು.
ತಿವಾರಿ ತುಂಬಾ ದಿನದ ನಂತರ ಕ್ಯುಬಿಕಲ್ ಗೆ ಬಂದಿದ್ದ, ದಿನಗಳಲ್ಲ ವರ್ಷದ ನಂತರ.
ನನ್ನಲ್ಲಿ ಮಾತಾಡುವಂತಿರಲಿಲ್ಲ, ಅದಕ್ಕೆ ಸೀಧಾ ಅವಿನಾಶ್ ನಲ್ಲಿ "ನಾನು ಜೆಎಸ್ಪಿ ಗೆ ಎನ್ರೋಲ್ ಮಾಡ್ಕೊಂಡಿದ್ದೇನೆ , ಇದ್ದದ್ರಲ್ಲಿ ಅದೇ ಸುಲಭದ ಟೆಕ್ನೋಲೋಜಿ ಅಂತ ಗೊತ್ತಾಯ್ತು,ಆದರೆ ಯಾರಾದ್ರು ನನಗೆ ಗೈಡ್ ಮಾಡುವವರು ಬೇಕು, ನಾನು ಮೇನೇಜ್ಮೆಂಟ್ ನವನು ಟೆಕ್ನಿಕಲ್ ಜೇರೊ" ಅಂದ.
ನನ್ನ ಮನಸ್ಸು "ಬೋಳಿ.... ಈಗ ಗೊತಾಯ್ತಾ ಮೆದುಳಿನ ಬೆಲೆ ಎಷ್ಟು ಹೇಳಿ, ಸುಮ್ನೆ ಫ್ಲಾಟ್ನ ಬಚ್ಚಲಲ್ಲಿ ಕಣ್ಣೀರು ಸುರ್ಸಿದ್ದಿಯಲ್ಲ, ಬಾ ಈಗ ನನ್ನ ಕಾಲು ನೆಕ್ಕು"ಅವನನ್ನು ಬೈಯುತಿತ್ತು.
ಅವಿನಾಶ್ "ಸರ್ ನಾನು ಸಿ.ಎಸ್ ಬಾಕ್ ಗ್ರೌಂಡ್ ನವನಲ್ಲ, ನಂದು ನಿಂದೆ ಕಥೆ ವೈಭು ಹತ್ರ ಕೇಳಿ" ಅಂದ.
ನಾನು ಮೇಲೆರುತಿದ್ದೆ, ಅವನು ನನ್ನ ಕಾಲಿಗೆ ಬೀಳುತಿದ್ದ, ಜೀವನ್ ಕೆಲಸಬಿಡುತ್ತಾನೆ ಅಂದಾಗ ಈ ದಿನ ಬರುತ್ತದೆ ಅಂದು ಕೊಂಡಿದ್ದೆ, ಆದರೆ ನನ್ನ ಗ್ರಹಚಾರ ಸರಿ ಇರಲಿಲ್ಲ, ಅಷ್ಟು ಬೇಗ ಆ ಯೋಗ ಬರಲಿಲ್ಲ, ಲೇಟ್ ಆದರೂ ಪರವಾಗಿಲ್ಲ ಈಗ ಬಂತು, ಎಂದು ಖುಷಿಯಾಯಿತು.
ಅವರಿಗೆ ಬಾಯಿ ಇರಲಿಲ್ಲ ನನ್ನಲ್ಲಿ ಸಹಾಯ ಕೇಳಲು, ಅವರು ಕೇಳುವ ಮೊದಲೇ ನಾನು "ನೀವು ಮಾಡಿದಕ್ಕೆ ನಾನು ನೋ, ಅಂದ್ರೂ ತಪಿಲ್ಲ, ಆದರೆ ನಿಸ್ಟೂರ ಆಗಲು ಮನಸಿಲ್ಲ, ಮಾತಲ್ಲಿ ಮೋಡಿ ಮಾಡಲು ನಾನು ನಿಮ್ಮ ತಾರಾ ಮೇನೇಜ್ಮೆಂಟ್ ಲೆವೆಲ್ ನವನಲ್ಲ. ಸಿಂಪಲ್ ಆಗಿ ತ್ರೀ ಡಾಟ್ ಒನ್ ಆಗಿ ನೈನ್ ಡಾಟ್ ಒನ್ ಗೆ ಕೊಡ ಬೇಕಾದ ರೆಸ್ಪೆಕ್ಟ್ ಕೊಡ್ತಾ ಇದ್ದೇನೆ. ಬನ್ನಿ ನಾಳೆಯಿಂದ ಕಲಿಸಿ ಕೊಡ್ತೇನೆ"
ನನ್ನ ವಕ್ರ ಮಾತಿನಿಂದ ಅವರು ಏನು ಮಾತನಾಡದೇ ಕ್ಯುಬಿಕಲ್ ಬಿಟ್ಟರು. ಹಿಡಿ ಸೆಂಟರ್ ನಲ್ಲಿ 600 ಮಂದಿ ಇದ್ದರೂ ಅವರು ನನ್ನನ್ನೇ ಆಶ್ರಯಿಸುತ್ತಾರೆ ಎಂದು ನನಗೆ ಗೊತ್ತಿತ್ತು. ಯಾಕೆಂದರೆ ಆ ವೇಳೆಗಾಗಲೇ ಅವರು ಪುಣೆ ಸೆಂಟರ್ ನ ನೋಟೋರಿಯಸ್ ಇಮೇಜ್ ಪಡೆದಾಗಿತ್ತು ಮತ್ತು ಕರ್ನಲ್ ಜಾರಿಗೊಳಿಸಿದ ನೋಟಿಸ್ ಪಿರೆಡ್ ನ ಕೊನೆಯ ಗಟ್ಟದಲ್ಲಿದ್ದರು, ಚೂರು ಎಡವಿದರೂ ಬೀಳುವುದು ಗೆರೆನ್ಟಿ ಯಾಗಿತ್ತು.
ಮಾರನೆ ದಿನ ಕ್ಯುಬಿಕಲ್ ಗೆ ಬಂದು ಜೆಸ್ಪಿ ಕಲಿಯಲು ಶುರು ಮಾಡಿದರು. ಹೋಗುವಾಗ "ವೈಭು ನಿಂಗೆ ಏನು ಅಭ್ಯಂತರ ವಿಲ್ಲದಿದ್ದರೆ ಕ್ಯುಬಿಕಲ್ ಬದಲು ಸಂಜೆ ಮನೆಯಲ್ಲಿ ...."
ಅವರನ್ನು ನಡುವಲ್ಲಿ ನಿಲ್ಲಿಸಿ "ಸೋರಿ ಸರ್ .. ನಿಮಗೆ ಮನೆಗೆ ಬಂದು ಟ್ರೈನ್ ಮಾಡಲು ನನಗೆ ಡ್ರೀಮ್ ಟೆಕ್ ಸಂಬಳ ಕೊಡುತ್ತ ಇಲ್ಲ ..." ಅಂದೆ.
ಮಾರನೆ ದಿನದಿಂದ ಅವರು ತಮ್ಮ ಡೆಸ್ಕ್ ನಲ್ಲೆ ಕುಳಿತು ಓದುತಿದ್ದ್ರು ಡೌಟ್ ಬಂದಾಗ ಕಮ್ಯುನಿಕೆಟರ್ ನಲ್ಲಿ ಕೆಳುತಿದ್ದರು ನಾನು ವಿವರಿಸುತಿದ್ದೆ. ಇನ್ನೂ ದೊಡ್ಡ ಸಂಶಯವಾದರೆ ಅವರ ಕ್ಯುಬಿಕಲ್ ಗೆ ಹೋಗಿ ನಿವಾರಿಸಿ ಬರುತಿದ್ದೆ.ಅವರನ್ನು ಇನ್ನೆಂದು ನನ್ನ ಕ್ಯುಬಿಕಲ್ ಗೆ ಕರಿಯಲಿಲ್ಲ.
ಡ್ರೀಮ್ ಟೆಕ್ ಮೇಲಿನ ಹೈರಾರ್ಕಿ ಇಂದ ಒಬ್ಬೊಬ್ಬರನ್ನೇ ತೆಗೆಯಲು ಶುರು ಮಾಡಿತ್ತು. ಬದಿಮನಿಯ ಕಳ್ಳಕಿಂಡಿಯಾಟ ಗೊತ್ತಾಗುವವರಿಗೆ ಗೊತ್ತಾಗಿತ್ತು. ಮಾರನೆ ದಿನವೇ ಗೇಟ್ ಪಾಸ್ ಕೊಟ್ಟರು.
ತಿವಾರಿಯು ಕೊನೆಯ ಒಂದು ತಿಂಗಳಲ್ಲಿ ಯಾವುದೇ ಪ್ರಗತಿ ಮಾಡಿರಲಿಲ್ಲ ಅವನನ್ನು ತೆಗೆದು ಬಿಸಾಡಿದರು.
ಹೋಗ ಬೇಕಾದರೆ ಕ್ಯುಬಿಕಲ್ ಗೆ ಬಂದು "ನಿಂಜೊತೆ ತುಂಬಾ ವಿಚಾರ ನಾನು ಕಲ್ತೆ ವೈಭು, ಹಿಂದಿನ ಹತ್ತು ವರ್ಷಕ್ಕೂ ಕಳೆದ ಹತ್ತು ತಿಂಗಳು ಬರಾಬರಿ ಇತ್ತು. ನಾನು ನಿನಗೆ ಹುರ್ಟ್ ಮಾಡಿದರೆ ಕ್ಷಮೆ ಇರಲಿ" ಎಂದ.
"ನಾನೇನು ದೇವರಲ್ಲ ಸರ್, ತಪ್ಪು ಮಾಡಿದವನಿಗೆ ಅವನ ತಪ್ಪಿನ ಅರಿವು ಮೂಡಿಸುವ ಕೆಲಸ ಮಾಡಿದೆ ಅಷ್ಟೇ... ನನ್ನಲ್ಲಿ ಕ್ಷಮೆ ಕೇಳ ಬೆಕಂತಿರಲಿಲ್ಲ, ನಾನಂದಂತೆ ನಿಮ್ಮ ಮನಸಾಕ್ಷಿಗೆ ಕ್ಷಮೆ ಕೇಳಿದರೆ ಸಾಕಿತ್ತು. .. ನನ್ನಲ್ಲಿ ನಿಮಗೆ ದೈವತ್ವ ಕಂಡರೆ ನಾನು ಧನ್ಯ…" ಎಂದೆ.
ನನ್ನನ್ನು ಅಪ್ಪಿಕೊಂಡ. "ಜೀವನ್ ಏನಂತೆ ...? ಇದ್ದಾನ ಕಾಂಟಾಕ್ಟ್ ನಲ್ಲಿ...? "
"ಎಲ್ಲಿದ್ದಾನೆ ಹೇಳಿ ಗೊತ್ತಿಲ್ಲ, ಅವನಿಗಾಗಿ ನೀವು ನನಗೆ ಮೋಸ ಮಾಡಿದ್ರಿ ...!! ಅವನು ಅವನಿಗಾಗಿ ನಿಮಗೆ ಮೋಸ ಮಾಡಿದ !!!"
"ಅರ್ಥ ಆಗ್ಲಿಲ್ಲ..."
"ಅರ್ಥ ವಾಗುವುದು ಬೇಡ ಬಿಡಿ, ಅರ್ಥ ಆದ್ರೆ ನಿಮ್ಮ ಮನಸಲ್ಲಿರುವ ಜೀವನ್ ಎನ್ನುವ ದೇವತಾ ಮನುಷ್ಯ ರಾಕ್ಷಸನಾಗುವ... ಅವನ ವಿಚಾರ ಬಿಡಿ... ನೆಕ್ಸ್ಟ್ ಪ್ಲಾನ್ಸ್ ಏನು ...?"
"ಜಗತ್ತು ವಿಶಾಲ ವಿದೆ... ಅದನ್ನೇ ಮನೆ ಮಾಡ್ಕೊಳ್ತೇನೆ ... ಮನುಷ್ಯನಾಗಿ ಬಾಳ್ತೇನೆ..."
ಅವನ ಈ ಮಾತು ಅವನನ್ನು ಇನ್ನೊಮ್ಮೆ ಅಪ್ಪಲು ಮನ ಬಯಸಿತು. ಅಪ್ಪಿ ಕೊಂಡೆ, ಅವಿನಾಶ್ ಇಬ್ಬರಿನ ನಡುವಿನ ನಾಟಕಕ್ಕೆ ಸಾಕ್ಷಿಯಾಗಿದ್ದ.
ಅವಿನಾಶ್ ಜಿ.ಆರ್.ಇ ಪರೀಕ್ಷೆಗೆ ತಯಾರಿ ಮಾಡುತಿದ್ದ, ಕ್ಯಾಟ್ ಕೈಕೊಟ್ಟ ಬಳಿಕ.
ದೊಡ್ಡ ದೊಡ್ಡ ವರನ್ನು ಜಾಲಾಡಿಸಿ ಹೊರ ಹಾಕಿದ ನಂತರ ಇಂಟರ್ನ್ ಹೇಳಿ ಜೋಯಿನ್ ಆದವರನ್ನು ಬಿಡಿಸಿದರು, ನಂತರ ಪ್ರೋಬೇಶನ್ ನಲ್ಲಿ ಇರುವವರನ್ನು... ನನ್ನ ಡ್ರೀಮ್ ಟೆಕ್ ನ ಕೊನೆಯ ದಿನಗಳನ್ನು ನಾನು ಎಣಿಸಲು ಶುರು ಮಾಡಿದೆ.
ನಾನು ಡ್ರೀಮ್ ಟೆಕ್ ಬಿಡುವ ಹೊತ್ತಿಗೆ ಅವಿನಾಶ್ ಹೊರ ಹೋಗಿ ಆಗಿತ್ತು. ಸಂಕೆ 200 ಕ್ಕೆ ಇಳಿದಿತ್ತು. ಡ್ರೀಮ್ ಟೆಕ್ ಅನ್ನು 28 ರಿಂದ 603 ವರೆಗೂ ನೋಡಿದ ಏಕೈಕ ತಲೆ ಕೊನೆಯದಾಗಿ ತನ್ನ ಕುತ್ತಿಗೆ ಪಟ್ಟಿಯನ್ನು ಹೊಸದಾಗಿ ಚೆನ್ನೈ ನಿಂದ ಬಂದ ಎಚ್ ಆರ್ ಗೆ ಕೊಟ್ಟು ಹೊರ ಬಂದಾಗ ಮೊದಲ ದಿನದಂತೆ ಲಕ್ಕಿ ಬಾಯ್ ಹೊರಗಿದ್ದ.
ನಾನು ಎಲ್ಲರಿಗು ಬಾಯ್ ಹೇಳಿದ್ದೆ ಅವರು ಬಿಟ್ಟು ಹೋಗುವಾಗ, ಇವತ್ತು ಲಕ್ಕಿಯನ್ನು ಬಿಟ್ಟರೆ ನನಗೆ ಬಾಯ್ ಹೇಳುವ ಯಾರು ಉಳಿದಿರಲಿಲ್ಲ ಡ್ರೀಮ್ ಟೆಕ್ ನಲ್ಲಿ, ಅವನಿಗೆ ಬಾಯ್ ಅಂದೆ. ಆಲಂಗಿಸಿದೆ.
"ಸಾಬ್ ಆರ್ ಕಬ್"
"ದುನಿಯಾ ಗೋಲ್ ಹೇ ಬಾಯ್, ಜರೂರ್ ಮಿಲೆಂಗೆ..." ಅಂದೆ. ಕಣ್ಣು ಮಂಜಾಯಿತು.
************