ಅ ಕಪ್ ಓಫ್ ಕಾಫಿ ... ಸಿಪ್ - ೫೦ (ಲಾಸ್ಟ್ ಸಿಪ್ )
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
ಅ ಕಪ್ ಆಫ್ ಕಾಫಿ ಒಂದು ಸಿಪ್ ಪ್ರೀತಿ ಯೊಂದಿಗೆ ಮತ್ತೊಂದು ಜೀವನದೊಂದಿಗೆ
"ಪ್ರಸಾದ್ ಬಸ್ ಕರೋ ಯಾರ್ ಕಿತ್ನ ಮಾರೋಗೆ ಉಸ್ಸೆ, ಅಪನೇ ಲೈಫ್ ಮೇ ಉಸನೇ ಬಹುತ್ ಮಾರ್ ಸೆಹ್ ಲಿಯ ಹೇ, ಬಸ್ ಹೇ ಯಾರ್ ಚೋಡ್ ದೋ ನಾ !!"" ಎಂದಳು ಪ್ರೀತಿ ಬನ್ನಿ ಗೆ ಬುಮ್ಸ್ ಕೊಡುತಿದ್ದ ಪ್ರಸಾದ್ ನಾಯ್ಡು ಬಳಿಯಲ್ಲಿ.
ಕೈಯೊಂದಿಗೆ ಕೈ ಜೋಡಿಸಿ ಅವನು "ಹ್ಯಾಪ್ಪಿ ಬರ್ತ್ ಡೇ ವೈಭು, ಆಲ್ ಯುವರ್ ಡ್ರೀಮ್ಸ್ ಕಂ ಟ್ರೂ"
"ಅಲ್ಲ ಸ್ವಾಮಿ ಮನುಷ್ಯನ ಕನಸಿಗೆ ಕೊನೆ ಉಂಟಾ...? ಒಂದು ಟ್ರೂ ಆದಾಗ ನೂರು ಹೊಸ ಡ್ರೀಮ್ ರೆಡಿ ಆಗುತ್ತೆ ಕಣ್ಣಿನ ಪಟಲದಲ್ಲಿ" ಅಂದು ನಾನು ಮುದ್ದೆಯಾದ ಶರ್ಟ್ ಅನ್ನು ಸೆಟ್ ಮಾಡುತ್ತಾ. ಸೇರಿದ್ದ ಜನ ಒಬ್ಬೊಬ್ಬರಾಗಿ ಬಂದು ಶೇಕ್ ಹ್ಯಾಂಡ್ ಕೊಡಲು ಬಂದರು.'ಥಾಂಕ್ ಯೌ ಥಾಂಕ್ ಯೌ' ಎನ್ನುತ್ತಾ ಅವರಲ್ಲಿ ಕೈ ಜೋಡಿಸಿದೆ.
ಕೇಕ್ ಅನ್ನು ಕತ್ತರಿಸಿದೆ. ಒಬ್ಬೊಬ್ಬರಾಗಿ ತನ್ನ ಪಾಲನ್ನು ಸ್ವೀಕರಿಸಿದರು. ಮತ್ತು ಕ್ಯುಬಿಕಲ್ ಬಿಟ್ಟು ಅವರವರ ಕೆಲಸಕ್ಕೆ ಹೋದರು.
ಪ್ರೀತಿಯೋಬ್ಬಳೆ ಕ್ಯುಬಿಕಲ್ ನಲ್ಲಿ ಇದ್ದಳು.
"ಗೂಬೆ ಏನೇ, ಇನ್ನು ಇಲ್ಲೇ ಇದ್ದೀಯ...? ನನ್ನನ್ನು ನೋಡುವುದು ಬಿಟ್ಟು ಬೇರೆ ಕೆಲಸ ಏನು ಇಲ್ವಾ...? ಮದುವೆ ಯಾಗಿದೆಯಮ್ಮ.. ಈಗಲಾದರೂ ನನ್ನನ್ನು ಬಿಟ್ಟು ಬಿಡು…." ಅಂದೆ.
"ಮಂಗಾ, ನೀನು ಚೂರು ಬದಲಾಗಲಿಲ್ಲ, ಜೋಥೆಯಲ್ಲಿರುವವರು ಎಷ್ಟು ಬದಲಾದರು ನೀನು ಇನ್ನು ಅದೇ ಹಳೆ ವೈಭು ನೇ, ಸೆಂ ಅದೇ ವೈಭು, ಅದೇ ಮುಗ್ದ ನೋಟ, ಎಂದೂ ತಯಾರಿರುವ ನಿನ್ನ ಡೈಲಾಗ್, ಆಕೃತಿ ನಿನ್ನನ್ನು ಸುಮ್ನೆ ಡಂಬು ಅಂತ ಹೆಸರಿಟ್ಟಳು."
"ಯಾಕಾಗಿ ಬದಲಾಗ್ ಬೇಕು, ಮನುಷ್ಯರು ಯಾವಾಗಲು ಮನುಷ್ಯರಾಗಿರ ಬೇಕು, ಋತುಗಳಾಗಿರಬಾರದು; ಬದಲಾಗುವ ಕೆಲಸ ಏನಿದ್ರು ಋತುಗಳದ್ದು ಆಲ್ವಾ...!!"
"ನಿನ್ನತ್ರ ಮಾತಾಡ್ತಾ ಇದ್ರೆ ನಾನು ಬದಲಾಗುವುದು ಶೂರ್, ಸಾಧಾರಣ ಹುಡುಗಿಯಿಂದ ವೆಧಾಂತಿ ಯಾಗುವುದು ಶೂರ್ !!" ಎಂದು ನಕ್ಕಳು ಪ್ರೀತಿ.
ಪ್ರೀತಿಯ ಕಣ್ಣಲ್ಲಿ ಮತ್ತೆ ಆ ಹಳೆಯ ಸ್ವಚ್ಚಂದ ನಗೆ ಇತ್ತು, ಕಣ್ಣಲ್ಲಿ ಹೊಳಪಿತ್ತು, ಮಾತಲ್ಲಿ ಜಿನುಗುವ ನವರಸಗಳು ತನ್ನ ಸಂಧರ್ಭಕ್ಕೆ ಅನುಗುಣವಾಗಿ ಸಮವಾಗಿ ಹರಿದು ಬರುತಿತ್ತು. ಹಿಂದಿನಂತೆ ಸೂತಕದ ಛಾಯೆ ಇರಲಿಲ್ಲ.
"ಹೇ ಗೂಬೆ ಅ ಕಪ್ ಆಫ್ ಕಾಫಿ ...?" ಅಂದೆ ನಾನು ಕಣ್ಣಲ್ಲಿ ಕಣ್ಣಿಟ್ಟು ನೋಡುತಿದ್ದ ಅವಳನ್ನು ನೋಡಿ.
"ನೀನು ಕರ್ದಾಗ ಯಾವತ್ತಾದ್ರು ಬೇಡ ಅಂದಿದ್ದು ಉಂಟಾ ವೈಭು, ಶೂರ್... ಎಲ್ಲಿ?"
"ಸದ್ಯಕ್ಕೆ ಎಲ್ಲೂ ಇಲ್ಲಮ್ಮಾ, ಇಲ್ಲೇ ಹೊರಗಿನ ಬಾಲ್ಕನಿಯಲ್ಲಿ"
"ಪರವಾಗಿಲ್ಲ" ಅಂದಳು ಪ್ರೀತಿ.
ಇಬ್ಬರು ಬಾಲ್ಕನಿಗೆ ಬಂದು ಎರಡು ಕಪ್ ಹಿಡಿದು ಸಿಪ್ ಏರಿಸಲು ಶುರುಮಾಡಿದೆವು. ಡಿಸೆಂಬರ್ ನ ತಂಗಾಳಿ ಬೀಸುತಿತ್ತು ಜೋಂಪಾಗಿ, ಮೇಲೆ ಏರುವ ಹಬೆಯಲ್ಲಿ ಅವಳು ತನ್ನನ್ನು ಬಿಸಿ ಮಾಡುತಿದ್ದಳು, ಆಕೃತಿಯ ನೆನಪು ಗಾಡವಾಗಿ ಕಾಡಲು ಶುರುವಾಯಿತು.
ಆಕೃತಿಗೂ ಮೇಲೆರಿವ ಹಬೆಗೆ ತನ್ನ ಮುಖಕೊಟ್ಟು ಹಬೆ ಕುಡಿಯುವ ಅಭ್ಯಾಸವಿತ್ತು. ಅವಳೊಂದಿಗಿನ ಕಾಫಿ ದಿನಗಳನ್ನು ಅವಳು ಚೆನ್ನೈ ಸೇರಿದ ದಿನದಿಂದ ಎಲ್ಲೆಲ್ಲೋ ಹೋಯಿತು.
ಪ್ರೀತಿಯನ್ನು ನೋಡುತ್ತಾ ತೇಲಿ ಹೋಗಿದ್ದ ನನ್ನಲ್ಲಿ.
"ಮಂಗಾ ಎಲ್ಲಿ ಹೋದಿ...?" ಅಂದಳು. ನೆನಪಲ್ಲಿ ತೇಲುತ್ತಿರುವ ನಾನು ಈಚೆ ಬಂದಿರಲಿಲ್ಲ.
"ಡಂಬು .... ಓಯ್" ಎಂದಳು ಅವಳು ಬಾಯಿಯಲ್ಲಿರುವ ಸಿಪ್ ಒಳಗೆ ನಾಜೂಕಾಗಿ ನುಂಗುತ್ತಾ.
"ಏನೇ ಟ್ರಾನ್ಸ್ಲೆಟರ್" ಎನ್ನುತ್ತಾ ಅವಳ ಕೈ ಹಿಡಿದೇ.
ಅವಳು "ಓಯ್ ಮಂಗಾ... ಟ್ರಾನ್ಸ್ ಲೆಟರ್ ಬಗ್ಗೆ ಧ್ಯಾನ ಇನ್ನು ನಿಂತಿಲ್ವಾ... ಗೂಬೆ ಕಣೋ ಎದುರಲ್ಲಿ ಇರುವವಳು" ಎಂದು ಹಿಡಿದ ಕೈಮೇಲೆ ತನ್ನ ಇನ್ನೊದು ಕೈ ಸೇರಿಸುತ್ತಾ ನೆನಪಿಂದ ಎಬ್ಬಿಸಿದಳು ಪ್ರೀತಿ.
ಹೊರಬಂದ ನಾನು "ಹಿಂದಿನ ನೆನಪಲ್ಲಿ ಈಜಲು ಏನೋ ಸುಖ ಅಲ್ವೇನೆ...?" ಅಂದೆ
ಅವಳು "ಹೌದು ಅದು ಖುಷಿ ಕೊಡುವ ಸಂಭ್ರಮ ವಾಗಿದ್ದರೆ ಕಣ್ಣು ನಗುತ್ತವೆ ನೆನಪಾಗಲು , ಅದೇ ಧುಖದ ಸಂಧರ್ಭ ಗಳಾಗಿದ್ದರೆ ಅದೇ ಕಣ್ಣುಗಳು ಕೂಗುತಿರುತ್ತವೆ, ನೆನಪೆಂದರೆ ಎಷ್ಟು ವಿಚಿತ್ರ ಅಲ್ವೇನೋ..." ಅಂದಳು ಪ್ರೀತಿ.
ಮತ್ತೆ ಮೆಲುಕು ಹಾಕುತಿದ್ದೆ ನೆನಪನ್ನು, ಆ ಬದಿಯಲ್ಲಿ ಪ್ರೀತಿಯು ತನ್ನ ಹಿಂದಿನ ದಿನಗಳನ್ನು ನೆನಪಿಸುತಿದ್ದಳು.
"ಥ್ಯಾಂಕ್ಸ್ ಕಣೋ ವೈಭು"
"ಯಾಕಮ್ಮ ಒನ್ಸ್ ಅ ಸುಡನ್ ಈ ಥ್ಯಾಂಕ್ಸ್"
"ಎಲ್ಲರು ಫ್ರೆಂಡ್ ಶಿಪ್ ಗಾಗಿ ಡೈಲಾಗ್ ಬಿಡ್ತಾರೆ,ಆದರೆ ಅದನ್ನು ಉಳಿಸುವುದಿಲ್ಲ ಆದ್ರೆ ನೀನು ಉಳಿಸಿಕೊಂಡಿದ್ದಿಯ ನಿನ್ನ 'this is for you my sweet friend, will be sweet friends forever !' ಎಂಬ ಮಾತನ್ನು ನೀನು ಇನ್ನು ಉಳಿಸಿ ಕೊಂಡಿದ್ದಿಯ"
"ಯಬ್ಬಾ ಹುಡುಗಿಯೇ... ನಂಗೆ ಮರ್ತು ಹೋಗಿದೆ ಯಾವಾಗ ನಾನು ಆ ಡೈಲಾಗ್ ಬಿಟ್ಟೆ ಹೇಳಿ ಅದನ್ನು ನೀನು ಇನ್ನು ನೆನಪಿಟ್ಟು ಕೊಂಡಿದ್ದಿಯಲ್ಲಾ ... ಹಾಟ್ಸ್ ಆಫ್ !! ಬೈ ದಿ ಬೈ ಯವಗಮ್ಮಾ ನಾನು ಈ ಡೈಲಾಗ್ ಬಿಟ್ಟಿದ್ದು..?" ಅಂದೇ ನಾನು.
"ಅದೇ ನನ್ನ 2002 A love story ಕೇಳಿದ ದಿನ.ಡೈರಿ ಮಿಲ್ಕ್ ನನ್ನ ಕೈಯಲ್ಲಿ ಇಡುತ್ತಾ" ಎಂದು ಮೌನಕ್ಕೆ ಜಾರಿದಳು.
ಹಿಂದಿನ ಅವಳ ದುಃಖದ ನೆನಪು ಅವಳನ್ದಂತೆ ಅವಳ ಕಣ್ಣಲ್ಲಿ ಹೊರಗೆ ಬೀಳುತ್ತಿತ್ತು.
ಕ್ಷಣದಲ್ಲೇ ಸಾವರಿಸಿಕೊಂಡು "ಹಳೆ ನೆನಪು ಅದೆಲ್ಲಾ ಬಿಡು, ಈಗ ನಾನು ಖುಷಿಯಲ್ಲಿದ್ದೇನೆ." ಎಂದು ಬಾಯಿ ಬಿಟ್ಟು ತನ್ನನ್ನು ತಾನು ಸಮಧಾನಿಸಿಕೊಂಡಳು.
ನಾನು ಕಪ್ನಲ್ಲಿ ಇನ್ನೊಂದು ಸಿಪ್ ಮೇಲೇರಿಸಿದೆ. ಅವಳು ಈಗ ನಾವಿಬ್ಬರು ಮತ್ತೆ ಭೇಟಿಯಾದ ಫ್ಲಾಶ್ ಬಾಕ್ ಗೆ ಬಂದಳು.
"ನೀನು ಆ ದಿನ ನನಗೆ ಕಾಲ್ ಮಾಡಿದ ದಿನ ನನಗೆ ಜೀವನದಲ್ಲಿ ಹೊಸ ಆಶಾಕಿರಣ ಮೂಡಿತು, 2008 ರ ರೆಸೆಶನ್ ನಲ್ಲಿ ಕೆಲಸವನ್ನೂ, ನನ್ನ ಹಟಕ್ಕೆ ನನ್ನ ಪ್ರೀತಿಯನ್ನು ಕಳಕೊಂಡು ಚಿಂತಾಕ್ರಾಂತಳಾಗಿ ದಿನ ದೂಡುತಿದ್ದ ನನಗೆ ಬದುಕಲು ಹೊಸ ಆಸರೆ ಕೊಟ್ಟಿ. ಥ್ಯಾಂಕ್ಸ್ ಕಣೋ...ನಿನ್ನ ಸಹಾಯಕ್ಕೆ, ಅಲ್ಲನ್ತಾದ್ರೆ ನಾನು ಏನಾಗ್ತಿದ್ದೇನೋ ನನಗೆ ಗೊತ್ತಿಲ್ಲ. ಗೆಳೆಯರು ಲೈಫ್ ನಲ್ಲಿ ಇರಬೇಕು ಪ್ರೇಮಿಗೆ ಕೊಡಲಾಗದನ್ನು ಕೆಲವೊಮ್ಮೆ ಗೆಳೆಯರು ಕೊಟ್ಟು ಪ್ರೇಮಿಗಿಂತ ಹತ್ತಿರವಾಗಿ ಬಿಡುತ್ತಾರೆ ಎಂದು ಕೇಳಿದ್ದೆ, ಆದರೆ ಅಂದು ನನಗೆ ಅದರ ಅನುಭವವಾಯಿತು."
"ನಿನಗೆ ನಾನು ಸಹಾಯ ಮಾಡುವುದರಲ್ಲಿ ನನ್ನ ಸ್ವಾರ್ಥವು ಅಡಗಿತ್ತು. ನನ್ನ ಸ್ವಾರ್ಥಕ್ಕಾಗಿ ನಿನಗೆ ಸಹಾಯ ಮಾಡಿದೆ."
"ನಿನ್ನ ಸ್ವಾರ್ಥಕ್ಕೆ ಬೇರೆ ಯಾರು ಸಿಕ್ಕದೇ, ನಾನೇ ನೆನಪಾಗಿದ್ದೆಯಲ್ಲ, ಅದಕ್ಕೆ ಹೇಳಿದ್ದು ನೀನು ಕ್ಲೋಸ್ ಫ್ರೆಂಡ್ ಆಗಿರ್ತಿಯಾ ಹೇಳಿದನ್ನು ಅಕ್ಷರಶಃ ನಿಭಾಯಿಸಿದ ಪುಣ್ಯಾತ್ಮ ಹೇಳಿ"
ಅವಳ ಮಾತು ನಿಲ್ಲುತಿದ್ದಂತೆ ಮನ ಎರಡೂವರೆ ವರ್ಷ ಹಿಂದೆ ಹೋಯಿತು.
ಡ್ರೀಮ್ ಟೆಕ್ ನಿಂದ ಹೊರಬಂದ ಮೇಲೆ ಮುಂದಿನ ಯೋಜನೆಗಳು ಖಾಲಿ ಹಾಳೆಯಂತೆ ಕಾಣಲಾರಂಬಿಸಿದವು. ಜಗತ್ತೇ ಆರ್ಥಿಕ ಹಿಂಜರಿತಕ್ಕೆ ತುತ್ತಾಗಿತ್ತು , ಐ .ಟಿ ಪ್ರಪಂಚ ಬೆತ್ತಲಾಗುತಿತ್ತು.ಪುಣೆಯಲ್ಲಿ ದಿನ ದೂಡಲಾರದೆ ಊರಿಗೆ ಹೋದೆ. ಆದರೆ ಎಲ್ಲಿವರೆಗೆ ಮನೆಯಲ್ಲಿ ಕುಳಿತುಕೊಳ್ಳುವುದು, ಅಲ್ಲಿದ್ದರೆ ಪ್ರತಿಯೊಬ್ಬರೂ ಕುಳಿತಿರಲು ಕಾರಣ ಕೇಳುತ್ತಾರೆ, ಅದಕ್ಕಾಗಿ ಮನೆಗೆ ಹೋದಾಗ ಮನೆಯವರಲೆಲ್ಲ ನಾನು ನನಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿತು ಎಂದು ಸುಳ್ಳು ಹೇಳಿದೆ. ಸಂಭಂದಿಕರಿಂದ, ಊರಿನ ಜನರ ಮಾತಿನಿಂದ ತಪ್ಪಿಸಿಕೊಳ್ಳಲು ನನಗೆ ಈ ಸುಳ್ಳಿನ ಅಗತ್ಯವಿತ್ತು.
ಆದರೆ ಹೆತ್ತ ಕರುಳಿಗೆ ಸುಳ್ಳು ಹೇಳಲಾಗದೆ ನಾನು ಅವಳಲ್ಲಿ ಯಾರಿಲ್ಲದಾಗ ನನ್ನ ಕೆಲಸ ಹೋದ ಸಂಗತಿಯನ್ನು ಹೇಳಿದೆ. ಕರುಳ ಬಳ್ಳಿಯ ಸಂಕಟ ಅವಳ ಅನುಭವಕ್ಕೆ ನನಗಿಂತ ಹೆಚ್ಚೇ ಬಂತು. ಸಲ್ಪ ಆಲೋಚಿಸಿ ಅವಳು ನನಗೆ ಜನರ ಬಾಯಿಯಿಂದ ಮತ್ತು ಸಂಭದಿಕರ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಒಂದು ಉಪಾಯ ಹೇಳಿದಳು. ಅದು ನಾವು ಮೂವರು ಬೆಂಗಳೂರಿಗೆ ಊರು ಬಿಟ್ಟು ಬಂದು ಬಿಡುವುದು.ತನ್ನವರೆದುರಿಗೆ ಕಣ್ಣೀರು ಇದುವ ಬದಲು ಕೋಟಿ ಜನರ ಮದ್ಯೆ ಆರಾಮಾಗಿ ಕಣ್ಣೇರು ಹಾಕುವ ಸಲುಗೆ ನೀಡಿದಳು
ಬೆಂಗಳೂರಿನಲ್ಲಿ ಮನೆಯ ಕೆಲಸ ಪೂರ್ತಿಯಾಗಿತ್ತು, ಸಲ್ಪದರಲ್ಲಿ ಅದರ ಗೃಹಪ್ರವೇಶ ವಾಗುವುದರಲ್ಲಿತ್ತು. ಅದನ್ನು ಮುಗಿಸಿ ನಾವು ಮೂವರು ಅಲ್ಲಿ ಬಂದಾಯ್ತು.
ಮಾಡಲು ಯಾವುದೇ ಕೆಲಸವಿಲ್ಲ. ಹಿಡಿದಿನ ಮನೆಯಲ್ಲಿ ಕೂತು ಇಂಟರ್ನೆಟ್ ನಲ್ಲಿ ಹೊರ ದೇಶದಲ್ಲಿ ನಡೆಯುತಿದ್ದ ಆರ್ಥಿಕ ಕುಸಿತ ಎಲ್ಲಿವರೆಗೆ ಜಾರುತ್ತಿದೆ ಎಂದು ನೋಡುವುದೇ ಕೆಲಸವಾಗಿತ್ತು.
ಹಲವೊಂದು ವಿದೇಶಿ ಸೈಟ್ ಗಳಲ್ಲಿ ಆ ಸಮಯಕ್ಕೆ ಕೆಲಸದ ಆಡ್ ಬರುತಿದ್ದವು.
ಹೊರ ದೇಶದ ಕ್ಲೈಂಟ್ ಗಳು ತಮ್ಮ ಮಟ್ಟವನ್ನು ಸುಧ್ಹಾರಿಸಲು ಈ ದಾರಿ ಕಂಡುಕೊಂಡಿದ್ದರು. ದೊಡ್ಡ ದೊಡ್ಡ ಕಂಪೆನಿಗಳ ಜೊತೆ ಒಪ್ಪಂದದ ಬದಲಿಗೆ, ಒಂದೆರಡು ಮಂದಿಯನ್ನು ಆರಿಸಿ ಅವರಿಗೆ ಡೈರೆಕ್ಟ್ ಕೆಲಸ ಕೊಡುವುದು. ಮತ್ತು ಅವರಿಗೆ ಅವರ ಕೆಲಸಕ್ಕೆ ತಕ್ಕ ಬೆಲೆ ಕೊಡುವುದು. ಇದರಿಂದ ಕ್ಲೈಂಟ್ ಮತ್ತು ಟೆಕ್ಕಿ ಗಳ ನಡುವೆ ಕೆಲಸ ಮಾಡದೆ ಹಣ ತಿನ್ನುವ ಮೇನೇಜ್ಮೆಂಟ್ ಲೆವೆಲ್ನವರಿಗೆ, ಮತ್ತು ಇನ್ಫ್ರಾಸ್ಟ್ರಕ್ಚರ್ ಅದು ಇದು ಹೇಳಿ ಕಂಪೆನಿಗೆ ಕೊಡ ಬೇಕಿದ್ದ ದೊಡ್ಡ ಮೊತ್ತದ ಡಾಲರ್ ಅನ್ನು ಉಳಿಸ ಬಹುದಿತ್ತು.
ಇಂತಹ ಆಡ್ ಗಳಿಗೆ ನಾನು ನನ್ನ ರೆಸ್ಯುಂ ಕಳಿಸಲು ಶುರು ಮಾಡಿದೆ. ಎರಡು ತಿಂಗಳಲ್ಲಿ ಒಂದು ಕಂಪೆನಿಯಿಂದ ಡೆವೆಲೋಪ್ಮೆಂಟ್ ಗೆ ಸ್ಕ್ರಾಚ್ ಕಳಿಸಿಕೊಟ್ಟರು,ಅವರ ರೆಕ್ವೈರ್ಮೆಂಟ್ ಗೆ ಅನುಗುಣವಾಗಿ ಅದನ್ನು ತಯಾರಿಸಿ ಅವರಿಗೆ ಕೊಟ್ಟೆ, ನಂತರ ಹೀಗೆ ಎರಡು ಮೂರು ಸಣ್ಣ ಸಣ್ಣ ಡೆವೆಲೋಪ್ಮೆಂಟ್ ಬರಲು ಶುರುವಾಯಿತು, ಅಲ್ಲಿಂದ ಡಾಲರ್ಗಳು ನನ್ನ ಹೆಸರಿನಲ್ಲಿ ಜಮಾ ಆಗುತಿತ್ತು.
ಅಲ್ಲಿನ ಸಮಯಮಿತಿಗೆ ಅನುಗುಣವಾಗಿ ನಾನು ಕೆಲಸ ಮಾಡಬೇಕಿತ್ತು, ವಿವರಣೆಗಳೆಲ್ಲ ಇಂಟರ್ನೆಟ್ ನಲ್ಲೆ ನಡೆಯುತಿದ್ದರಿಂದ ನಾನು ರಾತ್ರಿ ಹಿಡಿ ಎಚ್ಚರ ಇದ್ದು ಹಗಲು ಮಲಗುತಿದ್ದೆ. ಹೀಗಿರಲು ರಾತ್ರಿ ನನ್ನ ಕೆಲಸ ಮುಗಿದರೂ ಕಣ್ಣಿಗೆ ನಿದ್ದೆ ಹತ್ತುತ್ತಿರಲಿಲ್ಲ, ಇಂತದ್ರಲ್ಲಿ ಒಮ್ಮೆ ಕ್ರಿಸ್ ನ ನೆನಪಾಯಿತು, ಹಸಿರಾಗಿ ಉರಿಯುತಿದ್ದ ಅವನ ಸ್ಟೇಟಸ್ ನೋಡಿ ಪಿಂಗ್ ಮಾಡಿದೆ.
ಅವನು ಫ್ರೀ ಇದ್ದ. ಡ್ರೀಮ್ ಟೆಕ್ ನಲ್ಲಿ ಆರ್ಥಿಕ ಹೊಡೆತದ ಪರಿಣಾಮ ನನ್ನಲ್ಲಿ ಯಾವರೀತಿ ಬಿದ್ದಿದೆ ಎಂದು ಹೇಳಿದೆ, 'Gen-Next Solution' ನ ಬಗ್ಗೆ ಕೇಳಲು ಅವನು ಕಂಪೆನಿ ಅನುಭವಿಸುತ್ತಿರುವ ಹೊಡೆತವನ್ನು ವಿವರಿಸಿದ.
ಡ್ರೀಮ್ ಟೆಕ್ ಬಿಟ್ಟ ನಂತರದ ನನ್ನ ಆಗು ಹೋಗುಗಳನ್ನು ವಿಚಾರಿಸಿದ, ಈಗಿನ ಕೆಲಸದ ಬಗ್ಗೆ ವಿಚಾರಿಸಿದ, ನಾನು ಆನ್ಲೈನ್ ನಲ್ಲಿ ಗ್ಲೋಬಲ್ ಮಾರ್ಕೆಟ್ ನಲ್ಲಿ ಡೆವೆಲೋಪ್ಮೆಂಟ್ ಮಾಡುವುದನ್ನು ಅವನಲ್ಲಿ ಹೇಳಿದಾಗ ಅವನು ತನ್ನ ಕಂಪೆನಿಯು ಇದೇ ಮಾರ್ಗವನ್ನು ಅನುಸರಿಸುತ್ತಿರುವಂತೆ ತಿಳಿಸಿದ.
ಆಶಾಕಿರಣ ಮೂಡಿತು, ಹಿಂದೆ ಜಳಪಿಸಿದ ಕೈಯನ್ನು ಮತ್ತೆ ಅದೇ ಕೆಲಸಕ್ಕೆ ಓಡಿಸಲು ಬಯಸುತಿತ್ತು. ಅಷ್ಟರಲ್ಲಿ ಅವನೇ ನನಗೆ ನಾನು ಹಿಂದೆ ಮಾಡುತಿದ್ದ ಕೆಲಸವನ್ನು ಒಪ್ಪಿಸಿದರೆ ಮಾಡುವಿಯಾ ಎಂಬ ಆಫರ್ ಕೊಟ್ಟ.
ಬೇಡ ಎನ್ನಲು ಮನಸಿರಲಿಲ್ಲ, ಒಪ್ಪಿಕೊಂಡೆ.
ದಿನಚರಿ ಬದಲಾಯಿತು, ಮತ್ತೆ ನನ್ನಲ್ಲಿ ಹಳೆ ಹುರುಪು ಮೂಡಲು ಆರಂಭಿಸಿತು. ಹೆತ್ತವರು ನನ್ನಲ್ಲಿನ ಪ್ರಗತಿಗೆ ನೇರ ಸಾಕ್ಷಿಯಾಗಿದ್ದರು. ಡಾಲರ್ಗಳ ಹರಿವಿನ ಗತಿ ಹೆಚ್ಚಿತು.
ಕೆಲಸದ ಭರದಲ್ಲಿದ್ದೆ ಇನ್ನೊಂದು ಕೈಯ ಅವಶ್ಯಕತೆ ನನಗಿತ್ತು; ನನ್ನ ಮನಸ್ತಿತಿಗೆ ಹೊಂದುವ ಪ್ರೀತಿ ಬೆಂಗಳೂರಿನಲ್ಲಿದ್ದಳು ಅವಳನ್ನು ಜೊತೆಗೆ ಸೇರಿಸಿದೆ. ನನ್ನ ಮಾತಿನಂತೆ ನಾನು ಲೈಫ್ ನಲ್ಲಿ ಸೆಟ್ಟಲ್ ಆದೆ.
ನನ್ನ ಪ್ರೇಮ ಕಥೆಯನ್ನು ವರ್ಷ ನನ್ನ ಅಪ್ಪ ಅಮ್ಮ,ಅವಳ ಅಪ್ಪಮ್ಮರಿಗೆ ಹೇಳಿದ್ದಳು. ಕೆಳ ಮಹಡಿಯಲ್ಲಿ ಇದ್ದ ಪ್ರಭಾ ಅತ್ತೆ ಮದುವೆ ಊಟಕ್ಕೆ ಒತ್ತಾಯ ಶುರು ಮಾಡಿದರು. ಮನೆಯವರ ಮನಸ್ಸಿಗೆ ನೋಯಿಸಲು ಮನಸ್ಸಿರಲಿಲ್ಲ , ದಿನ ಮುಂದೆ ಹಾಕಲು ಕಾರಣವು ಇರಲಿಲ್ಲ ವಯಸ್ಸು 26 ರ ಹೊಸ್ತಿಲಲ್ಲಿತ್ತು. ಒಪ್ಪಿಕೊಂಡೆ. ಅವರು ವಾಲಗ ಊದಿಸಿ ಬಿಟ್ಟರು.
ಎರಡು ತಿಂಗಳಿಂದ ಹತ್ತಿರವಾದ ಪ್ರೀತಿ ಮತ್ತೆ ಕಣ್ಣೀರಿಟ್ಟಳು
ಕೈಯಲ್ಲಿನ ಅ ಕಪ್ ಆಫ್ ಕಾಫಿ ಮುಗಿದಿತ್ತು, ಬಾಯಲ್ಲಿ ಸಿಹಿ ಇಂಗುತಿತ್ತು. ಪ್ರಗತಿಯ ದಿನಗಳನ್ನು ನೆನೆಸಿ ಕಣ್ಣುಗಳು ಸಂಭ್ರಮಿಸುತಿತ್ತು.
ಪ್ರೀತಿ "ಏನಾಯ್ತೋ ಒಮ್ಮೆ ಪೂರ್ತಿ ಮೂಡ್ ಒಫ್ಫ್ ಆಗಿ ಈಗ ಪೂರ್ತಿ ಪ್ರಕಾಶಮಾನವಾಗಿ ಉರಿಯುತ್ತಿದೆ ನಿನ್ನ ಕಣ್ಣುಗಳು..?"
"ಹಾಗೆ ಎರಡುವರ್ಷದ ಹಿಂದೆ ತೇಲಿ ಹೋಗಿದ್ದೆ, ಮೊದಲಿಗೆ ಅಳಿಸಿತು ನಂತರ ನಗಿಸಿತು" ಎಂದೆ.
ಅವಳು "ಎರಡು ವರ್ಷಗಳು ಎಷ್ಟು ಬೇಗ ಮುಗಿಯಿತು ತಿಳಿಲಿಲ್ಲ ಅಲ್ಲ" ಅಂದಳು ಅವಳು ಸರಿದು ಹೋದ ಕಾಲದ ವೇಗವನ್ನು ಗಮನದಲ್ಲಿ ಇಟ್ಟುಕ್ಕೊಂಡು.
ನಾನು "ಅ ಕಪ್ ಆಫ್ ಕಾಫಿ ಯಲ್ಲಿ ತೇಲಿ ಹೋದಾಗ ಯಾವುದರ ಪರಿವಿರುವುದಿಲ್ಲ" ಎಂದು ಮತ್ತೆ ನನ್ನ ಕಾಫಿ ಸಂಭ್ರಮ ಏರಿಸಿದೆ.
ನಗುತ್ತ ಅವಳು "ಇನ್ಯಾವಗ ಕುಡಿಸ್ತೀಯ ಅ ಕಪ್ ಆಫ್ ಕಾಫಿ ...?"
"ಖಂಡಿತವಾಗಿ ಇನ್ನೊಂದು ಸಿಪ್ಪು, ಸದ್ಯದಲ್ಲೇ... ಅದು ನನ್ನ ಕೊನೆಯ ಸಿಪ್ಪು ನಿನ್ನೊಂದಿಗೆ ... ಆ ಸಿಪ್ಪನ್ನು ಯಾವತ್ತು ನೀನು ಮರೀಬಾರ್ದು ಆ ರೀತಿ ಇರುತ್ತೆ ಆ ಸಿಪ್ಪು" ಅಂದೇ ನಾನು.
"ಏನೋ ...? ಯಾವಾಗಲೋ ...?"
"ಸಬ್ರ್ ಕರ್ಲೋ ...ಸಬ್ರ್ ಕ ಫಲ ಮೀಟ ಹೋತಾ ಹೇ ..."
ಸುಮ್ಮನಾದಳು. ಚೂರೂ ಕೊಪಿಸಿದಳು.
ನಾನು "ಈ ವೀಕ್ ಎಂಡ್ " ಅಂದೆ.
ಸಂಭ್ರಮಿಸಿದಳು.
***********************
ಸೌಸನ್ ಎವ್ ನ ಒಂದು ಕಾಫಿ ಶಾಪ್ ನಲ್ಲಿ ನಾನು ಪ್ರೀತಿ ಕುಳಿತಿದ್ದೆವು.
"ಏನೋ ನೀನು ಸುರ್ಪ್ರೈಸ್ ಇದೆ ಅಂದಿಯಲ್ಲ, ಏನು ಇದೇನಾ ನಿನ್ನ ಸುರ್ಪ್ರೈಸ್..? ಕಾಫಿ ಕುಡಿಯಲು ಇಲ್ಲಿ ವರೆಗೆ ಬರಬೇಕಿತ್ತ, ಅಂತ ಸ್ಪೆಷಾಲಿಟಿ ಏನಿದೆ ಈ ಕಾಫಿ ಶೋಪ್ನಲ್ಲಿ...?"
"ವಿಶೇಷ ಇದೆ.. ಸಬ್ರ ಕ ಫಲ ಮೀಟ ಹೇ .." ಅಂದೆ.
"ಹೇಳೋ ಪ್ಲೀಸ್"
"ನಾನು ನಿಂಗೆ ಕೊಟ್ಟ ಒಂದ್ ಪ್ರಾಮಿಸ್ ನೆರವೇರಿಸುವುದಿದೆ."
"ನಾನು ಯಾವಾಗ ನಿನ್ನತ್ರ ಪ್ರಾಮಿಸ್ ತೆಕೊಂಡ್ನಪ್ಪಾ"
"ನೆನಪು ಮಾಡ್ಕೋ... ಬೆಂಗಳೂರಿನ ಇಂದಿರಾನಗರ್ ಸಿ.ಸಿ.ಡಿ"
ಕಣ್ಣುಗಳಲ್ಲಿ ಆಶರ್ಯಒಮ್ಮೆಲೇ ಮಿಂಚಿದವು. "ವೈಭು ನಿಜ ನಾ ...?"
ಕಣ್ಣು ಮುಚ್ಚಿ ನಿಧಾನವಾಗಿ ಅಗಲಿಸಿ ತಲೆ ಮೇಲೆ ಕೆಳಗೆ ಮಾಡಿ ಹೌದು ಅಂದೆ.
"ತುಂಬಾ ಗ್ರೇಟ್ ಆಗ್ ಬಿಟ್ಟಿ ಕಣೋ, ಫ್ರೆಂಡ್ ಅಂದ್ರೆ ಈ ರೀತಿ ಇರ್ಬೇಕು, ಅವಳು ತನ್ನ ಪ್ರೆಮಿಯಾಗಿದ್ರು ಅವಳನ್ನು ಅವಳು ಯಾರನ್ನು ಪ್ರಿತಿಸ್ತಿದ್ದಾಳೆ ಅವನಿಗೆ ಅವಳನ್ನು ದಕ್ಕುವಂತೆ ಮಾಡಿದಿಯಲ್ಲ... ಹಾಟ್ಸ್ ಆಫ್ ..."
ಅವಳ ಸಂಭ್ರಮ ನೋಡುತ್ತಾ ಆ ದಿನ ವಿವೇಕ್ ಮತ್ತು ಇವಳನ್ನು ಜೋಡಿಸಲಾಗದೆ ಮರುಗಿದ ಮನಸ್ಸು ಕುಣಿಯಿತು.
ಅವಳು ಖುಷಿಯಲ್ಲಿ ತೆಲಾಡುತಿದ್ದಳು." ಹೇಗಾಯ್ತೋ ಇದೆಲ್ಲ ಎಲ್ಲಿ ಸಿಕ್ಕಿತು ನಿನಗೆ ಅಡ್ರೆಸ್ ಇಲ್ಲದವನ ಅಡ್ರೆಸ್ ...?"
"ಮೊನ್ನೆ ಬರ್ತ್ ಡೇ ದಿನ ಅವನಾಗಿಯೇ ವಿಶ್ ಮಾಡಿದ್ದ, ಸ್ಕೈಪ್ ನಲ್ಲಿ ರೆಮೈನ್ದೆರ್ ಬಂದಿರ ಬಹುದು, ಆನ್ಲೈನ್ ಇದ್ದೆ ವಿಶ್ ಮಾಡಿದ, ಆ ಸಮಯಕ್ಕೆ ಹೊಸ ಆಸೆ ಚಿಗುರಿತು, ನಿನ್ನ ಕನಸು ನನಸು ಮಾಡುವ ಯೋಗ ಸಿಕ್ಕಿತು ಅಂದುಕ್ಕೊಂಡೆ"
"ಎಲ್ಲಿದ್ದಾನಂತೆ ಡಾಲರ್ ಗಳಿಸಿದ ನಂತೆಯಾ...?"
"ಅದೆಲ್ಲಾ ನಾನು ಕೇಳಲಿಲ್ಲ ಅಮ್ಮಾ, ನೀನೆ ಕೇಳು".
"ಸಿಗ್ಲಿ ಕೈಗೆ ಮಾಡ್ತೇನೆ ನೋಡು ಅವನಿಗೆ." ಎಂದಳು ಏರುಸ್ಸಾಹದಲ್ಲಿ.
"ಒಂದು ಸಣ್ಣ ಹೆಲ್ಪ್ ಮಾಡ್ಬೇಕು ನೀನು"
"ನನಗಾಗಿ ನೀನು ಇಷ್ಟು ಮಾಡಿರುವಾಗ ನಾನು ಏನು ಮಾಡ್ಲಿಕ್ಕೂ ತಯಾರ್ ಕಣೋ ... ಹೇಳು ಏನ್ ಮಾಡ್ಬೇಕು..."
"ಅವ ಬಂದಾಗ ನೀನು ಎದುರಿಗೆ ಬರಬಾರದು ಒಂದು ಹದಿನೈದು ನಿಮಿಷ"
"ಹೇಗಪ್ಪಾ ಬರದೇ ಇರುವುದು ಮೂರು ವರ್ಷದ ಬಳಿಕ ಅವನು ನನಗೆ ಸಿಗ್ತಾ ಇದ್ದಾನೆ.. " ಅಂದಳು ಚೂರು ಕೋಪಿಸಿ.
"ಹದಿನೈದೇ ನಿಮಿಷ, ಅವನಿಗೆ ಸುರ್ಪ್ರೈಸ್ ಕೊಡೋಣಾ"
"ನೀನು ಮತ್ತು ನಿನ್ನ ಸುರ್ಪ್ರೈಸ್ !! ಆಯ್ತು ಬರಿ ಹದಿನೈದೇ ನಿಮಿಷ. ಹದಿನೈದು ನಿಮಿಷ ಆಗಿ ಒಂದು ಸೆಕೆಂಡಿಗೆ ನಾನು ಇಲ್ಲಿ ಇರ್ತೇನೆ."
"ಆಯ್ತಮ್ಮಾ..."
ಕಾಫಿ ಶಾಪ್ ನ ಎದುರಿಗೆ ಒಂದು ಕಾರ್ ಬಂದು ನಿಂತಿತು ಡ್ರೈವಿಂಗ್ ಸೀಟ್ ನಲ್ಲಿ ಕಪ್ಪುಕೂದಲಿನ ತಲೆ ಕಾಣುತಿತ್ತು. ಪ್ರೀತಿ ಹಿಂದೆ ಇರುವ ವಾಶ್ ಏರಿಯ ಸೇರಿದಳು.
ಎರಡು ಪಟ್ಟು ಬೆಳೆದಿದ್ದ ಜೀವನನ ಮುಖದಲ್ಲಿ ಮೂಡುತಿದ್ದ ಉಬ್ಬುಗಳಲ್ಲಿ, ಫಾರಿನ್ ನ ಚಳಿಗೆ ಇಳಿಸುತಿದ್ದ ಬಿಸಿಯ ಸಿಪ್ ನ ಜಲಕ್ ಕಾಣುತಿದ್ದವು.
ಸೀಟ್ ನಿಂದ ಮೇಲೆದ್ದೆ "ಜೀವನ್ ಪೂರ್ತಿ ಬದಲಾಗಿದ್ದಿಯ !! ಸೂಪರ್ ಕಾಣ್ತಾ ಇದ್ದೀಯ" ಎಂದು ಅವನನ್ನು ತಬ್ಬಿಕೊಂಡೆ.
"ನೋಡು ಇಬ್ಬರು ಲಾಸ್ ಎನ್ಜೆಲಾಸ್ ನಲ್ಲಿ ಇದ್ದರೂ ಭೇಟಿ ಸಾದ್ಯವಿರಲಿಲ್ಲ, ಇವತ್ತು ಆಯ್ತು ನೋಡು" ಅಂದ ತನ್ನ ಅಮೇರಿಕಾ ವನ್ನು ಮೇಲೆರಿಸುತ್ತಾ.
"ಯಾವುದಕ್ಕೂ ಕಾಲ ಕೂಡಿ ಬರಬೇಕು ಅಂತಾರಲ್ಲಾ, ಇವತ್ತು ಕೂಡಿ ಬಂತು" ಅಂದೆ ನಾನು.
ಅವನು ನನ್ನ ಎದುರಿಗೆ ಬಂದು ಕುಳಿತನು " ಮತ್ತೆ ಯಾವಾಗಿಂದ ಅಮೆರಿಕೆಯಲ್ಲಿದ್ದಿಯಾ...?"
"ಎರಡು ವರ್ಷ ಆಗ್ತಾ ಬಂತು !!"
"ಅಂದ್ರೆ ತುಂಬಾ ದುಡ್ಡು ಮಾಡಿದ್ದಿ ಅಂತಾಯ್ತು." ತನ್ನ ಹಳೆ ಚಾಳಿಯಲ್ಲೇ.
"ನಿನಗಿಂತ ಕಮ್ಮಿ ಕಾಣಪ್ಪಾ ಎಷ್ಟಂದ್ರೂ ನೀನು ಐ.ಐ.ಟಿ ನಾನು ಬರಿಯ ಬಿ.ಇ" ಅಂದೆ ನಾನು. ಇದು ಅವನಿಗೆ ಅವನ ಮಟ್ಟವನ್ನು ಏರಿಸಿದಂತಾಯಿತು.
"ಮತ್ತೆ ಹೇಗಿದ್ದಾರೆ ಮನೆಯಲ್ಲೆಲ್ಲಾ...?"
"ಉರು ಬಿಟ್ವಿ ಬೆಂಗಳೂರಿನಲ್ಲಿದ್ದೇವೆ ಈಗ..."
"ಹಣ ಬಂದಾಗ ಜನ ಬದಲಾಗ್ತಾರೆ.. ನೋಡು ನೀನು ಬದಲಾದಿ ನೋಡು... ಊರು ಊರು ಎನ್ನುತಿದ್ದವ ಹೇಗೆ ಬೆಂಗಳೂರು ಬೆಂಗಳೂರು ಹೇಳ್ತಾ ಇದ್ದಿ ನೋಡು"
"ಬೆಂಗಳೂರೇ ಮನೆ ಅಂತ ಅಲ್ಲ, ಸದ್ಯಕ್ಕೆ ಅಲ್ಲಿ ಅಷ್ಟೇ, ಮತ್ತೆ ಪುನಃ ಮರಳಿ ಗೂಡಿಗೆ ಸೇರುವುದಿದೆ..."
"ಎಲ್ಲರು ಹೇಳುವುದು ಇದನ್ನೇ, ಮತ್ತೆ ಹೋಗಿ ಊರಲ್ಲಿ ಸೆಟಲ್ ಈಗ ಸದ್ಯಕ್ಕೆ ಬೆಂಗಳೂರು ಹೇಳಿ,ಹೇಳಿದನ್ನು ಮಾಡಿ ತೋರಿಸುವರು ಇದ್ರೆ ಬೆಂಗಳೂರು ಜನಸಂಕೆ ಈ ರೀತಿ ಏರ್ತಿರಲಿಲ್ಲ ..."
ಅವನ ಮಾತಿಗೆ ನಗ್ತಾ "ಏನಾಗ್ತದೆ ನೋಡೋಣ… ನಿಂದು ಏನಾಯ್ತು ಕಥೆ ...?"
"ಏನಿಲ್ಲ ಕಣೋ.. ಅದೇ ಒಂಟಿ ಜೀವಿಯಾಗಿದ್ದೇನೆ.. ಹಣವೇ ಎಲ್ಲ ಅನ್ಕೊಂಡೆ, ಸಂಪಾದಿಸಿದೆ, ಈಗ ನನ್ನ ಬಳಿ ಎಲ್ಲ ಇದೆ. ಆದರೆ ಆದರಿಸುವ ಒಂದು ಮನಸ್ಸು ಇಲ್ಲ"
ಈ ವಿಷಯ ನನಗೆ ಅವನ ಫೆಸ್ ಬುಕ್ ಪ್ರೊಫೈಲ್ ನಿಂದ ತಿಳಿದಿತ್ತು ಕಳೆದ ಮೂರು ನಾಲ್ಕು ದಿನದಿಂದ ಪ್ರೀತಿಯನ್ನು ಇವನೊಂದಿಗೆ ಸೇರಿಸುವ ನಿರ್ಧಾರ ಮಾಡಿದಾಗಿನಿಂದ ಇವನು ಇನ್ನು ಯಾರದರೊಂದಿಗೆ ತನ್ನ ಕನೆಕ್ಷನ್ ಎಷ್ಟಾ ಬ್ಲಿಶ್ ಮಾಡಿದ್ದಾನೋ ಎಂಬುದನ್ನು ತಿಳಿಯಲು ಫೆಸ್ಬೂಕ್ ಗೆ ಶರಣಾಗಿದ್ದೆ. ಕೊಚ್ಚುವ ಹುಡುಗ ಕೊಚ್ಚಿ ಕೊಳ್ಳಲೆಂದೇ ಇರುವ ಮಾಧ್ಯಮ ಫೆಸ್ಬೂಕ್ ನಲ್ಲಿ ಹಾಕಿಕೊಳ್ತಾನೆ ಎಂದು ಗೊತ್ತಿತ್ತು.
ಆದರೆ ಅಲ್ಲಿ ಇಂತಹ ಯಾವುದೇ ವಿಚಾರ ಗಳಿರಲಿಲ್ಲ.
ಇವನ ಮನದಲ್ಲಿನ ಹಳಿ ಮೇಲೆ ಪ್ರೀತಿಯ ಪ್ರೀತಿ ಇಂಜಿನ್ ಓಡಲು ಹವಣಿಸುತ್ತಿದೆ ಎಂದು ಅವನು ದಿನ ಅಪ್ಲೋಡ್ ಮಾಡುವ ವಿರಹಿ ಸ್ಟೇಟಸ್ ಗಳು ತಿಳಿಸುತಿತ್ತು.
"ಹಣ ಇದ್ರೆ ಎಲ್ಲಾನು ಬರುತ್ತೆ ಅಂತಿದ್ದಿ ನೀನು, ಏನಾಯ್ತು..?"
"ಹಣ ಇದ್ರೆ ಅದನ್ನು ಎಂಜಾಯ್ ಮಾಡುವ ತಲೆಗಳು ಸಿಗುತ್ತದೆ ಆದರೆ ಮನಸಲ್ಲಿ ಮನಸಿಟ್ಟು ವ್ಯವಹರಿಸುವ ಶರೀರ ಸಿಕ್ಕದು"
"ಏನಾಯ್ತಪ್ಪಾ ವೈರಾಗ್ಯದಲ್ಲಿ ಇದ್ದೀಯ...? ಏನಾಯ್ತು ನಿನ್ನ ಪ್ರೀತಿಗೆ...? ನಿನ್ನ ಪ್ರೀತಿ ಜೊತೆಗಿನ ಪ್ರೀತಿಗೆ ..?"
"ಅವಳನ್ನು ನಾನಾಗಿಯೇ ಕಳಕ್ಕೊಂಡೆ,ನನ್ನಿಂದ ಸುಮ್ನೆ ದೂರ ದೂಡಿದೆ" ಎಂದ ತನ್ನ ತಪ್ಪಿಗೆ ಪಶ್ಚ್ಯಾತಾಪ ಪಡುತ್ತಾ.
"ನೀನು ಅವಳನ್ನು ಕೇಳಬೇಕಿತ್ತು .. ಕಾಂಟಾಕ್ಟ್ ನಲ್ಲಿ ಇಡಲು ಪ್ರಯತ್ನಿಸಬೇಕಿತ್ತು"
"ಯಾವ್ ಮುಖ ಇಟ್ಕೊಂಡು ಕೇಳ್ಲಿ... ಅವಳು ತಾನು ಬೇಕಾ ದುಡ್ಡು ಬೇಕು ಎಂದು ಕೇಳಿದಾಗ ದುಡ್ಡು ಸಾಕು ಎಂದು ಬಂದವನು ನಾನು, ತಿರುಗಿ ಹೇಗೆ ಹೋಗ್ಲಿ ..?"
"ಹೋಗುವ ಮನಸ್ಸಿದೆಯಾ ...?"
"ಇದೆ ಕಣೋ, ತುಂಬಾ ಮಿಸ್ ಮಾಡ್ಕೊಳ್ತಾ ಇದ್ದೇನೆ ... ಅವಳು ಇನ್ನೂ ನನ್ನನು ಕಾಯ್ತಾ ಇದ್ರೆ ಶೂರ್ ಆಗಿ ಅವಳನ್ನು ಸ್ವೀಕರಿಸ್ತೇನೆ. ಇಲ್ಲಾನ್ತಾದ್ರೆ ಜೀವನ ಪೂರ್ತಿ ಒಂಟಿ ಯಾಗಿರ್ತೇನೆ"
"ಹಾಗಾದ್ರೆ ತಯಾರಾಗು ಕಾರ್ ನ ಒಂದು ಸೀಟ್ ರೆಸೆರ್ವ್ ಮಾಡು"
"ಏನು ಹೇಳ್ತಾ ಇದ್ದೀಯ…?" ಅಂದ.
ಪಕ್ಕದಲ್ಲಿ ವೈಟರ್ ಆರ್ಡರ್ ತೆಕೊಳ್ಳಲು ನಿಂತಿದ್ದ. ಮೂರು ಕಾಫಿ ಗೆ ಆರ್ಡರ್ ಕೊಟ್ಟೆ.
"ಯಾಕೋ ಮೂರು ಕೊಡ್ತಾ ಇದ್ದೀಯ ...?"
"ಸಬ್ರ್ ಕಾ ಫಲ ಮೀಟ ಹೋತ ಹೇ .. ಸಬ್ರ್ ಕರೋ ..."
"ಏನಪ್ಪಾ ಇನ್ನು ನಿನ್ನ ಸುರ್ಪ್ರೈಸ್ ಚಾಳಿ ಬಿಡಲಿಲ್ಲವೇನೋ...?"
"ಏನು ಮಾಡೋಕಾಗುತ್ತೆ ಹುಟ್ಟುಗುಣ !!!"ಅಂದೆ
ಅವನು ನಕ್ಕ ಮನಸಲ್ಲಿ ಗೊಂದಲವಿತ್ತು ನನ್ನ ಸುಸ್ಪೆಸ್ ಅರಿಯುವ ಕಾತರವಿತ್ತು.
ನಾನು "ಫಿಫ್ಟಿ ಸೆಕೆಂಡ್ಸ್ ಮೋರ್ ..." ಅಂದೆ.
ಅವನು ಮಿರಮಿರ ಮಿರಗುವ ಒಪೇರಾ ವಾಚ್ ನಲ್ಲಿ ಸೆಕೆಂಡು ಗಳನ್ನು ಲೆಕ್ಕ ಹಾಕುತಿದ್ದ." ಆಯಿತು ನಿನ್ನ ಫಿಫ್ಟಿ ಸೆಕೆಂಡ್ಸ್ "ಎನ್ನುತ್ತಾ ತಲೆ ಮೇಲೆ ಎತ್ತಿದ.
ಪ್ರೀತಿ ಎದುರಿದ್ದಳು.
ಏನು ಮಾತಿರಲಿಲ್ಲ.
ಕೈಯಲ್ಲಿ ಕೈಯಿತ್ತು, ಕಣ್ಣಲ್ಲಿ ಕಣ್ಣಿತ್ತು. ಅದರೊಳಗೆ ಕಡಲಿನಾಳದ ಪ್ರೀತಿ ಚಿಮ್ಮುತಿತ್ತು. ಇಬ್ಬರು ಗಟ್ಟಿಯಾಗಿ ತಬ್ಬಿ ಕೊಂಡರು. ಅದು ಅಮೆರಿಕೆ ಯಾಗಿತ್ತು ನೋಡುವ ಕಣ್ಣಿನ ಹೆದರಿಕೆ ಇರಲಿಲ್ಲ ತುಟಿಗೆ ತುಟಿ ಇಟ್ಟು ಮೂರು ನಿಮಿಷ ಜೊತೆಯಾಗಿ ಕಳೆದು ಹೋದ ಮೂರು ವರುಷವನ್ನು ನೆನಪಿಸಿಕೊಂಡವು.
ಸೀಟ್ನಲ್ಲಿ ಕೂತಾದ ಬಳಿಕ ಆರ್ಡರ್ ಕೊಟ್ಟ ಕಾಫಿ ಬಂತು.
ಮೂವರು ಮೊದಲ ಸಿಪ್ ಹೀರಿದೆವು.
"ವೈಭು ಡ್ರೀಮ್ ಟೆಕ್ ನೆನಪಾಯ್ತು ಕಣೋ... ತ್ಹೊಸ್ ವೇರ್ ದಿ ಡೇಸ್ ..." ಎಂದ ಚೂರು ಭಾವುಕವಾಗಿ.
"ಹೌದು ಮೊದಲ ಕಂಪೆನಿಯ ಮೊದಲ ಕೆಲಸ ಯಾವಾಗಲು ಮೊದಲ ಪ್ರೇಮಿಯಂತೆ ಸ್ಪೆಶಲೇ..." ನಾನಂದೆ. ಅವನು ಇದನ್ನು ನೇರ ಅರ್ಥದಲ್ಲಿ ತೆಗೆದು ಸಂಭ್ರಮಿಸಿದ, ಅವಳು ಅದರಲ್ಲಿ ಅಡಗಿದ ವಿರಹ ಅರಿತು ಮೌನಿಯಾದಳು ನಂತರ ನಿರೀಕ್ಷೆಯ ಪ್ರೇಮ ನಿಜವಾದ ಈ ಗಳಿಗೆಗೆ ಮನಸೋತು ಹಳೆಯ ನೆನಪು ಜಾರುವ ಕಣ್ಣೀರನ್ನು ಅಳಿಸಿದಳು.
ಜೀವನ್ "ಯಾರಾದ್ರು ಇದ್ದಾರ ಇನ್ನೂ ಕಾಂಟಾಕ್ಟ್ ನಲ್ಲಿ ..?"
"ಡ್ರೀಮ್ ಟೆಕ್ ನಲ್ಲಿ ನನಗೆ ಹತ್ತಿರವಾದವರು ಇಬ್ಬರೇ, ಅವರ ಜೊತೆಗೆ ಇನ್ನೂ ನಾನು ಕಾಂಟಾಕ್ಟ್ ಇರಿಸಿಕೊಂಡಿದ್ದೇನೆ." ಅಂದೆ
"ಯಾರಪ್ಪ ಆ ಇಬ್ಬರು ...?"
"ಒಬ್ಬರು ಲಕ್ಷ್ಮಿ ಸರ್"
"ಎಲ್ಲಿದ್ದಾರೆ ಅವರು ..?"
"ತಮ್ಮ ಹೊಸ ಕಂಪೆನಿ ಶುರು ಮಾಡಿದ್ದರೆ ಚೆನ್ನೈ ನಲ್ಲಿ"
"ಇನ್ನೊಂದು ...?" ತಾನೇ ಅದು ಎಂದು ಭಾವಿಸಿ.
ನಾನು "ಅವಿನಾಶ್ ..."
ಜೀವನ್ ನ ಮುಖ ಬಾಡಿತು " ಏನಾಯ್ತು ಅವನ ಎಂ.ಬಿ.ಎ ಕನಸು...? ಜೆರ್ಮನಿ ಸಹವಾಸ ...?"
"ಎಂ.ಬಿ.ಎ ಪ್ಲಾನ್ಸ್ ತೂಪಾಯ್ತು , ಜೆರ್ಮನಿ ಕನಸು ನನಸಾಯ್ತು..." ಅಂದೆ ನಾನು.
"ಎಲ್ಲಿ ನನಸಾಯ್ತು .. ಜೆರ್ಮನಿ ಸೋತಿತಲ್ಲಾ ಮತ್ತೆ ಸೆಮಿಸ್ ನಲ್ಲಿ , ಅವನ ಬಲಾಕ್ ಟೀಮಲ್ಲೇ ಇರಲಿಲ್ಲ ... " ಎಂದ ಜೀವನ್ಈಗಷ್ಟೆ ಮುಗಿದ ಫಿಫಾ2010 ನೆನಪಿಸುತ್ತಾ .
"ಮೂರಕ್ಕೆ ನಾಲ್ಕನೇ ನಕ್ಷತ್ರ ಸೇರಿಸುವ ಕನಸು ನನಸಾಗಲಿಲ್ಲ, ಅವನ ಇನ್ನೊಂದು ಕನಸು ನೆರವೇರಿತು"
"ಅಂದ್ರೆ ..?"
"ಸ್ಟುಟ್ಗರ್ಟ್ ಯುನಿವೆರ್ಸಿಟಿ ಯಲ್ಲಿ ಎಮ್ಮೆಸ್ಸ್ ಮುಗಿಸಿಕೊಂಡ, ಬಳಿಕ ಅಲ್ಲೇ ಯಾವುದೋ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾನೆ."
ಜೀವನ್ ಹುಬ್ಬೇರಿಸುತ್ತಾ "ಲಡ್ಕೆ ಮೇ ಜೆರ್ಮನಿ ಕೆ ಲಿಯೇ ಜಸ್ಬಾ ಥಾ" ಅಂದ ಅವನ ಜೊತೆಗೆ ಹಂಚಿ ಕಳೆದ ಮೂರು ವರ್ಷವನ್ನು ನೆನಪಿಸುತ್ತಾ.
ಹೌದು "ಪೌಂಡ್ ನಲ್ಲಿ ಸಂಪಾದಿಸುತ್ತಾನೆ" ಎಂದೆ ನಾನು,ಅವನ ಏರಿದ ಹುಬ್ಬಿನ ಹಿಂದಿನ ರಹಸ್ಯ ಅರಿತು.
ಅವನು ನಕ್ಕ, ಪ್ರೀತಿಯ ತುಟಿ ತೆರೆದುಕೊಂಡಿತು.
ಕೂಕೀಸ್, ಪೇಸ್ತ್ರಿ ಮುಗಿದಿತ್ತು ಎದುರಿನ ಟೇಬಲ್ ನಲ್ಲಿ.
"ಥ್ಯಾಂಕ್ಸ್ ಕಣೋ ನನ್ನ ಪ್ರೀತಿಯ ಪ್ರೀತಿಯನ್ನು ದೊರಕಿಸಿ ಕೊಟ್ಟಿದಕ್ಕೆ, ನಿನ್ನ ಈ ಸಹಾಯ ಯಾವತ್ತು ನಾನು ಮರೆಯಲ್ಲ"
"ನನಗೆ ಥ್ಯಾಂಕ್ಸ್ ಎಲ್ಲ ಬೇಡ, ಒಂದು ಪ್ರಾಮಿಸ್ ಮಾಡಿ ಇಬ್ಬರು ಅಷ್ಟು ಸಾಕು"
"ಏನಪ್ಪಾ ಅದು" ಅಂದಳು ಪ್ರೀತಿ.
"ಇಬ್ಬರು ಅರ್ಥೈಸಿಕೊಂಡು ಹೋಗ್ತೀರಿ ಹೇಳಿ, ಜೀವನ ನಡೆಸಲು ಪ್ರೀತಿಯೂ ಬೇಕು, ಹಣವೂ ಜೊತೆಗಿರಬೇಕು. ಈ ಎರಡು ವಿಷಯಗಳಿಗೆ ನಿಮ್ಮಲ್ಲಿ ಇನ್ನು ಮನಸ್ತಾಪ ಮೂಡುವುದಿಲ್ಲ ಹೇಳಿ ಪ್ರಾಮಿಸ್ ಮಾಡಿ"
"ಕಳಕೊಂಡ ಪ್ರೀತಿ ನೀನು ಬೆಸೆದಿದ್ದಿಯ, ವಿರಹದ ಯಾತನೆಯ ಸುಖ ತಿಳಿದಿದೆ, ಇನ್ನೆಂದೂ ಆ ಕಹಿ ಸುಖ ಬೇಡ ವೈಭು, ಹೀರ್ ವೀ ಆರ್ ಪ್ರೋಮಿಸಿಂಗ್" ಎನ್ನುತ್ತಾ ಚಾಚಿದ್ದ ನನ್ನ ಕೈ ಮೇಲೆ ಕೈಯಿತ್ತರು ಇಬ್ಬರು.
ಎಡಗೈಯನ್ನು ಆ ಎರಡು ಕೈ ಮೇಲೆ ಜೋಡಿಸಿದೆ.
ಮನಸಲ್ಲಿ ಬಯಸಿದ ಪ್ರೀತಿಗೆ ಅವಳು ಬಯಸಿದ ಪ್ರೀತಿಯನ್ನು ಸೇರಿಸಿದ ಖುಷಿ ಇತ್ತು. ಜೊತೆಯಾದ ಆ ಎರಡು ಹೃದಯಗಳ ಸಂಭ್ರಮವುಜೀವನ್ ನನಗೆ ಮಾಡಿದ ಮೋಸ ಮರೆಸಿತ್ತು.
ಜೀವನ್ "ನಿನ್ನ ಆಕೃತಿ ...?"
"ಚೆನ್ನೈ ನಿದ್ದಾಳೆ, ಲಕ್ಷ್ಮಿ ಸರ್ ಶುರು ಮಾಡಿದ ಹೊಸ ಕಂಪೆನಿಯಲ್ಲಿ ಮೊಡ್ಯುಲ್ ಲೀಡ್"
"ಮದುವೆ...?"
"ಆಗಿದೆ; ಖುಷಿಯಾಗಿದ್ದಾಳೆ 7 ತಿಂಗಳ ವಿಕ್ಯಾಥ್ ಜೊತೆಗೆ"ಅಂದೆ ನಾನು. ಬದಿಯಲ್ಲಿದ್ದ ಪ್ರೀತಿಗೆ ಇದೆಲ್ಲ ತಿಳಿದಿತ್ತು ಅವಳು ಮೌನದಲ್ಲಿದ್ದಳು.
"ನಿನ್ನನ್ನು ಅರ್ಥ ಮಾಡಲು ತುಂಬಾ ಕಷ್ಟ ಇದೆ ಕಣೋ..." ಅಂದ ಜೀವನ್.
"ಎಲ್ಲರನ್ನು, ಎಲ್ಲವನ್ನು ಅರ್ಥ ಮಾಡಲು ಹೋಗಬೇಡ, ನಾವು ಅರ್ಥೈಸಿದಂತೆ ಯಾವುದು ಇರುವುದಿಲ್ಲ" ಅಂದೆ ನಾನು ಹಿಂದೆ ಅವನನನ್ನು ಅರ್ಥೈಸಿದ ಬಗೆಯನ್ನು ನೆನೆಯುತ್ತಾ. ಅವನು ನಕ್ಕ, ಕೈಯಲ್ಲಿದ್ದ ಖಾಲಿ ಕಪ್ ಕೆಳಗಿಟ್ಟ
ಜೀವನ್ "ವೈಭು ಕಾಫಿ ಮುಗೀತು ಕಣೋ" ಅಂದ ಕೈಯಲ್ಲಿನ ಕಪ್ ಕೆಳಗಿಡುತ್ತಾ.
"ಹೌದು ಮುಗೀತು, ನನ್ನ ಕೆಲಸ ಆಯಿತು" ಎಂದು ನಿರಾಳ ಉಸಿರು ಬಿಟ್ಟೆ.
ಪ್ರೀತಿ "ಹೌದು ಕಣೋ, ಈ ಕೊನೆಯ ಸಿಪನ್ನು ನಾನುಯಾವತ್ತು ಮರೆಯದ ಸಿಪ್ ಆಯಿತು ಕಣೋ, ಸೊ ಸ್ವೀಟ್ ಆಫ್ ಯು.. ಪ್ರೌಡ್ ಟು ಹೇವ್ ಯು ಆಸ್ ಮೈಫ್ರೆಂಡ್, ಅ ಕ್ಲೋಸ್ ಫ್ರೆಂಡ್" ಎಂದಳು.
ಕೊನೆಗೂ ಅವಳ ಗೆಳೆಯನಾಗಿ ಉಳಿದದಕ್ಕೆ ಖುಷಿ ಪಟ್ಟಿತು ಮನಸ್ಸು.
ಜೀವನ್ "ವಾಟ್ ನೆಕ್ಸ್ಟ್ ..?"
ನಾನು "ಒಂದು ಲವ್ ಸ್ಟೋರಿ ಎಂಡ್ ಆಯ್ತಲ್ಲಾ, ಹೊಸ ಲವ್ ಸ್ಟೋರಿ ಶುರು ಮಾಡೋಣ ಹೇಳಿ"
"ಇನ್ನೊಂದು ಲವ್ ಸ್ಟೋರಿನಾ.. ವೈಭು ...!!" ಎಂದಳು ಪ್ರೀತಿ.
"ಹೌದು"
"ಎಲ್ಲಿ ..?" ಜೀವನ್ ಅಂದ.
"ಬುಕ್ಕಲ್ಲಿ...!!"
"ಟೈಟಲ್ ...?" ಕ್ಯುರಿಯಸ್ ಆಗಿ ಕೇಳಿದಳು ಪ್ರೀತಿ
"ಅ ಕಪ್ ಆಫ್ ಕಾಫಿ…" ಅಂದೆ
"ಅಂದ್ರೆ ನಮ್ ಕಥೆನೇ ... ಬರೀ ಬರೀ ಚೆನ್ನಾಗಿರುತ್ತೆ.." ಅಂದ ಜೀವನ್.
"ಟೈಟಲ್ ಸರಿಯಾಗಿದೆ, ಪ್ರತಿ ನಿರ್ಧಾರಕ್ಕೆ ಜೊತೆಯಾದ ಕಪ್ ಆಫ್ ಕಾಫಿ !!" ಎಂದಳು ಪ್ರೀತಿ.
ನಕ್ಕೆ.
ಕ್ಷಣದಲ್ಲಿ "ಸಬ್ ಟೈಟಲ್ ..?" ಎಂದು ಇನ್ನೊಂದು ಪ್ರಶ್ನೆ ಇಟ್ಟಳು ಪ್ರೀತಿ.
"ಅ ಕಪ್ ಆಫ್ ಕಾಫಿ, ಒಂದು ಸಿಪ್ ಪ್ರೀತಿಯೊಂದಿಗೆ, ಇನ್ನೊಂದು ಸಿಪ್ ಜೀವನದೊಂದಿಗೆ...."
ಜೀವನ್ "ಅದು ಜೀವನ್ ನೊಂದಿಗೆ ಇದ್ದರೆ ಸರಿ ಅನ್ಸುತ್ತೆ" ಅಂದ.
"ನಿಮಗೆ ಯಾವರೀತಿ ಸರಿ ಅನ್ಸುತ್ತೆ ಆ ರೀತಿ ನೀವು ಓದಿ;
ನನಗೆ ಅದು ಹೀಗೆ ಸರಿ ಅನ್ಸುತ್ತೆ ... ಯಾಕಂದ್ರೆ ಅದು ನನ್ನ ಪ್ರೀತಿ ಮತ್ತು ನನ್ನ ಜೀವನದೊಂದಿಗೆ ಜೊತೆಯಾಗಿ ಸಾಗುವ ಅ ಕಪ್ ಆಫ್ ಕಾಫಿ ಯ ಕಥೆ ..."
ಕಾಫಿ ಕಪ್ ಅಲ್ಲಿಟ್ಟು ಹೊರ ಬಂದೆವು; ಪ್ರೀತಿ ಜೀವನ್ ನ ಕಾರ್ ಏರಿದಳು ಬೈಕ್ ನ ಹಿಂದಿನ ಸೀಟ್ ಒಂಟಿಯಾಗಿತ್ತು.