ಗಜಲ್
ಕವನ
ವರುಶಗಳ ಉರುಳಿಸಿದವಳೆ ಇದು ಸರಿಯೆ ಸಾಕಿ
ಹರುಶಗಳ ಉರುಳಿಸಿದವಳೆ ಇದು ಸರಿಯೆ ಸಾಕಿ
ತುಟಿಯ ತೊಟ್ಟಿಲಲ್ಲೇ ತೊದಲುವ ಕಂದನ ಕಣ್ಣೀರಲಿ
ತುಟಿ ಒತ್ತಿ ಗೋಣ ಹಿಚುಕಿದವಳೆ ಇದು ಸರಿಯೆ ಸಾಕಿ
ಪ್ರೀತಿಗೆ ಪೂರ್ತಿ ಕಟ್ಟು ಬಿದ್ದು ಕಳವಳಿಸಿ
ಜಗದ ಚುಚ್ಚು ಮಾತಿಗೆ ಬಲಿಯಾದವಳೆ ಇದು ಸರಿಯೆ ಸಾಕಿ
ಮಧುಪಾತ್ರೆಗೆ ಮಧು ಮಾತ್ರೆಯಾಗಿ ಬಂದು ಒಲ್ಲದ ಮನಸಲೆ
ಮರೆಯಾಗಿ ನನ್ನ ವಿಧುರನ ಮಾಡಿದವಳೆ ಇದು ಸರಿಯೆ ಸಾಕಿ
ಉಸುಕಲಿ ಕಟ್ಟಿದ ಆಸೆಯ ಗೂಡನು ಆಸೆಯಿಂದಲೆ
ಉಸಿರಿಲ್ಲದೆ ಸೇರಿ ಹೋದವಳೆ ಇದು ಸರಿಯೆ ಸಾಕಿ
ಮಾಡಿದ ಆಣೆಗಳ ಅಂಗಳದಿ ಹೂತು ತಳಮಳಿಸಿ
ಸ್ಮಶಾನದಿ ದೇವತೆಯಾಗಿ ನಿಂದವಳೆ ಇದು ಸರಿಯೆ ಸಾಕಿ
Comments
ಉ: ಗಜಲ್