ಮರ್ಯಾದಸ್ಥರ ಮಾನ ತೆಗೆಯುತ್ತೀರೇಕೆ?

ಮರ್ಯಾದಸ್ಥರ ಮಾನ ತೆಗೆಯುತ್ತೀರೇಕೆ?

ಬರಹ

 ನಾಡಿನಲ್ಲಿ ಬರೀ ರಾಜಕಾರಣಿಗಳಷ್ಟೇ ಅಲ್ಲದೆ ಮರ್ಯಾದಸ್ಥರೂ ಇರುತ್ತಾರೆಂಬ ಸೂಕ್ಷ್ಮವೇ ರಾಜ್ಯಾಡಳಿತ ನಡೆಸುವವರಿಗೆ ಇಲ್ಲವಾಗುತ್ತಿದೆ; ನ್ಯಾ. ಬನ್ನೂರಮಠ ಅವರ ಪ್ರಕರಣ ಇಂಥ ಆತಂಕಕ್ಕೆ ಹೊಸ ಸಾಕ್ಷಿ. ಲೋಕಾಯುಕರಾಗಿ ಅಧಿಕಾರ ವಹಿಸಿಕೊಂಡ ಕ್ಷಣದಲ್ಲೇ, ನ್ಯಾ. ಶಿವರಾಜ ಪಾಟೀಲರ ಮೇಲೆ ತೋದೆ ಕೂಡಿಸಿ ಓಡಿಸಿದ ಪ್ರಭೃತ್ತಿಗಳು, ನೇಮಾಕಾತಿಗೂ ಮುನ್ನವೇ ಮತ್ತೊಬ್ಬ ನ್ಯಾಯಮೂರ್ತಿಗಳ ಮಾನ ತೆಗೆದಿದ್ದಾರೆ. ಇಲ್ಲಿನ ಲೋಕಾಯುಕ್ತ ಹುದ್ದೆ, ಬಹುಶಃ ಕಂಡರಾಗವರಿಗೆ, ’ನೀನು ಕರ್ನಾಟಕದ ಲೋಕಾಯುಕ್ತ ಆಗ’... ಎಂದು ಬೈಗುಳ ಹಾಕುವಷ್ಟು ಶಾಪಗ್ರಸ್ಥವಾಗಿದೆಯೇನೋ!
 ಹುದ್ದೆಗೆ, ಭ್ರಷ್ಟರಲ್ಲದ ನ್ಯಾಯಮೂತಿಗಳೊಬ್ಬರನ್ನು ಹುಡುಕುವುದು, ಸಾವಿಲ್ಲದ ಮನೆಯ ಸಾಸಿವೆ ತರುವಷ್ಟು ಕಷ್ಟದ ಕೆಲಸ ಎಂದು ರಾಜಕೀಯಸ್ಥರು ನಿರೂಪಿಸುತ್ತಿದ್ದಾರೆ. ಲೋಕಸೇವಾ ಆಯೋಗ, ಇಂತಹ ಇನ್ನಿತರ ಸ್ವಾಯತ್ತ ಸಂಸ್ಥೆಗಳನ್ನೂ, ಲೋಕಾಯುಕ್ತವನ್ನೂ, ರಾಜಕೀಯ ನಿಗಮ-ಮಂಡಲಿಗಳ ಮಟ್ಟಕ್ಕಿಳಿಸುವ ಅವರ ದೃಷ್ಟಿಕೋನದ ಸ್ಪಷ್ಟ ನಿದರ್ಶನ, ಇದು. ವೈಯಕ್ತಿಕ ಆರೊಪ-ಪ್ರತ್ಯಾರೊಪದ ಮುಟ್ಟಿನ ಬಟ್ಟೆಯನ್ನು ಸಾರ್ವಜನಿಕವಾಗಿ ತೊಳೆಯುವ ಅವಕಾಶವಾಗದ ಮಟ್ಟಿಗಾದರೂ ಈ ಇಬ್ಬರೂ ನ್ಯಾಯವಿದರು ಮುನಷ್ಯತ್ವದ ಆತ್ಮಸಾಕ್ಷಿ ಪ್ರಜ್ಞೆ ತೋರಿಸಿರುವುದು ಸ್ವಾಗತಾರ್ಹ. ಆದರೂ ರಾಜಕೀಯದ ರಾಡಿಯನ್ನು ತೊಳೆಯಬೇಕಾದ ಲೋಕಾಯುಕತವೆಂಬ ಶೀಗೇಪುಡಿಗೇ ರಾಜಕೀಯದ ಮಣ್ಣು ಬೆರೆಸುವ ಪ್ರಯತ್ನ ಮಾತ್ರಾ ಇಲ್ಲಿ ನಿಚ್ಚಳ.           
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet