ಪ್ರತಿಷ್ಠಿತ ಉಪ-ಲೋಕಪಾಲ

ಪ್ರತಿಷ್ಠಿತ ಉಪ-ಲೋಕಪಾಲ

ಬರಹ

 ಉಪಲೋಕಪಾಲರು, ಹುದ್ದೆ ಬಿಡುವುದಿಲ್ಲವೆಂಬ ಸ್ಥೈರ್ಯ ನುಡಿದಿದ್ದಾರೆ. ಕಾನೂನು ಮತ್ತು ಸಂವಿಧಾನದ ಸ್ವಯಂ ಉದ್ಧಾಮ ಪರಿಣಿತರಾದ ಅವರ ಈ ತಾಂತ್ರಿಕ ನಿಲವಿಗೆ ಪ್ರತಿಯಾಡುವ ಎದೆಗಾರಿಕೆ ಸಹಜ ಸಾಧಾರಣ ಪ್ರಜೆಗಳಿಗಿರುವುದು ಸಾಧ್ಯವೇ ಇಲ್ಲ. ಆದರೆ ಉಪ-ಆಯುಕ್ತದ ನಿಯುಕ್ತಿ, ಪ್ರಮಾಣವಚನ,' ಬನ್ನಿ' ಎಂದು ಕರೆದು ಪ್ರಮಾನವಚನ ಬೋಧಿಸಿದ ರಾಜ್ಯಪಾಲರಿಂದಲೇ, ಮುಖ್ಯನ್ಯಾಯಮುರ್ತಿಗಳ ಬೈಗುಳಕ್ಕೆ ಬೆಂಬಲ, ಇತ್ಯಾದಿ ಹಿಗ್ಗಾ-ಮುಗ್ಗಗಳು ನಾಡಾಡಿ ಜನತೆಯ ವಿವೇಕಕ್ಕೆ ಕಕವಾ ಹಿಡಿಸಿರುವುದಂತೂ ನಿಜ. ಹಿಂದೆ ಈ ಹುದ್ದಯಲ್ಲಿದ್ದವರೂ ಮತ್ತು ಅದಕ್ಕೆ ಮೇಲಿನ ಲೋಕಪಾಲಹುದ್ದೆಗೆ ನಿಯೋಜನೆಗೊಂಡ ನ್ಯಾವೇತ್ತರುಗಳು, ಸಂವಿಧಾನದ ಹಕ್ಕು-ಅಧಿಕಾರಗಳ ಪ್ರಶ್ನೆ ಎತ್ತಿ, ಮುಜುಗರದ ಸನ್ನಿವೇಶವನ್ನು ಎಳೆದು ತರದೆ ಮರ್ಯಾದಸ್ಥಿಕೆ ಉಳಿಸಿಕೊಂಡು ಹೊಬಂದರು. ಆದರೆ ಈಗಿನ ಬೆಳವಣಿಗೆಯಲ್ಲಿ, ದೇಶದ ಪ್ರಜಾಸತ್ತೆ ಮತ್ತು ಸಂವಿಧಾನ ತನ್ನನ್ನೇ ಹೇಗೆ ಕಾಡಿಕೊಂಡೀತೋ, ಕಾದು ನೊಡಬೇಕಗಿದೆ. ಒಂದಂತೂ ಕಡು ಸತ್ಯ. ದೇಶದ ಸಂವಿಧಾನ, ಕಾನೂನುಗಳು ಎಷ್ಟೇ ಮಹೋನ್ನತಿಯದಾದರೂ, ಅದು ಸಾರ್ಥಕವಾಗುವುದು, ಜಾರಿಗೊಳಿಸುವ ಉನ್ನತ ವ್ಯಕ್ತಿಗಳ ಸಂಸ್ಕೃತಿ, ಸಂಸ್ಕಾರ, ಪ್ರಾಮಾಣಿಕತೆ, ಆತ್ಮವಂತಿಕೆಗಳಿಂದ ಮಾತ್ರವೇ!
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet