ಕಟ್ಟುವೆವು ನಾವು ಕನಸುಗಳ.
ಕಟ್ಟುವೆವು ನಾವು ಕನಸ್ಸುಗಳ,
ನನಸಾಗಲು ಹರಡುವೆವು,
ನಕ್ಷತ್ರಗಳ ಧರೆಯಂಗಳಕ್ಕೆ,
ಸಫಲತೆ ಬದುಕಿನಲ್ಲಿ ಬರಲೆಂದು...........
ಲೇಪಿಸುವೆವು ನಾವು ಒಡೆದಮನೆಗಳಿಗೆ,
ಪ್ರೀತಿ ಮಲ್ಲಿಗೆಯ ಸುಗಂಧವನ್ನು,
ತೊಡೆದು ಹಾಕುವೆವು ಮನದ ದೂರಗಳನ್ನು,
ಸಂಭಂದ ಬೆಸೆದು ಏಕತೆ ಬರಲೆಂದು,.........................
ಬಳೆಗುವೆವು ಜ್ನಾನ ದೀಪವನ್ನು,
ಹರಡಲು ಮನದಾಳದಲ್ಲಿ
ವಿಶ್ವಮಾನವ ಸಂದೇಶದ ಕಿರಣ,
ಬದುಕಿಗೆ ಸ್ವರಣ ಪ್ರಭೆ ಬರಲೆಂದು..............................
ವಿರಸ ತೊರೆದು ಹರುಷ ಹೊಂದುವೆವು,
ಏಕತೆಯ ಮೇರೆಯಲ್ಲಿ ವಿಭುವಿನ,
ಸತ್ಯ ಸಂದೇಶ ಹರಡುವೆವು,
ಹೃದಯ ಹೃದಯಗಳ ಸಂಗಮವಾಗಲೆಂದು.........................
ಇತಿಹಾಸ ಅನುಭವದ ಜಾಡಿನಲ್ಲಿ,
ಓರೆ ಹಚ್ಚುವೆವು ಬದುಕಿನ ಪ್ರತಿ ಕ್ಷಣಗಳಲ್ಲಿ,
ಮೆಟ್ಟುವೆವು ಸಾಗರದಾಳ ,ಆಗಸದ ವಿಶಾಲ,
ಪ್ರತಿಕ್ಷಣ ವಿಜಯ ಕ್ಷಣ ವಾಗಲೆಂದು............................................
ಮನೆ ಮನೆಗಳಲ್ಲಿ ಅರಳಿಸಿ ಪ್ರತಿಭೆಗಳ,
ಪ್ರಗತಿಯ ಪ್ರಭೆಯ ಹರಡುವೆವು,
ನಾಡಿನ ಮೋಲೆ ಮೊಲಿಯಲ್ಲಿ ಪ್ರಗತಿಯ,
ಹರುಷದ ಹೊನಲು ಬೆಳಕು ಹರಡಲೆಂದು...........................................
ನಾವು ಭಾರತಿಯರು.......... ಮುನೀರಹ್ಮೆದ್ ಕುಂಸಿ
Comments
ಉ: ಕಟ್ಟುವೆವು ನಾವು ಕನಸುಗಳ.
In reply to ಉ: ಕಟ್ಟುವೆವು ನಾವು ಕನಸುಗಳ. by mmshaik
ಉ: ಕಟ್ಟುವೆವು ನಾವು ಕನಸುಗಳ.