ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 5

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 5

ಮರುದಿನ ಆಫೀಸಿಗೆ ಹೋಗಿ ಸಿಸ್ಟಂ ಲಾಗಿನ್ ಆಗಿ ಟೀಮ್ ಮೀಟಿಂಗ್ ಗೆ ಹೋಗಿದ್ದಾಗ ಫೋನ್ ಸೈಲೆಂಟ್ ನಲ್ಲಿ ಹಾಕಿದ್ದೆ. ಎರಡು ಮೂರು ಬಾರಿ ವೈಬ್ರೇಟ್ ಆಯಿತು. ಬಹುಷಃ ಪಾವನಿ ಮಾಡಿರಬಹುದು. ಥೂ ಒಳ್ಳೆ ಎಡವಟ್ಟು ಟೈಮ್ ನಲ್ಲಿ ಕಾಲ್ ಮಾಡುತ್ತಾಳಲ್ಲ ಎಂದುಕೊಂಡು ಯಾವಾಗ ಆಚೆ ಬರುತ್ತೀನಿ ಎಂದು ಕಾಯುತ್ತಿದ್ದೆ. ಮೀಟಿಂಗ್ ಮುಗಿದ ಮೇಲೆ ಆಚೆ ಬಂದು ಮೊಬೈಲ್ ನೋಡಿದರೆ ಒಟ್ಟು ಮೂರು ಮಿಸ್ಡ್ ಕಾಲ್ ಇತ್ತು ಅದರಲ್ಲಿ ಒಂದು ಪಾವನಿಯದ್ದು ಇನ್ನೆರಡು ಕಸ್ಟಮರ್ ಕೇರ್ ನಿಂದ ಬಂದಿತ್ತು. ಪಾವನಿಗೆ ಕರೆ ಮಾಡಿದೆ. ಹಾಯ್ ಪಾವನಿ ಮೀಟಿಂಗ್ ನಲ್ಲಿ ಇದ್ದೆ ಹೇಳಿ ಎಂದೆ. ಹೋ ಸಾರಿ ಡಿಸ್ಟರ್ಬ್ ಮಾಡಿದೆನ ಎಂದಳು. ಅಯ್ಯೋ ಹಾಗೇನಿಲ್ಲ ಮೀಟಿಂಗ್ ಬಿಡಿ ಯಾವಾಗಲೂ ಇದ್ದದ್ದೇ. ಹೇಳಿ ಹೇಗಿದ್ದೀರ?

ಪಾ : ನಾನು ಚೆನ್ನಾಗಿದ್ದೀನಿ ನೀವು ಹೇಗಿದ್ದೀರಾ,

ಭ : ಹ್ಮ್....ಏನೋ ಇದ್ದೀನಿ( ಒಂದು ವಾರದಿಂದ ನಿನ್ನ ಜೊತೆ ಮಾತಾಡದೆ ಸಾಯ್ತಾ ಇದ್ದೀನಿ)

ಪಾ: ಯಾಕೆ ಏನಾಯಿತು? ಹುಷಾರಿಲ್ವಾ

ಭ: ಅಯ್ಯೋ ಹಾಗೇನಿಲ್ಲ ಚೆನ್ನಾಗೆ ಇದ್ದೀನಿ. ಮತ್ತೆ ನಿಮ್ಮ ತಾತನಿಗೆ ಎಷ್ಟು ವಯಸಾಗಿತ್ತು.

ಪಾ: ಅವರಿಗೆ ೯೮ ಆಗಿತ್ತು ಅಷ್ಟೇ...

ಭ: ಅಷ್ಟೇನಾ?(ಮನಸಿನಲ್ಲಿ) ಛೆ ಹೀಗಾಗಬಾರದಿತ್ತು. ಮತ್ತೆ ಇನ್ನೇನ್ರಿ ಸಮಾಚಾರಊರಿಂದ ಬಂದು ಒಂದು ವಾರ ಆಯ್ತು ಇವಾಗ ನೆನಪಾಯ್ತ? (ಛೆ ಕೇಳಬಾರದು ಎಂದುಕೊಂಡಿದ್ದೆಹಾಳಾದ್ದು ಕೇಳಿಬಿಟ್ಟೆ)

ಪಾ: ಅಲ್ರೀ ನಾನು ನೀವು ಮಾಡುತ್ತೀರಾ ಅಂತ ಕಾಯುತ್ತಿದ್ದೆ, ಒಂದು ಹುಡುಗಿ ಆಗಿ ನಾನು ಹೇಗೆ ಮಾಡಲಿ ಹೇಳಿ. ಕೊನೆಗೂ ನೀವು ಮಾಡಲಿಲ್ಲ ಅಂತ ನಾನೇ ಮಾಡಿದೆ.

ಭ : (ಅದೆಷ್ಟು ನಿಜವೋ ಗೊತ್ತಿಲ್ಲ) ಓಹ್ ಹೌದ ನಾನು ಊರಿನಿಂದ ಬಂದ ಮೇಲೆ ಕೆಲಸದಲ್ಲಿ ಸ್ವಲ್ಪ ಬ್ಯುಸಿ ಗಿಬಿಟ್ಟೆ ಹಾಗಾಗಿ ಮಾಡಲು ಆಗಿರಲಿಲ್ಲ. ಮತ್ತೆ ಹೊಸ ಕೆಲಸಕ್ಕೆ ಸೇರಬೇಕು ಅಂದಿದ್ರಿ ಜಾಯಿನ್ ಅದ್ರ?

ಪಾ: ಹೌದು ರೀ ಹೋದ ವಾರದಿಂದಲೇ ಕೆಲಸ ಶುರುವಾಯಿತು. ಇನ್ನು ಅಷ್ಟೇನೂ ಕೆಲಸ ಇಲ್ಲ. ಇನ್ನು ಮುಂದೆ ನೋಡಬೇಕು. ಮತ್ತೆ ಇನ್ನೇನು ಸಮಾಚಾರ

ಭ: ಏನೂ ಇಲ್ಲ ರೀ ನೀವು ಹೇಳಿದರೆ ನಾನು ಕೆಳುತ್ತೀನಿ.

ಪಾ: ಸರಿ ರೀ, ನಾನು ಆದರೆ ಸಂಜೆ ಕರೆ ಮಾಡುತ್ತೀನಿ ಈಗ ಊಟಕ್ಕೆ ಹೊರಡಬೇಕು ಬೈ ಎಂದಳು

ಭ : (ನೀವು ಚೆನ್ನಾಗಿರುವುದೆ ನನಗೆ ಮುಖ್ಯ, ಊಟ ಮಾಡಿ ಚೆನ್ನಾಗಿ ಮಾಡಿ) ಓಹ್ ಓಕೆ ಬೈ ಎಂದು ಹೇಳಿ ಕಟ್ ಮಾಡಿದೆ.

ಅಬ್ಬ ಅಂತೂ ಒಂದು ವಾರದ ಕಾತುರತೆಗೆ ಇಂದು ತೆರೆ ಬಿತ್ತು ಇನ್ನು ನೆಮ್ಮದಿಯಾಗಿ ಊಟ ಮಾಡಬಹುದು ಎಂದುಕೊಂಡೆ. ಅಂದು ರಾತ್ರಿ ಹತ್ತರವರೆಗೆ ಅವಳ ಕರೆಗೆ ಕಾಯುತ್ತಿದ್ದೆ. ಆದರೆ ಅವಳಿಂದ ಯಾವುದೇ ಕರೆ ಬರಲಿಲ್ಲ. ಯಾಕೆ ಈ ಹುಡುಗಿಯರು ಹುಡುಗರ ಜೊತೆ ಹೀಗೆ ಆಟ ಆಡುತ್ತಾರೆ ಆದರೆ ಕರೆ ಮಾಡಬೇಕು ಇಲ್ಲವಾದರೆ ಹೇಳಬಾರದು. ನಾವಿಲ್ಲಿ ಒಳ್ಳೆ ಬಾಲ ಸುಟ್ಟ ಬೆಕ್ಕಿನಂತೆ ಒದ್ದಾಡುತ್ತಿದ್ದರೆ ಅವರಿಗೇನೋ ಖುಷಿ ಅನಿಸತ್ತೆ. ಏನು ಮಾಡುವುದು ನಮ್ಮ ಹಣೆ ಬರಹ ಅನುಭವಿಸಬೇಕು ಅಷ್ಟೇ ಎಂದುಕೊಂಡು ಮಲಗಿಕೊಂಡೆ.

ಇಂದಿನಿಂದ ನನ್ನ ಬಾಳಿನ ಹೊಸ ಅಧ್ಯಾಯ ಶುರು??

Rating
No votes yet