"ಪ್ರಜಾವಾಣಿ" ಸಂಪದಕೀಯ ಓದಿದಿರಾ?

"ಪ್ರಜಾವಾಣಿ" ಸಂಪದಕೀಯ ಓದಿದಿರಾ?

ಬರಹ

ಉಪಲೋಕಯುಕ್ತರ ನೇಮಕಾತಿಯಲ್ಲಿ ರಾಜ್ಯ ಸರಕಾರ ತೋರಿದ ತರಾತುರಿ, ಫೆ. ೧೪ರ ಸಂಪಾದಕೀಯದಲ್ಲಿ ಕರೆದಿರುವಂತೆ, ನೈತಿಕವಾಗಿ ಅನುಚಿತವಿರಬಹುದು. ಆದರೆ ಸರಕಾರ ಇದನ್ನು ’ಸಾಂವಿಧಾನಿಕ’ವಾಗಿ ’ಜೀರ್ಣಿಸಿ’ಯೂಕೊಳ್ಳಬಹುದಲ್ಲವೇ? ಹಾಗಲ್ಲದಿದ್ದರೆ, ನ್ಯಾಯವೇತ್ತರಾದ ಉಪಲೋಕಾಯುಕ್ತರು, ’ಹುದ್ದೆಗೆ ರಾಜೀನಾಮೆ ನೀಡೆ’ ಎಂದು ರಥವೇರಿದ ಅರ್ಜುನನಂತೆ ಪ್ರತಾಪ ಬೀಗುತ್ತಿದ್ದರೇ?
 ಮುಖ್ಯನ್ಯಾಯಮೂರ್ತಿಗಳ ಕಿಡಿಯ ವಿರುದ್ಧ ನ್ಯಾ. ಚಂದ್ರಶೇಖರಯ್ಯನವರ ಬತ್ತಳಿಕೆಯಲ್ಲಿ ಸಾಕಷ್ಟೇ ಬಾಣಗಳಿರುವಂತಿದೆ. ಅಸ್ತ್ರ-ಪ್ರತ್ಯಸ್ತ್ರಗಳಿಂದ ಕಾನೂನು, ಕಾನೂನಿನ ವಿರುದ್ಧ ಹೊರಾಡಿ, ಕೊನೆಗೆ ಕಾನೂನೇ ಗೆಲ್ಲುತ್ತದೆ! ಗೆದ್ದರೂ, ಸೋತರೂ, ಲೋಕಾಯುಕ್ತ ವ್ಯವಸ್ಥೆ,’ ಭ್ರಷ್ಟಾಚಾರದ ವಿರುದ್ಧ ಜನರ ದನಿ’, ’ಜನತೆಯ ವಿಜಯ’ ಇತ್ಯಾದಿ ನಂಬಿಕೆ ಉಳಿಸಿಕೊಳ್ಳುವುದಂತೂ ಕಷ್ಟ.
 ಅರ್ಥ, ಉದ್ದೇಶ, ಸದಾಶಯಗಳ ಜೀವಂತಿಕೆ ಕೊಡದಿದ್ದರೆ, ದೊಡ್ಡ-ದೊಡ್ಡ ಕಟ್ಟಳೆ-ಕಾನೂನುಗಳೆಲ್ಲಾ ಕೇವಲ ಅಕ್ಷರ, ನುಡಿಕಟ್ಟುಗಳಾಗಿ ಉಳಿದುಬಿಡುತ್ತದೆ. ಮಹತ್ವಾಕಾಂಕ್ಷೆ, ಒಳ್ಳೆಯ ಹೆಸರಿನ ಹಂಬಲ, ಉಪಕಾರಚೇತನ ಮುಂತದ ಗುಣಗಳಿಲ್ಲದೆ, ಹದಿನೆಂಟನೇ ಶತಮಾನದ ತುಡುಗು ಪಾಳೇಗಾರಿಕೆಯಂತೆ, ಆರೆಂಟು ದಿನಗಳ ಅಧಿಕಾರ ಸಿಕ್ಕಿದರೂ ತಲೆಮಾರುಗಳಿಗಾಗುವಷ್ಟು ದೋಚಿಕೊಂಡು ಓಡಿಹೋಗುವ ಪ್ರವೃತ್ತಿಯ ಸರಕಾರದ ಪುಢರಿಗಗಳು ಕಾಯ್ದೆ-ಕಾನೂನಿಗೆ ಈ ಜೀವಂತಿಕೆ ಕೊಡುವುದು ಅಸಾಧ್ಯ.
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet