ನಿನ್ನ ನೆನಪಲ್ಲಿ
ಬರಹ
೧) ಈ ಮನದ
ಖಾಲಿಹಾಳೆಗಳ ಮೇಲೆ ನಿನ್ನ
ನೆನಪು ಕವಿತೆ ಗೀಚಿದೆ....
೨) ನಿನ್ನೆ ಸವೆಸಿದ ಹಾದಿಗುಂಟ
ಹರಡಿದ ಮುಳ್ಳುಗಳ ಗಾಯವಿನ್ನು ಆರಿಲ್ಲ
ಆದರೂ ನಾಳೆಯ ಅನೂಹ್ಯದಲಿ
ನನ್ನ ಅಸ್ತಿತ್ವ ಹುಡುಕುತಿರುವೆ.....
೩) ಆಗೆಲ್ಲ ಕದ ತೆರೆದಾಗ
ಎದೆ ತುಂಬ ನೀನೇ ಇದ್ದೆ
ಹತಾಶೆ ನಿರಾಶೆಗಳು
ಬಂದು ಬೀಡು ಬಿಟ್ಟಿವೆ...
ಈಗ ನೀನಿಲ್ಲ..