ಅವಿಸ್ಮರಣೀಯ ಧಾರವಾಡ ಪ್ರವಾಸದ ಅಭ್ಯಾಸ ೨೦

ಅವಿಸ್ಮರಣೀಯ ಧಾರವಾಡ ಪ್ರವಾಸದ ಅಭ್ಯಾಸ ೨೦

 

ಗೆಳೆಯರ ಗುಂಪು ಮತ್ತು ಅಭ್ಯಾಸ ತಂಡದ ಜಂಟಿ ಕಾರ್ಯಕ್ರಮ



ನಂದನದ ತುಣುಕೊಂದು ಬಿದ್ದಿದೆ
ಬಾರೋ  ಸಾಧನಕೇರಿಗೆ

ಹೌದು ಅಭ್ಯಾಸ ತಂಡ ದ ೨೦ ನೇ ಅಭ್ಯಾಸ - ಅಂಬಿಕಾ ತನಯ ದತ್ತರ ಊರಾದ ಸಾಧನಕೇರಿಯಲ್ಲಿ ಬೆಳಗಿನಿಂದ ಸಂಜೆ ಐದರ ತನಕ ಅತ್ಯಂತ ಸಂಭ್ರಮದಿಂದ ನಡೆಯಿತು. ಜತೆಯಲ್ಲಿ ದ ರಾ ಬೇಂದ್ರೆ ಯವರೇ ಹುಟ್ಟು ಹಾಕಿದ ಗೆಳೆಯರ ಗುಂಪಿನ ಜತೆ.

ಬೆಂಗಳೂರಿನಿಂದ ನಮ್ಮ ಅಭ್ಯಾಸ ತಂಡದ ೩೦- ೪೦  ಮಂದಿ ಶುಕ್ರವಾರ ಇಲ್ಲಿಂದ ಹೊರಟು ಶನಿವಾರ ಬೆಳಿಗ್ಗೆ ಧಾರವಾಡ ಸೇರಿದೆವು.
ಬೇಂದ್ರೆಯವರೇ ಕಟ್ಟಿದ ಗೆಳೆಯರ ಗುಂಪಿನೊಂದಿಗೆ ಈ ೨೦ ನೆಯ ಅಭ್ಯಾಸ ರಸವತ್ತಾಗಿ ಕಳೆಯಿತು.
ಅಭ್ಯಾಸ ತಂಡದ ಶ್ರೀಯುತ ನಾಗರಾಜ ವಸ್ತಾರೆಯವರ ಮುನ್ನುಡಿಯೊಂದಿಗೆ ಆರಂಭವಾದ ಈ ಸುಂದರ ಕಾರ್ಯಕ್ರಮ ಹತ್ತು ಹಲವಾರು ಗಣ್ಯರ ಮಾತುಕಥೆ ಯೊಂದಿಗೆ ಮನದಾಳದಲ್ಲಿ ಅವಿಸ್ಮರಣೀಯ ವಾಗುಳಿಯಿತು.
ಅಧ್ಯಕ್ಷರಾದ ಶ್ರೀಯುತ ಶ್ಯಾಮಸುಂದರ ಬಿದರಕುಂದಿಯವರು ಅಭ್ಯಾಸ ತಂಡಕ್ಕೆ ಸ್ವಾಗತ ಕೋರಿ ಗೆಳೆಯರ ಗುಂಪಿಗೆ ಪರಿಚಯಿಸಿದರು

ಬಾರೋ ಸಾಧನಕೇರಿಗೆ, ಮುಗಿಲ ಮಾರಿಗೆ , ನಾನು ನೀನು ಆನು ತಾನು, ನಾನು ಬಡವಿ ಆತ ಬಡವ ಎಂಬಿತ್ಯಾದಿ ಸುಂದರ ಹಾಡುಗಳನ್ನು ಬೆಂಗಳೂರಿನಿಂದಲೇ ನಮ್ಮ ಜತೆ ಬಂದಿದ್ದ  ಕುಮಾರಿ ವರ್ಷಾ, ಪಂಚಮ ಹಳಿ ಬಂಡಿ, ( ಜತೆಯಲ್ಲಿ ನಾಗಭೂಷಣ ಉಡುಪ ,ಕೀ ಬೋರ್ಡ್, ಪಂಚಮರವರ ತಮ್ಮ ತಬ್ಲಾ   ಬೇಂದ್ರೆಯವರ ಹಾಡುಗಳನ್ನು ಚೆನ್ನಾದ ಭಾವಪೂರ್ಣವಾದ ದನಿಯಲ್ಲಿ ಹಾಡುತ್ತಾ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸಿದರೆ.

ಎಲ್ಲಕಿಂತಲೂ ಕಳಸವಿಟ್ಟಂತೆ ಆದು ಗೆಳೆಯರ ಗುಂಪಿನ ಮರೆಯಲಾಗದ ಮಹಾನುಭಾವರಾದ ಒಬ್ಬೊಬ್ಬರೂ ತಮ್ಮ ತಮ್ಮ ಅನಿಸಿಕೆಯನ್ನು ಬಿಚ್ಚಿ ನಮಗೆಲ್ಲರಿಗೂ ಉಣ ಬಡಿಸಿದರು.
ಚನ್ನವೀರ ಕಣವಿ ( ಓ ತಾಯೆ ಮಾಯೆ, ಶಿವ....)
ಡಾ ಸಿಧಲಿಂಗ ಪಟ್ಟಣ ಶೆಟ್ಟಿ : ಶ್ರಾವಣ ಬಂತು
ಡಾ ವಿ ಎಮ್ ಕಲ್ಬುರ್ಗಿ : ಶ್ರಾವಣ ಬಂತು
ಗಿರಡ್ಡಿ ಗೋವಿಂದ್ರಾಜ್ : ಗಂಗಾವತರಣ
ಡಾ ಗುರುಲಿಂಗ ತಾಪಸೆ :  ಮಾತಾಡೊ ಮಾತಾಡೊ ಲಿಂಗವೇ
ಡಾ ರಾಮಾಕಾಂತ ಜೊಯ್ಶಿ:  ಸಸಾರಕಲ್ಲವೋ ಸಂಸಾರ, ಇದು ನಾಟಕ ಬರೀ ನಾಟಕ


ಧಾರವಾಡದ ಸ್ವಾದಿಷ್ಟ ರುಚಿಕಟ್ಟಾದ ಮಧ್ಯಾಹ್ನ ದ ರಸ ಕವಳವೂ ಗಮ್ಮತ್ತಾಗಿತ್ತು.

ಊಟಕ್ಕೆ ಮೊದಲು ಬೇಂದ್ರೆಯವರ ಉಡುಪು ತೊಟ್ಟು ನಮ್ಮನ್ನೆಲ್ಲಾ ಅವರ ನುಡಿ ಮುತ್ತುಗಳಿಂದ ಮಂತ್ರ ಮುಗ್ಧರನ್ನಾಗಿಸಿದರು ಬೇಂದ್ರೆ ಅವತಾರವಾಗಿ ಬಂದ ಅನಂತ ದೇಶ ಪಾಂಡೆ.     ನಗರದ ಧಾವಂತದ ಬದುಕಿನಲ್ಲಿ ಇಂತಹ ಕಾರ್ಯಕ್ರಮಗಳು ಮರುಭೂಮಿಯ ಓಯಸಿಸ್. ಇದನ್ನು ಆರಂಭ ಮಾಡಿದ ಗುರುಗಳಿಗೆ ನನ್ನ ನಮನ. ನಮ್ಮ ಅಭ್ಯಾಸದ ಈ ಧಾರವಾಡದ ಕಾರ್ಯಕ್ರಮವನ್ನು ಮನದಲ್ಲಿ ಅಚ್ಚಳಿಯದೇ ಉಳಿಯುವಂತೆ ಮಾಡಿದ ಕೀರ್ತಿ ಅಭ್ಯಾಸ ತಂಡ ಮತ್ತು ಧಾರವಾಡದ ಗೆಳೆಯರ ಗುಂಪು ತಂಡಕ್ಕೆ ನಾವೆಲ್ಲರೂ ಅಬಾರಿ.ಇಡೀ ಈ ಅಭ್ಯಾಸ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಉತ್ತಮ ನಿರ್ವಹಣೆ ಮಾಡಿದ ಶ್ರೀಯುತ ರಾಜಶೇಖರ ಮಾಲೂರರಿಗೆ ಮತ್ತು  ಸಮರ್ಪಕವಾಗಿ ರೈಲು ಪ್ರಯಾಣವನ್ನು ಅಣಿ ಮಾಡಿಸಿ ಕೊಟ್ಟ ಶ್ರೀಯುತ ಅಶ್ವತ್ಥ ಶಿಕಾರಿಪುರ ಅವರಿಗೂ
ಶ್ರೇಯ ಸಲ್ಲಬೇಕು.
 

 

 

 

 


ಕಾರ್ಯಕ್ರಮದ ವಿಡಿಯೋ ತುಣುಕುಗಳು  ಇಲ್ಲಿವೆ
    http://youtu.be/JYMuRw7g4l4  
    http://youtu.be/B5NHWIcES9s
    http://youtu.be/Q8mtqQa1Ttc
    http://youtu.be/Vob6Focvuaw
    http://youtu.be/eRCFxmjFBS4
   

 ಸುರೇಶ ವೆಂ ಕುಲ್ಕರ್ಣಿಯವರ ಬೇಂದ್ರೆ ಬೆಳಕು ಎಂಬ ಪುಸ್ತಕದಿಂದ ಎರಡು ದ್ರಷ್ಟಾಂತಗಳನ್ನು ನಿಮಗಿತ್ತು ಈ ಲೇಖನ ಮುಗಿಸುವೆ.
೧.  ತಿಳಕೊಂಡು ಕೆಲಸ ಮಾಡ ಬೇಕು:
ಒಮ್ಮೆ ಒಬ್ಬಾವಾ ತನ್ನ ಕಚೇರಿಯ ಸಾಹೇಬರ ಬಗ್ಗೆ ದೂರು ಹೇಳಿದಾ.
"ಸಾಹೇಬರು ಹೇಳಿದ್ದೆಲ್ಲಾ ಮಾಡತೇನ್ರೀ, ಆದರೂ ಸಿಟ್ಟಿಗೇಳತಾರ" ಅಂದ
ಅದಕ್ಕೆ ಬೇಂದ್ರೆ  " ಅವರು ಹೇಳಿದ್ದ್ದಷ್ಜ್ಟ ಮಾಅಡತೀಯೋ ಹೇಳಿದ್ದನ್ನು ತಿಳಕೊಂಡು ಮಾಡತೀಯೋ" ಪ್ರಶ್ನಿಸಿದರು.
ತಿಳಕೊಳ್ಳೋದು ಏನಿರತೈತ್ರೀ..? ಸಾಹೇಬರು ಹೇಳಿದಷ್ಟ ಮಾಡೋದರಿ" ಅಂದ.
ಹೇಳ್:ಇದ್ದಷ್ಟು ಮಾಡಬಾರದು, ಕೆಲಸ ತಿಳಕೊಂಡು ಮಾಡಬೇಕು". ಎಂದು ಹೇಳುತ್ತ " ಹೇಳಿದಷ್ಟ್ ಮಾಡಿದರ ಏನಾಗತದಪಾನ್ ಅಂದ್ರ "- ಒಮ್ಮೆ ಜನಗಣತಿ ನಡೆಯಿತು, ಸಾಹೇಬ ಮತ್ತು ಸಹಾಯಕ ಒಂದು ಓಣಿಗೆ ಹೋದರು. ಅದು ಹರಿಜನಕೇರಿ. ಸಾಹೇಬರು ಹೇಳಿದರು" ನಾನು ಒಬ್ಬರದ ಹೆಸರು ಕೇಳತೀನಿ, ಅವರು ಹೇಳಿದಂಗ ನೀ ಬರಕೋ"! ಸಹಾಯಕ ಬರೀತಾ ಹೋದ.
ನಿನ್ನ ಹೆಸರೇನಪಾ..??
ಭೀಮಪ್ಪರೀ
ಅದನ್ನ ಬರಕೋ ಸಹಾಯಕನಿಗೆ ಹೇಳಿದ್ರು.
ನಿನ್ನ ಹೆಸರೇನು, ಮತ್ತೊಬ್ಬನಿಗೆ ಕೇಳಿದ್ರು
ಕರಿಯಪ್ಪರಿ
ಹೀಗೆ ಎಲ್ಲಪ್ಪರಿ ದ್ಯಾಮಪ್ಪರಿ ... ಅಂತ ಹೇಳಿದಂತೆ ಸಹಾಯಕ ಬರಕೊಂಡ. ಆ ಓಣಿ ಮುಗಿಯಿತು. ಈ ಸಹಾಯಕ ಏನು ಬರೆದಿದ್ದಾನೆ ಅಂತ ಸಾಹೇಬರು ಓದಿ ನೋಡಿದರು.
ಭೀಮಪ್ಪರಿ, ಕರಿಯಪ್ಪರಿ, ಯಲ್ಲಪ್ಪರಿ... ಹೀಂಘ ಹೆಸರಿನ ಕೊನೆಗೆ ರಿ ಹಚ್ಚಿದ್ದ.
ಅದನ್ನು ನೋಡಿ ಸಹಾಯಕನಿಗೆ ಹೇಳಿದರು ಹೆಸರಿನ ಕೊನೆಗೆ ರಿ ಅಂತ ಬರೀ ಬಾರದು . ಹಂಗ ನಮಗ ಗೌರವದಿಂದ ಹೇಳಿರತಾರ, ಇನ್ನು ಮುಂದೆ ರಿ ಅಂತ ಬರೀಬ್ಯಾಡ ಅಂದ್ರು
ಇಂವಾ ಹೂಂ ಅಂದ
ಮುಂದ ಆಚಾರ್ಯರ ಓಣಿ ಬಂತು . ಅಲ್ಲಿ ಹೆಸರು ಹೇಳಿದಾಗ ರಂಗಾಚಾರಿ, ರಾಮಾಚಾರಿ, ರಾಘವೇಂದ್ರಾಚಾರಿ, ಹಯಗ್ರೀವಾಚಾರಿ ಹೀಂಗ ತಮ್ಮ ಹೆಸರು ಹೇಳಿದರು ಸಹಾಯಕ ರೀ ಬರಿಯದೇ  ರಂಗಾಚಾ, ರಾಮಾಚಾ, ರಾಘವೇಂದ್ರಾಚಾ, ಹಯಗ್ರೀವಾಚಾ... ಬರೆದಿದ್ದ . ಅದನ್ನ ನೋಡಿ ಆಗೂ ಸಾಹೇಬರ ಕಡೆಯಿಂದ ಬೈಯಿಸಿಕೋ ಬೇಕಾಯಿತು.
"- ಅದಕ್ಕ ಹೇಳುದಷ್ಟೇ ಮಾಡದೇ ತಿಳಕೊಂಡು ಕೆಲಸಾ  ಮಾಡಬೇಕು ಎಂದು ಬೇಂದ್ರೆಯವರು ವಿವರಿಸಿ ಹೇಳಿದಾಗ , ಗಂಭೀರವಗಿದ್ದ ಸ್ಥಿತಿ ನಗೆಯೊಳಗೆ ತೇಲಿ ಬಂತು.

೨. ಬೇಂದ್ರೆಯವರ ಪೈಕಿ

ಗದುಗಿನಲ್ಲಿ ಬಸ್ ಶ್ತಾಂಡ್ ಹತ್ತಿರದ ಪುಷ್ಪಾ ಥೇಟರದಲ್ಲಿ ಒಂದು ಕಂಪ್ನಿ ನಾಟಕದ ನೂರನೇ ಪ್ರಯೋಗಕ್ಕೆ ಬೇಂದ್ರೆಯವರನ್ನು ಅತಿಥಿಗಳಾಗಿ ಕರೆದೊಯ್ದರು. ವರಕವಿಯನ್ನು ನೋಡಲಿಕ್ಕೆ ಮತ್ತು ಅವರ ಮಾತು ಕೇಳಲಿಕ್ಕೆ ಜನ ಕಿಕ್ಕಿರಿದು ತುಂಭಿದ್ದರು. ನಾಟಕ ಪ್ರಾರಂಭವಾಗಿ ಒಂದು ತಾಸಾಗಿತ್ತು. ಮಧ್ಯಂತರ ಪೂರ್ವದಲ್ಲಿ ಬೇಂದ್ರೆಯವರು ಒಬ್ಬರೇ ಎದ್ದು ಹೊರಗೆ ಹೋದರು. ಆಗ ಗೇಟ್ ಕೀಪರ್ ಇರಲಿಲ್ಲ. ಸ್ವಲ್ಪ ಹೊತ್ತು ಹೊರಗೆ ಅಡ್ಡಾದಿ ಒಳಗೆ ಬರಬೇಕಾದಾಗ ಗೇಟ್ ಕೀಪರ್ ಇವರ ಕುಲಾಯಿ ಟೋಪಿ ಕೋಟು ಧರಿಸಿದ್ದನ್ನು ನೋಡಿ " ಅಜ್ಜಾರ ಗೇಟ್ ಪಾಸ್ ಕೊಡ್ರೀ" ಅಂತ ಕೇಳಿದಾ. ತತ್ ಕ್ಷಣ ಬೇಂದ್ರೆ ನಾನು ಬೇಂಣ್ಂದ್ರೆಯವರ ಪೈಕಿ ಅಂದರು. ಆತ ಅವರನ್ನು ಗೌರವದಿಂದ ಮುಂದಿನ ಕುರ್ಛಿಗೆ ತಂದು ಕುಳ್ಳಿರಿಸಿದ.
ಮುಂದ ೧೫ ನಿಮಿಷಕ್ಕೆ ಸಭಾ ಕಾರ್ಯಕ್ರಮ, ಬೇಂದ್ರೆಯವರನ್ನು ವೇದಿಕೆಗೆ ಕರೆ ತಂದರು. ಎಲ್ಲರೂ ಕರತಾಡನ ಮಾಡಿದರು. ಗೇಟ್ ಕೀಪರನಿಗೂ ಬೇಂದ್ರೆಯವರನ್ನು ನೋಡುವ ಕುತೂಹಲ. " ನಾಟಕದಿಂದ ಸಮಾಜ ಸುಧಾರಿಸಬಹುದು, ಆದರೆ ನಾಟಕಾನೇ ಕೆಟ್ಟಿದ್ರ..??" ಇತ್ಯಾದಿ ಮಾತುಗಳೀಂದ ಪ್ರೇಕ್ಷಕರನ್ನು ಎಚ್ಚರಿಸಿದರು. ನಾಟಕಾ ಮುಗಿಯಿತು.
ಮಾಲಕ ಬಣ್ಣದ ಕೋಣೆಗೆ ಬೇಂದ್ರೆಯವರನ್ನು ಕರಕೊಂಡು ಹೋಗಿ ಪಾತ್ರಧಾರಿಗಳನ್ನು ಪರಿಚಯಿಸತೊಡಗಿದಾಗ, ಅವರಲ್ಲಿಯ ಒಬ್ಬ ಬೇಂದ್ರೆಯವರ ಕಾಲಿಗೆ ಬಿದ್ದ-
"ನಂದು ತಪ್ಪಾಗೇದ ಕ್ಷಮಿಸಿರಿ" ಅಂದ
"ಏನು ತಪ್ಪು?"  ಬೇಂದ್ರೆ ಕೇಳಿದರು
ನಾ, ನಿಮ್ಮನ್ನು ಗುರುತಿಸದೇ ಗೇಟ್ ಪಾಸ್ ಕೇಳಿದೆ"
ನಿಂದೇನ್ ತಪ್ಪು ನೀ ಬರೋಬ್ಬರಿ ನಿನ್ನ ಕೆಲ್ಸಾ ಮಾಡಿದೆ, ನೀ ಹಂಗ ಕೇಳಿದ್ದಕ್ಕ ನನಗೊಂದು ಮಹತ್ವದ ಅಂಶ ತಿಳೀತು. ಏನಂದ್ರ ನೀ ಗೇಟ್ ಪಾಸ್ ಕೇಳಿದಾಗ ನಾ ಬೇಂದ್ರೆ ಅಂದಿದ್ಸ್ದೆ ಅಂತ ತಿಳಕೋ ನೀವು ಹ್ಯಾಂಗ ಬೇಂದ್ರೆ ಅಂತ ಮರುಪ್ರಶ್ನ ಮಾಡಿದ್ದರ, ನನ್ನ ಹತ್ರ ಏನು ಉತ್ತರ ಇತ್ತು..??
ಬೇರೆಯವರನ್ನು ಕೇಳು ಅಂತಿದ್ದೆ, ಅದಕ್ಕಿಂತ ಅವರ ಪೈಕಿ ಅಂದ್ರ ಏನ್ ತಪ್ಪು? ಅಂತ ಹಾಂಗ ಹೇಳಿದ್ದೆ  ಅಷ್ಟೆ
ನಮ್ಮ ಇರುವಿಕೆಗೆರ್ ಸಾಕ್ಷಿ ಬೇಕು
ನಾನು ಇವರ ಷಿಷ್ಯ, ನಾನು ಇಂತಹವರ ಮಗ, ನಾನು ಇಂಠಲ್ಲೇ ಕೆಲಸಾ ಮಾಡತೇನಿ, ಇತ್ಯಾದಿ. ಸಂಬಂಧ ಹೇಲದೇ ಇರಲಿಕ್ಕೆ ಬರೂದಿಲ್ಲಾ, ಅನ್ನೋದು ಇವತ್ತ ನನಗ ಹೋಳೀತು. ನೀನು ಇಂಥಾ ಕಂಪ್ನ್ಯಾಗ ಇದ್ದೀ ನಿನ್ನ ಮಾಲಕರು ಇವರು, ಇದರಿಂದ ನೀನು ಹ್ಯಾಂಗಿದ್ದೀ ಅನ್ನೋದನ್ನ ನಾವು ಟಿಳಿಯ ಬಹುದು. ಎಂದು ತೀರಾ ಸರಳವಾಗಿ ಸಿದ್ಧಾಂತ ರೂಪ ಹೇಳಿ ಎಲ್ಲರ ಪರಿಚಯವನ್ನು ಆನಂದದಿಂದ ಮಾಡಿಕೊಂಡರು
" ಆನಂದ ಬಡಿಸು, ಆನಂದ ಉಣಿಸು, ಆನಂದ ಉಡಿಸು ತೊಡಿಸು" ಇದು ಅವರ ನಿಲುವು

 

Comments