ಸಿಸಿಎಲ್ ಫೈನಲ್ನಲ್ಲಿ ತಮಿಳರೆಂಬ ಮಹಾ ವಿಕೃತರು
`ಸತ್ಯವೇ ನಮ್ಮ ತಾಯಿ ತಂದೆ, ಸತ್ಯವೇ ನಮ್ಮ ಬಂಧು ಬಳಗ ಸತ್ಯ ವಾಕ್ಯಕ್ಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನೂ` ಅನ್ನುವಂತ ಗೋವಿನ ಹಾಡು ಕೇಳಿ ಬೆಳೆದವ್ರು ಕನ್ನಡದವ್ರು. ಇಲ್ಲಿ ಪುಣ್ಯಕೋಟಿ ಗೋವಿನ ಮನಸ್ಥಿತಿಯ ಜನರೂ ಇದ್ದಾರೆ, `ಎನ್ನ ಒಡಹುಟ್ಟಕ್ಕ ನೀನು ಎನ್ನುವ` ಸಾತ್ವಿಕ ಸಿಟ್ಟಿನ ಪುಲಿಕೇಶಿಗಳು ಇದ್ದಾರೆ.
ಬೇಕಂತಲೇ ಕಾಲ್ಗೆರೆದುಕೊಂಡು ಬಂದ ತಮಿಳರಸ ಮಹೆಂದ್ರವರ್ಮನ ಹುಟ್ಟಡಗಿಸಿ ರಾಜ್ಯ ವಾಪಾಸು ಕೊಟ್ಟು ಬಂದ ಕನ್ನಡದ ವೀರ ದೊರೆ ಇಮ್ಮಡಿ ಪುಲಿಕೇಶಿ.
ತಮಿಳರಸ ಕುಲೋತುಂಗ ತೊಂದರೆ ಕೊಟ್ಟ ಕಾರಣ ಶ್ರೀರಾಮಾನುಜ ಚಾರ್ಯರು ಕರುನಾಡಿಗೆ ಬಂದ್ರು. ತನ್ನಣ್ಣನಿಗೆ ಸರ್ವಸ್ವವನ್ನೂ ಧಾರೆಯೆರೆದು ನಿಂತವನು ಬಾಹುಬಲಿ. ಹೀಗೆ ಉದಾಹರಣೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
----------
ಒಂದು ಕಾಲಕ್ಕೆ ಇಡೀ ಭಾರತ ತಂಡದಲ್ಲಿ ಕರ್ನಾಟಕದ ಮಂದಿ ಬಹುಪಾಲಿದ್ದರು. ಕ್ರಿಕೆಟ್ ಅಂದ್ರೇನು ಅನ್ನೋ ದು ಕರ್ನಾಟಕದ ಪ್ರತಿಯೊಂದು ಹಳ್ಳಿ, ಗ್ರಾಮ ಪಂಚಾಯತ್, ಹೋಬಳಿ, ತಾಲೂಕ, ಜಿಲ್ಲೆ, ಪಟ್ಟಳಗಳಲ್ಲಿ ಗಲ್ಲಿಗಲ್ಲಿಯ ಹುಡುಗರಿಗೆ ಗೊತ್ತಿದೆ. ಹಾಗಾಗಿಯೇ ಭಾರತ ಕ್ರಿಕೆಟ್ ತಂಡದಲ್ಲಿ ಕನ್ನಡಿಗರು ಇದ್ದರು, ಇರುತ್ತಾರೆ.
---------
ಯುದ್ದ, ಸ್ಪರ್ಧೆ ಎಲ್ಲವೂ ಕನ್ನಡಿಗರಿಗೇನು ಹೊಸತ್ತಲ್ಲ. ಗೆದ್ದು ರಾಜ್ಯ ವಾಪಾಸ್ ಕೊಟ್ಟು ನೆಮ್ಮದಿಯಾಗಿ ಬಾಳು ಎಂದು ಶತ್ರುವನ್ನು ಹರಸಿದ ಉದಾಹರಣೆಗಳು ಕರ್ನಾಟಕ ಇತಿಹಾಸದಲ್ಲಿ ಸಾಕಷ್ಟಿವೆ. ಇದೆಲ್ಲಾ ಪೀಠಿಕೆಗೆ ಕಾರಣವಾಗಿದ್ದು ಸಿಸಿಎಲ್ ಲೀಗ್ ಫೈನಲ್ ಪಂದ್ಯ.
ಸೆಲೆಬ್ರಿಟಿ ಕ್ರಿಕೆಟ್ ಕ್ಲಬ್ ಅನ್ನೋ ಹೆಸ್ರಿನಲ್ಲಿ ಆಯಾಯಾ ಭಾಷಿಗ ಸಿನಿಮಾ ಮಂದಿ ಕ್ರಿಕೆಟ್ ಆಡಿ ಪ್ರೇಕ್ಷಕರನ್ನ, ಅಭಿಮಾನಿಗಳನ್ನು ರಂಜಿಸುತ್ತಾರೆ. ಇಲ್ಲಿ ರಂಜನೆ ಮುಖ್ಯವೇ ಹೊರೆತು, ಅನಾರೋಗ್ಯಕರ ಸ್ಪರ್ಧೆಯಲ್ಲ. ಎಂಬುದನ್ನು ಮೊದಲು ಮನದಟ್ಟು ಮಾಡಿಕೊಳ್ಳಬೇಕಾಗುತ್ತದೆ. ಈ ಸಿಸಿಎಲ್ನ ಸೃಷ್ಟಿಯ ಹಿಂದೆಯೂ ಇದೇ ಉದ್ದೇಶವಿದೆ. ಹಲವು ಚಿತ್ರರಂಗಗಳ ನಡುವಿನ ತಾರೆಗಳಲ್ಲಿ ಸೌಹಾರ್ದತೆ ಮೂಡಿಸಬೇಕು ಅನ್ನುವ ಧ್ಯೇಯ ಇಟ್ಟುಕೊಂಡು ಆರಂಭವಾಗಿರುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಎರಡನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ನಡೆಯ ಬಾರದ ಘಟನೆಗಳು ನಡೆದಿವೆ.
ಸಿಸಿಎಲ್ ಎರಡನೇ ಆವೃತಿಯಂದು ಕರ್ನಾಟಕ ತಂಡ ಅವಮಾನಕ್ಕೀಡಾಯ್ತು. ಈ ಸನ್ನಿವೇಶ ಬಿತ್ತರವಾಗದಂತೆ ನೋಡಿಕೊಂಡ ನೋಡಿಕೊಂಡಿತ್ತು, ನಿಮ್ಮೆಲ್ಲರ ಅಚ್ಚು ಮೆಚ್ಚಿನ ಉದಯ ಟಿವಿ(ತಮಿಳ ಸನ್ ನೆಟವರ್ಕ್). ಅವತ್ತು ನಡೆದದ್ದು ನಿಜವಾದ ಕನ್ನಡಿಗರೇ ನೋಡಿದ್ದಿದ್ದರೇ ನೀವೊಮ್ಮೆ ಸಾತ್ವಿಕ ಸಿಟ್ಟಿಗೆ ಒಳಗಾಗಿ ಪುಲಿಕೇಶಿಗಳಾಗುತ್ತಿದ್ದೀರಿ.
ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ 161 ರನ್ ಮಾಡಿತ್ತು. 161ರನ್ಗಳ ಬೆನ್ನ ಹತ್ತಿದ ಕರ್ನಾಟಕ ವಿರೋಚಿತ 160 ರನ್ ಸಿಡಿಸಿತ್ತು. ಇದು ಆರೋಗ್ಯ ಪೂರ್ಣ ಸ್ಪರ್ಧೆಯ ಒಂದು ಭಾಗವಷ್ಟೆ. ಆದ್ರೆ ಹೇಗಾದ್ರೂ ಮಾಡಿ ಮ್ಯಾಚ್ ಗೆಲ್ಲಲೇ ಬೇಕೆಂದು ತಮಿಳರು ಅಡ್ಡದಾರಿ ಹಿಡಿದಿದ್ದರೆಂಬ ಆರೋಪ ಈಗ ಕೇಳಿ ಬರುತ್ತಿದೆ.
ಅದ್ಕಾಗಿ ಅಂಪೈರುಗಳ ಮೇಲೆ ಒತ್ತಡ ಹಾಕುವುದು, ತೀರ್ಪುಗಳಿಗೆ ಆಕ್ಷೇಪಿಸುವುದು ಒಳಗೊಂಡಂತೆ ಹಲವಾರು ವಿಕೃತ ರೀತಿಯ ತಂತ್ರಗಳನ್ನು ಚಾಚೂ ತಪ್ಪದೇ ಪಾಲಿಸಿದ್ರು. ಅಲ್ಲದೇ ಕನ್ನಡದ ಆಟಗಾರರನ್ನು ಪ್ರಚೋದಿಸಿದರು. ಇದೆಲ್ಲಕಿಂತ ಸೋಜಿಗದ ಸಂಗತಿ ಅಂದ್ರೆ ತಮಿಳರ ಪರ ಆಟವಾಡಿದ ವಿಕ್ರಾಂತ್ ಮೂಲತಃ ಕ್ರಿಕೆಟ್ ಆಟಗಾರ. ಇದೇ ಮಹಾನುಭಾವನಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿದ್ದು.
ಇದರ ನಡುವೆ ಉಂಟಾದ ರನ್ ಔಟ್ ವಿವಾದವೂ ಇದೆ. ಇದು ಪಂದ್ಯ ರೋಚಕ ಘಟ್ಟ ತಲುಪಿದ್ದಾಗ ನಡೆದ ಮೋಸ. ಅದು ಲಾಸ್ಟ್ ಓವರ್ ಲಾಸ್ಟ್ ಬಾಲ್. ಬೌಲರ್ ವಿಕ್ರಾಂತ್. ಬೌಲಿಂಗ್ ಮಾಡಲೆಂದು ಓಡಿ ಬಂದ ವಿಕ್ರಾಂತ್, ಬೌಲಿಂಗ್ ಮಾಡೋ ಬದಲು ನಾನ್‌ಸ್ಟ್ರೈಕರ್ ಬದಿಯಲ್ಲಿ ಕ್ರೀಸ್‌ನಿಂದ ದೂರವಿದ್ದ ಬ್ಯಾಟ್ಸ್‌ಮನ್ ಕಾರ್ತಿಕ್ ಅವರನ್ನು ರನೌಟ್ ಮಾಡಿದರು. ಆದರೆ ಇದು ನಿಜಕ್ಕೂ ರನೌಟ್ ಆಗಿರಲಿಲ್ಲ. ಕಾರಣ, ಹೀಗೆ ರನೌಟ್ ಮಾಡುವ ಬೌಲರ್ ಕ್ರೀಸ್‌ಗೆ ಬರಬಾರದು. ಆದರೆ ವಿಕ್ರಾಂತ್ ಕ್ರೀಸ್‌ಗೆ ಬಂದಿದ್ದರು. ಕಾರ್ತಿಕ್ ರನೌಟ್ ಆದ ನಂತರ ಬಂದ ಚಂದ್ರ ಕೂಡ ರನೌಟ್ ಆದರು. ಪರಿಣಾಮ ಕರ್ನಾಟಕಕ್ಕೆ ಒಂದು ರನ್ ಸೋಲು.
ತಪ್ಪಾಗಿ ನೀಡಿದ ರನ್ಔಟ್ ಕ್ರಮವನ್ನು ವಿರೋಧಿಸಿದರು. ಇದು ಐಸಿಸಿ ನಿಯಮಾವಳಿಗಳ ಉಲ್ಲಂಘನೆ ಅಂದ್ರು. ಹೀಗೆ ಸುದೀಪ್ ಮೈದಾನಕ್ಕಿಳಿದಾಗ ಮೈದಾನದಲ್ಲಿ ಗೊಂದಲದ ಪರಿಸ್ಥಿತಿ ಉಟಾಯ್ತು. ಈ ವೇಳೆ ಪರಿಸ್ಥಿತಿ ತಿಳಿಗೊಳಿಸಲು ಬಂದವ್ರು ಯಾರು ಗೊತ್ತಾ? ಆಯೋಜಕರಲ್ಲ, ಪೊಲೀಸರು.
ರನೌಟ್ ಮಾಡಿ ವಿವಾದಕ್ಕೀಡಾದ ವಿಕ್ರಾಂತ್ ಪದೇ ಪದೇ ಕನ್ನಡದ ಆಟಗಾರರನ್ನ ಛೇಡಿಸುತ್ತಿದ್ದ. ಬರೀ ಛೇಡಿಸಿದ್ದಿದ್ದರೇ ಸಹನೆಗೆ ಹೆಸರಾದ ನೀವುಗಳು (ನಾವುಗಳು) ಸುಮ್ಮನಿದ್ದು ಬಿಡುತ್ತಿದ್ದೆವು. ಅಷ್ಟೇ ಯಾಕೆ ಕನ್ನಡವನ್ನೇ ಬೈದರೂ ಒಂದುಷ್ಟು ದಿನ ಬಾವುಟ ಹಿಡಿದು ಹೋರಾಟ ಮಾಡಿ ಮರೆತು ಬಿಡುವಷ್ಟು ಸಹನೆ ನಿಮ್ಮ(ನಮ್ಮ)ಲ್ಲಿದೆ. ಈ ವಿವಾದಿತ ಆಟಗಾರ ವಿಕ್ರಾಂತ್ ಕನ್ನಡದ ಆಟಗಾರರತ್ತ ಅಸಹ್ಯವಾಗಿ ಉಂಗುರದ ಬೆರಳನ್ನೆತಿ ತೋರಿಸಿದ್ದ. ಹೀಗೆ ತೋರಿಸಿದಾಗ ಅಲ್ಲಿ ಕೇವಲ ಹುಡುಗರೇ ಇರಲಿಲ್ಲ. ನಟಿ ತಾರಾ ಮತ್ತಿತರ ನಟಿಯರೂ ಇದ್ದರು. ಇದೆಲ್ಲಾ ನಡೆಯುವಾಗ ತಮಿಳು ನಟರು ಅಂದ್ರೆ ನಮ್ಮ ಪಕ್ಕದ ರಾಜ್ಯದ ಸೋದರರು ವಿಕ್ರಾಂತ್ಗೊಂದಿಷ್ಟು ಬುದ್ದಿ ಹೇಳಲಿಲ್ಲ, ಅದು ಅವ್ರ ರಾಜ್ಯದ ಸಂಸ್ಕೃತಿ ಕಲಿಸಿಕೊಟ್ಟ ಪಾಠ. ಮೋಸ ಮಾಡಿಯಾದ್ರೂ ಗೆದ್ದ ತಮಿಳು ಆಟಗಾರರು ವಿಕೃತರಂತೆ ಕುಣಿದಾಡಿದ್ದೇ ಅಲ್ಲದೇ ಸಾಕಷ್ಟು ಸಲ ಕನ್ನಡ ತಂಡವನ್ನು ಕಿಚಾಯಿಸಿದ್ರು.
ತಮ್ಮಗಾದ ಮೋಸವನ್ನು ವಿರೋಧಿಸಿದ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಸುದೀಪ್ ಸಿಸಿಎಲ್ ಸಮಾರೋಪ ಸಮಾರಂಭದಲ್ಲಿ ಭಾಗವಹಿಸದಿರಲು ನಿಧ್ರಿಸಿದರು. ಹಾಗಾಗಿಯೇ ಕರ್ನಾಟಕ ಬುಲ್ಡೋಜರ್ಸ್ ತಂಡ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಹೋಗಲೇ ಇಲ್ಲ.
ಇದೆಲ್ಲಾ ಓದಿದ ಮೇಲೆಯೂ ಸಹನೆಗೆ ಹೆಸರಾದ ಕನ್ನಡಿಗನಂತೆ ತಮಿಳರನ್ನು ಪ್ರೀತಿಸಿ, ನಿಮ್ಮ ಭಾಷೆಯನ್ನ ಪಕ್ಕಕ್ಕಿರಿಸಿ ತಮಿಳು ಮಾತನಾಡಿ, ತಮಿಳು ಸಿನಿಮಾ ನೋಡಿ ಅವರನ್ನು ಹರಸಿ. ಹೀಗೆ ಮಾಡಿದ್ರೆ ಇತಿಹಾಸದಲ್ಲಿ ನಿಮ್ಮ ಬಗ್ಗೆ ಮತ್ತೇ ಮತ್ತೇ ಸಹನಾಮೂರ್ತಿಗಳು ಅಂತ ಬರೆದೇ ಬರೆಯುತ್ತಾರೆ. ಇನ್ನೊಂದು ಮಾತು ಈ ಲೇಖನ ಓದಿ ಐದಾರು ದಿನಗಳ ವರೆಗೆ ಮಾತ್ರ ನಿಮ್ಮ ಸ್ವಾಭಿಮಾನ ಹಿಟ್ಕೊಂಡು ನಂತ್ರ ಮರೆತು ಹೋಗಿ. ಭಾಷೆ,ನಾಡು ತಾಯಿಗಿಂತ ದೊಡ್ಡದು. ಆಕೆಗೆ ಅನ್ಯಾಯವಾದರೇ ಜೀವವಿರುವವರೆಗೆ ಆ ಕೋಪ ಉಳಿದಿರುತ್ತದೆಯಂತೆ.
ಜೈ ಕರ್ನಾಟಕ, ಹೀಗೆ ಹೇಳ್ಬೇಕಂತಲ್ಲ, ಅದ್ಕೆ. ಥ್ಯಾಂಕ್ಸ್. ಸುದೀಪ್ ಮತ್ತೊಮ್ಮೆ ನಾವೇ ಗೆಲ್ಲೋದು. ಆಲ್ ದಿ ಬೆಸ್ಟ್ ಪರ್ ನೆಕ್ಸ್ಟ್ ಮ್ಯಾಚ್
ಚಿತ್ರಕೃಪೆ: ಅಂತರ್ಜಾಲ. ಚಿತ್ರದಲ್ಲಿರುವ ಮಹಾನುಭಾವನೇ ವಿಕ್ರಾಂತ್!
Comments
ಉ: ಸಿಸಿಎಲ್ ಫೈನಲ್ನಲ್ಲಿ ತಮಿಳರೆಂಬ ಮಹಾ ವಿಕೃತರು
In reply to ಉ: ಸಿಸಿಎಲ್ ಫೈನಲ್ನಲ್ಲಿ ತಮಿಳರೆಂಬ ಮಹಾ ವಿಕೃತರು by Shreekar
ಉ: ಸಿಸಿಎಲ್ ಫೈನಲ್ನಲ್ಲಿ ತಮಿಳರೆಂಬ ಮಹಾ ವಿಕೃತರು