ಕವಿತೆ
ಕವನ
ನನಗರಿವಿಲ್ಲದೆಯೇ
ನಾನು
ನನ್ನದೆ
ಕಲ್ಪನೆಗಳೊಂದಿಗೆ
ಹಾದರಕ್ಕಿಳಿಯುತ್ತೇನೆ
ಹಾಗೆ-ಹೀಗೆ
ಅಲ್ಲಿ-ಇಲ್ಲಿ
ನಿಲುಕಿದ
ಅಕ್ಷರಗಳು
ನನ್ನಿಷ್ಟದಂತೆಯೇ
ಸಿಲುಕಿ-ನರಳಿ
ಸುಖಿಸುತ್ತವೆ,
ಇಟ್ಟ
ಹಣದ
ಥೈಲಿಯ
ಮುಂದೆ
ಮಾತಾಡದೇ
ಕರಗುತ್ತವೆ:
ಜಗತ್ತು
ಈ
ಹಾಡುಗಳಿಗೆ
ಸಾವಿಲ್ಲವೆಂದು
ಹೊಗಳುತ್ತಿದೆ..........
++++++++++++++++++++++++++
Comments
ಉ: ಕವಿತೆ
In reply to ಉ: ಕವಿತೆ by ಭಾಗ್ವತ
ಉ: ಕವಿತೆ