ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 10

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 10

ಪೂಜಾ ರೂಮಿಂದ ಹೋದ ಮೇಲೆ ಪಾವನಿಗೆ ಕಾಲ್ ಮಾಡಿ ಒಂದರ್ಧ ಘಂಟೆ ಮಾತನಾಡಿ ಕೊನೆಯಲ್ಲಿ ಪಾವಿ ನಿನ್ನ ಹುಟ್ಟಿದ ಹಬ್ಬ ಯಾವಾಗ ಎಂದೆ. ಯಾಕೋ ಏನು ಗಿಫ್ಟ್ ಕೊಡ್ತ್ಯ. ನೀನು ಗಿಫ್ಟ್ ಕೊಡ್ತೀನಿ ಅಂದ್ರೆ ನಾಳೆನೆ ಮಾಡ್ಕೊತೀನಿ ಹೇಳೋ ಹೇಳೋ ಎಂದಳು. ಪಾವಿ ಮೊದಲು ನೀನು ಹೇಳು ಯಾವಾಗ ಅಂತ ಅಂದೆ. ಅದಕ್ಕವಳು ನಿಂಗೆ ಕನ್ನಡ ನಟರಲ್ಲಿ ಯಾರು ಇಷ್ಟ ಎಂದಳು. ನಾನು ಉಪೇಂದ್ರ ಎಂದೆ. ಓಹ್ ವೆರಿ ಗುಡ್. ಅವನು ಹುಟ್ಟಿದ ದಿನಾನೆ ನಾನು ಹುಟ್ಟಿದ್ದು ಅಂದರೆ ಸೆಪ್ಟೆಂಬರ್ ೧೮. ಅಂದರೆ ಇನ್ನ ಒಂದು ತಿಂಗಳು ಇದೆ. ಸರಿ ಪಾವಿ ಇಷ್ಟು ದಿನ ಆಯಿತು ನಿಮ್ಮ ಮನೇಲಿ ಯಾರ್ಯಾರು ಇರೋದು ಅಂತಾನೆ ಹೇಳಿಲ್ವಲ್ಲೇ ನೀನು ಎಂದೆ. ನೀನು ಕೇಳಿಲ್ಲ ನಾನು ಹೇಳಿಲ್ಲ, ನಮ್ಮನೇಲಿ ನಾನು ಅಪ್ಪ, ಅಮ್ಮ ಮತ್ತೆ ಅಜ್ಜಿ ಅಂದ್ರೆ ಅಪ್ಪನ ಅಮ್ಮ ಇಷ್ಟು ಜನ ಇದೀವಿ ಎಂದಳು. ಅದು ಸರಿ ಕಣೋ ನನ್ನ ಹುಟ್ಟಿದ ದಿನ ಯಾಕೆ ಕೇಳಿದೆ ನೀನು ಎಂದಳು. ನಿನಗೊಂದು ಸರ್ಪ್ರೈಸ್ ಕಾದಿದೆ ಅವತ್ತು. ಈಗ ಮಲ್ಕೋ ನಾಳೆ ಮಾತಾಡೋಣ ಗುಡ್ ನೈಟ್ ಎಂದು ಹೇಳಿ ಮಲಗಿದೆ. ಸಂಜೆಯ ಆ ಮಧುರ ಗುಂಗಿನಲ್ಲಿ ಒಳ್ಳೆ ನಿದ್ದೆ ಹತ್ತಿತು.

ಅದುವರೆಗೂ ಮುಖತಃ ಭೇಟಿ ಆಗಿರದಿದ್ದ ನಾವು ಅಂದಿನಿಂದ ವಾರಕ್ಕೆರಡು ಬಾರಿ ಒಮ್ಮೊಮ್ಮೆ ವಾರಕ್ಕೆ ಮೂರು ಬಾರಿ ಭೇಟಿಯಾಗುತ್ತಿದ್ದೆವು. ಅವಾಗವಾಗ ಕಾಫಿ ಡೇ, ಅವಾಗವಾಗ ಸಿನಿಮಾ ಹೀಗೆ ನಡೆಯುತ್ತಿತ್ತು. ಆದರೆ ಒಮ್ಮೆಯೂ ಅವಳಾಗಲಿ ನಾನಾಗಲಿ ಪ್ರೀತಿ ಪ್ರೇಮದ ಬಗ್ಗೆ ಮಾತಾಡಲಿಲ್ಲ. ನಾನು ಅವರ ಅಪ್ಪ ಅಮ್ಮನ ಸ್ವಭಾವ ಹೇಗೆಂದು ಕೇಳಿದ್ದಕ್ಕೆ ಅಪ್ಪ ಸ್ವಲ್ಪ ಮುಂಗೋಪಿ ಆದರೆ ತುಂಬಾ ಒಳ್ಳೆಯ ಮನುಷ್ಯ. ಅಮ್ಮ ಅಂತೂ ನನ್ನ ಸ್ನೇಹಿತೆ ಇದ್ದ ಹಾಗೆ ನಾನು ಏನು ಹೇಳಿದರೂ ಓಕೆ ಎನ್ನುತ್ತಾಳೆ ಎಂದಿದ್ದಳು. ಹಾಗಿದ್ದಲ್ಲಿ ಅವಳ ಮನೆಯವರನ್ನು ಒಪ್ಪಿಸುವುದು ಕಷ್ಟವಿಲ್ಲ, ನಮ್ಮ ಮನೆಯಲ್ಲಿ ಅಪ್ಪನ ತೊಂದರೆ ಇಲ್ಲ ಆದರೆ ಅಮ್ಮನನ್ನು ಒಪ್ಪಿಸುವುದೇ ದೊಡ್ಡ ತಲೆ ನೋವು. ಎಲ್ಲಕ್ಕಿಂತ ಮೊದಲು ಪಾವನಿ ಒಪ್ಪಬೇಕು. ಇನ್ನೇನು ಹತ್ತು ದಿನದಲ್ಲಿ ಅವಳ ಹುಟ್ಟಿದ ಹಬ್ಬ ಆ ದಿನವೇ ಅವಳಿಗೆ ನನ್ನ ಮನಸಿನಲ್ಲಿ ಇರುವುದನ್ನು ತಿಳಿಸಿ ಬಿಡುತ್ತೇನೆ. ಆದದ್ದು ಆಗಲಿ

ಸೆಪ್ಟೆಂಬರ್ ೧೮, ಅಂದು ಶನಿವಾರ ಆದ್ದರಿಂದ ಆಫೀಸಿಗೆ ರಜೆ ಹಾಕುವ ತಲೆ ನೋವಿರಲಿಲ್ಲ. ಶನಿವಾರ ಯಾವುದಾದರೂ ಊರಿಗೆ ಹೋಗುವುದೋ ಅಥವಾ ಏನಾದರೂ ಸಮಾರಂಭಗಳಿದ್ದರೆ ಮಾತ್ರ ಬೇಗ ಎಳುತ್ತಿದ್ದದ್ದು ಇಲ್ಲವಾದರೆ ಹತ್ತು ಗಂಟೆ ಕಡಿಮೆ ಏಳುತ್ತಿರಲಿಲ್ಲ. ಅಂದು ಆರು ಗಂಟೆಗೆಲ್ಲ ಎದ್ದು ಜಿಮ್ ಮುಗಿಸಿಕೊಂಡು ಮನೆಗೆ ಬಂದಾಗ ಅಮ್ಮ ನನ್ನನ್ನು ಮೇಲಿನಿಂದ ಕೆಳಕ್ಕೆ ನೋಡಿ ಒಮ್ಮೆ ಆಚೆ ನೋಡಿ ಸೂರ್ಯ ಪೂರ್ವದಲ್ಲೇ ಹುಟ್ಟಿದ್ದಾನಲ್ಲ ಏನಪ್ಪಾ ವಿಶೇಷ ಇವತ್ತು ಎಂದರು. ಅಯ್ಯೋ ಅದೇನಿಲ್ಲಮ್ಮ ಇವತ್ತು ಆಫೀಸಿನಲ್ಲಿ ಸ್ವಲ್ಪ ಕೆಲಸ ಇದೆ ಅದಕ್ಕೆ ಹೋಗಬೇಕು ಎಂದು ಅಮ್ಮನ ಮುಖವನ್ನು ನೋಡದೆ ಹೇಳಿ ಸೀದಾ ಸ್ನಾನಕ್ಕೆ ಹೊರಟೆ. ನಾನು ಪಾವನಿಗೆ ಹತ್ತೂವರೆಗೆ ಕಾವೇರಿ ಥಿಯೇಟರ್ ಬಳಿ ಬರಲು ಹೇಳಿದ್ದೆ.  ಸ್ನಾನ ಮುಗಿಸಿ ದೇವರ ಮನೆಗೆ ಹೋಗಿ ನಮಸ್ಕಾರ ಹಾಕಿ ದೀಪ ಹಚ್ಚಿ ದೇವರೇ ಇವತ್ತು ಪಾವನಿಗೆ ನನ್ನ ಮನಸಿನ ವಿಷಯ ಹೇಳುತ್ತಿದ್ದೇನೆ ದಯವಿಟ್ಟು ಅವಳು ಒಪ್ಪುವ ಹಾಗೆ ಮಾಡಪ್ಪ ಎಂದು ಕೇಳಿಕೊಂಡು ಆಚೆ ಬಂದು ಟೈಮ್ ನೋಡಿದೆ.

ಇನ್ನೂ ಒಂಭತ್ತು ಗಂಟೆ ತೋರಿಸುತ್ತಿತ್ತು. ಅಬ್ಬ ಇನ್ನು ಸಮಯವಿದೆ ಹತ್ತಕ್ಕೆ ಇಲ್ಲಿ ಬಿಟ್ಟರೂ ಸಾಕು ಎಂದುಕೊಂಡು ಟಿ.ವಿ ನೋಡಲು ಕುಳಿತೆ. ಅಷ್ಟರಲ್ಲಿ ಅಮ್ಮ ತಿಂಡಿ ತಂದುಕೊಟ್ಟರು. ತಿಂಡಿ ತಿಂದು ರೂಮಿಗೆ ಹೋಗಿ ಇದ್ದದ್ದರಲ್ಲೇ ಹೊಸದಾಗಿದ್ದ ಬಟ್ಟೆ ಹಾಕಿಕೊಂಡು ಆಚೆ ಬರುವಾಗ ಪೂಜಾ ಸಿಕ್ಕಳು. ಏನಪ್ಪಾ ಹೀರೋ ಏನು ವಿಶೇಷ ಇಷ್ಟೆಲ್ಲಾ ರೆಡಿ ಆಗಿದ್ದೀರಾ ಅಂದರೆ ಏನೋ ಇದೆ, ಏನೋ ಅದು ಎಂದಳು. ಲೇ ಇವತ್ತು ಪಾವಿ ಬರ್ತ್ ಡೇ ಕಣೆ. ಹಾಗೆ ಇವತ್ತು ಅವಳಿಗೆ ಪ್ರಪೋಸ್ ಮಾಡ್ತಾ ಇದ್ದೀನಿ ಕಣೆ. ಎಲ್ಲ ಒಳ್ಳೆದಾಗಲಿ ಅಂತ ದೇವರನ್ನ ಬೇಡಿಕೋ. ಸಾಯಂಕಾಲ ಬರ್ತಾ ಚಾಕೋಲೆಟ್ ತರ್ತೀನಿ. ಲೋ ಪಾವನಿ ಹತ್ರ ಹೋದಾಗ ಫೋನ್ ಮಾಡು ನಾನೂ ವಿಶ್ ಮಾಡ್ತೀನಿ ಎಂದು ಆಚೆ ಬಂದು ಟೈಮ್ ನೋಡಿದರೆ ಇನ್ನೂ ಒಂಭತ್ತು ಗಂಟೆ ತೋರಿಸುತ್ತಿದೆ. ಏನೋ ಎಡವಟ್ಟಾಗಿದೆ ಎಂದು ನೋಡಿದರೆ ಗಡಿಯಾರ ನಿಂತು ಹೋಗಿತ್ತು. ತಕ್ಷಣ ಮೊಬೈಲ್ ತೆಗೆದು ನೋಡಿದರೆ ೧೦.೨೦ ತೋರಿಸುತ್ತಿತ್ತು. ಛೆ ಎಂದುಕೊಂಡು ಚಕಚಕ ಬೈಕ್ ಏರಿಕೊಂಡು ಹೊರಟೆ.

ಸ್ವಲ್ಪ ದೂರ ಬರುವಷ್ಟರಲ್ಲಿ ಹಿಂದಿನ ಟೈರ್ ಟಪ್ ಎಂದು ಸದ್ದಾಯಿತು. ಏನೆಂದು ನೋಡಿದರೆ ಪಂಚರ್ ಆಗಿತ್ತು. ಥೂ ಇವಾಗಲೇ ಪಂಚರ್ ಆಗಬೇಕ ಎಂದು ತಳ್ಳಿಕೊಂಡು ಪಂಚರ್ ಹಾಕುವ ಅಂಗಡಿ ಹುಡುಕುತ್ತ ಬರುತ್ತಿದ್ದೆ. ಅಷ್ಟರಲ್ಲಿ ಪಾವನಿ ಕರೆ ಮಾಡಿದಳು. ಹಲೋ ಎಲ್ಲೋ ಇದ್ಯಾ ಬರ್ತ್ ಡೇ ಗರ್ಲ್ ನ ಹೀಗೆಲ್ಲ ಕಾಯಿಸ್ತ ಇದ್ಯಾ ಎಂದಳು. ಪಾವಿ ಸಾರೀ ಕಣೆ ಗಾಡಿ ಪಂಚರ್ ಆಗಿದೆ ಇನ್ನೊಂದು ಹತ್ತು ನಿಮಿಷದಲ್ಲಿ ಅಲ್ಲಿರುತ್ತೇನೆ ಎಂದು ಅಂಗಡಿ ಹುಡುಕುತ್ತ ಹೊರಟೆ. ಅರ್ಧ ಫರ್ಲಾಂಗ್ ಹೋದ ಮೇಲೆ ಅಂಗಡಿ ಸಿಕ್ಕಿತು. ಪಂಚರ್ ಹಾಕಿಸಿಕೊಂಡು ಶರವೇಗದಲ್ಲಿ ಗಾಡಿ ಓಡಿಸಿಕೊಂಡು ಹೋಗುತ್ತಿದ್ದೆ. ಮಜೆಸ್ಟಿಕ್ ಬಳಿ ಬಂದಿದ್ದೆ. ಅಲ್ಲಿ ನೋಡಿದರೆ ಟ್ರಾಫಿಕ್ ಜಾಮ್ ಆಗಿತ್ತು. ಸುಮಾರು ಅರ್ಧ ಕಿಲೋಮೀಟರ್ ಜಾಮ್ ಇತ್ತು. ಪಕ್ಕದ ಗಾಡಿಯವನನ್ನು ಏನೆಂದು ಕೇಳಿದ್ದಕ್ಕೆ. ಟಿಬೆಟಿಯನ್ನರು ತಮಗೆ ಸಮಾನವಾದ ಹಕ್ಕು ಕೊಡುತ್ತಿಲ್ಲವೆಂದು ಮೆರವಣಿಗೆ ಹೊರಟಿದ್ದಾರೆ. ನನಗೆ ಮೈ ಎಲ್ಲಾ ಉರಿಯುತ್ತಿತ್ತು. ಸೆಪ್ಟೆಂಬರ್ ತಿಂಗಳಾದ್ದರಿಂದ ಆಚೆ ಅಷ್ಟಾಗಿ ಬಿಸಿಲಿರಲಿಲ್ಲ. ಇಲ್ಲವಾಗಿದ್ದರೆ ಆ ಬಿಸಿಲಿನಲ್ಲಿ ಬೆಂದು ಹೋಗುತ್ತಿದ್ದೆ. ಛೆ ಏನಪ್ಪಾ ಮಾಡುವುದು ಎಂದು ಮೊಬೈಲ್ ತೆಗೆದು ನೋಡಿದರೆ ಟೈಮ್ ಹನ್ನೊಂದು ತೋರಿಸುತ್ತಿತ್ತು.

ಮತ್ತೆ ಪಾವನಿ ಫೋನ್ ಮಾಡಿದಳು. ಪಾವಿ I am extremely sorry ಕಣೆ. ಇಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಇದೆ ಕಣೆ ಇನ್ನೊಂದು ಅರ್ಧ ಗಂಟೆಯಲ್ಲಿ ಅಲ್ಲಿರುತ್ತೇನೆ ಪ್ಲೀಸ್ ಕಣೆ ಹೋಗಬೇಡ. ಭಗತ್ ಸುಮಾರು ೧ ಗಂಟೆಯಿಂದ ಇಲ್ಲಿ ಒಬ್ಬಳೇ ನಿಂತಿದ್ದೇನೆ. ಎಷ್ಟು ಮುಜುಗರ ಆಗ್ತಾ ಇದೆ ಗೊತ್ತ. ಪ್ಲೀಸ್ ಬೇಗ ಬಾ ಇಲ್ಲ ಅಂದರೆ ನಾನು ಮನೆಗೆ ಹೊರಡುತ್ತೇನೆ ಎಂದಳು. ಪ್ಲೀಸ್ ಕಣೋ ಅರ್ಥ ಮಾಡ್ಕೋ ಎಂದು ದೈನ್ಯವಾಗಿ ಅಂದಳು. ನನಗೆ ಅವಳು ಹಾಗೆ ಮಾತಾಡಿದ್ದು ಕೇಳಿ ನನ್ನ ಮನಸು ಚುರಕ್ ಎಂದಿತು. ಥೂ ಇವತ್ತು ಯಾಕೋ ಟೈಮೆ ಸರಿ ಇಲ್ಲ ಎಂದುಕೊಂಡು "ಸ್ವೀಟ್ ಹಾರ್ಟ್" ನೀನೇನು ಯೋಚನೆ ಮಾಡಬೇಡ ಆದಷ್ಟು ಬೇಗ ಬರುತ್ತೇನೆ ಸಾರೀ ಎಂದು ಕಟ್ ಮಾಡಿದೆ. ಕಟ್ ಮಾಡಿದ ಮೇಲೆ ಒಂದು ಕ್ಷಣ ಯೋಚಿಸಿದೆ ನಾನು ಅವಳಿಗೆ ಸ್ವೀಟ್ ಹಾರ್ಟ್ ಎಂದು ಸಂಭೋಧಿಸಿದೆ ಅದು ಹೇಗೆ ನನ್ನ ಅರಿವಿಲ್ಲದೆ ನನ್ನ ಬಾಯಿಂದ ಆಚೆ ಬಂತು ಎಂದು ಆಲೋಚಿಸುವಷ್ಟರಲ್ಲಿ ರಸ್ತೆ ತೆರವಾಯಿತು. ದೇವರೇ ಇನ್ನೇನು ಅವಾಂತರ ಆಗದೆ ಇರುವ ಹಾಗೆ ನೋಡಿಕೋ ಎಂದು ಗಾಡಿಯನ್ನು ವೇಗವಾಗಿ ನುಗ್ಗಿಸಿದೆ.

ಸ್ವೀಟ್ ಹಾರ್ಟ್.....

Rating
No votes yet