ಕನಸಲ್ಲಿ ನಾ ಕಂಡೆನ್ನ ಸಾವು

ಕನಸಲ್ಲಿ ನಾ ಕಂಡೆನ್ನ ಸಾವು

ಚಿತ್ರ

ರಾತ್ರಿ 12.೦೦ ಗಂಟೆ ಹೆಂಡ್ತಿ ಮಕ್ಳನ್ನ ನೋಡ್ಕೊಂಡು ಬರ್ತೀನಿ ಗೆಳೆಯರಿಗೆ ವಿದಾಯ ಹೇಳಿ ರೂಂನಿಂದ ಹೊರಟೆ.
ದುರದೃಷ್ಟ ಬೆನ್ಹತ್ತಿದೆ ಎಂಬಂತೆ ಹೋಗೋ ದಾರೀಲಿ ಬೆಕ್ಕು ಅಡ್ಡ ಬಂತು ಛೆ! ಏನಿದು ಅಪಶಕುನ ಅನ್ಕೊಂಡು ಅಲ್ಲೇ ರಸ್ತೆ ಬದಿಲಿ ಕ್ಷಣ ನಿಂತು ನಂತರ 1ಕಿ ಮೀ ಕ್ರಮಿಸಿ ಯೆಶವಂತಪುರದ ರೈಲ್ವೆ ಸ್ಟೇಷನ್ ತಲುಪಿ ಟಿಕೆಟ್ ಪಡೆದು ಟ್ರೈನ್ ಹತ್ತಿ ಕುಳಿತೆ ಆದ್ರೆ ಮನದಲ್ಲೇನೋ ಆತಂಕದ ಛಾಯೆ, ಅವ್ಯಕ್ತ ಭಯ, ಏನಾಗೊದಿಲ್ಲವೆಂದು ನನ್ನ ನಾನೇ ಸಂತ್ಯೆಸಿಕೊಂಡು ಕಿಟಕಿ ಕಡೆ ತಲೆ ಹಾಕಿ ಕಣ್ಮುಚಿದ್ದೇನೆ ಸ್ವಲ್ಪ ಹೊತ್ತಿನಲ್ಲೇ ಇದ್ದಕಿದ್ದ ಹಾಗೆ ಧಬಾರ್ ಅಂತ ಸದ್ದು "ಥೂ.............? ಒಳ್ಳೆ ನಿದ್ದೇಲಿ ಇದೇನಿದು ಶಬ್ದ ಅಂತ ಕಣ್ತೆರೆಯುತ್ತ ಮೇಲೆಳುವಷ್ಟರಲಿ ಯಾರೋ ಬಲವಾಗಿ ಹೊಡೆದಂತೆ ಭಾಸವಾಗಿ ಕಣ್ ಮಂಜಾಗಿ ಬಿದ್ದದಷ್ಟೇ ನೆನಪು!  ಕಣ್ತೆರೆದು ನೋಡುವಷ್ಟ್ರಲಿ ನಾನು ರೈಲಿನಿಂದ ೧ ಫರ್ಲಾಂಗ್ ದೂರ ಬಿದ್ದಿದೀನಿ ಮೇಲೆ ಅರೆರೆ! ಏನಪ್ಪಾ ಇದು ವಿಪರ್ಯಾಸ ಅಂತ ಅಂದುಕೊಂಡು ಏಳಕ್ಕೆ ಕೈ ಊರ್ತೀನಿ ಆಗ್ತಿಲ್ಲ ಹೋಗ್ಲಿ ಅನ್ಕೊಂಡ್ ಎಡಗೈ ಊರಿ ಮೇಲೆದ್ದು ನೋಡ್ತೀನಿ ಬಲಗೈ ಮುರಿದಿದೆ ತುಂಬ ನೋವಾಗ್ತಿದೆ ಇದರೊಟ್ಟಿಗೆ ಕಣ್ಣೀರು ಬರ್ತಿದೆ ಛೆ! ಇದೇನು ಅಳ್ತಾಯಿದ್ದಿನಲ್ಲ ಏನಾಗ್ತಿದೆ ನಂಗೆ ಅನ್ಕೊತ ಕಣ್ಣಿರು ಒರೆಸ್ಕೊಂಡು ನೋಡ್ತಿನದು ಕಣ್ಣೀರಲ್ಲ ರಕ್ತ ! ಒಹ್ ! ಏನಿದು ಹೀಗಾಯ್ತು ಅಂತ ರೈಲ್ಕಡೆ ನೋಡ್ತೀನಿ ಅಲ್ಲಿ ಬೋಗಿ ಹತ್ತಿ ಉರಿತಾ ಇದೆ ಅದೊಂದೇ ಬೆಳಕು ಆ ಪ್ರದೇಶದಲ್ಲಿ, ಈ ಕಡೆ ನಂಜೊತೆ ಬರ್ತಿದ್ದೋರಲ್ಲೋಬ್ಬ್ರು ಕಾಣ್ತಿಲ್ಲ ಸುತ್ತಲು ನೀರವ ಮೌನ ಆಗ ಸಿಡಿದ ಶಬ್ದಕ್ಕಿಂತ ನನಗೀ ನಿಶ್ಯಬ್ಧ ಭಯ ಹುಟ್ಟಿಸ್ತಿದೆ. ಹೆಜ್ಜೆ ಮುಂದಿಡಲು ಏನು ಕಾಣುತ್ತಿಲ್ಲ (ಧೈರ್ಯವಾಗುತ್ತಿಲ್ಲ) ಸ್ವಲ್ಪ ಹೊತ್ತು ಅಲ್ಲೇ ಇದ್ದು ಪಕ್ಕಕೆ ಬಂದೆ ಅಲ್ಲಿ ಸ್ವಲ್ಪ ಮಂದ ಬೆಳಕು ಕಾಣುತಿತ್ತು ಸರಿ ಹೇಗೋ ಬದುಕಿದೆಯ ಬಡ ಜೀವವೇ ಅನ್ನ್ಕೊಂಡು ಅಲ್ಲಿಂದ ಸ್ವಲ್ಪ ಮುಂದೆಬಂದೆ ಈ ಸಂಧಿಗ್ದ ಪರಿಸ್ತಿತಿಯಲ್ಲೂ ಯಾರೋ ಕ್ಷೀಣ ದ್ವನಿಯಲಿ ಕೂಗಿದಂತಾಯ್ತು. ಹಾಗೆ ಕೂಗನ್ನರಸುತ್ತ ಅವರ ಬಳಿಗೆ ಹೋದೆ ಅಲ್ಲಿ ಹಳಿಯ ಮೇಲೆ ಮಹಿಳೆ ಬಿದ್ದಿದ್ದಾಳೆ ಅವಳ ಪಕ್ಕ್ಕದಲಿ ಅವಳ ಹಸುಗೂಸು ಅಳುತಲಿದೆ ದೇವರ ದಯೆ ಎಂಬಂತೆ ಪಾಪುಗೆ ಏನು ಆಗಿಲ್ಲ ಆದ್ರೆ ಈ ತಾಯಿಯ ಸ್ತಿತಿ ಗಂಭೀರವಾಗಿದೆ..ಮನದಲ್ಲೇ ಭಗವಂತನ ಹಳಿಯುತ್ತಾ ಅ ಮಗುವತ್ತ ಧಾವಿಸಿದಷ್ಟೇ ಕ್ಷಣಮಾತ್ರದಲಿ ನನಗರಿವಿಲ್ಲದಂತೆ land mine ಮೇಲೆ ಕಾಲಿಟಿದ್ದೇನೆ ಅದು ಢಂ ಅಂತ ಸಿದಿದಾಕ್ಷಣ ಗಾಳಿಯಲ್ಲಿ ತೇಲಿದಂತ ಅನುಭವ ! ಸುಮಾರು ಹೊತ್ತಾಗಿದೆ ನನ್ನ ಸನಿಹದಲ್ಲಿ ಯಾರೋ ಮಾತಾಡ್ತಿರುವುದು ಕೇಳ್ತಿದೆ ಅವ್ರ ಸಹಾಯ ಪಡೆಯೋಕೆ ಕೂಗ್ತಿದೀನಿ ಆದ್ರೆ ಸ್ವರ ಬರ್ತಿಲ್ಲ ಹೋಗಲಿ ಅವರನೇ ಈ ಕಡೆ ಕರಿಯೋಣ ಅಂತ ಕೈ ಮೇಲೆತ್ತುತಿದ್ದೇನೆ ಆಗುತ್ತಿಲ್ಲ ಕೈಗೆ ಏನಾಗಿದೆಯೋ ತಿಳಿಯುತ್ತಿಲ್ಲ, ಹೇಗೋ ತೆವಳುತ್ತಾ ಹಾಗೆ ತುಸು ದೂರ ಸಾಗಿ ನನ್ನಿಂದಾಗದೆಂದು ಸುಮ್ಮನಾದೆ  ಬಳಿಕ  ಬದಿಗೆ ತೆವಳಿ ಬೆಳಕಿರುವೆಡೆಗೆ ಬಂದು ಬಿದ್ದೆ ಬೆಳಕಲ್ಲಿ ಏನಾಗಿದೆಯೆಂದು ನೋಡಿದ್ರೆ ಬಲಗೈ ಬದಿಯಲ್ಲಿ ತೇಲಾಡುತ್ತಿದೆ ಕಾಲ ಮೂಳೆ ಮುರಿದಂತಿದೆ ಅಲ್ಲಾಡಿಸೋಕಾಗ್ತಿಲ್ಲ ಸಹಾಯಕ್ಕಾಗಿ ಹಾತೊರೆಯುತ್ತಿದ್ದಿನಿ ಬಂಡೆ ಇರುವ ಕಾರಣ ನಾ ಯಾರಿಗೂ ಕಾಣುತಿಲ್ಲ. ಹಾಗೆ ಒಂದು ಪಕ್ಕಕೆ ವಾಲಿಕೊಂಡೆ ಎದೆಯ ಚಕ್ಕಳ ಮುರಿದುಹೊದಂತ ಅನುಭವ. ನನಗನಿಸಿತು ನಾನಿನ್ನುಳಿವುದು ಕೆಲವೇ ಕ್ಷಣಗಳೆಂದು....ಸಾವ ಹತ್ತಿರ ಇರುವೆಂಬುದನರಿತ ಕ್ಷಣಕೆ ಮಕ್ಕಳು ಮನೆಯವರು ಆಪ್ತರೆಲ್ಲ ಕಣ್ಮುಂದೆ ಸುಳಿದರು, ಯಾರಿಗೂ ಹೇಳದೆ ಹೋಗುತ್ತಿರುವೆನಲ್ಲ ಎಂದು ಆಳು ಒತ್ತರಿಸಿಕೊಂಡು ಬಂತು ಕಂಬನಿ ಹೊತ್ತ ಕಂಗಳಿಂದ ಸುತ್ತಲೊಮ್ಮೆ ಕಣ್ಹಾಯಿಸಿದೆ, ಕೂಗುವ ಯತ್ನ ಇಲ್ಲ ಆದ್ರೆ ನನ್ನ ಸೂಕ್ಷ್ಮ ಸಂವೇದನೆಗೆ ನನ್ನ ಯಾರೋ ನನ್ನ ಬಳಿ ಬರುತಿರುವಂತೆ ಬಾಸವಾಗುತ್ತಿದೆ ಕರ್ಣ ಪಟಲಗಳಿಗೆ ಯಾರೋ ಮಾತಾಡುತ್ತಿರುವಂತೆ ಕೇಳುತಿದೆ ಅವರೇನು ಮಾತಾಡುತ್ತಿರುವರೋ ಎಂದು ಆಲಿಸಲೆತ್ನಿಸಿದೆ ಆಗ ಅವ್ರು ಹೇಳ್ತಿದ್ ಕೇಳಸ್ತು ಪಾಪ ಕಣೋ ಚಿಕ್ಕ ವಯಸ್ಸು Land mine ಮೇಲೆ ಕಾಲಿಟ್ಟು ಬ್ಲಾಸ್ಟ್ ಆಗ್ಬಿಟ್ಟ ಎರಡು ಕಾಲು ತುಂಡಾಗಿದೆ ಸೂ........ಮಕ್ಕಳು ಮಾಡಿದ ಕೆಲ್ಸಕ್ಕೆ ಒಂದ್ ಮಗು ನಾ ಬಿಟ್ಟು ಬೋಗಿಲಿ ಇದ್ದೋರೆಲ್ಲ ಸತ್ಹೊಗಿದ್ದಾರೆ.ಈ ನೋವುಗಳ ಮದ್ಯ ಕಂದಮ್ಮ ಬದುಕುಳಿಯಿತಲ್ಲ ಎಂಬ ಸಣ್ಣ ಸಂತಸವಾಯಿತು, ಹಾಗೆ ಪ್ರಜ್ಞೆ ತಪ್ಪಿದ ನಾನು ಮತ್ತೆ ಕಣ್ತೆರೆವಷ್ಟರಲ್ಲಿ Hospital ನಲ್ಲಿ ಇದ್ದೆ ಎಲ್ಲೊ ಮಾತದುತ್ತಿರುವ ಹಾಗೆ ಕೇಳಿಸಿ ಕಿವಿಯನ್ನ ವಾಲಿಸಿದೆ stretchers ತಳ್ಳುತಿದ್ದ ಇಬ್ಬರು ಹೇಳ್ಕೊತಿದ್ರು ಈ ಹುಡ್ಗನ್ನ ನೋಡು ಚಿಕ್ಕ ವಯಸ್ಸುಇವ್ನು ಕೂಡ ಸ್ಥಿತಿಯಲ್ಲಿದ್ದಾನೆ ಪಾಪ. ;( ಈ ಮಾತು ಕಿವಿ ಸೋಕಿದಾಗ ವಿಚಲಿತನಾಗದೆ ನನ್ನೊಳಗೆ ನಾ ಅಂದುಕೊಂಡೆ ಯಾವತ್ತೋ ಬರಬೇಕಿತ್ತು ನನ್ ಶಾ.......ದ್ದು ಇವತ್ತು ಬಂದ್ಬಿಟ್ಟಿದೆ ಅಷ್ಟೇ! ಮನಸಲ್ಲಿ ಈ ರೀತಿ ಅನ್ನ್ಕೊತ್ತಿದ್ದ ಹಾಗೆ ಮನೆಯವರನ್ನೊಮ್ಮೆ ನೋಡೋಣ ಅನಿಸ್ತು ದೇವರ ದಯೇನೋ ಏನೋ ಎಂಬಂತೆ ಮನೆಗೆ ಸುದ್ದಿ ಮುಟ್ಟಿ ನನ್ನವೆರೆಲ್ಲರು ಬಂದಿದ್ದಾರೆ ನನ್ನ ಸೂಕ್ಷ್ಮ ಸಂವೇದನೆಗೆ ಅವರ ಬರುವು ಗೊತ್ತಾಗುತ್ತಿದೆ. ಹೋಗುವ ಮುನ್ನ ಎಲ್ಲರನೊಮ್ಮೆ ನೋಡೋಣ ಎಂದುಕೊಳ್ಳುತ್ತಿದ್ದ ಹಾಗೆ ತಾಳಲಾರದ ನೋವೊದುಲ್ಪನಿಸಿ ಎಲ್ಲವು ನಿಶ್ಯಬ್ದವೆನಿಸಿತು.  ಸ್ವಲ್ಪ ಹೊತ್ಕಳಿತು ನನ್ನೋವ್ರೆಲ್ಲರು ಸುತ್ತ ನೆರೆದಿದ್ದಾರೆ ನಂಗೆ ಅವ್ರ ಮಾತುಗಳು ಕೇಳಿಸ್ತಾ ಇದೆ ಆದ್ರೆ ಅವ್ರ್ನ ನೋಡೋಕೆ ಕಣ್ ತೆರೆಯಲಾಗ್ತಿಲ್ಲ! ಸುಮಾರು  5.00 ಗಂಟೆಗಳ ಕಾಲ ಈ ಎಲ್ಲಾ ನೋವುಗುಳ್ನ ಅನುಭವಿಸ್ತಿದ್ರು ನನಗೆ ಅಷ್ಟೊಂದು ದುಖ: ಆಗ್ತಿರ್ಲಿಲ್ಲ .. ಆದ್ರೆ  ಯಾವಾಗ ನನ್  ಮಗಳು ವಾಸ್ತವದ ಅರಿವಿಲ್ಲದೆ  ಹರಿಶಪ್ಪ ಲಾಲಿ ಕಂದಮ್ಮ ಅಂತ  ಮೃದುವಾಗಿ ತನ್ನ ಪುಟ್ಟ ಕೈ ಕೆನ್ನೆ  ಮೇಲಿಟ್ಮಾತಾಡಿದ್ಲೋ ಆ ಕ್ಷಣ ಒತ್ತರಿಸಿ ಬಂದ ದು:ಖ ನನ್ನಿಂದ ತಡೆಯಲಾಗಲಿಲ್ಲ. ಇದ್ಹೆಂತ  ಧೌರ್ಭಾಗ್ಯ ನಂದು ಹೆತ್ತ ಮಗಳನ್ನ ಕೊನೆ ಬಾರಿ ನೋದಳಗತಿಲ್ಲ ಎಂದು ನೊಂದುಕೊಳ್ಳುತ್ತಾ ಕಣ್ಣಿರು ಸುರಿಸಿದೆ ಕಣ್ಣಿರು  ಕೆನ್ನೆ  ಮೇಲೆ  ಹರಿದು ಬರ್ತಿದ್ದು  ಗೊತಗ್ತಿತ್ತು. ಕೊನೆಸಲ ಮುಟ್ಟಿ  ಮಾತಾಡೋಣ ಅಂತ ಕೈ ಮೇಲೆತ್ತಲೆತ್ನಿಸಿದೆ ಆಗಲಿಲ್ಲ, ನೋವಿಂದ ಹಾಗೆ ನಿರ್ಲಿಪ್ತವಾಗಿ ಮಲಗಿಬಿಟ್ಟೆ. ಡಾಕ್ಟರ ಬಂದು ದೇಹನ ತಗೊಂಡ್ ಹೋಗಿ ಅಂದ ಅಷ್ಟೊತ್ಗೆ ನನ್ನ ಹೃದಯ ಬಡಿತ ನಿಲ್ತಿತ್ತು ಆದ್ರೆ ಪ್ರಾಣ ಇನ್ನು ಹೋಗಿರಲಿಲ್ಲ.  ಉಳಿದ ೨ ಕ್ಷಣಗಳನ್ನ ಬೇಸರದಲಿ ಕಳೆವುದೆತಕೆ ಅನ್ಕೊಂಡು ಅಲ್ಲೇ ಕವನವ ರಚಿಸಲೆತ್ನಿಸಿದೆ.

"ಸಾವ ದಾರಿಯಲಿ ಒಬ್ಬನೇ ನಡೆದಿರುವೆ ಹೆತ್ತ್ಹೊತ್ತವರು ಬರುತ್ತಿಲ್ಲ
ಒಬ್ಬಂಟಿಯು ನಾನೀಗ  ಮಕ್ಕಳನನಾತನಾಗಿಸಿ ಹೋಗುತಿರುವೆ ಸಾವ ತುದಿಗಾಲಲ್ಲಿ ಕಂದಮ್ಮಗಳ ಬಿಗಿದಪ್ಪಲಾಗಲಿಲ್ಲ
ಬಡಿತವು ನಿಲ್ಲಿತಿಹುದು ಹೇಳಬೇಕೆನಿಸುತಿದೆ ಕೊನೆ ಮಾತೊಂದ ಅದನು ಹೇಳಲಾಗುತ್ತಿಲ್ಲ
ಭಟರ ಹಾದಿಯ ಕಾಯುತಿಹೆ  ಕವನವಾಲೋಚಿಸುವ ಸಮಯವಿಲ್ಲ."

ನನ್ನೊಳಗಿನ ಮಾತುಗಳು ಇದ್ದಕಿದಂತೆ ನಿಂತು ಹೋದವು ಅರೆರೆ ಏನಿದು ಅಚ್ಚರಿ!! ಎಂದುಕೊಂಡು ಕಣ್ಬಿಟ್ಟೆ ಅಷ್ಟೇ, ನನ್ನ ಆಕಾರ ಬದಲಾಗಿತ್ತು ಪಕ್ಕದಲ್ಲೇ ನನ್ನ ದೇಹ ಕಾಣುತಿತ್ತು. ನನ್ನವರೆನಿಸಿದವರು ನನಗೇನು ಆಗಿರೋಲ್ಲ ಎಂದು ಹೊರಗೆ ಚಡಪಡಿಸಿ ಓಡಾಡುತ್ತಿದರು, ಅತ್ತ ನನ್ನ ಹೆಣ್ತಿ ಮಕ್ಕಳು ಕುಳಿತಿದ್ದರು, ನಾ ನನ್ನಲ್ಲೇ ತೀರ್ಮಾನಿಸಿದೆ  ನನ್ನ ಸಾವಿನ ಸುದ್ದಿ ಅವರಿಗೆ ಮುಟ್ಟಿ ಅವರೆದೆಬಡಿತ ನಿಲ್ಲುವುದೆನ್ನಿದ ನೋಡಲಾಗೋದಿಲ್ಲವೆಂದು ತಿರ್ಮಾನದಂತ್ಯದಲ್ಲೇ ಹೊರೆತುಬಿಟ್ಟೆ ಯಾರಿಗೂ ಕಾಣದಂತೆ. "ಬಂದಾಗಲೋಬ್ಬನೆ ಹೊರಟಾಗಲೋಬ್ಬನೆ ಎಂದೆನ್ನೊಳಗೆ ಎಂದುಕೊಂಡು."

Rating
No votes yet