ಮರಣ ಶಾಸನ

ಮರಣ ಶಾಸನ

ಕವನ

 
ಮರಣ ಶಾಸನ

ಹೃದಯದ ಗಾಯ ತೆರೆದಿದ್ದರೂ
ತುಟಿಗಳಿಗೆ ಹೊಲಿಗೆ ಬಿದ್ದಿದೆ
ಕೊನೆಯ ಹಂತ ತಲುಪಿದೆ ಪ್ರೀತಿಯ ಕತೆ
ಆದರೆ ಕೇಳುವವರು ಯಾರು ಪ್ರೇಮಿಯ ವ್ಯಥೆ.
ನಿನಗನಿಸಿದ್ದು ಮಾಡು, ಬಂಧವಿಲ್ಲ,ಬಂಧನವಿಲ್ಲ. ಅರಾಮಾಗಿ ವಿರಮಿಸು ಎನುವೆಯಲ್ಲ
ಎದೆಯು ಬಾಣಲೆಯಾಗಿ ಹೃದಯ ಕುದಿಯುತ್ತಿದೆ,
ಕುದಿಯ ಆವಿಯ ನೆರಳಲ್ಲಿ ವಿರಮಿಸಲೇನು?
ಸಾಯಲೇಬೇಕಿತ್ತೆ??
ಸತ್ತಿತು.
ಹೆಣವಾಗಿ ಹೋಯಿತು ಪ್ರೀತಿ
ತೊಳೆದು,ವಸ್ತ್ರ ತೊಡಿಸಿ ಗೋರಿಯೊಳಗೆ ಜಾರಿಸಲೇಬೇಕು.
ವಸ್ತ್ರ ಶುಭ್ರವಾಗಿರಲೇಬೇಕೆ?
ಅದರ ಗೋಳು ಕೇಳುವವರು ಯಾರು?