ದ್ವಾದಶ ಜ್ಯೋತಿರ್ಲಿಂಗಗಳು & ಪಂಚಮಹಾಭೂತಾತ್ಮಕ ಲಿಂಗಗಳು

ದ್ವಾದಶ ಜ್ಯೋತಿರ್ಲಿಂಗಗಳು & ಪಂಚಮಹಾಭೂತಾತ್ಮಕ ಲಿಂಗಗಳು

ಚಿತ್ರ

           ಭಾರತದ ಸಾಂಸ್ಕøತಿಯ ಏಕತೆಯನ್ನು ಕಾಪಾಡುವಲ್ಲಿ ಈಶ್ವರ ತತ್ವ ಮಹತ್ವದ ಸ್ಥಾನವನ್ನು ಪಡೆದಿದೆ. ಅಮೃತೇಶ್ವರ, ಅಮರನಾಥ, ಓಂಕಾರೇಶ್ವರ, ಏಕಾಂಬರ, ಏಕಾಂಬ್ರನಾಥ, ಧಾರೇಶ್ವರ, ಬ್ರಹ್ಮೇಶ್ವರ, ವಾಕೇಶ್ವರ, ಕಪಿಲೇಶ್ವರ, ಶಿಶಿರೇಶ್ವರ, ಚಂದ್ರಮೌಳೀಶ್ವರ, ಭೀಮೇಶ್ವರ, ತ್ರಿಲೋಕೇಶ್ವರ, ಜಂಬುಕೇಶ್ವರ, ಸಾರಂಗನಾಥ ಮುಂತಾದ ಹೆಸರಿನಿಂದ ಶಿವನನ್ನು ಭಾರತೀಯರು ಪೂಜಿಸುತ್ತಾ ಬಂದಿದ್ದಾರೆ. ದೇಶದ ಉದ್ದಗಲಕ್ಕೂ ಹರಡಿರುವ ಜ್ಯೋತಿರ್ಲಿಂಗಗಳು ಯಾತ್ರಾ ಸ್ಥಳಗಳಾಗಿವೆ. ಪುರಾಣ, ರಾಮಾಯಣ, ಮಹಾಭಾರತ, ಪ್ರಾಚೀಣ ಧರ್ಮ ಗ್ರಂಥಗಳಲ್ಲೂ ಶಿವನ ಮಹಿಮೆಯ ವರ್ಣನೆಗಳಿವೆ.

ಹಿಮಾಲಯದಿಂದ ಕನ್ಯಾಕುಮಾರಿ ಭೂಶಿರದವರೆಗೂ ಅಸಂಖ್ಯಾತ ಶಿವಸ್ಥಾನಗಳು ಭಕ್ತರ ಇಷ್ಟಾರ್ಥಗಳನ್ನು ಇಡೇರಿಸುವಲ್ಲಿ ಕಾರ್ಯತತ್ಪರವಾಗಿವೆಯೇನೋ ಎಂಬಂತೆ ನೆಲೆನಿಂತಿವೆ. ಭಕ್ತಿ ಭಾವದಿಂದ ಭಕ್ತರು ಎಲ್ಲೆಲ್ಲಿ ಕರೆದರೋ ಅಲ್ಲಲ್ಲಿ ಭಕ್ತರ ಬಂಧುವಾದ ಶಿವ ಆವಿರ್ಭೂತನಾಗಿ ಮೂರ್ತರೂಪದಲ್ಲಿ ಶಾಶ್ವತವಾಗಿ ನಲೆಸಿದ್ದಾನೆ.

Ø      ಹಿಮಾಲಯದ ಕೇದಾರನಾಥ

Ø      ಕಾಶಿಯ ವಿಶ್ವನಾಥ

Ø      ಸೌರಾಷ್ಟ್ರದ ಸೋಮನಾಥ

Ø      ಚಿತಾಭೂಮಿಯ ವೈದ್ಯನಾಥ

Ø      ಸೇತುಬಂಧದ ಸಮೀಪದ ರಾಮೇಶ್ವರ

Ø      ನರ್ಮದಾತೀರದ ಅಮರೇಶ್ವರ

Ø      ಗೋದಾವರಿ ತೀರದ ತ್ರ್ಯಂಬಕೇಶ್ವರ

Ø      ದಾರುಕಾವನದ ನಾಗೇಶ್ವರ

Ø      ಎಲ್ಲೋರಾದ ಶ್ರೀ ಘುಶ್ಮೇಶ್ವರ

Ø      ಶ್ರೀಶೈಲದ ಮಲ್ಲಕಾರ್ಜುನ

Ø      ಉಜ್ಜಯಿನಿಯ ಮಹಾಕಾಲ

Ø      ಢಾಕಿನಿಕ್ಷೇತ್ರದ ಭೀಮಶಂಕರ  - ಇವು ದ್ವಾದಶ ಜ್ಯೋತಿರ್ಲಿಂಗಗಳು.

ದ್ವಾದಶ ಜ್ಯೋತಿರ್ಲಿಂಗ ಸ್ಮರಣೆಯನ್ನು ಪ್ರತಿನಿತ್ಯ ಮಾಡುವುದರಿಂದ ಸಕಲಪಾಪವೂ ಪರಿಹಾರವಾಗುವುದೆಂಬ ಭಾವನೆ ಭಕ್ತರಲ್ಲಿ ಆಳವಾಗಿ ಬೇರೂರಿದೆ. ತಮವನ್ನು ಕಳೆದು ಬೆಳಕಿನತ್ತ ಕೊಂಡೊಯ್ಯುವ ಶಕ್ತಿ ಈ ಸ್ಥಳಗಳಿಗಿದೆಯೆಂಬ ನಂಬಿಕೆಯು ಅಷ್ಟೇ ಗಾಢವಾಗಿದೆ.

ಪಂಚಭೂತಗಳಾದ ಪೃಥ್ವಿ (ಭೂಮಿ), ಅಪ್ (ನೀರು), ತೇಜ (ಅಗ್ನಿ), ವಾಯು (ಗಾಳಿ), ಆಕಾಶ (ಬಯಲು) ಇವುಗಳ ಪ್ರತೀಕವಾದ ಪಂಚಮಹಾಭೂತಾತ್ಮಕ ಲಿಂಗಗಳಿರುವ ಸ್ಥಾನಗಳು ಪುಣ್ಯ ಕ್ಷೇತ್ರಗಳೆನಿಸಿವೆ. ಶೈವ ಪಂಥದವರ ಆಳ್ವಿಕೆಗೆ ಒಳಗಾಗಿದ್ದರ ಪ್ರಭಾವದಿಂದಲೋ ಈ ಐದೂ ಶಿವಕ್ಷೇತ್ರಗಳೂ ತಮಿಳುನಾಡಿನಲ್ಲಿವೆ.

v     ಪೃಥ್ವೀಲಿಂಗ ತಿರುವಿಡೈಮರದೂರು

v     ಆಪೋಲಿಂಗ ತಿರುವಾಣೈಕಾವಲ್

v     ತೇಜೋಲಿಂಗ ತಿರುವಣ್ಣಾಮಲೈ

v     ವಾಯುಲಿಂಗ ತಿರುವಾಲಂಗಾಡು

v     ಆಕಾಶಲಿಂಗ ಚಿದಂಬರಂ

ಈ ದೇವಾಲಯಗಳನ್ನೊಳಗೊಂಡಂತೆ ಪ್ರಪಂಚದ ಉದ್ದಗಲಕ್ಕೂ ಇರುವ ಎಲ್ಲಾ ಶಿವಮಂದಿರಗಳಲ್ಲೂ ಶಿವರಾತ್ರಿಯ ದಿನವಾದ ಇಂದು ವಿಶೇಷ ಪೂಜೆಗಳು ಜರುಗುತ್ತವೆ. ಭಕ್ತರು ಶಿವದರ್ಶನವನ್ನು ಮಾಡಿ ಪುನೀತರಾಗುತ್ತಾರೆ.

ಸಂಪದ ಬಳಗದವರಿಗೆಲ್ಲರಿಗೂ ಶಿವರಾತ್ರಿಯ ಶುಭಾಶಯಗಳು.

**********

ಚಿತ್ರ ಗೂಗಲ್ ಕೃಪೆ

 

Rating
No votes yet

Comments