ಕೊಡು ಗುರುವೇ

ಕೊಡು ಗುರುವೇ

ಕೊಡು ಗುರುವೇ ಹೊಸ ಕನಸುಗಳನ್ನು

ಹೊಸ ಯುಗದಾದಿಗೆ ಹೊಸ ಕಣಸುಗಳನ್ನೂ
ಸರ್ವಸಮಾನತೆಯ ಶಾಂತಿಯ ಮಂತ್ರವ ಮೆಯ್-ಮನಗಳೊಳ್ ಉಜ್ಜುಗಿಸು
ನಲ್ನಂಬುಗೆಗಳ ನಲವನು ಕಂಡರಿಪ ನವ ದ್ರಷ್ಟಾರರ್ಕಳ ನೀ ಸೃಜಿಸು
 
ಕೊಡು ಗುರುವೇ ಹೊಸ ನೇತಾರರ್ಕಳನ್ನು
ನೇರ ತಂತ್ರದಿಂದಲೇ ಆೞ್ವವವರನ್ನು
ಆದರದಿಂದಲಿ ಬರಮಾಡವರನ್ನು ನಾಡನ್ನು ಕಾಯ್ವವವರನ್ನೆತ್ತರಿಸು
ಓಲಗದೊಂದಿಗೆ ಬರುವಂಥವರನ್ನು ನಾಡಿನ ಮಕ್ಕಳ ಏೞ್ಗೆಗಾಗೆಚ್ಚರಿಸು
 
ಕೊಡು ಗುರುವೇ ಹೊಸ ಗುರುವರ್ಯಕ್ಕಳ
ನಾಡಿನೊಳ್ಳಿತಿಗಾಗಿ ಹಾರಯಿಸುವವರನ್ನು
ಕೊಡು ಗುರುವೇ ಹೊಸ ಕನಸುಗಳನ್ನು
ಹೊಸ ಯುಗದಾದಿಗೆ ಹೊಸ ಕಣಸುಗಳನ್ನೂ
Rating
No votes yet

Comments