ಮರ್ಮ!

ಮರ್ಮ!

ಕವನ

ಗುರಿ ಮುಟ್ಟದವರ

ಗುರಿ ಮಾಡಿ

ಉರಿದಾಡುವವರ

ಅಹಮುಗಳ ಗರಿಯ

ಮುರಿಯುವನು ವಿಧಿ!

ಭ್ರಮೆಯ ಭ೦ಡಾರದೊಳಗೆ

ಹೊರಳಾಡಿ ತಡಕಾಡಿ

ಪರರ ಖುಶಿಗೆಡಿಸಿ

ಸುಖ ಪಡುವ ಮನಸುಗಳ

ಕಾಯುತಿದೆ ದುರ್ಗಾಲ!

ಗೆಲುವ ಹುಡುಕುವ

ಮಾನಸ ಮಾರ್ಗದಲಿ

ಸೋಲುಗಳ ಕುರುಹುಗಳ

ಗುರುತು ಹಾಕದೆ

ಸೋಲಿನೆಡೆಗೆ ನೂಕುವ

ಅದಮ ಮೈತ್ರಿಗೆ

ಇ೦ದಲ್ಲ ನಾಳೆ ಕಾದಿದೆ

ಪರಿತಪದ ಪರಿಪಾಟಲಿನ ಪಾಡು!

ಶ್ರಮವ ನ೦ಬದೆ

ನಸೀಬುಗಳ ಕಾಯುವ

ಮ೦ದಿಯ ಕಣ್ಣೆದುರು

ಸಾಲಾಗಿ ಬರುವ ದುಗುಡದ

ಸತ್ಯಗಳನು ಮರೆತು

ಮತ್ತದೇ ಗು೦ಗಿನಲಿ

ರ೦ಗೇರಿಸುವ ಗೆಳೆಯರಿಗೆ

ಮನದಿ ಮ೦ಡಕ್ಕಿ ಹೊರತು

ಕಾಸು ಕಾ೦ಚಾನ ಕನಸು ಕನಸೆ!

ತನ್ನೊಳಗಿನ ಲೋಪಗಳ

ಮರೆಮಾಚಿ ಮೆರೆದು

ನೆರೆಮನೆಯ

ಪ್ರಮಾದಗಳಲಿ ನುಸುಳಿ

ಅವರಿವರ ಗೋಳುಗಳಲಿ

’ಗೋಲು’ ಇಕ್ಕಿಸಿ ಕೊಳ್ಳುವ

ದಡ್ಡ ಜಾಣರ ಮನೆಯೊಳಗೆ

ನೋವಿನ ಸುಳಿ ಹೊಕ್ಕು

ಕತ್ತಲ ಕದನ ಶುರುವಾಗಿ

ನಲಿವಿನ ಕತೆ ಅಧೋಗತಿ!

 

Comments