ಹೇ ಮನಸ್ಸೇ

ಹೇ ಮನಸ್ಸೇ

ಕವನ

ಹೇ    ಮನಸ್ಸೇ

ನೀ ಸತ್ಯ    ತೊರೆದು

ನನಗೆ  ವಂಚಿಸದಿರು..............

ಕ್ಷಣ ಕ್ಷಣವೋ   ಮೃತ್ಯು

ನನ್ನ  ಹತ್ತಿರವಾಗುತ್ತಿದೆ,

ವಿಧಾತನ  ಸನ್ನಧಿಯಲ್ಲಿ.

ನನ್ನ ಬರಿಗೈಯಲ್ಲಿ   ನಿಲ್ಲಿಸದಿರು............

ಈ  ಲೋಕದ  ಮೋಹ  ಬೆರೆಸಿ,

ನನ್ನ  ಬದಕು   ಶೂನ್ಯಗೊಳಿಸದಿರು,

ಸ್ವಾರ್ಥದ  ಸ್ವಾದ  ಹೆಚ್ಚಿಸಿ,

ನನ್ನ ಸಂಭಂದಗಳಲ್ಲಿ   ಕಿಚ್ಚು ಹಚ್ಚದಿರು..................

ಭೋಗದ  ದಾಸನಾಗಿಸಿ   ,

ವಿಭುವಿನ  ದಾಸ್ಯದಿಂದ  ದೂರ ಸರಿಸದಿರು,

ಅರಮನೆಯ   ಮತ್ತಿನಲ್ಲಿ

ಗೂಡು   ಗುಡಾರಗಳ   ಮರೆಸದಿರು......................

ನಾ  ಹರಿದಾಡುವ  ಹಾದಿಯಲ್ಲಿ,

ಕಾಮವಾಸನೆ    ಬಿತ್ತದಿರು,

ಸಂಭಂದಗಳ   ಸವಿ   ಸವಿಯದ

ಏಕಾಂತದ  ಸುಡುಗಾಡು  ನೀರ್ಮಿಸದಿರು................

ನನ್ನ  ನಿತ್ಯದ   ಬದುಕು  ಶುದ್ಧಗೊಳಿಸದೆ,

ವಿಭುವಿನ    ಆಕ್ರೋಶಕ್ಕೆ   ಗುರಿಯಾಗಿಸದಿರು,

ನಿತ್ಯ   ಆಹಾರ  ವ್ಯವಹಾರದಲ್ಲಿ,

ಕಲ್ಮಶವ    ತುಂಬದಿರು.....................................................

ದ್ವೇಶ   ಅಸೂಯೆ     ಅಹಂಕಾರ,

ನಿನ್ನಾಳದ  ಕ್ಕೆ   ಸೇರಿಸದಿರು,

ಸದಾ   ವಿಭುವಿನ    ಅನುಗ್ರಹದ,

ಅನುಸರಣೆ     ಮಾಡುತ್ತಿರು.............................................

ಅಶ್ಲೀಲದ   ಆಳಕ್ಕೆ    ಇಳಿಸಿ,

ಮೊಗಸಾಲೆಯಲ್ಲೆ     ಬೆತ್ತಲಗೊಳಿಸದಿರು,

ಕಾಮದಕುಂಡಕ್ಕೆ   ಎಸೆದು,  ನನ್ನ

ನರಕದ     ಇಂಧನ  ವಾಗಿಸದಿರು.

೦೦೦೦೦೦೦೦೦೦೦೦೦

Comments