ಮತ್ತೆ ಒಂಟಿತನ?

ಮತ್ತೆ ಒಂಟಿತನ?

ಕವನ

ಯಾವ ಕಾರಣಕೆ ಈ ಜೀವನ

ಹಗಲು ರಾತ್ರಿ ಅರಿಯದ ಪಯಣ

ಮನಸೊಳಗೆ ತಳಮಳ ಕನಸುಗಳಾ ತಲ್ಲಣ

ಹಾಡಿದರು ಗೀಚಿದರು ಚಿತ್ರಿಸಿದರು ತಿಳಿಯದು

ಮನ ಭಾರ ಆಗಿರುವ ಕಾರಣ.

 

ನನ್ನವರು ನನದೆಂಬ ಹುಚ್ಚುತನದ ಮೋಹ

ತಿಳಿಸಿದರು ನರಳಿದರು ಅರಿಯದಾದರೇ ಸ್ನೇಹ

ಕೊಚ್ಚಿ ಹೋಗುವ ನದಿಯೋಳ್ ಧುಮಿಕಿ ಬಿಡುವಾ ಹಂಬಲ

ಛೆ ಆತ್ಮಹತ್ಯೆ ಎಂದು ತಿಳಿಯದಿರಿ, ಇದು ಕೇವಲ ವಿರಹ

 

ಸಾವಿನಲು ಬದುಕಿನಲು ಜೊತೆಯಿರದ ಸ್ಥಿತಿ

ಕಾದಿಹುದು ಕೊನೆಯ ಘಳಿಗೆ, ಅಷ್ಟರಲ್ಲೇನೀ ಅವನತಿ

ಅತೃಪ್ತಿ, ಅಸಹನೆ ಅಸಮಾಧಾನಕೆ ಇಲ್ಲ ಬಡತನ

ಹೆದರುತಿಹೆನು ನಾನು, ಮತ್ತೆ ಆವರಿಸುತಿಹುದೋ ಒಂಟಿತನ

 

Comments