ಕಾಲಮಾನ....

ಕಾಲಮಾನ....

ಕವನ

 

 

ಭವದ ಬಯಲಲ್ಲಿ

ಸಾವಿನ ಕರಿನೆರಳು

ಸೂರ್ಯನಿಲ್ಲದ ಹಗಲು

ಕತ್ತು ಬಿಗಿದಿದೆ ಮುಗಿಲು

 

ಸೋಲಿನ ಸುಳಿಯಲ್ಲಿ

ಸಿಕ್ಕಿ ಸೊರಗಿದೆ ಮನ

ಋತು-ಮಾನದ ಬೇಗೆಯನು

ಕಳಚಿಕೊಳ್ಳುವ ಋಣ

 

ಕಿತ್ತು ತಿನ್ನಲು ಕಾದ

ರಣ-ಹದ್ದಿನ ಧ್ಯಾನ

ಎಣಿಸುತ್ತಿದೆ ಕಾಲಮಾನ

ಸಾವ ಸಮೀಪದ - ಕ್ಷಣ

 

ಭವದ ಬಯಲೊಳಗೆ

ಬದುಕು ಎಲ್ಲರಿಗೂ ಒಂದೆ

ಮೇಲು ಕೀಳಿನ ನಡುವೆ

ಸಣ್ಣದೊಂದು ಬಿರುಕಂತೆ

 

ಯಾರು ಏನೆಂದರೂ

ಕುರುಡಾಗದಿರಲಿ ಮನಸ್ಸು

ಮತ್ತೊಂದು ಸಾವಿಗಾಗಿ

ಹೊಂಚು-ಹಾಕಿದಿರಲಿ ಸಮಯ

 

..........................................by: ವಸಂತ್ ಕೋಡಿಹಳ್ಳಿ

 

ಚಿತ್ರಕೃಪೆ:- ಅಂತರ ಜಾಲ

 

Comments