ನಿರುದ್ಯೋಗಿ

ನಿರುದ್ಯೋಗಿ

ಕವನ

ಮೈದುಂಬಿ 

ರಸಉಕ್ಕಿ   ಹರಿದು,

ಯೌವ್ವನ    ಕುಣಿವಾಗ

ಸಮಸ್ಯಗಳ  ಜಾಲದ

ಸುರಿಮಳೆಯಲ್ಲಿ,

ಒದ್ದೆಯಾಗಿ,

ಅಭಾವ  ನಿರಾಸೆಯ

ಛಳಿಯಲ್ಲಿ  ನಡುಗುತ್ತ,

ನಿರುದ್ಯೋಗದ  ನಿರಾಧಾರ,

ಭವಿಷ್ಯದ  ಚಿಂತೆಯಲ್ಲಿ,

ಇಂಗಿ  ಹೋಗಿ

ಹಸಿವಿನ  ಸರ ಹದ್ದಿನಲ್ಲೇ

ಹಿರಿಯರ  ಹಂಗಿನ

ಕಿಡಿ  ನುಡಿ  ಕೇಳಿ  ಕೇಳಿ

ಹಾಸಿಗೆ  ಹಿಡಿಯುವಂತಾಗಿ

 ಭಾವನೆಗಳ  ಅದಮುತ್ತ,

ಕಷಾಯ  ಕುಡಿದ,

ಇಳಿಮುಖ

ಹೊತ್ತು  ಬದುಕುವಾತನ

 ಕಡತ  

ಜ್ಜ್ನಾನ  ತುಂಬಿದರೂ

ವ್ಯರ್ಥ.......................೨೨_೧_೧೯೮೨