ನಾವ್ ನೋಡಿದ ಕನ್ನಡ ಸಿನೆಮಾ - ಲಕ್ಕಿ -ಎನ್ ಲಕ್ ಮಗಾ:)))

ನಾವ್ ನೋಡಿದ ಕನ್ನಡ ಸಿನೆಮಾ - ಲಕ್ಕಿ -ಎನ್ ಲಕ್ ಮಗಾ:)))

ಚಿತ್ರ

 

ನಿನ್ನೆ ಭಾನುವಾರ -ರಜಾ ದಿನವಾದ ನಿಮಿತ್ತ  'ನಮ್ಮವರೊಂದಿಗೆ' ಇತೇಚೆಗೆ ಬಿಡುಗಡೆ ಆದ ಶ್ರೀ ಮತಿ ರಾಧಿಕ ಕುಮಾರ ಸ್ವಾಮಿ ಅವರ ನಿರ್ಮಾಣದ  ಚಿತ್ರ ಲಕ್ಕಿ - ಎನ್ ಲಕ್ ಮಗಾ !! ನೋಡಲು ಮಲ್ಲೇಶ್ವರದ  ಮಂತ್ರಿ ಮಾಲಿಗೆ ಹೋಗಿದ್ದೆ...

ಈ ಚಿತ್ರ ಹಲವಾರು ಕಾರಣಗಳಿಂದಾಗಿ ಕನ್ನಡ ಚಿತ್ರ ರಸಿಕರ ಗಮನ ತನ್ನೆಡೆ ಹರಿವಂತೆ ಮಾಡಿದ್ದು ಸುಳ್ಳಲ್ಲ !! ಅದರಲ್ಲಿ

ನಟಿ  ರಾಧಿಕ ತುಂಬಾ ದಿನಗಳ ನಂತರ  ತೆರೆ ಮರೆಗೆ ಸರಿದ ಮೇಲೆ ಈ ಚಿತ್ರದಿಂದ  ತೆರೆ ಹಿಂದೆ ನಿರ್ಮಾಪಕಿಯಾಗಿ ,ಒಂದು ಕಾಲದ ತಮ್ಮ ಸ್ಪರ್ಧಿ ,ನಟಿ ರಮ್ಯ  ಅವರನ್ನ ಈ ಚಿತ್ರಕ್ಕೆ ನಾಯಕಿಯಾಗಿಸಿ ಮತ್ತು ಈಗೀಗ ಪ್ರವರ್ಧಮಾನಕ್ಕೆ ಬರ್ತಿರೋ ಉದಯೋನ್ಮುಖ ನಟ  ಯಷ್  ಜೋಡಿಯಾಗಿದ್ದು..

ಮತ್ತು ಈ ಚಿತ್ರದ ಮೂಲಕ ರಾಧಿಕ  ಜನರ - ತಮ್ಮ ಬಗೆಗಿನ  ವಯುಕ್ತಿಕ ಜೀವನದ  ಬಗೆಗಿನ  ಊಹಾ-ಪೋಹಗಳನ್ನು ಸ್ಪುಷ್ಟಗೊಳಿಸಿದ್ದು:))

 

ಈಗೀಗ  ನಮ್ ನಿರ್ಮಾಪಕ ನಿರ್ದೇಶಕರು ಹೇಳುವುದುನ್ನು ನಾವೆಲ್ಲ ಕೇಳಿದ್ದೇವೆ?

 ಕನ್ನಡ ಚಿತ್ರಗಳನ್ನು ಜನ ಹೆಚ್ಚು ನೋಡುವುದಿಲ್ಲ   - ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗುತ್ತಿದೆ ಇತ್ಯಾದಿ.......

ಆದರೆ ನಿನ್ನೆ ಆ ಮಲ್ಟಿ ಪ್ಲೆಕ್ಸ್  ಪೂರಾ ಭರ್ತಿ ಆಗಿತ್ತು- ಏನೋ ವಾರದ ಕೊನೇ -ರಜಾ ದಿನ  ಅದ್ಕೆ ಭರ್ತಿ ಆಗಿತ್ತು ಅನ್ನಬಹುದು  ಆದರೂ ಕನ್ನಡ ಚಿತ್ರಗಳು ಉತ್ತಮವಾಗಿದ್ದರೆ  ಮೊದಲ ದಿನದ ಎಲ್ಲ ಶೊವ್ಗಳು ಭರ್ತಿ ಖಾತ್ರಿ ,ಚಿತ್ರದ ಹಣೆ ಬರಹ ಮೊದಲ ಶೋ ನಲ್ಲೇ ನಿರ್ಧಾರವಾಗುತ್ತೆ..

ಹೇಗೆ?

ಚಿತ್ರ ನೋಡುತ್ತಿರುವಾಗಲೇ ಆ ಚಿತ್ರ ಹಿಡಿಸದಿದ್ದರೆ-  ಕಾಲು- ಮೆಸೇಜು ಮಾಡಿ ಪ್ರೇಕ್ಷಕ  ಅದರ 'ಹೂರಣ' ಜಗಜಾಹೀರು ಮಾಡಿರುತ್ತಾನೆ:))

 

ಈಗ ಚಿತ್ರದ ಕುರಿತು- ಚಿತ್ರ ಕಥೆ  ಮಾಮೂಲು- ಆಗಲೇ ಬಂದು ಹೋದದ್ದನ್ನೇ  ಅಲ್ಪ ಸ್ವಲ್ಪ ತಿರುಗು ಮುರುಗು ಮಾಡಿ  ಅದಕ್ಕೆ ೨ ಕಾಲು ಕುಣಿಸಿ -ಗುನುಗುವ ತರಹದ ಹಾಡು ಸಾಹಿತ್ಯ  ಇಟ್ಟು  ಧಾರಾಳ ಖರ್ಚು ಮಾಡಿ ಸೆಟ್ ಹಾಕಿಸಿ  , ನಾಯಕನಿಗೆ ಚಿತ್ರ ವಿಚಿತ್ರ ಫ್ಯಾಶನ್  ಬಟ್ಟೆ  ಆಕಿಸಿ ನಾಯಕಿಗೆ ಸಾದಾ ಸರಳ  ಮೇಕಪ್ ಮಾಡಿ  ವೈಭವಯುತವಾಗಿ  ನಿರ್ಮಿಸಿದ್ದು...

ಚಿತ್ರ ನೋಡುವಾಗ- ನೋಡಿಯಾದ ಮೇಲೆ  ಕೆಲವರಿಗಾದರೂ ಇದು ಹಿಂದಿ ಚಿತ್ರ 'ರಬ್  ನೇ ಬನಾ ದಿ ಜೋಡಿ' ಯ ತಿರುಗು ಮುರುಗು ಕಥೆ ಅನ್ನಿಸಲೂಬಹುದು!!

 

ಆದಾಗಲೇ ನೀವೆಲ್ಲ ಪೇಪರ್ ಓದಿದ್ದರೆ ಅದರಲ್ಲಿ ಬಂದ ಈ ಚಿತ್ರದ ಬಗೆಗಿನ ಕಥೆ- ವಿಮರ್ಶೆ ಎಲ್ಲವೂ ಓದಿರುತೀರಿ ಆದರೂ ಕಥೆ ಬಗ್ಗೆ ಹೇಳುವುದಾದರೆ

ನಾಯಕಿ ಟೀ ವಿ ಚಾನೆಲ್ ಒಂದರ ಪ್ರೋಗ್ರಾಮ್ ನಡೆಸುವವಳು (ಯಾಂಕರ್!!) ನಾಯಕ ಅವಳ ಹಿಂದೆ ಬಿದ್ದು  ಪೇಮಕ್ಕಾಗಿ ಪೀಡಿಸೋ  ಆಧುನಿಕ ವಿಚಿತ್ರ ಉಪೇಂದ್ರ!!

 ಚಿತ್ರ ವಿಚಿತ್ರ ಡ್ರೆಸ್ಸು ಹಾಕಿ (ಆ ಡ್ರೆಸ್ಸುಗಳು ಆಲ್ ಇಂಡ್ಯಾ ಲೆವೆಲ್‌ಗೆ ಫೇಮಾಸ್ ಆಗೋದು ಖಾತ್ರಿ!!) ಉದ ಕೂದಲು ಬಿಟ್ಟು ಕಲರ್ ಹಾಕಿ ಕಿವಿಗೆ ಏರ್‌ದೆರಡು ಓಲೆ ಹಾಕಿದ ನಾಯಕನಿಗೆ  ಸದಾ ನಾಯಕಿ ಹಿಂದೆ ಬಿದ್ದು ಪ್ರೇಮಕ್ಕಾಗಿ ಪೀಡಿಸೋದೇ  ಉದ್ಯೋಗ.. ಈ ನಾಯಕನಿಗೆ ಇಬ್ಬರು ದೋಸ್ಟ್‌ಗಳು (ಚಡ್ಡಿ?) ಒಬ್ಬ ಆದಾಗಲೇ ಉದ್ಯೋಗದಲ್ಲಿದ್ದು  ಈ ಎರಡು ದಂಡ ಪೀಂಡ್‌ಗಳನ್ ಸಲಹುವವನು:)) (ಇನ್ನೊಬ್ಬ ಸ್ನೇಹಿತ ಹಾಸ್ಯ ನಟ ಶರಣ್), ಇಡೀ ಚಿತ್ರ  ಕ್ಕೆ ನಾಯಕ -ನಾಯಕಿ ಶರಣ್-ಸಾಧು ಕೋಕಿಲ ಹಾಸ್ಯ , ಮಧ್ಯೆ  ನಾಯಕಿಯ ನಾಯಿ 'ಜೂ ಜೂ' .....! ಚಿತ್ರದ  ಹಿಡಿಸುವಿಕೆಗೆ ಕಾರಣ ನಾಯಕ -ನಾಯಕಿ ಮತ್ತು  ಆ 'ಜೂ ಜೂ' ನೇ ಕಾರಣ....

ಯಷ್ ನಟನೆಯಲ್ಲಿ  ಇನ್ನಸ್ತು ಪಲಗಬೇಕಿದೆ..

 

ರಮ್ಯ ಪಾತ್ರದ ಎಲಾ ವಿಧಗಳಲು ಚೆನ್ನಾಗಿ ಅಭಿನಯಿಸಿದ್ದಾರೆ..

 ೫ ಹಾಡುಗಳಿದ್ದರೂ ೨ ಹಾಡುಗಳು ಇಸ್ಟ ಆಗಬಹುದು

ನಾ ಎನ್ ಮಾಡ್ಲಿ - ವಿಚಿತ್ರ ಸಾಹಿತ್ಯ  ಆದ್ಧೂರಿ ಸೆಟ್  ವರ್ಣ ಮಯ ಉಡುಗೆ ತೊಡುಗೆ ಯೊಂದಿಗೆ ನಮ್ಮನ್ ಸೆಳೆದು ಕಾಲು ಕುಣಿಸುವಂತೆ  ಮಾಡಬಹುದು.. ಇನ್ನೊಂದು  ಗುಣುಗಾಬಹುದಾದ ಹಾಡು ಅದರ ಸಂಗೀತ  ಹಿಡಿಸುತ್ತೆ..

ಚಿತ್ರದ ಹಾಡು ನೃತ್ಯಕ್ಕಾಗಿ ವಿದೇಶಕ್ಕೆ ಹೋಗಿ ಚಿತ್ರಿಸದೇ ,ಸೆಟ್ ಆಕಿಯೇ ಚಿತ್ರಿಸಿದ್ದು  ವಿಶೇಷ.

 

ಅನಾವಶ್ಯಕ ಖರ್ಚು ಮಿಕಿಸಿ ಎಲ್ಲಿ ಅಗತ್ಯವೋ ಅಲ್ಲಿ ಅದನ್ನ ಬಳಸಿ ಚಿತ್ರ ತೆಗೆದದ್ದು ಈ ಚಿತ್ರದ ವಿಶೇಷ. ಆ ಚಿತರ್ ನೋಡಿದ ಹಲವರಿಗೆ ಅದು ಅನುಭವಕ್ಕೆ ಬರುತ್ತೆ...ಸ್ವತಹ ನಟಿಯಾಗಿದ್ದ ರಾಧಿಕ ಅವರು  ತಮ್ಮೆಲ್ಲ ಅನುಬಹವವನ್ಣ  ಇಲ್ಲಿ  ಉಪಯೋಗಿಸಿ ಮೊದಲ್ ಚಿತ್ರದಲ್ಲೇ  ಒಂದೊಳ್ಳೇ ಚಿತ್ರ ಕೊಟ್ಟ    ಭರವಸೆಯ ಸದಭಿರುಚಿಯ ಚಿತ್ರಗಳ  ನಿರ್ಮಾಪಕಿಯಾಗಿ  ಗಟ್ಟಿಯಾಗಿ ನಿಲ್ಲುವ ಸೂಚನೆಗಳು ಕಾಣಿಸುತ್ತಿವೆ.....ಈ ನಿಟ್ಟಿನಲ್ಲಿ ವಿತರಕ ನಿರ್ಮಾಪಕರಾದ   ಪತಿ 'ಕುಮಾರ ಸ್ವಾಮಿ' ಅವರ ಸಾತ್ ಕೂಡ ಇದೆ...
ಚಿತ್ರದ ನಿರ್ದೇಶಕ  ಡಾ: ಸೂರಿ ಬಗ್ಗೆ ಯಾರಿಗೂ ಆಸ್ಟಾಗಿ ಮಾಹಿತಿ ಇಲ್ಲ!! ಆದರೂ ತಮ್ಮ ಇತಿ ಮಿತಿಯಲ್ಲೇ  ಚಿತ್ರವನ್ ಚೆನ್ನಾಗಿ   ಮಾಡಿದ್ದಾರೆ.. ಸ0ಬಾಷಣೆ  ಬರೆದ 'ಗೌಸ್' ಅವರ್ ಕೆಲ ಸಂಬ್ಭಾಷಣೆ ಗಳಿಗೆ 'ಮಾಲ್ಲ್' ನಲಿ ಕಿವಿಗಡಚಿಕ್ಕುವ  ವಿಶಲ್ ಮಾತು ಚಪ್ಪಾಳೆ...

 

ಚಿತ್ರದ ಅಂತ್ಯಕ್ಕೆ ಮುನ್ನಿನ ಕೆಲ ನಿಮಿಷಗಳು  ಸನ್ನಿವೇಶಗಳು ಮನಕ್ಕೆ ತಟ್ಟುತ್ತವೆ.

ಈ ಚಿತ್ರದ ಮೂಲಕ ನಟ ಯಷ್ ಮತ್ತು  ನಟಿ ರಮ್ಯ ತಮ್ಮ ಕಿರೀಟಕ್ಕೆ ಮತ್ತೊಂದು ಯಶಸ್ಸಿನ ಗರಿ ಸಿಕ್ಕಿಸಿಕೊಂಡಿದ್ದಾರೆ...

..ನನಗಂತೂ ಕೊಟ್ಟ ಕಾಸಿಗೆ  ಮೋಸ ಇಲ್ಲ ಅನ್ನಿಸಿತು...

 

ಅಲ್ಲದೇ  ಈ ಚಿತ್ರದ ಚಿತ್ರೀಕರಣ ಬಹುತೇಕ ನಾಯಕನ ಮನೆ ನಾಯಕಿಯ ಮನೆ  ಟೀ ವಿ ಸ್ಟುಡಿಯೊ -ಕೆಲ ರಸ್ತೆಗಳು ಇವೆ ಶೂಟಿಂಗ್ ಸ್ಪಾಟ್- ಆದರೂ ಅವೆಲವೂ  ಕಣ್ಣು -ಮನ ಸೆಳೆಯುತ್ತವೆ ..

ಏನೇನೂ ನಿರೀಕ್ಷೆ ಇಲ್ಲದೇ   ಒಂದು ಭರಪೂರ ಮನರಂಜನೆಗಾಗಿ ಕುಟುಂಬ ಸಮೇತ ಹೋಗಿ ನೋಡಲು ಅಡ್ಡಿ ಇಲ್ಲ... ಎಲ್ಲೂ ಮುಜುಗರ ಆಗದಂತೆ  ಸನ್ನಿವೇಶಗಳು ಇರುವುದರಿಂದ  ಹಾಯಾಗಿ ಚಿತ್ರ ನೋಡಬಹುದು!. ಮಕ್ಕಳಿಗೆ ಆ ನಾಯಿ ಈಸ್ಟ ಆಗಿ  ತಮ್ಮ- ತಮ್ಮ 'ಅಪ್ಪ0'ಗೆ  -'ಪಪ್ಪಿ'  ತಂದು ಕೊಡಲು ಪೀಡಿಸಲೂಬಹುದು

ಹುಷಾರು:)))

 

ನಿರ್ಮಾಪಕಿಯಾಗಿ ಮೊದಲ ಚಿತ್ರದಲೆ  ರಾಧಿಕ ಕುಮಾರ ಸ್ವಾಮಿ  ಗೆದ್ಡಿದ್ದಾರೆ...ಅನ್ನಬಹುದು...

 

೧ .ಹೂವಿನ ಸಂತೆಗೆ

೨ .ಚೆನ್ನಾಗಿದಿಯಲ್ಲೇ

೩ .ಮಂಡ್ಯದಿಂದ

೪ .ಗೌರಮ್ಮ ಬಾರಮ್ಮ

 ೫. ನಾ ಎನ್ ಮಾಡ್ಲಿ?

ಹಾಡುಗಳಲ್ಲಿ ಒಂದು ಮತ್ತು ೫ ನೇಯದು ಹಿಡಿಸುತ್ತದೆ....

ಉಳಿದ ಹಾಡ್ -ಸಾಹಿತ್ಯ ಹೀಗ್ ಬಂದ -ಹಾಗೆ ಹೋದ ರೀತಿ!!

 

 ಒಟ್ಟಿನಲ್ಲಿ ನನಗೆ ಅನ್ನಿಸಿದ್ದು

ಕೊಟ್ಟ ಕಾಸ್‌ಗೆ ಮೋಸ ಇಲ್ಲ....:)))


ಚಿತ್ರ ಮೂಲ:

http://www.chiggywiggy.com/photoView1.aspx?id=2619&AlbumID=119

 

 

 

Rating
No votes yet

Comments