ಅರಿವು..!
ಕವನ
ನಿನ್ನದೆ ಕಥೆ,ಕವನಗಳಿಗೆ
ನಾ ಪಾತ್ರವಾಗುವೆ...!
ನೀ ಒಪ್ಪದಿದ್ದರೆ
ಆಗಸದ ಚಿಕ್ಕೆಯಾಗುವೆ...!!
ನನಗಿಸ್ಟ..ಸಿಟ್ಟು,ದುಃಖ,ರೋಶ
ಕೊನೆಗೆ ಸುಮ್ಮಸುಮ್ಮನೆ ತೋರುವ ಸೆಡವು...
ಮುಖ ಊದಿಸಿಕೊಂಡು, ಮೂಗು,
ತುಟಿ ಕೊಂಕಿಸುವ ಆ ಮುನಿಸು....!!
ಬಳಿಯಬೇಕಲ್ಲ ಪಾತ್ರಗಳಿಗೆ ಬಣ್ಣ,ಜೀವಂತಿಕೆಗಾಗಿ..
ನಿಲ್ಲಬೇಕಲ್ಲ..ಗೊಮ್ಮಟೇಶ್ವರನಂತೆ....!
ಕೊನೆಗೂ ಗೆದ್ದೆ ನಾನು...
ಗೆದ್ದುದನ್ನು ಬಿಟ್ಟು...!!!
ಜಗದಲಿರುವ ಈ ಹಗಲಿಗೆ...
ಬುದ್ದ ತಾನೇ ನಡೆದು ಹೋದ..
ತನ್ನೊಳಗೆ ತಾನೇ ಹೊಕ್ಕು......!!!
ಹಗಲಿರುಳು ಚಂದ್ರ-ಸೂರ್ಯನನ್ನು ಕಂಡು
ಬರೆದಿದ್ದಿದೆ,ಒಂದು ಕಥೆಯ..
ಬೆನ್ನಿಗಿನ್ನೊಂದು ಕವನ....!
ಅದು ನಾನಾಗುವ ಮಣ್ಣು....
ಮರದಲಾಗುವ ಹಣ್ಣು...
ಸ್ರುಶ್ಟಿ ಎನಿಸಿಕೊೞುವ ಹೆಣ್ಣು....!!!!
Comments
ಉ: ಅರಿವು..!
ಉ: ಅರಿವು..!
ಉ: ಅರಿವು..!
ಉ: ಅರಿವು..!