ಮತ್ತೆ ಬಂದಿದೆ ನಾಟಕ ಚೈತ್ರ!

ಮತ್ತೆ ಬಂದಿದೆ ನಾಟಕ ಚೈತ್ರ!

ಚಿತ್ರ

 ಚಿಗುರು ತುಂಬಿರೆ ಸುತ್ತ ಮುತ್ತಲು

 

ಮುಗುಳು ತುಂಬಿರೆ ಸಾಲುಮರ ಮ-

 

ಲ್ಲಿಗೆಯ ಕಂಪಿನ ನೆನಪ ತಂದಿರೆ ಕನ್ನಡಿಗರಲ್ಲಿ

 

ನಗುವ ತಾರಲು ಮುದವ ತೋರಲು

 

ಸೊಗವ ತೋರುತ ಮನವನೊಮ್ಮೆಲೆ

 

ಹಗುರವಾಗಿಸೆ ಮತ್ತೆ ಬಂದಿದೆ ನಾಟಕದ ಚೈತ್ರ!

 

ಚಿತ್ರ ಕೃಪೆ: ಪೂರ್ಣಿಮಾ

ಇನ್ನೂ ಫೆಬ್ರವರಿಯೇ ಕಳೆದಿಲ್ಲ ಈಗಲೇ ಅದೇನು ಚೈತ್ರ ಅಂದಿರಾ? ಇದಾಗಲೇ ಇಲ್ಲಿ ಸ್ಯಾನ್ ಹೋಸೆಯಲ್ಲಿ ಹೂವುಗಳು ಅರಳುತ್ತಿದ್ದು, ರಸ್ತೆಗಳನ್ನೆಲ್ಲ ಬಣ್ಣಗಳಿಂದ ತುಂಬುವ ಹಾಗೆ ಮಾಡುತ್ತಿವೆ. ಎರಡು ವರ್ಷಗಳ ಹಿಂದೆ ಇಲ್ಲಿ ನಡೆದ ನಾಟಕ ಚೈತ್ರ ೨೦೧೦ ರಂತೆ, ಈ ಬಾರಿಯ ನಾಟಕ ಚೈತ್ರ ೨೦೧೨ರಲ್ಲಿಯೂ ಎರಡು ಕನ್ನಡ ನಾಟಕಗಳು - ಚಂದ್ರಶೇಖರ ಕಂಬಾರರ ಸಾಂಬಶಿವ ಪ್ರಹಸನ ಮತ್ತೆ ಬಿ ಆರ್ ಲಕ್ಷ್ಮಣ ರಾವ್ ಅವರ ನಂಗ್ಯಾಕೋ ಡೌಟು -  ಮುಂದಿನ ಭಾನುವಾರ ಮಾರ್ಚ್ ೪ ರಂದು ಇಲ್ಲಿಯ ರಂಗ ಮಂದಿರವೊಂದರಲ್ಲಿ  ಇಲ್ಲಿನ  ಕನ್ನಡ ನೋಡುಗರಿಗಾಗಿ ಪ್ರಯೋಗಗೊಳ್ಳುತ್ತಿವೆ.

 

ವಿವರಗಳಿಗೆ ಈ ಕೆಳಗಿವೆ.  ನೀವು ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದಲ್ಲಿದ್ದರೆ, ತಪ್ಪಿಸಿಕೊಳ್ಳಲೇಬಾರದಂತಹ ಕಾರ್ಯಕ್ರಮ ಇದು ಅಂತ ಹೇಳಬೇಕಿಲ್ಲ! ಟಿಕೇಟ್ ಬೇಕಿದ್ದವರು ಇಲ್ಲಿ ಟಿಪ್ಪಣಿ ಹಾಕಿ ನನ್ನನ್ನು ಸಂಪರ್ಕಿಸಬಹುದು.

ನೀವು ಇಲ್ಲಿ ಇದ್ದರೆ ಮರೀದೆ ಬರ್ತೀರಲ್ಲ?

ಅಂದಹಾಗೆ ಇಂದಿಗೆ ನಾನು ಸಂಪದ ಬಳಗಕ್ಕೆ ಸೇರಿ  ಐದು ವರ್ಷ!  ಕಾಲವನ್ನು ತಡೆಯೋರು ಯಾರೂ ಇಲ್ಲ! ಇಷ್ಟು ದಿನಗಳಿಂದ ಈ ಸಮುದಾಯದಿಂದ ಕಲಿತಿದ್ದೆಷ್ಟೋ ಪಡೆದಿದ್ದೆಷ್ಟೋ - ಹರಿಪ್ರಸಾದ್ ನಾಡಿಗ್ ಅವರ ಜೊತೆಗೆ, ಈ ಐದು ವರ್ಷದಲ್ಲಿ ಆರುನೂರಕ್ಕೂ ಹೆಚ್ಚಿನ ನನ್ನ ಚಿಕ್ಕ ಪುಟ್ಟ ಪೋಸ್ಟಗಳನ್ನೆಲ್ಲಾ ಓದಿದ, ಟಿಪ್ಪಣಿಸಿದ ಸಂಪದಿಗರಿಗೂ ಕೂಡ ನನ್ನ ಧನ್ಯವಾದಗಳು ಸಲ್ಲುತ್ತವೆ!

 

-ಹಂಸಾನಂದಿ

ಕೊ: ಅಂದಹಾಗೆ ಸಂಪದ ಸೇರಿದ ದಿನ ಬರೆದ ಪೋಸ್ಟ್ (೨೦೦೭),   ಒಂದು ವರ್ಷವಾದಾಗ ಬರೆದ ಪೋಸ್ಟ್ (೨೦೦೮),  ಎರಡುವರ್ಷವಾದಾಗ ಬರೆದ ಬರಹ (೨೦೦೯) , ಮೂರು ವರ್ಷವಾದಾಗ ಬರೆದ ಪೋಸ್ಟ್ (೨೦೧೦), ನಾಲ್ಕು ವರ್ಷಗಳಾದಾಗ ಬರೆದ ಬರಹ (೨೦೧೧)- ಇವೆಲ್ಲದರದ್ದೂ ಕೊಂಡಿಗಳನ್ನು ಇಲ್ಲಿ ಸೇರಿಸಿದೆ, ಇರಲಿ ಅಂತ :)


Rating
No votes yet

Comments