ಕೋಮಲ್ ಕಾಮಿಡಿ - ಏನ್ಲಾ ಇದು.

ಕೋಮಲ್ ಕಾಮಿಡಿ - ಏನ್ಲಾ ಇದು.

ನಾನು, ಸೀನ, ನಿಂಗ ಎಲ್ಲಾ ಕ್ಯಾಂಟೀನ್ ತಾವ ಇದ್ವಿ. ಸುಬ್ಬಾ ಸೂಟ್ ಕೇಸ್ ಹಿಡಕಂಡು ಬಂದ. ಏನ್ಲಾ ಸುಬ್ಬ, ಯಾರಿಗೂ ಹೇಳದೆ ಎಲ್ಲಲಾ ಹೋಗಿದ್ದೆ ಅಂದ ಸೀನ. ಹೂಂ ಕಲಾ, ಹಳ್ಳಿ ಬೇಜಾರಾಗಿ ಬೆಂಗಳೂರಲ್ಲಿ ಸೆಟ್ಲ್ ಆಗೀವ್ನಿ ಕಲಾ ಅಂದ ಸುಬ್ಬ. ಅಲ್ಲಿ ಏನ್ಲಾ ಮಾತ್ತೀಯಾ, ಇಂಟರ್ ನ್ಯಾಸನಲ್  ಕಂಪೆನಿಯಲ್ಲಿ ಇದೀನಿ ಕಲಾ . ಬಡ್ಡೆಐದ್ನೆ ಏನ್ಲಾ ಕಂಪೆನಿ ಹೆಸರು, "ಸುಲಭ್ ಇಂಟರ್ ನ್ಯಾಸನಲ್" ಅಂದ ಸುಬ್ಬ, ಅದೇ ರೋಡ್ ಸೈಡ್ ರೂಮ್ನಾಗೆ, ಕಾಸು ಕೊಟ್ಟು ಉಚ್ಚೆ ಉಯ್ತಾರ್ಲಾ ಅದೇನ್ಲಾ ಅಂದೆ. ಹೂಂ ಕಲಾ. ನಂದೇ ಮಾನೇಜುಮೆಂಟು ಅಂದ. ಏಥೂ.


ಆಟೊತ್ತಿಗೆ ನಮ್ಮ ಸಾಲೆ ಹಳೇ ಮೇಸ್ಟ್ರು ಸಂಕರಪ್ಪ ಬಂದ್ರು, ಅವರನ್ನು ನೋಡ್ತಿದ್ದಾಗೆನೇ ಸುಬ್ಬ, ಅವರ ಪಂಚೆ ಮ್ಯಾಕೆ ಎತ್ತಿ ಕಾಲಿಗೆ ನಮಸ್ಕಾರ ಮಾಡ್ದ. ಏಳಪ್ಪಾ ಸುಬ್ಬ, ಮೂರು ವರ್ಷದಿಂದ ಎಲ್ಲಪ್ಪಾ ಇದ್ದೆ. ನಮ್ಮಿಂದ ಆದ ಅಪರಾಧವಾದರೂ ಏನು ಎಂದು ಹೇಳಬಾರದೆ ಅಂತಾ ಮೇಸ್ಟ್ರು ರಾಜಣ್ಣ ಸ್ಟೇಲ್ನಾಗೆ ಹೇಳಿದರು. ಏನಿಲ್ಲಾ ಮೇಸ್ಟ್ರೆ, ಹಳ್ಳಿ ಸಾನೇ ಬೋರಾಗಿತ್ತು. ಹಂಗಾಗಿ ಹೋದೆ ಬುಡಿ. ನಿಮ್ಮ ಆರೋಗ್ಯ ಸಂದಾಕೈತಾ ಅಂದ ಸುಬ್ಬ. ನನ್ನ ಆರೋಗ್ಯವನ್ನು ಯಾಕೆ ಕೇಳುವೆ ಕಂದ. ನನ್ನ ಮೂರನೆ ಮಗಳು ಸುಮಾ ಓಡಿ ಹೋದಾಗಿನಿಂದ ಜೀವನವೇ ಬೇಡವಾಗಿದೆ. ಅವಳು ಹೇಗಿದ್ದಾಳೋ ಏನೋ ಅಂತು ಮಾಸ್ಟರು.
ಸಂದಾಗವ್ಳೆ ಬುಡಿ ಅಂದ ಸುಬ್ಬ. ಹೇಗಪ್ಪಾ ಹೇಳ್ತೀಯಾ, ನಂಗೆಲ್ಲಾ ಗೊತ್ತಾಯ್ತದೆ ಅಂದ ಸುಬ್ಬ.
ಅವಳಿಗೆ ಮದುವೆ ಆಗಿರುತ್ತೆ ಅಂತೀಯಾ ಅಂದ್ರು ಮಾಸ್ತರು. ಆಗೈತೆ ಎರಡು ಮಕ್ಕಳು ಅವ್ರೆ ಅಂದ ಸುಬ್ಬ. ನೀನೇನೂ ಜೋತಿಸಿಯೇ ಹೀಗೆ ಹೇಳುತ್ತಿರುವೆಯಲ್ಲಾ ಅಂತು ಮಾಸ್ತರು. ಅವಳ ದೊಡ್ಡ ಮಗಾ ಒಂದನೇ ಕಿಲಾಸು. ಎರಡನೇ ಮಗಳು ಇನ್ನೂ ಪಾಪು ಅಂದ ಸುಬ್ಬ. ನಮಗೆಲ್ಲಾ ಆಸ್ಚರ್ಯ, ಏನು ಮಗಾ ಹಿಂಗೆ ಹೇಳ್ತಾವನಲ್ಲಾ ಅಂತಾ. ನೋಡಿ ಮೇಸ್ಟ್ರೆ, ನೀವೇನೂ ತಲೆಗೆ ಹಾಕ್ಕಬೇಡಿ. ನಿಮ್ಮ ಮಗಳು ಸಂದಾಗವ್ಳೆ, ರಾಜಾಜಿನಗರದಾಗೆ ಮನೆ ಮಾಡವ್ಳೆ, ಅವಳ ಗಂಡ ಇಂಟರ್ ನ್ಯಾಸನಲ್ ಕಂಪೆನಿಯಲ್ಲಿ ಇದ್ದಾನೆ. ಸಂದಾಗೆ ಇರ್ತಾಳೆ ಬುಡಿ ಅಂದ ಸುಬ್ಬ. ಲೇ ನನ್ನ ಹೆಂಡರು ಓಡಿ ಹೋಗವ್ಳೆ ಅದನ್ನೂ ಹೇಳ್ಲಾ ಅಂದ ನಿಂಗ. ಲೇ ನಾನು ನನ್ನ ಹೆಂಡರುದು ಹೇಳಬೋದು. ನಿನ್ನ ಹೆಂಡರದು ಹೆಂಗಲಾ ಹೇಳ್ಲಿ ಅಂದ ಸುಬ್ಬ.
ಮಾಸ್ತರಿಗೆ ಸಿಟ್ಟು ಬಂದು, ಲೇ ಅಯ್ಯೋ ನಿನ್ನ ಮಕ್ಕೆ ಹಳೇ ಎಕ್ಕಡ ಹಾಕ. ನನ್ನ ಮಗಳು ನಿನ್ನ ತಾವ ಇದಾಳೇನ್ಲಾ ಅಂದ್ರು. ಹೂಂ ಮೇಸ್ಟ್ರೆ, ನಾನು ನಿಮ್ಮನೆಗೆ 4ನೇ ಕಿಲಾಸಿಗೆ ಪಾಠಕ್ಕೆ ಬತ್ತಾ ಇದ್ನಲ್ಲಾ, ಅವಾಗ್ಲಿಂದಲೇ ಕಾಳಾ ಹಾಕ್ತಾ ಇದ್ದೆ. ಮೂರು ವರ್ಷದ ಕೆಳಗೆ ನಿಮ್ಮ ಮಗಳು ತಿಂದ್ಲು ಅಂದ. ಲೇ ನಿಮ್ಮಂತವರು ಇರೋದ್ರಿಂದಲೇ ಇವತ್ತು ವಿದ್ಯಾರ್ಥಿಗಳು ಅಂದ್ರೆ ಮಾಸ್ತರುಗಳು ಹೆದರಂಗೆ ಆಗೈತೆ ಅಂದ ಸೀನ.
ಹೌದು ಈಗ ಯಾಕ್ಲಾ ಹಳ್ಳಿಗೆ ಬಂದಿರೋದು ಅಂದ ನಿಂಗ. ಈಗ ನನ್ನ ಹೆಂಡರು ಬಸುರಿ ಆಗವ್ಳೆ, ಅವಳು ಇಂಟರ್ ನ್ಯಾಸನಲ್ ಪಾರ್ಟರ್ನ್ ಹಂಗಾಗಿ ಮೇಸ್ಟ್ರು ಹೆಂಡರನ್ನು ನಮ್ಮನೆಗೆ ಕರೆದುಕೊಂಡು ಹೋಗೋಣ ಅಂತಾ ಬಂದಿದೀನಿ ಕಲಾ ಅಂದ ಸುಬ್ಬ. ಪಾಪ ಮೇಸ್ಟ್ರುಗೆ ಹಾಲ್ಟ್ ಆಟ್ಯಾಕ್ ಆಗಿತ್ತು. ಅವರ ಮಗಳನ್ನು ಯಾವನೋ ಅಧಿಕಾರಿಗೆ ಕೊಡಬೇಕು ಅಂತಾ ಇದ್ರಂತೆ. ಸುಬ್ಬ ಮಾತ್ರ ಸೆಲ್ಫ್ ಎಂಪ್ಲಾಯ್ ಮೆಂಟ್ ಸ್ಕೀಮ್ನಾಗೆ ಇಂಟರ್ ನ್ಯಾಸನಲ್ ಮಾತ್ತಾವ್ನೆ.

 

Rating
No votes yet

Comments