ಜೀವನ್ಮುಕ್ತ ( ಕವನ )

ಜೀವನ್ಮುಕ್ತ ( ಕವನ )

ಕವನ

 


ನಾನೊಂದು ಇದ್ದಿಲು


ಒಂದು ಬೆಂಕಿ ಕಿಡಿ


ಗಾಳಿಯ ಸಂಪರ್ಕ


ಹತ್ತಿ ಉರಿಯಲು ಸಾಕು


ನನ್ನ ಕಿಚ್ಚೊಡಲು


 


ನಾನೊಂದು ಬೀಜ


ಮೊಳೆವ ಆಶೆ


ಮಣ್ಣು ನೀರು ಗೊಬ್ಬರ


ಗಾಳಿಗಳ ಜೊತೆ ಸೇರಿ


ಮೊಳೆತು ಹಬ್ಬಿ ಬೆಳೆದು


ಫಲವಾಗಿ ಗಳಿತು


ಎನ್ನಜೀವನ


ಸಾರ್ಥಕವಾಗಬೇಕು


 


ಜೀವ ರಾಶಿಗಳ


ದಾಟಿ ಬಂದಿರುವೆ


ಮನುಷ್ಯನಾಗಿ ಮೈದಳೆಯಲು


ಸಕಲ ಜೀವ ರಾಶಿಗಳ ದಾಟಿ


ಜೀವನ ಸಾರ್ಥಕ್ಯ ಪಡೆದು


ಹುಟ್ಟು ಸಾವುಗಳ ಚಕ್ರನೀಗಿ


' ಜೀವನ್ಮುಕ್ತ ' ನಾಗಬೇಕು