ಎಲ್ಲಿ ಓದ್ಬೇಕು, ಎಲ್ಲಿ ಓದ್ಬಾರ್ದು
ಪತ್ರಿಕೆ, ಪುಸ್ತಕ ಓದದವರ, ಓದಿದರೂ ಖರೀದಿ ಮಾಡದೆ ಉದ್ರಿ ಓದುವವರ ಬಗ್ಗೆ ಬಹಳಷ್ಟು ಓದಿದ್ದೇವೆ, ಕೇಳಿದ್ದೇವೆ. ಆದರೆ ಓದುವವರ ಚಟ ಎಂಥದ್ದು ಎಂದು ಸ್ವಲ್ಪ ನೋಡೋಣ. ನಿಂತಲ್ಲಿ, ಕೂತಲ್ಲಿ, ಸರತಿಯಲ್ಲಿ, ಊಟಕ್ಕೆ ಕೂತಲ್ಲಿ ಎಲ್ಲೆಂದರಲ್ಲಿ ಅಕ್ಷರ ಪುಂಜಗಳು ಕಣ್ಣಿಗೆ ಬಿದ್ದರೆ ಸಾಕು ಅದನ್ನು ಓದಲೇ ಬೇಕು. ಪ್ರಯಾಣದಲ್ಲಿ ಯಾರಾದರೂ ಓದುತ್ತಿದ್ದರೆ ಅವರೊಂದಿಗೆ ತಾವೂ ಕತ್ತು, ಉದ್ದ ಗಿಡ್ಡ ಮಾಡಿ ಹೆಣಗಿ ಓದುವುದನ್ನೂ ನೋಡಿದ್ದೇವೆ. ಎಲ್ಲಾದರೂ ಒಂದು ಸಮಾರಂಭದಲ್ಲಿ ಜನರೊಂದಿಗೆ ಬೇರೆಯದೇ ತಮ್ಮ ಪಾಡಿಗೆ ಪುಸ್ತಕ ಲೋಕದಲ್ಲಿ ಕಳೆದು ಹೋಗುವ ಜನರೂ ಇದ್ದಾರೆ. ಮೊನ್ನೆ ನನ್ನ ಮಗನ ಜನ್ಮ ದಿನಕ್ಕೆ ಮನೆಗೆ ಬಂದ ನನ್ನ ತಂಗಿಯ ೧೦ ವರ್ಷದ ಮತ್ತು ೧೩ ವರ್ಷದ ಪೋರರು ಪುಸ್ತಕ ಹಿಡಿದು ಕೊಂಡು ಕೂತಿದ್ದು ನೋಡಿ ill manners ಎಂದು ಗದರಿಸಿದ್ದೆ. ನನ್ನ ಅಳಿಯಂದಿರು voracious readers . ಹಾಗಂತ ಓದುವುದಕ್ಕೆ ಸಂಪೂರ್ಣ ಸ್ವೇಚ್ಛೆ ಇರಬಾರದು ಎಂದು ನಂಬುವವನು ನಾನು. ನಾನು ಬ್ಯಾಂಕಿನ ಕೆಲಸದ ನಿಮಿತ್ತ ಹೋದಾಗ ಸರತಿಯಲ್ಲಿ ಕಾಯುವ ಸಮಯ ಅಂತರ್ಜಾಲದಿಂದ ಡೌನ್ ಲೋಡ್ ಮಾಡಿಕೊಂಡ ಲೇಖನಗಳನ್ನು ಓದಿ ಕೊಳ್ಳುತ್ತೇನೆ.
ನನ್ನ ಸಂಬಂಧಿಯೊಬ್ಬರಿಗೆ ಶೋಚಕ್ಕೆ ಹೋಗುವಾಗ ಚೊಂಬಿನ ಜೊತೆ ಪತ್ರಿಕೆ ಇರಲೇಬೇಕು ಕೈಯ್ಯಲ್ಲಿ. weird?
ಕಳೆದ ವಾರ ಇಲ್ಲಿನ ಜರೀರ್ ಪುಸ್ತಕ ಮಳಿಗೆಗೆ ಹೋದಾಗ ನನ್ನ ನಾಲ್ಕು ವರ್ಷದ ಮಗಳನ್ನೂ ಕರೆದು ಕೊಂಡು ಹೋಗಿದ್ದೆ. ಅಲ್ಲಿ ತನ್ನ ಕಣ್ಣಿಗೆ ಕಂಡ ಪುಸ್ತಕ ವೊಂದನ್ನು ಶೆಲ್ಫ್ ನಿಂದ ತೆಗೆದು ಅಲ್ಲೇ ನೆಲದ ಮೇಲೆ ಕೂತು ಪುಸ್ತಕ ನೋಡುವುದರಲ್ಲಿ ಮಗ್ನಳಾದಳು ನನ್ನ ಮಗಳು. ಓದಲಿಕ್ಕೆ ಬರುವುದಿಲ್ಲ ಆದರೂ ಪುಸ್ತಕದ ಮೇಲೆ ಅತೀವಾಸಕ್ತಿ ಅವಳಿಗೆ. ಅಂತರ್ಜಾಲದಲ್ಲಿ ಒಂದು ಚಿತ್ರ ಕಣ್ಣಿಗೆ ಬಿತ್ತು. ಇವನ ಓದುವ ಚಟ ಎಲ್ಲರಿಗಿಂತ one step ahead , ಏನಂತೀರಾ?
ಪುಸ್ತಕದ ಮಳಿಗೆಯಲ್ಲಿ ಪುಸ್ತಕದಲ್ಲಿ ಮಗ್ನಳಾದ ಮಗಳ ಚಿತ್ರವನ್ನೂ, ಸೈಕಲ್ ಸವಾರನ ಚಿತ್ರವನ್ನೂ ಹಾಕಿದ್ದೇನೆ, ಓದಲು ಸ್ಫೂರ್ತಿ ಸಿಗಬಹುದೇ ಎಂದು ನೋಡಿ.
ಸೈಕಲ್ ಸವಾರೀ ಓದುಗನ ಚಿತ್ರದ url ಗೊತ್ತಿಲ್ಲ. ಸಂಪದ ನಿರ್ವಹಣೆ ಒಪ್ಪುತ್ತೋ ಇಲ್ಲವೋ?
Rating
Comments
ಉ: ಎಲ್ಲಿ ಓದ್ಬೇಕು, ಎಲ್ಲಿ ಓದ್ಬಾರ್ದು
ಉ: ಎಲ್ಲಿ ಓದ್ಬೇಕು, ಎಲ್ಲಿ ಓದ್ಬಾರ್ದು
ಉ: ಎಲ್ಲಿ ಓದ್ಬೇಕು, ಎಲ್ಲಿ ಓದ್ಬಾರ್ದು