ದಾಂಧಲೆಕೋರರನ್ನು ಅಭಿನಂದಿಸೋಣವೇ?!
ಬೆಂಗಳೂರು ನ್ಯಾಯಾಲಯ ಸಮುಚ್ಚಯದಲ್ಲಿ ಶುಕ್ರವಾರ ಭಯೋತ್ಪಾದನೆ ಮಾಡಿದ ದಂಧಲೆಕೋರರು, ದಂಧೆಯಲ್ಲಿ ಸಫಲರಾಗಿದ್ದಾರೆ. ಶನಿವಾರದ ಪತ್ರಿಕೆಗಳಲ್ಲಿ ಈ ದಾಂಧಲೆ ಧ್ವಜಲಾಂಛನ ತಲೆಬರವಾಯಿತು; ಜನಾರ್ದರನರೆಡ್ಡಿ ಚಿಬಿಐ ವಶ ಮೂಲೆ-ಮುಡುಕಿನ ಸುದ್ದಿಯಾಯಿತು! ಇದಲ್ಲವೇ ಅವರಿಗೆ ಬೇಕಾಗಿದ್ದದ್ದು?
ಮುಂಚೆಗೆಲ್ಲಾ ರಾಜಕೀಯದವರು ಆಟೊ ಚಾಲಕರ, ಫ್ಯಾಕ್ಟ್ರಿ ಕಾರ್ಮಿಕರ ಹೆಸರಿನಲ್ಲಿ ಗೂಂಡಾಗಿರಿ ನಡೆಸಿ ಅವರನ್ನು ಕೆಟ್ಟವರನ್ನಾಗಿ ಮಾಡುತ್ತಿದ್ದರು. ಈಗ ಸ್ಟ್ಯಾಂಡರ್ಡ್ ಜಾಸ್ತಿಯಾಗಿದೆ. ಹೇಯ ಕೃತ್ಯಗಳಿಗೆ ಈಗವರು ’ವೈಟ್ ಕಾಲರ್ ವೃತ್ತಿ’ಯವರನ್ನೂ ಹಿಡಿಯತೊಡಗಿದ್ದಾರೆ! ಯಾರಿಗೆ ಗೊತ್ತು, ನಾಳೆ ಶಿಕ್ಷಕ, ಅಧ್ಯಾಪಕ ಪ್ರಧ್ಯಾಪಕ ವೃತ್ತಿಯವರೂ ಇಂತಹ ಹೆಡ್‌ಲೈನ್ ಆಗಬಹುದು; ಗುರು-ಹಿರಿಯ ಸಾಧುಸಂತರೂ, ವಿರಕ್ತ ಬೈರಾಗೀ ವೇಷಸ್ಥರೂ ಕಲ್ಲೊಗೆಯುವ ಕಾಯಕದಲ್ಲಿ ಮಿಂಚಬಹುದು!
ವರದಿಯುದ್ದಕ್ಕೂ, ಲಾಯರ್ ಗೂಂಡಾಗಿರಿ, ವಕೀಲರ ದಂಧಲೆ ಇತ್ಯಾದಿ ಪ್ರಯೋಗಗಳಾಗಿವೆ. ಲಾಯರ್ ವೃತ್ತಿಯಯವರ ಪೈಕಿಯೂ ಮರ‍್ಯಾದಸ್ಥರೂ, ಪ್ರಾಂಜಲ ಮನಸ್ಸಿನವರೂ ಇದ್ದಾರು. ಇರುವುದಾದರೆ ಅಂಥರು ವೃತ್ತಿಯ ಹೆಸರಿನ ಅಪಮೌಲ್ಯದ ಬಗ್ಗೆ ತೀವ್ರವಾಗಿ ಪ್ರತಿಭಟಿಸಿಯಾರು; ವೃತ್ತಿ ಘನತೆಯನ್ನು ಎತ್ತಿಹಿಡಿದಾರು.