ಮಾಗಿಯ ಮುಂಜಾವು
ಕವನ
ಜಿನುಗುವ ಹಿಮಮಣಿ ಕಣವು
ಕೊರೆಯುವ ಮಾಗಿಯ ಚಳಿಯು
ಮೂಡಣದಿ ಮೂಡಿರಲು ಬೆಳಕಿನ ಹೊಂಬಣ್ಣ
ಕರಗಿ ನೀರಾದವು ಹಿಮಮಣಿ ಸೊಕಲು ರವಿಕಿರಣ
ಹಕ್ಕಿಗಳು ಗರಿ ಬಿಚ್ಚಿ ಹಾರುತಿರೆ ಆಗಸದಿ
ಚಳಿ ಮೆಟ್ಟಿ ಹಾಡುತಿರೆ ಚಿಲಿಪಿಲಿ ಕಲರವದಿ
ನದಿ ತಣ್ಣನೆ ಓಡುತಲಿತ್ತು ಜುಳು ಜುಳು ನಾದದಿ
ಗಿಡಮರಗಳು ಜಾರಿಸುತಿದ್ದವು ಹಿಮಮಣಿಗಳ ಅಂದದಿ
ಮೂಕ ವಿಸ್ಮಿತನಾದೆ ಈ ಮಾಗಿಯ ಮುಂಜಾವಿಗೆ
ಮನಸೋಲದವರುಂಟೆ ಈ ನಿಸರ್ಗದ ರಮಣೀಯತೆಗೆ!