ಒಂದು ಸಂಜೆ
ಒಂದು ಬೇಸಿಗೆಯ ಸಂಜೆ ಮರದಡಿ ಕುಳಿತಿರಲು
ಪ್ರಕೃತಿಯ ಅಭೂತ ವಿಸ್ಮಯ ನನ ಮನವ ಕಾಡಿರಲು
ಯಾರು ಸೃಷ್ಟಿಸಿದರು ಈ ಭೂಮಂಡಲವನು
ಏಕೆ ಸೃಷ್ಟಿಸಲಿಲ್ಲ ಬೇರೆ ಗ್ರಹಗಳಲ್ಲಿ ಈ ಜೀವ ಸಂಕುಲವನು?
ಮರ-ಗಿಡ ಬೆಟ್ಟ-ಗುಡ್ಡ ನದಿ ತೊರೆ ವಿಶಾಲ ಸಮುದ್ರ
ನೆಲ-ಜಲ ಪ್ರಾಣಿ-ಪಕ್ಷಿ ನರಮಾನವರ ಜೀವ ಸಂಕುಲವನು
ಯಾರು ಕೊಟ್ಟರು ಮಾನವರಿಗೆ ಮಾತು ಬುದ್ದಿಶಕ್ತಿಯನು
ಕೊಟ್ಟಿದ್ದರೆ ಏನಾಗುತ್ತಿತ್ತು ಸಕಲ ಜೀವರಾಶಿಗೆ ಈ ಎಲ್ಲ ಶಕ್ತಿಗಳನು?
ಹುಟ್ಟೇಕೆ ಸಾವೇಕೆ, ನೋವೇಕೆ ನಲಿವೇಕೆ
ಜಾತಿ ಪ್ರಭೇದಗಳೇಕೆ ಈ ಸಕಲ ಜೀವರಾಶಿಗಳಿಗೆ?
ಉಸಿರಾಡಲು ಗಾಳಿ, ಕುಡಿಯಲು ನೀರು, ಸಸ್ಯಹಾರಿ-ಮಾಂಸಹಾರಿ
ಒಂದು ಜೀವಿಗೆ ಇನ್ನೊಂದರ ಅವಲಂಭನೆ, ಎಂತ ವಿಚಿತ್ರವಿದು!
ಹಾಲಿಗೆ ಆಕಳುಗಳೇಕೆ, ಮುದ್ದಿಸಲು ನಾಯಿ ಮೊಲಗಳೆ ಸಾಕೇ
ಒಂದನೊಂದು ಕೊಂದು ತಿನ್ನುವ ಕ್ರೂರತೆ ಏಕೆ ಈ ಜಗದಲಿ?
ಸೂರ್ಯ-ಚಂದ್ರರು ಏಕೆ, ಹಗಲು-ಇರುಳುಗಳು ಬೇಕೆ
ಈ ಪ್ರಕೃತಿಯ ಮಡಿಲಲ್ಲಿ ಪ್ರಶ್ನಾರ್ಥಕ ವಿಸ್ಮಯಗಳೇಕೆ?
ಇಂತಹ ಸಮತೋಲನವನು ಬುವಿಯಲಿಟ್ಟವರಾರು
ಅಸಮತೋಲವನಂತು ಮಾಡುತಿಹೆವು ಮನುಜರು ನಾವು
ನಿರುಪಯುಕ್ತ ಪ್ರಶ್ನಾವಳಿಯಲಿ ಮನವಂದು ತೊಯ್ದಾಡಿರಲು
ಪಡುವನದಿ ಸೂರ್ಯ ಜಾರಿದ್ದ, ಆಗಸದಿ ಬೆಳ್ಳಿ ಮೂಡಿದ್ದ.
Comments
ಉ: ಒಂದು ಸಂಜೆ