ಇವಳು
ಮೆಚ್ಚಿ ಬಯಸಿಯೆ
ಗೃಹಿಣಿಯಾದಳು ಇವಳು
ಸಂತೃಪ್ತಿ ತೊನೆಯಿತು
ನಗೆಯ ಹಸಿರು ಹಾಸಿತು
ಮನೆಯಲ್ಲೆನಾ...? ಅವಳು ಬಂದಳು
ಗಳಿಕೆಯಿಲ್ಲದ ದುಡಿಮೆ
ಎಲ್ಲದಕು ಲೆಕ್ಕಾಚಾರ
ಸಣ್ಣ ಆಸೆಗು ಕಡಿವಾಣ
ಸುಸ್ತು ಬೇಸರಕೆಲ್ಲ ಅತೀತ
ಸೇವೆ ಪದದ ಮೇಲ್ಮೆ
ಸೆಟೆದು ನುಡಿದಳಿವಳು
ಒತ್ತಡದ ಬದುಕು ತನ್ನದಲ್ಲ
ವಾತ್ಸಲ್ಯದ ನೆಲೆ
ಕಾಣುವೆನು ಎಲ್ಲರ ಸಂತೋಷದಲಿ
ತನ್ನ ಸುಖವನು
ಅವಿಸ್ಮರಣೀಯ ಕ್ಷಣಗಳು
ಮುದಕೊಡುವ ಬಾಲಲೀಲೆಗಳು...
ಇಷ್ಟೆ ಸಾಕೆನಗೆ
ಪ್ರೀತಿ ಕಾಳಜಿ ಮೆಚ್ಚುಗೆ
ಒಳಗೊಳಗೆ ತಳಮಳ
ಅವಳಿಗೊ ಕೈತುಂಬ ಸಂಪಾದನೆ
ಪಡೆಯಲೊಂದನು
ತ್ಯಾಗಮಾಡಬೇಕಿನ್ನೊಂದನು
ಏನೋ ದ್ವಂದ್ವ
ಗಂಡಿಗಿಲ್ಲದ ಗೊಂದಲ
ವರುಷಗಳು ಕಳೆದಂತೆ
ಅವರವರ ಕಾರ್ಯದಲಿ ವ್ಯಸ್ತ
ಇವಳ ಮನವು ಅಸ್ತವ್ಯಸ್ತ
ಚುಚ್ಚುವುದು ತರತಮವು
ಮನೆಯಲ್ಲೆ ಇರುವೆ ತಣ್ಣಗೆ
ವ್ಯಕ್ತಿತ್ವಕಿಲ್ಲ ಮನ್ನಣೆ
ನೆನಪಾದಳು ಅವಳು
ಕಣ್ಣಮುಂದೆಲ್ಲ ಸಂಪಾದಿಸುತ್ತಿದ್ದ
`ರೆ` ಬೆಳೆಯುತ್ತಿದ್ದವು ಹಲವು ಕೊನೆಗಳು ತುಂಬುತ್ತಿದ್ದವು ಖಾಲಿ ಪುಟಗಳು ಅಮ್ಮಾ..ಇದೋ ನನ್ನ ಮೊದಲ ಪಗಾರ ಕೈಗಿತ್ತಳು ಮಗಳು ಇವಳ ಕಂಗಳಲಿ ಸಾರ್ಥಕ್ಯ ಭಾವ!
Comments
ಉ: ಇವಳು
In reply to ಉ: ಇವಳು by harishsharma.k
ಉ: ಇವಳು
In reply to ಉ: ಇವಳು by Premashri
ಉ: ಇವಳು
ಉ: ಇವಳು
In reply to ಉ: ಇವಳು by venkatb83
ಉ: ಇವಳು