ಅಲಾಪ
ಅದೊಂದು ಮುಂಜಾವದಕನಸ್ಸು
ಅರೆಬೆನ್ನ ರವಿಕೆ ತೊಟ್ಟ ಸಹೋದರಿ
ಅಶ್ಲೀಲ ವಿರೋಧಿ ಸಂಘದ
ಆಳೆತ್ತರದ ಭಿತ್ತಿಪತ್ರ ಹಿಡಿದು ನಡೆದಂತೆಯೇ
ಅವಳ ಮುಖದಲ್ಲಿ ವ್ಯಸನ
ಅವಲೋಕನ ಶೀಲಹರಣದ ಮಾನಮರಣ,
ಅವಳ ಪಾಲಿಗೇಕೆ ಮೆತ್ತಿಕೊಂಡಿತೆಂದು.
ಅನಾದಿ ಕಾಲದಿಂದಲೂ ,ತಾನೇಕೆ
ಆ ಶಿಲ್ಪಿಗೆ ನಗ್ನಳಾಗಿ ಕಂಡೆಯೆಂದು?
ಅರೆ ನಗ್ನ ವಿನ್ಯಾಸದ ವಿವಿಧಭಂಗಿಯ
ಅವಸ್ಥೆಯಲ್ಲಿ ತಾನೇಕೆ ಕಲೆಯಕಂಪು
ಆದೆಯಂದು? ಪುರುಶ ಪ್ರಧಾನ
ಅರಸೊತ್ತಿಗೆ ತನಗೇಕೆ ನಾಟ್ಯ ರಾಣಿಯಂದು,
ಆರಿಸಿ ಆಯೋಜಿಸಿತೆಂದು?
ಅರಿಯದ ಅಂಧಕಾರ ತನಗೇಕೆ
ಆವರಿಸಿ, ಮಧ್ಯಪಾನಿಯ ಕಕ್ಷೆಯಲ್ಲಿ,
ಆ ಕಲಾರಂಗದ ದೃಶ್ಯಗಳಲ್ಲಿ ,
ಅಗರ್ಭ ಶ್ರೀಮಂತಿಕೆಯ ರಸಿಕ ರಾತ್ರಿಗಳಲ್ಲಿ, ನನ್ನ
ಅಂಗ ಅಂಗ ನರ್ತಿಸುತ್ತಿದೆ?
ಆ ಧನ, ಪ್ರತಿಷ್ಠೆಯ ಗುಂಗಿನಲ್ಲಿ ,
ಅಸಂತುಷ್ಟ ಸೌಂದರ್ಯ ಭೋಗಿಗಳ ಮಧ್ಯ
ಆನಂದ ನೀಡುವ ಆಟಿಕೆಯ ಗತ್ತಿನಲ್ಲಿ
ಅನಾವರಣ ಗೊಂಡ ನನ್ನ ಉಬ್ಬುತಗ್ಗುಗಳು
ಆಸರೆ ಇಲ್ಲದೆ ಬಿಚ್ಚಿ ಬೀಳುತಿರುವುವು..
ಆರಾಧಕರ ಮಾತೆಯಾಗಿ
ಆತ್ಮಿಯ ಪತ್ನಿಯಾಗಿ, ಮಗಳಾಗಿ
ಅಕ್ಕತಂಗಿ ಗೆಳತಿಯಾಗಿ
ಆತ್ಮ್ಮಾಭಿಮಾನದ ಒಡತಿಯಾಗಿ,
ಅಭಯೋದಯದ ಬಿಂದುವಾದರೂ, ಚಿವುಟುವಿರೇಕೆ? ನನಗೆ
ಆ ಗರ್ಭದಲ್ಲೆ ಸುಡುವಿರೇಕೆ? ಈ
ಅಂತರ ವೇಕೆ? ವರದಕ್ಷಣೆಯ ಲೋಭದಲ್ಲಿ?
ಆ ಸೃಶ್ಟಿಯೂ ಸೃಶ್ಟಿಸಿತು ನನಗೆ,
ಅನುದಿನವೂ ಪುರುಷನ ಸಮಭಾಗತ್ವಕ್ಕೆ,
ಅಪ್ರತಿಭ ಬದುಕಿನ ಜನಿಕೆಯಾಗಲು.
ಅಗೋಚರ ಭವಿಶ್ಯದ ನೆಮ್ಮದಿಯಾಗಲು.
ಆದರೂ ನಾನು ಈಬೀದಿಯಲ್ಲಿ ಕಲಾ
ಆರಾಧಕರ ಮುಂದೆ ನಗ್ನಳಾಗಿರುವೆನು.ಎಂದು
ಆಲಾಪಿಸುತ್ತಿದ್ದಳು, ಇಂದೇ
ಅನುಷ್ಠಾನಗೊೞಲಿ ನನ್ನಪಾಲಿನ ಸ್ವಾತಂತ್ರ್ಯಎಂದು,
ಅರೆನಗ್ನಾವಸ್ಥೆಯ ಆ ಸಹೋದರಿ........................
೦೦೦೦೦೦೦೦೦೦೦೦೦೦೦೦೦
Comments
ಉ: ಅಲಾಪ
In reply to ಉ: ಅಲಾಪ by gurudutt_r
ಉ: ಅಲಾಪ