ಸಂಕೇತಗಳ ಭಾಷೆ
ಸಂಕೇತಗಳ ಭಾಷೆ
ಬಣ್ಣಗಳು ಎಲ್ಲ ಭಾಷೆಯನ್ನೂ ಮಾತನಾಡಬಲ್ಲವು. ಕೆಂಪÅ ಅಪಾಯದ ಸೂಚಕ. ಹಸಿರು ಸುರಕ್ಷೆಯ ದ್ಯೂತಕ. ತಿನಿಸುಗಳ ಮೇಲೆ ಕೆಂಪÅ ವೃತ ಇದ್ದರೆ ಅದು ಮಾಂಸಾಹಾರವೆಂದು; ಹಸಿರು ವೃತ್ತವಿದ್ದರೆ ಅದು ಸಸ್ಯ ಜನ್ಯ ಆಹಾರವೆಂದು ಅಥ್ರ. ಹಿಂದೆ ಕೆಂಪÅ ಹಿನ್ನೆಲೆಯಲ್ಲಿ ಎಚ್ಚರಿಕೆಯ ಬೋಡ್ರುಗಳು ಇರುತ್ತಿದ್ದವು ಈಗ ಅವು ಹಳದಿ ಹಿನ್ನೆಲೆ ಹೊಂದಿರುತ್ತವೆ. ಟ್ರಾಫಿಕ್ ಸಿಂಬಲ್ಗಳು ಎಲ್ಲೆಡೆ ಒಂದೇ ಇರುತ್ತವೆ. ಹೀಗೆ ಎಲ್ಲೆಡೆ ಒಂದೇ ಸಂಕೇತಗಳನ್ನು ಬಳಸಿದರೆ ಭಾಷೆ ಬಾರದ ಸ್ಥಳಗಳಲ್ಲಿ ನಮ್ಮ ವ್ಯವಹಾರ ಸುಲಭವಾಗುತ್ತದೆ. ಬ್ಯಾಂಕಿನ ಹೆಸರು ಯಾವುದೇ ಭಾಷೆಯಲ್ಲಿ ಬರೆದಿರಲಿ, ಅದರ ಚಿಹ್ನೆ ಎಲ್ಲೆಡೆ ಒಂದೇ ಇದ್ದರೆ ಸಾಕು. ಯಾವುದೇ ದೇಶದ ಉತ್ಪನ್ನ ಯಾವುದೇ ಬ್ರಾಂಡ್ ಹೆಸರಿನ ಟೂತ್ಪೇಸ್್ಟ ಆದರೂ ಅದರ ಕೆಂಪÅ -ಬಿಳಿ ವಿನ್ಯಾಸ ಮತ್ತು ಅಕ್ಷರಗಳಿಂದ ಅದು ಟೂತ್ ಪೇಸ್್ಟ ಎಂದು ತಿಳಿಯುತ್ತದೆ. ಬಟ್ಟೆ ಒಗೆಯುವ ಸಾಬೂನು/ ಪÅಡಿ ಯವುದೇ ಬ್ರಾಂಡ್ ಆದರೂ ಅದರ ವಿನ್ಯಾಸದಲ್ಲಿ ಒಂದು ನಿದ್ರಿಷ್ಟ ಸಾಮ್ಯತೆ ಇರುತ್ತದೆ. ಅಡ್ವೊಕೇಟ್ ಆಫೀಸಾದರೆ ಕಪÅ್ಪ ಹಿನ್ನೆಲೆಯಲ್ಲಿ ಬಿಳಿಯ ಅಕ್ಷರಗಳು. ಕ್ಲಿನಿಕ್ಗಳಾದರೆ ಬಿಳಿಯ ಹಿನ್ನೆಲೆಯಲ್ಲಿ ಕೆಂಪÅ ಅಕ್ಷರಗಳು. ಔಷಧಿ ಅಂಗಡಿಗಳಾದರೆ ಕೆಂಪÅ ಕೂಡು ಚಿಹ್ನೆ.... ಹೀಗೆ ವಿಶ್ವಾದ್ಯಂತ ಎಲ್ಲೆಡೆ ಏಕ ಪ್ರಕಾರವಾಗಿ ಸಂಕೇತಗಳನ್ನು ಬಳಸುತ್ತಾರೆ ಎಂದು ನಾನು ಭಾವಿಸಿದ್ದೆ.
ಸಂಕೇತಗಳು ಒತ್ತಟ್ಟಿಗಿರಲಿ, ಪದ್ಧತಿಗಳೂ ಭಿನ್ನವಾಗಿರುತ್ತವೆ ಎಂದು ತಿಳಿದದ್ದು ನಾನು ವಿದೇಶದಲ್ಲಿ ಸುಮಾರು ಒಂದು ವಷ್ರ ಇರಬೇಕಾಗಿ ಬಂದಾಗ. ರೆವಿನ್ಯೂ ಸ್ಟಾಂಪ್ ಬೇಕಾದರೆ ಯಾವ ಅಂಗಡಿಗೆ ಹೋಗುತ್ತೀರ? ಅಂಚೆ ಕಛೇರಿಗೆ. ಇಲ್ಲದಿದ್ದರೆ, ಸ್ಟೇಷನರಿ ಅಂಗಡಿಗೆ. ಸ್ಟುಡಿಯೋದಲ್ಲಿ ರೆವಿನ್್ಯ ಸ್ಟಾಂಪ್ ಸಿಗುತ್ತದೆ ಎಂದರೆ ನಂಬುವಿರಾ? ಒಂದು ಹಾಳೆಯನ್ನು ಛಾಯಾ ಪ್ರತಿ ಮಾಡಿಸಬೇಕಾದರೆ ಎಲ್ಲಿಗೆ ಹೋಗುತ್ತೇವೆ? ಅದಕ್ಕೆಂದೇ ಪ್ರತ್ಯೇಕವಾಗಿ `ಜೆರಾಕ್್ಸ’ ಅಂಗಡಿಗಳು ಇಲ್ಲದಿದ್ದರೆ ಪÅಸ್ತಕದ ಅಂಗಡಿಯಲ್ಲಿ ಇರುವ ಸಾಧ್ಯತೆಗಳಿವೆ. ಒಂದು ಪÅಸ್ತಕವನ್ನು ಫೆÇೀಟೋಕಾಪಿ ಮಾಡಿಸಲು ಸ್ಟೂಡಿಯೋಗೆ ಹೋಗಬೇಕಾದರೆ? ನಮ್ಮ ದೇಶದಲ್ಲಿ ಅದು ಜೋಕ್ ಆಗುತ್ತದೆ. ಆದರೆ ಲಿಬಿಯಾದಲ್ಲಿ ಅದು ಫ್ಯಾಕ್್ಟ. ಬೆಂಗಳೂರಲ್ಲಿ ತೆಂಗಿನಕಾಯಿ ಬೇಕಾದರೆ ದಿನಸಿ ಅಂಗಡಿಗೆ ಹೋಗಬೇಕು; ತಿಪಟೂರಿನಲ್ಲಿ ತೆಂಗಿನ ಕಾಯಿ ಬೇಕಾದರೆ ತರಕಾರಿ ಅಂಗಡಿಯಲ್ಲಿ ಕೇಳಬೇಕು. ಅಂಗಡಿ ಬಾಗಿಲು ಮುಚ್ಚಿದ್ದರೆ ಅಂಗಡಿ ಮುಚ್ಚಿದೆ ಎಂದುಕೊಳ್ಳುತ್ತೇವೆ. ಆದರೆ ಮುಚ್ಚಿದಬಾಗಿಲ ಮೇಲೆ ತೆರೆದಿದೆ ಎಂದು ನಮಗೆ ತಿಳಿಯದ ಭಾಷೆಯಲ್ಲಿ ಹಾಕಿರುವ ಸಾಧ್ಯತೆಗಳಿವೆ. ಬಾಗಿಲನು ತೆರೆದು ಸೇವೆಯನು ಪಡೆಯಬೇಕು.
ಬೆಂಗಳೂರಿನಲ್ಲಿ ವಿಳಾಸ ಹುಡುಕುವುದರಲ್ಲಿ ನಾನು ಜಾಣ ಎಂದು ಭಾವಿಸಿದ್ದೆ. ಅಂಗಡಿಗಳ ಬೋಡ್್ರ ಕೆಳಗೆ ಕೊನೆಯ ಸಾಲಿನಲ್ಲಿ ಸಾಧಾರಣವಾಗಿ ಆ ಸ್ಥಳದ ಹೆಸರು, ರಸ್ತೆಯ ಹೆಸರು/ ಸಂಖ್ಯೆ ಅಂಗಡಿ ನಂಬರ್ ಬರೆದಿರುತ್ತದೆ. ಹೀಗಾಗಿ ಯಾರನ್ನೂ ಕೇಳದೇ ವಿಳಾಸ ಹುಡುಕ ಬಹುದು. ಒಮ್ಮೆ ನನಗೆ ವಿಪರೀತ ತಲೆಯ ನೋವು ಉಂಟಾಗಿ ಮಾತ್ರೆ ಕೊಳ್ಳಬೇಕಾಯಿತು. ಕಾಲೇಜು ಕ್ಯಾಂಪಸ್ ಉಳಿದಂತೆ ಹೊರಗೆ ಬೇರೆ ಯಾರಿಗೂ ಇಂಗ್ಲಿಷ್ ಕಿಂಚಿತ್ತೂ ಬರುವುದಿಲ್ಲ. ಬೋಡ್ರುಗಳು ಅರಾಬಿಕ್ನಲ್ಲೇ ಇರುತ್ತವೆ. ಸರಿ, ನನ್ನ ಸಾಮಾನ್ಯ ಜಾÕನದ ಮೇಲೆ ಭರವಸೆ ಇಟ್ಟು ಬೀದಿಗಿಳಿದೆ. ಸುಮಾರು ಬೀದಿಗಳನ್ನು ಸುತ್ತಿದರೂ ಎಲ್ಲೂ ಔಷಧಿ ಅಂಗಡಿಗಳ ಬೋಡ್್ರ ಕಾಣಲಿಲ್ಲ. ಇದೇನಿದು? ಔಷಧಿ ಅಂಗಡಿಗಳೇ ಅಗತ್ಯವಿಲ್ಲದಷ್ಟು ಈ ಊರ ಜನರು ಅಷ್ಟೊಂದು ಆರೋಗ್ಯವಂತರೇ ? ಬಹುತೇಕ ಎಲ್ಲ ಅಂಗಡಿಗಳೂ ಹವಾ ನಿಯಂತ್ರಿತವಾಗಿದ್ದರಿಂದ ಬಾಗಿಲು ಹಾಕಿರುತ್ತದೆ. ಅಂಗಡಿ ಒಳಗಿನ ವಿನ್ಯಾಸ ವಸ್ತುಗಳನ್ನು ನೋಡಿದರೆ ಯಾವ ಅಂಗಡಿ ಎಂದು ತಿಳಿಯುವುದು. ನಾನು ಕೆಂಪÅ ಕೂಡು ಚಿಹ್ನೆಯುಳ್ಳ ಬೋಡ್್ರ ನೋಡಿಕೊಂಡೇ ಹೋಗುತ್ತಿದ್ದೆ.
ಕೊನೆಗೆ ನನ್ನ ಗಮನ ಸೆಳೆದದ್ದು ಒಂದು ಹಸಿರು ಚವತಿಯ ಚಂದ್ರನಿದ್ದ ಬೋಡ್್ರ. ಹಸಿರು ಚಂದ್ರನ ಕೋಡುಗಳಲ್ಲಿ ಒಂದು ಗಾಜು ಲೋಟ ಅದಕ್ಕೆ ಸುತ್ತಿಕೊಂಡ ಸಪ್ರ ಹೆಡೆಯೆತ್ತಿದೆ. ಅರೆ! ಹೌದು! ಇದು ಹೈಜಿಯಾ ಬಟ್ಟಲಿಗೆ ಸುತ್ತಿಕೊಂಡ ಎಪಿಡೋರಸ್ ಸಪ್ರ. ಎಸ್ಕ್ಯುಲೇಪಿಯಸ್ ನ ಮಗಳು ಹೈಜಿಯಾ, ಗ್ರೀಕ್ ಆರೋಗ್ಯ ದೇವತೆ. ಅವಳ ಸಂಕೇತ ವೈನ್ ಗಾಬ್ಲೆಟ್ ನಂತಿರುವ ಬಟ್ಟಲಿಗೆ ಸುತ್ತಿಕೊಂಡು ಕುಡಿಯುತ್ತಿರುವ ಸಪ್ರ. ನನ್ನ ನಿರೀಕ್ಷೆಯ ಕೆಂಪÅ ಕೂಡು ಚಿಹ್ನೆಯನ್ನು ಹುಡುಕುವುದನ್ನು ಕೈ ಬಿಟ್ಟೆ. ಆದರೆ ಅದು ನನ್ನನ್ನು ಬಿಡಲಿಲ್ಲ.
ಹಾಗಾದರೆ ನಮ್ಮ ದೇಶದಲ್ಲಿ ಬಳಸುವ ಚಿಹ್ನೆಗಳು ಅಂತರ್ರಾಷ್ಟ್ರೀಯ ಚಿಹ್ನೆಗಳಲ್ಲ. ನಾವೇಕೆ ಕೆಂಪÅ ಕೂಡು ಚಿಹ್ನೆಯನ್ನು ಬಳಸುತ್ತಿದ್ದೇವೆ? ನಾವು ಅರೆಬರೆ ಕಲಿತ ಅರಬರಿಗಿಂತಲೂ ಮೂಖ್ರರೇ? ಇಂಗ್ಲಿಷ್ ನವರ ಮಾತ್ರೆಗಳನ್ನು ನುಂಗುತ್ತಾ ಅದರೊಂದಿಗೇ ಅವರ ಧಮ್ರದ ಚಿಹ್ನೆಯನ್ನೂ ಕಣ್ಣುಮುಚ್ಚಿಕೊಂಡು ನುಂಗಿ ಜೀಣ್ರಿಸಿಕೊಂಡು ಬಿಟ್ಟಿದ್ದೇವಾ? ಕ್ರಿಷ್ಚಿಯನ್ನರು ಶಿಲುಬೆಯ ಗುರುತಿನ ಸ್ವಲ್ಪ ಮಾಪ್ರಾಟಾದ ಕೂಡು ಚಿಹ್ನೆಯನ್ನು ಬಳಸಿದರೆ ಮುಸಲ್ಮಾನರು ಏಕೆ ಅದನ್ನು ಬಳಸಬೇಕು ಎಂದು ಅವರು ಹಸಿರು ಚವತಿಯ ಚಂದ್ರನನ್ನು ಬಳಸಿದ್ದಾರೆ. ಈ ವಿಷಯ ಯಾವ ಹಿಂದುಗೂ ಇದುವರೆಗೂ ಹೊಳೆದಿಲ್ಲವೇ? ನಾವು ಓಂ ಚಿಹ್ನೆಯನ್ನು ಏಕೆ ಬಳಸಬಾರದು? ಅಥವಾ ಇದೆಲ್ಲ ಗೊತ್ತಿದ್ದರೂ ಮತಾಂಧರಾಗಬಾರದು ಎಂಬ ವಿಶಾಲ ಮನೋಭಾವನೆಯಿಂದ ಅದನ್ನು ಒಪ್ಪಿಕೊಂಡೆವೇ? ಇದು ಅತಾಕ್ರಿಕ. ಕಡೇ ಪಕ್ಷ ನಮ್ಮ ಆಯುವ್ರೇದ ಔಷಧಗಳಿಗೆ ಓಂ ಗುರುತನ್ನು ಬಳಸಬಾರದೇಕೆ? ನಮ್ಮ ಮನಸ್ಸಿಗೇ ಬಾರದ ರೀತಿಯಲ್ಲಿ ಹೇಗೆ ತಮ್ಮ ಮತದ ಪ್ರಚಾರವನ್ನು ಮಾಡಿದ್ದಾರೆ? ಇದನ್ನು ಅರಿಯಲು ನಮಗೆ ಇನ್ನೂರು ವಷ್ರಗಳು ಬೇಕಾದವೇ. ಈ ಕೂಡಲೇ ನಾವು ಎಲ್ಲಾ ಔಷಧ ಅಂಗಡಿ ಆಸ್ಪತ್ರೆಗಳ ಚಿಹ್ನೆಯನ್ನು ಓಂ ಎಂದು ಬದಲಾಯಿಸುವ ಧಮ್ರ ಶ್ರಧ್ದೆ , ಗುಂಡಿಗೆ ಛಲ ನಮ್ಮಲ್ಲಿಉಳಿದಿದೆಯೇ?
ಯಾವುದೇ ವೈದ್ಯ ಪದ್ಧತಿಯಲ್ಲೂ ಔಷಧಿಯ ಗುಣವಧ್ರನೆಗೆ ಧಾಮ್ರಿಕ ನಂಬಿಕೆಯನ್ನು ಮೇಳೈಸುತ್ತಾರೆ. ನಮ್ಮ ದೇಹಕ್ಕೆ ಫಾಸ್ಫರಸ್, ಪೆÇಟ್ಯಾಷಿಯಂ, ಅಯನ್್ರ ನಂತಹ ವಸ್ತುಗಳೇ ಬೇಕಾಗಿದ್ದರೂ, ಅದನ್ನು ಮಂತ್ರಿಸಿ ಕೊಟ್ಟರೆ, ಅದರ ಪ್ಲಸೀಬೋ ಪರಿಣಾಮ ಇಮ್ಮಡಿಗೊಳ್ಳುತ್ತದೆ. ಆದರೆ ನಮ್ಮದೇ ದೇವರುಗಳು ಇರುವಾಗ ಅನ್ಯಥಾ ಶರಣಂ ನಾಸ್ತಿ ಎನ್ನಬಾರದೇ?
ಹಂಗೇರಿಯ ಔಷಧಗಳ ಮೇಲೆ ಹೈಜಿಯಾಗೆ ಸುತ್ತಿದ ಎಪಿಡೋರಸ್ ಸಪ್ರವಿದ್ದರೆ, ಯೂರೋಪಿಯನ್ ದೇಶಗಳಲ್ಲಿ ಕಡ್ಯೂಸಿಯಸ್ ಸಂಕೇತವನ್ನು ಬಳಸುತ್ತಾರೆ. ಕಡ್ಯೂಸಿಯಸ್ ಎಂದರೆ, ರೋಮನರ ಮಕ್ಯ್ರುರಿ ಅಥವಾ ಗ್ರೀಕ್ರ ಹಮ್ರಿಸ್ (ದೇವ ದೂತ)ನ ಕೈಲಿದ್ದ ರೆಕ್ಕೆಗಳುಳ್ಳ ದಂಡಕ್ಕೆ ಎರಡು ಹಾವುಗಳು ಸುತ್ತಿಕೊಂಡಿರುವ ಚಿಹ್ನೆ.
ಸ್ಕ್ಯಾಂಡಿನೇವಿಯಾದಲ್ಲ್ಲೂ, ಸ್ಕಾಟ್ಲ್ಯಾಂಡಿನಲ್ಲೂ, ಕಲಬತ್ತು (ಮೂಲಿಕೆಗಳನ್ನು ಅರೆಯಲು ಬಳಸುವ ಕುಟ್ಟಿಣಿ ಮತ್ತು ಪÅಟ್ತ ಒರಳು) ಔಷಧ / ವೈದ್ಯಕೀಯ ಸೇವೆಯ ಚಿಹ್ನೆಯಾಗಿದೆ. ನಮ್ಮದೇ ಇಂಡೀಜೀನಸ್ ಔಷಧ ಪದ್ಧತಿ ಹೊಂದಿದ್ದು, ಅಶ್ವಿನಿ ದೇವತೆ, ಚ್ಯವನ, ಧನ್ವಂತರಿಯಂತಹ ದೇವರುಗಳು, ಚರಕ ಶುಶ್ರುತರಂತಹ ಮಹಾನ್ ವೈದ್ಯರು ಇರುವ ನಮಗೆ ಪರಕಿಯ ಸಂಕೇತಗಳ ಹಂಗೇಕೆ ಎಂದು ಚಿಂತೆಯಾಯಿತು.
ಡಾ|| ಉದಯರವಿ ಶಾಸ್ತ್ರೀ
Comments
ಉ: ಸಂಕೇತಗಳ ಭಾಷೆ