ಈಜಿಪ್ಟಿನ ಸ್ತ್ರೀ ವಾದಿ ಡಾ| ನವಲ್ ಎಲ್ ಸಾದವಿ

ಈಜಿಪ್ಟಿನ ಸ್ತ್ರೀ ವಾದಿ ಡಾ| ನವಲ್ ಎಲ್ ಸಾದವಿ

 ಈಕೆ ದೇವರ ಬಗ್ಗೆ, ಪ್ರವಾದಿಗಳ ಬಗ್ಗೆ ಹಾಗೂ ದೈವೀಕವಾದ ಧಮ್ರದ ಬಗ್ಗೆ ಅವಹೇಳನವಾಗಿ/ ಆಕ್ರಮಣಕಾರಿಯಾಗಿ ಮಾತನಾಡಿದ್ದಾಳೆ’  ಎಂಬ ಕಾರಣಕ್ಕೆ   ಇಸ್ಲಾಮಿಕ್ ರಿಸಚ್್ರ ಕೌನ್ಸಿಲ್ ಇವಳ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಯೋಚಿಸುತ್ತಿದೆ.  ಈ ರೀತಿಯ ಉದಾಹರಣೆಗಳು ನಮಗೆ ಅಲ್ಲಲ್ಲಿ ಅಪರೂಪಕ್ಕೆ ಸಿಗುತ್ತವೆ. ಇಸ್ಲಾಂ ಧಮ್ರದ ಎಲ್ಲ ನಿಯಮಗಳನ್ನೂ ಪ್ರತಿಯೊಬ್ಬ ಮುಸಲ್ಮಾನನೂ  ಸವ್ರಸಮ್ಮತದಿಂದ,  ಶ್ರದ್ಧೆ ಹಾಗೂ ಮುತುವಜ್ರಿಯಿಂದ ಪಾಲಿಸುತ್ತಾನೆ ಎಂಬ ಸಾಧಾರಣ ಭಾವನೆ ಎಲ್ಲರಲ್ಲಿ ಇದೆ. ಆದರೆ, ಆ ಧಮ್ರದ ಬಗ್ಗೆ ವಿಮಶ್ರಾತ್ಮಕವಾಗಿ  ಯೋಚಿಸಬಲ್ಲ, ಹಾಗೂ ಯೋಚಿಸಿದ್ದನ್ನು ದಿಟ್ಟವಾಗಿ ಅಭಿವ್ಯಕ್ತಿಸಬಲ್ಲ ಒಬ್ಬ ಮುಸ್ಲಿಂ, ಅದರಲ್ಲೂ ಮುಸ್ಲಿಂ ಮಹಿಳೆ  ಇದ್ದಾಳೆಂದರೆ  ಅದೊಂದು ಸೋಜಿಗದ ವಿಷಯವೇ ಸರಿ.

‘ಅಲ್ ಅಝರ್’ ಮುಸ್ಲಿಂ ಪ್ರಪಂಚದ ಒಂದು ಪ್ರಮುಖ ಧಾಮ್ರಿಕ ಕೇಂದ್ರ. ಈ ಸಂಸ್ಥೆ ಡಾ||ನವಲ್ ಎಲ್ ಸಾದವಿ ಎಂಬ ಈಜಿಪ್ಟಿನ ಒಬ್ಬ ಖ್ಯಾತ ಸ್ತ್ರೀವಾದಿ ಬರಹಗಾತ್ರಿ, ವೈದ್ಯೆ, ಮನೋರೋಗ ತಜೆÕ  ಹಾಗೂ ಹೋರಾಟಗಾತ್ರಿಯ ಮೇಲೆ ತೆಗೆದುಕೊಳ್ಳಲಿರುವ ಕ್ರಮವು ಇದುವರಿಗೆ ಆಕೆ ಎದುರಿಸಿರುವ ಅನೇಕ ಬೆದರಿಕೆಗಳಲ್ಲಿ ಒಂದು ಮಾತ್ರ.

ಇತ್ತೀಚೆಗೆ ಜನವರಿಯಲ್ಲಿ ಕೈರೋ ಪÅಸ್ತಕ ಮೇಳದಲ್ಲಿ ಒಂದು ನಾಟಕವನ್ನೂ ಒಳಗೊಂಡಂತೆ ನವಲ್ ಎಲ್ ಸಾದವಿಯ ಐದು ಪÅಸ್ತಕಗಳನ್ನು  ಬಹಿಷ್ಕರಿಸಿದರು. ಅವುಗಳ ಎಲ್ಲ ಪ್ರತಿಗಳನ್ನೂ ನಾಶಗೊಳಿಸಿದರು. ‘ಶೃಂಗ  ಸಭೆಯಲ್ಲಿ ದೇವರ ರಾಜಿನಾಮೆ’  ಎಂಬ ನಾಟಕದಲ್ಲಿ ಇಸ್ಲಾಂ ಧಮ್ರವನ್ನು ನಿಂದಿಸಿದ್ದಾಳೆಂದು ಅವರ ಆಪಾದನೆ. ಈಜಿಪ್್ಟ ಪತ್ರಿಕೆಗಳ ಸಂದಶ್ರನದಲ್ಲಿ ಆಕೆ, ‘ದೇವರು ಒಂದು ಆತ್ಮದ ರೂಪದಲ್ಲಿರುವುದರಿಂದ ಅದನ್ನು ಗಂಡು/ ಹೆಣ್ಣು ಎಂದು ಹೇಳಲು ಸಾಧ್ಯವಿಲ್ಲ’ ಎಂದಿದ್ದಾರೆ.  2001ರಲ್ಲಿ ಈಕೆಯ ಮೇಲೆ ಧಮ್ರಪರಿತ್ಯಾಗದ ಆಪಾದನೆ ಹೊರಿಸಿ, ಶರೀಯ ಕಾನೂನಿನ ಪ್ರಕಾರ, ತನ್ನ ಗಂಡನನ್ನು ವಿಚ್ಛೇದಿಸುವಂತೆ  ಒತ್ತಾಯಿಸಿದರು.

ಈಜಿಪ್ಟಿನ ‘ಬುದ್ಧಿಜೀವಿಗಳ’ ಹೇಡಿತನ ಕಂಡು ಆಕೆಗೆ ರೋಸಿಹೋಗಿದೆ. ನನ್ನ ಪÅಸ್ತಕದಲ್ಲಿ ಧಮ್ರದ ವಿರುದ್ಧವಾದದ್ದು ಏನು ಇಲ್ಲ ಒಂದು ಸೃಜನಶೀಲ ಕೃತಿಯನ್ನು ಟೀಕೆ ಮಾಡಬೇಕಾದದ್ದು ವಿಮಶ್ರಕರು, ಧಮ್ರಿಕ ಗುರುಗಳೂ ಅಥವಾ ಸಕ್ರಾರದ ಅಧಿಕಾರಶಾಹಿಗಳಲ್ಲ. ಈ ಪÅಸ್ತಕವು ಈಗಿನ ಈಜಿಪ್ಟಿನ ಸಮಾಜೋ-ಆಥ್ರಿಕ ಸಮಸ್ಯೆಗಳನ್ನು ಕುರಿತಾದದ್ದು ಅಷ್ಟೇ ಎಂದಿದ್ದಾರೆ.

ಸಾದವಿ ರಾಜಕೀಯ ಕೈದಿಯಾಗಿದ್ದು, ಈಜಿಪ್ಟಿಗೆ ಹಿಂದಿರುಗುವ ವೊದಲು ದೇಶಭಷ್ಟಳಾಗಿ ಐದುವಷ್ರಗಳ ಕಾಲ ಅಮೆರಿಕದದಲ್ಲಿದ್ದರು. ಮಕ್ಕಳು ತಮ್ಮ ತಂದೆಯ ಹೆಸರನ್ನು ಇಟ್ಟುಕೊಳ್ಳುವ ಬದಲು ತಾಯಂದಿರ ಹೆಸರನ್ನು ಇಟ್ಟುಕೊಳ್ಳಬೇಕು ಎಂಬ ತನ್ನ ಮಗಳ ಅಭಿಪ್ರಾಯವನ್ನು ಬೆಂಬಲಿಸುತ್ತಿರುವ ಆಪಾದನೆಯನ್ನೂ ಎದುರಿಸುತ್ತಿದ್ದಾರೆ.

ಮುವತ್ತಕ್ಕೂ ಅಧಿಕ ಪÅಸ್ತಕಗಳನ್ನು ಬರೆದಿದ್ದು, ಅನೇಕ ಪÅಸ್ತಕಗಳು ಬಹಿಷ್ಕೃತ ವಾಗಿವೆ. ಸಾಮಾಜಿಕ ಆರೋಗ್ಯದ ಇಲಾಖೆಯ ಡೈರೆಕ್ಟರ್ ಜನರಲ್ ಆಗಿದ್ದ ಈಕೆಯನ್ನು 1972ರಲ್ಲಿ ಕೆಲಸದಿಂದ ವಜಾಮಾಡಿದ್ದಕ್ಕೆ ಕಾರಣ ಆಕೆ ವಿಮೆನ್ ಆ್ಯಂಡ್ ಸೆಕ್್ಸ ಎಂಬ ಪÅಸ್ತಕ ಬರೆದದ್ದು. ಇದರಲ್ಲಿ ಸ್ತ್ರೀಯರ ಲೈಂಗಿಕ ಶೋಷಣೆ, ವೇಷ್ಯಾವಾಟಿಕೆ, ಮತ್ತು ಸ್ತ್ರೀ ಜನನೇಂದ್ರಿಯ ವಿರೂಪಗೊಳಿಸುವ ಹಿಂಸೆ, ಇನ್ಸೆಸ್್ಟ, ಹಾಗೂ ಲೈಂಗಿಕ-ಸಾಂಕ್ರಮಿಕ ರೋಗಗಳು ಇವೆಲ್ಲದರ ಬಗ್ಗೆ ವಿಚಾರ ಮಾಡಿರುವುದು.

1931ರ ಅಕ್ಟೋಬರ್ 27ರಂದು ಕಫರ್ ತಾಹ್ಲ ದ ಒಂದು ಸಣ್ಣ ಹಳ್ಳಿಯಲ್ಲಿ ಒಂಭತ್ತು ಮಕ್ಕಳ ಸಂಸರದಲ್ಲಿ ಹಿರಿಯ ಮಗುವಾಗಿ ಹುಟ್ಟಿದಳು ಸಾದವಿ. ಸಾಕಷ್ಟು ಪ್ರಗತಿಪರ ಆಲೋಚನೆಗಳನ್ನು ಹೊಂದಿದ್ದ ಅವರ ತಂದೆ, ಶಿಕ್ಷಣ ಇಲಾಖೆಯಲ್ಲಿ ಸಕ್ರಾರಿ ಅಧಿಕಾರಿಯಾಗಿದ್ದರು. 1919ರ ಕ್ರಾಂತಿಯಲ್ಲಿ ರಾಜರ ಆಳ್ವಿಕೆಯನ್ನು ವಿರೋಧಿಸಿದ್ದ ಕಾರಣ ಹತ್ತು ವಷ್ರಗಳ ಕಾಲ ಬಡ್ತಿ ಯನ್ನು ಹಿಡಿದಿಡಲಾಗಿತ್ತು.  ಆದರೆ ದೊಡ್ಡ ಸಂಸಾರದ ಭಾರವನ್ನು ಸಾದವಿ ಮೇಲೆ ಹೊರಿಸಿ,  ತಂದೆ-ತಾಯಿಯರು ಬೇಗ ಇಹಲೋಕ ತ್ಯಜಿಸಿದರು. ಕೈರೋ ವಿಶ್ವವಿದ್ಯಾಲಯದಲ್ಲಿ 1955ರಲಿ ಮೆಡಿಕಲ್ ಪದವಿ ಪಡೆದರು. ಅವರ ಅಧ್ಯಯನದ ಉದ್ದಕ್ಕೂ, ಹೆಣ್ಣಿನ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಆಕೆ, ದಮನಕಾರಿ ಸಾಂಸ್ಕೃತಿಕ ಅಚಾರಗಳ, ಪಿತ್ರು ಪ್ರಧಾನ ಸಂಸಾರಗಳ ದೌಜ್ರನ್ಯ ವಗ್ರದ ದೌಜ್ರನ್ಯ ಇವುಗಳ ಹಿನ್ನೆಲೆಯಲ್ಲೇ ನೋಡಿದರು.

ಡಾಕ್ಟರ್ ಆಗಿ ತನ್ನ ಹುಟ್ಟೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಅಲ್ಲಿಯ ಗ್ರಾಮೀಣ ಸ್ತ್ರೀ ಶೋಷಣೆ, ಅಸಮಾನತೆಗಳನ್ನು ಗಮನಿಸಿ ಅವುಗಳ ವಿರುದ್ಧ ಹೋರಾಡಲು ಪ್ರಾರಂಭಿಸಿದಳು. ಕೌಟುಂಬಿಕ ಕ್ರೌಯ್ರಗಳ ವಿರುದ್ಧ ತನ್ನ ರೋಗಿಗಳನ್ನು ರಕ್ಷಿಸಲು ಪ್ರಯತ್ನಿಸಿ, ಹೋರಾಡಿದಾಗ ಆಕೆಯನ್ನು ಕೈರೋಗೆ ವಗ್ರಮಾಡಿದಾಗ ಅಲ್ಲಿ ಆಕೆ ಮೂರನೆಯ ಬಾರಿಗೆ ಮದುವೆಯಾದರು. ಷರಿಫ್ ಹೆತಾತ ಎಂಬ ಈತನೂ ರಾಜಕೀಯ ಕೈದಿಯಗಿ 13ವಷ್ರಗಳ ಕಾಲ ಸೆರೆವಾಸ ಅನುಭವಿಸಿದವ.

 

1972ರಲ್ಲಿ ಅಕೆ  ಬರೆದ ‘ಉಮನ್ ಆಂಡ್ ಸೆಕ್್ಸ’ ಎಂಬ ಪÅಸ್ತಕದಲ್ಲಿ ಸ್ತ್ರೀ ಶೋಷಣೆಯ ನಾನಾ ಮುಖಗಳನ್ನು ಪರಿಚಯಿಸಿದ್ದು, ಅದರಲ್ಲಿ ಸ್ತ್ರೀ ಜನನಾಂಗ ವಿರೂಪಗೊಳಿಸುವುದರ ವಿರುದ್ಧವೂ ಬರೆದಿದ್ದಾರೆ. ಇದು ಸ್ತ್ರೀ ವಾದದ ಎರಡನೆಯ ಅಲೆಗೆ ನಾಂದಿಯಾಯಿತು. ಇದರ ಪರಿಣಾಮವಾಗಿ ಹಾಗೂ ಅವರ ರಾಜಕೀಯ ಚಳುವಳಿಗಳ ಪರಿಣಾಮವಾಗಿ  ಆರೋಗ್ಯ ಇಲಾಖೆಯ ಆಕೆಯ ಕೆಲಸ ಕಳೆದುಕೊಳ್ಳಬೇಕಾಯಿತು.

ಸಕ್ರಾರಕ್ಕೆ ಅಪಾಯಕಾರಿ ವ್ಯಕ್ತಿ ಎಂದೇ ಈಕೆಯನ್ನು ನೋಡುತ್ತಿದ್ದ ಅಧ್ಯಕ್ಷ ಅನ್ವರ್ ಅಲ್-ಸಾದತ್, ಜೆರುಸಲಮ್ ಶಾಂತಿ ಒಪ್ಪಂದವನ್ನು ವಿರೋಧಿಸಿದ ಇತರರೊಂದಿಗೆ ಅಕೆಯನ್ನು 1981ರ ಸೆಪ್ಟೆಂಬರ್ನಲ್ಲಿ ಬಂಧಿಸಿದ. ಅದೇ ವಷ್ರ, ಸಾದತ್ನ ಹತ್ಯೆಯಾದ  ಒಂದು ತಿಂಗಳ ನಂತರ ಆಕೆಯ ಬಿಡುಗಡೆಯಾಯಿತು. ‘ಲೇಖನಿ ಹಿಡಿದು ಬರೆಯಲು ಪ್ರಾರಂಭಿಸಿದಾಗಿನಿಂದ ಅಪಾಯವು ನನ್ನ ಜೀವನದ ಒಂದು ಭಾಗವಾಗಿಹೋಗಿದೆ. ಈ ಪ್ರಪಂಚದಲ್ಲಿ ಸತ್ಯಕ್ಕಿಂತ ಹೆಚ್ಚು ತೊಂದರೆ ಕೊಡುವ ವಸ್ತು ಬೇರೊಂದಿಲ್ಲ’ ಎಂದು ಅಕೆ ಹೇಳಿದ್ದಾಳೆ.

ಸಾದವಿಯ ‘ಮಹಿಳಾ ಕಾರಾಗೃಹದ ನೆನಪÅಗಳು 1983’ ಎಂಬ ಪÅಸ್ತಕ ಹಾಗೂ  ‘ಎ ಉಮನ್ ಅಟ್ ಪಾಯಿಂಟ್ ಝೀರೋ’ ಎಂಬ  ಪÅಸ್ತಕ ಎರಡೂ ತನ್ನ ಕಾರಾಗೃಹ ಅನುಭವಗಳಿಂದ ಬರೆದ ಕೃತಿಗಳು. 1988ರಲ್ಲಿ ಇಸ್ಲಾಮ್ವಾದಿಗಳಿಂದ  ಆಕೆಯ ಜೀವಕ್ಕೆ ಸಂಚಕಾರ ಬಂದಾಗ ಈಜಿಪ್್ಟ ತೊರೆದು, ಅಮೆರಿಕದಲ್ಲಿ ನೆಲೆಸಿ ಡ್ಯೂಕ್ ಯೂನಿವಸ್ರಿಟಿ  ಹಾಗೂ ವಾಶಿಂಗ್ಟನ್ ಯೂನಿವಸ್ರಿಟಿ ಯಲ್ಲಿ ಬೋಧಕ ಹುದ್ದೆ ಮಾಡಿದರು.

 

ಇವರ ಇತರ ಕೃತಿಗಳು “ಈವ್ಳ ಅಗೋಚರ ಮುಖ’ ,  ‘ನೈಲ್ ನದಿಯಲ್ಲಿ ದೇವರ ಮರಣ’, ‘ಇಮಾಮಿನ ಪತನ’, ಹಾಗೂ ‘ಸುತ್ತುಗಟ್ಟುವ  ಹಾಡು’ ನವಾಲ್ ಎಲ್ ಸಾದವಿ ಹೇಳುವ ಪ್ರಕಾರ, ಹಜ್ನಲ್ಲಿರುವ  ಕಪÅ್ಪ ಕಲ್ಲಿಗೆ ಮುತ್ತಿಕ್ಕುವ ಪದ್ಧತಿಯಂತಹ ಅನೇಕ ಪದ್ಧತಿಗಳಿಗೆ ಇಸ್ಲಾಮ್ ಪÇವ್ರದ ಕ್ರಿಶ್ಚಿಯನ್ ಅಲ್ಲದ ಧಮ್ರಗಳ ಮೂಲಗಳಿವೆ ಎನ್ನುತ್ತಾರೆ.

Comments