ಹೋಳಿ ಹಬ್ಬದಲ್ಲಿ ಸಗಣಿ ಎರಚಿದ್ದು
ಬೆಳಗ್ಗೆನೇ ನಮ್ಮ ಗೌಡಪ್ಪ ಎಲ್ಲರಿಗೂ ಪೋನ್ ಮಾಡ್ದ. ಇನ್ನೂ ಕೆರೆತಾವ ಇದ್ದಂಗೆನೇ ಪೋನ್ ಬಂತು. ಅದು ವೈಬ್ರೇಟಿಂಗ್ ಮೋಡಲ್ಲಿ ಮಡಗಿದ್ದೆ. ಎಲ್ಲೆಲ್ಲೀ ನಡುಗಿತ್ತು. ಏನ್ರೀ ಗೌಡ್ರೆ ಅಂದೆ. ನೋಡ್ಲಾ, ಈ ಬಾರಿ ಸಾನೇ ಜೋರಾಗಿ ಹೋಳಿ ಹಬ್ಬ ಮಾಡುವಾ, ಎಲ್ಲಾರೂ ಪಂಚಾಯ್ತಿ ಕಟ್ಟೆ ತಾವ ಬರ್ರಲಾ ಅಂದ. ಏನ್ಲಾ ಅದು ಢರ್ ಬುರ್ ಸವಂಡ್ ಬತ್ತಾ ಐತೆ ಅಂದ ಗೌಡಪ್ಪ. ಅದಾ ಹಳಸಂಧಿ ಕಾಳು ಪ್ರಭಾವ, ಅದು ಬೇಡ ಬುಡಿ ಬತ್ತೀನಿ ಅಂದೆ. ಸರಿ ಎಲ್ಲಾರೂ ಪಂಚಾಯ್ತಿ ಕಟ್ಟೆ ತಾವ ಸೇರಿದ್ವಿ. ಗೌಡಪ್ಪ ಬಂದು ನೋಡ್ರಲಾ, ಈಗ ನಮ್ಮ ಯಡೂರಪ್ಪಂಗೆ ಮತ್ತೆ ಮುಕ್ಕಮಂತ್ರಿ ಆಗೋ ಚಾನ್ಸ್ ಐತೆ. ಹಂಗಾಗಿ ನಾವು ಹಬ್ಬ ಜೋರಾಗಿ ಆಚರಿಸಿ, ಪೇಪರ್ನಾಗೆ ಬಂದ್ರೆ, ನಂಗೆ ಯಾವುದಾದ್ರೂ ನಿಗಮ ಮಂಡಳಿ ಅಧ್ಯಕ್ಸ ಸ್ಥಾನ ದೊರಿತದೆ , ನಿಮ್ಮ ಸಹಕಾರ ಬೇಕು ಕನ್ರಲಾ ಅಂದ. ರೀ ಅಲ್ಲೇ ಈಸ್ವರಪ್ಪ,ಅಡ್ಚಾಣಿ, ಅನಂತು ಗೂಟ ಬಡಿತಾವ್ರೆ, ಇನ್ನೆಲ್ಲಿ ಅಧ್ಯಕ್ಸ ಸ್ಥಾನ ಅಂದ ಸುಬ್ಬ, ಬುಡ್ರಲಾ ಅಂದ ಗೌಡಪ್ಪ, ಇವನು ಹೇಳಿದ ಮ್ಯಾಕೆ ಇಲ್ಲಾ ಅನ್ನಕ್ಕೆ ಆಯ್ತದಾ, ಹೂಂ ಅಂದ್ವಿ.
ಸರಿ ನಮ್ಮೂರು ಸಿದ್ದೇಸನ ಗುಡಿಯಲ್ಲಿ ಮರದ ಕಾಮಣ್ಣನ ಮಾಡಿ ಕೂರಿಸಿದ್ವಿ. ಮಗಂದು ಅದು ನೋಡಕ್ಕೆ ಗೌಡಪ್ಪನ ತರಾನೇ ಇತ್ತು. ನೋಡ್ದೋರು ಏನ್ರಲಾ ಗೌಡಪ್ಪನ ಪ್ರತಿಮೆ ಅನಾವರಣ ಆಗೈತೆ ಅನ್ನೋರು. ಏಥೂ. ಹುಡುಗರನ್ನು ಬಿಟ್ಟು ಹೋಗೋ ಬರೋ ವಾಹನಗಳನ್ನು ತಡೆದು ದುಡ್ಡು ವಸೂಲಿ ಮಾಡ್ತಾ ಇದ್ವಿ. ಅದೆಂಗೋ ಪೋಲಿಸರಿಗೆ ಗೊತ್ತಾಗಿ ಗೌಡಪ್ಪನ್ನ ಕರೆದು ಸಾನೇ ಉಗಿದ್ರು. ಅಟ್ಟೊತ್ತಿಗಾಗಲೇ 50ಸಾವಿರ ಕಲೆಕ್ಟ್ ಆಗಿತ್ತು. ಆದ್ರೆ ಗೌಡಪ್ಪ ಮತ್ತೆ ಸಿದ್ದನ ಮ್ಯಾಕೆ 420ಕೇಸ್ ಬುಕ್ಕಾಗಿತ್ತು.
ಸರಿ ನಾಳೆ ಹೋಳಿ ಹಬ್ಬ ಅಂದ್ರೆ , ಹಿಂದಿನ ದಿನ ನಾಟಕ ಮಡಗಿದ್ವಿ. "ಕಾಮ ಲೀಲೆ" ಅಂತಾ, ಮಹಿಳೆಯರು ಈ ಮುಂಡೇ ಮಕ್ಕಳಿಗೆ ಏನಾಗಿದೆ ಅನ್ನೋರು. ಸರಿ ನಾಟಕ 8ಕ್ಕೆ ಅಂದ್ರೆ, ಎಲ್ಲಾರೂ ಸಂಜೆ 6ಕ್ಕೆ ಗೌಡಪ್ಪನ ತೋಟದಾಗೆ ಸೇರಿ ಸಾನೇ ಬೀರ್ ಪೋಣಿಸಿದ್ವಿ. ಲೇ ಬೀರ್ ಬಾಟಲಿ ಎಸಿಬೇಡ್ರೋ, ನಾಳೆ ಹೋಳಿ ಹಬ್ಬಕ್ಕೆ ಬತ್ತದೆ ಅಂದ ಗೌಡಪ್ಪ. ನಾಟಕದಾಗೆ ಎಲ್ಲಾರೂ ತೂರಾಡಿದ್ದೇ ತೂರಾಡಿದ್ದು, ಮಹಿಳಾ ಅಧ್ಯಕ್ಸೆ ಬಸಮ್ಮನ ಮೇಲೆ ಬೀಳ್ದೇ ಇದ್ದೋರೆ ಪಾಪಿ. ಬಸಮ್ಮ ಮಹಿಳಾ ಆಯೋಗಕ್ಕೆ ದೂರು ಕೊಡ್ತೀನಿ ಅಂತಾ ಹೋಯ್ತು. ನಾಟಕದಾಗೆ ಅಮ್ಮನ್, ಅಕ್ಕನ್ ಎಲ್ಲಾ ಬತ್ತಿದಾಗನೇ, ಹಳ್ಳಿ ಜನ ಮುಂಡೇ ಮಕ್ಕಳು ಪುಕ್ಸಟ್ಟೆ ಕಾಸಲ್ಲಿ ಸಾನೇ ಕುಡಿದವ್ರೆ ಅಂದು ಹೊಂಟೇ ಹೋದ್ರು. ನಾವು ಯಾವ ರೇಂಜಿಗೆ ಟೈಟಾಗಿದ್ವಿ ಅಂದ್ರೆ ಇದು ನಮ್ಮ ಬಾಡಿನಾ ಅನ್ನೋ ಮಟ್ಟಿಗೆ ಆಗಿದ್ವಿ.
ಸರಿ ಬೆಳಗ್ಗೆ ಆತು. ಕಾಮಣ್ಣನ ಸುಡ್ರೋ ಅಂದ ಗೌಡಪ್ಪ. ಬಡ್ಡೆಹತ್ತಾವು ಕಾಮಣ್ಣನ ಬಿಟ್ಟು, ಕಟ್ಟೆ ಮ್ಯಾಕೆ ಮಲಗಿದ್ದ ರಂಗಜ್ಜನ ತಂದು ಬೆಂಕಿಗೆ ಹಾಕಿದ್ರು. ಲೇ ನನ್ನನ್ನ ಜೀವಂತವಾಗಿ ಸುಡ್ತಿರೇನೋ ಅಂತಾ ರಂಗಜ್ಜ ಅಂದ್ ಮ್ಯಾಕೆನೇ ನಮಗೆ ಗೊತ್ತಾಗಿದ್ದು, ಅದು ಕಾಮಣ್ಣ ಅಲ್ಲ ರಂಗಜ್ಜ ಅಂತಾ. ಇಲ್ಲಾಂದ್ರೆ ಎಲ್ಲಾರೂ 302 ಕೇಸ್ನಾಗೆ ಫಿಟ್ ಆಗಿರ್^ತಿದ್ವಿ.
ಸರಿ ಹೋಳಿ ಸುರುವಾತು. ನಮ್ಮ ಸುಬ್ಬ ಯಾವನೋ ಪೋಲಿಸಪ್ಪಂಗೆ ಬಣ್ಣ ಹಾಕ್ದ ಅಂತಾ ನಾಯಿ ಹೊಡೆದಂಗೆ ಹೊಡಿದ್ರು. ಯಾವ ರೇಂಜಿಗೆ ರುಬ್ಬಿದ್ರು ಅಂದ್ರೆ ಮಗಂಗೆ ಅಂಗ ವಿಕಲ ಪೆನ್ಸನ್ ಬರೋ ರೀತಿ ರುಬ್ಬಿದ್ರು. ಸರಿ ಬಣ್ಣ ಎರಚಿದ್ದೇ ಎರಚಿದ್ದು, ನಮ್ಮ ಗೌಡಪ್ಪ ಬಣ್ಣ ಎರಚಿದ್ದು ಮಾತ್ರ ಕೆಟ್ಟ ವಾಸನೆ ಬತ್ತಾ ಇತ್ತು. ಆಮ್ಯಾಕೆ ಗೊತ್ತಾಯ್ತು., ಮಗಾ ನೀರಿಗೆ ಸಗಣಿ ಕಲಸಿ ಅದನ್ನು ಎರಚೋನು. ಅದ್ರಾಗೆ ಅವನ ಮೊಮ್ಮಗಂದು ಪ್ರಸಾದನೂ ಸೇರಿತ್ತು. ಏಥೂ. ಯಾಕ್ರೀ ಗೌಡ್ರೆ ಅಂದ ನಿಂಗ. ಲೇ ಬಣ್ಣ ಎಲ್ಲಾ ಖಾಲಿ ಆಗೈತೆ ಹಂಗಾಗಿ ಪರಿಸರದ ಹಸಿರು ಬಣ್ಣ ಹಾಕ್ತಾ ಇದೀನಿ. ಹಳದಿನೂ ಮಿಕ್ಸ್ ಆಗೈತೆ ಕಲಾ ಅಂದ ಸುಬ್ಬ. ನನ್ನ ಮೊಮ್ಮಗ ನಿನ್ನೆ ಸಾನೇ ಬಿಸ್ಕತ್ತು ತಿಂದವ್ನೆ, ಭೇದಿ ಕಲಾ ಅಂದ ಗೌಡಪ್ಪ. ಏಥೂ.
ಸರಿ ಮಧ್ಯಾಹ್ನ ತನಕ ಬಣ್ಣ ಎರಚಿದ್ದೇ ಎರಚಿದ್ದು. ಬಡ್ಡೀಮಗ ನಿಂಗ ಗಾಡಿ ಎಣ್ಣೆಲ್ಲಾ ಬಳೆಯೋನು. ಯಾವುದೇ ಫಿಗರ್ ಕಾಣಂಗಿಲ್ಲಾ, ಬಡ್ಡೇಐಕ್ಳು ಅಂಗೇ ಓಡೋರು. ಬಸಮ್ಮಂಗೆ ಎಲ್ಲೆಲ್ಲಿ ಬಣ್ಣ ಹಚ್ಚಿದ್ರೋ ದೇವರಿಗೆ ಗೊತ್ತು. ಆದ್ರೆ ಗೌಡಪ್ಪ ಮಾತ್ರ, ಲೇ ಬಸಮ್ಮನ ಸುದ್ದಿಗೆ ಹೋದ್ರೆ ಆಟೆಯಾ ಅನ್ನೋನು.
ಸರಿ ಕಾಮನ ಹಬ್ಬ ಮುಗೀತು. ಲೆಕ್ಕಚಾರಕ್ಕೆ ಅಂತಾ ಕುಂತ್ವಿ. ಮಗಂದು ಎಣ್ಣೇ ಖರ್ಚೇ 30ಸಾವಿರ ಆಗಿತ್ತು. ಹೆಂಗೆ ಅಂದ್ರೆ, ಬಡ್ಡೆಐದ ಕಟ್ಟಿಗೆ ಕಿಸ್ನ, ಬಾರಿಗೆ ಕಮ್ಮಿ ರೇಟಿಗೆ ಮಾರಿದ್ದ. ಬಣ್ಣದ ಖರ್ಚು 10ಸಾವಿರ ಆಗಿತ್ತು. ಹೆಂಗೆ ಗೌಡ್ರೆ ಅಂದ್ರೆ, ನಾವು ನ್ಯಾಚುರಲ್ ಬಣ್ಣ ಬಳಿಸಿದ್ವಿ ಅಂದ್ರು. ಇನ್ನೂ ಮೀಟಿಂಗ್ ಮುಗಿದೇ ಇಲ್ಲಾ, ಪೊಲಿಸ್ನೋರು ನಮ್ಮನ್ನೆಲ್ಲಾ ಅರೆಸ್ಟ್ ಮಾಡಿದ್ರು, ಯಾಕ್ರೀ ಅಂದ ಸುಬ್ಬ, ಲೇ ನಿಮಗೆ ಹೋಳಿ ಹಬ್ಬ ಮಾಡಿ ಅಂದ್ರೆ ದಂಧೆ ಮಾಡ್ತೀರಾ, ಅದಲ್ಲದೆ ಹೆಂಗಸಿರಿಗೆ ತೊಂದರೆ ಕೊಡ್ತಿರಾ ಅಂದು ಸಾನೇ ಕೇಸು ಜಡೆದಾವ್ರೆ, ಇದು ಮುಗಿಯಕ್ಕೆ ಇನ್ನೂ ಒಂದು ವರ್ಸ ಬೇಕು. ಯಾಕೇಂದ್ರೆ ವಕೀಲರು ಸ್ಟ್ರೇಕ್ ಮಾಡ್ತಾವ್ರೆ, ಅಂತೂ ಗೌಡಪ್ಪನ ಅಧ್ಯಕ್ಷನ ಕನಸೂ ಇನ್ನೂ ಕನಸಾಗೇ ಐತೆ. ಆದ್ರೆ ಬಸಮ್ಮ ಮಾತ್ರ ರಾಂಗ್ ಆಗೈತೆ. ಬೇಕಿತ್ತಾ ಹೋಳಿ.
Comments
ಉ: ಹೋಳಿ ಹಬ್ಬದಲ್ಲಿ ಸಗಣಿ ಎರಚಿದ್ದು
In reply to ಉ: ಹೋಳಿ ಹಬ್ಬದಲ್ಲಿ ಸಗಣಿ ಎರಚಿದ್ದು by venkatb83
ಉ: ಹೋಳಿ ಹಬ್ಬದಲ್ಲಿ ಸಗಣಿ ಎರಚಿದ್ದು
ಉ: ಹೋಳಿ ಹಬ್ಬದಲ್ಲಿ ಸಗಣಿ ಎರಚಿದ್ದು
In reply to ಉ: ಹೋಳಿ ಹಬ್ಬದಲ್ಲಿ ಸಗಣಿ ಎರಚಿದ್ದು by ಗಣೇಶ
ಉ: ಹೋಳಿ ಹಬ್ಬದಲ್ಲಿ ಸಗಣಿ ಎರಚಿದ್ದು