ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಕೊನೆಯ ಭಾಗ
ಮನೆಗೆ ಬಂದು ಎರಡು ದಿನ ಯೋಚನೆ ಮಾಡಿದೆ. ಯಾಕೋ ಮನಸು ಸರಿ ಇಲ್ಲ ಎನಿಸಿ ಶುಕ್ರವಾರದಂದು ಧರ್ಮಸ್ಥಳಕ್ಕೆ ಹೋಗಿಬರುತ್ತೇನೆ ಎಂದು ರಾತ್ರಿ ಬಸ್ ಹತ್ತಿ ಬೆಳಿಗ್ಗೆ ಧರ್ಮಸ್ಥಳದಲ್ಲಿ ಇದ್ದೆ. ಮೊದಲು ಮಾಡಿದ ಕೆಲಸ ಪಾವಿಯನ್ನು ಭೇಟಿ ಮಾಡಿದ ಸ್ಥಳಕ್ಕೆ ಹೋಗಿ ಕೂತೆ. ಪಾವಿ ಅಲ್ಲೇ ಕೂತಿದ್ದಾಳೆ ಅನಿಸಿತು. ಅದೆಷ್ಟು ಹೊತ್ತು ಹಾಗೆ ಕೂತಿದ್ದೆನೋ ಗೊತ್ತಿಲ್ಲ. ಆಮೇಲೆ ಟೈಮ್ ನೋಡಿದರೆ ಹತ್ತು ಗಂಟೆ ತೋರಿಸುತ್ತಿತ್ತು. ಸ್ನಾನ ಮಾಡಿ ದರ್ಶನಕ್ಕೆಂದು ಹೋದೆ. ಮಂಜುನಾಥನ ಮುಂದೆ ನಿಂತು ಸ್ವಾಮಿ ನೀನೆ ದಾರಿ ತೋರಿಸಬೇಕು ನನಗೆ ಎಂದು ಬೇಡಿಕೊಂಡು ಆಚೆ ಬಂದೆ. ಅಲ್ಲೊಬ್ಬ ಸಾಧು ನಿಂತಿದ್ದ ನಾನು ಎಂದೂ ಸಾಧುಗಳಿಗೆ ಭಿಕ್ಷುಕರಿಗೆ ಭಿಕ್ಷೆ ಹಾಕಿದವನಲ್ಲ. ಆದರೆ ಆ ಸಾಧುವನ್ನು ನೋಡಿದ ತಕ್ಷಣ ದುಡ್ಡು ಕೊಡಬೇಕು ಎನಿಸಿ ಜೇಬಿನಿಂದ ಹತ್ತು ರೂ ತೆಗೆದು ಆತನ ಕೈಗಿಟ್ಟೆ. ಆತ ದುಡ್ಡನ್ನು ನಿರಾಕರಿಸಿ ನನ್ನ ತಲೆಯ ಮೇಲೆ ಕೈ ಇಟ್ಟು ಮಗು ನಿನ್ನ ಒಳ್ಳೆಯ ಮನಸ್ಸಿಗೆ ಎಲ್ಲ ಒಳ್ಳೆಯದಾಗುತ್ತದೆ ಹೋಗು ಎಂದರು.
ಸಂಜೆ ಮತ್ತೊಮ್ಮೆ ದರ್ಶನಕ್ಕೆ ಹೋಗಿ ದರ್ಶನ ಮಾಡಿಕೊಂಡು ಬಂದಾಗ ಮನಸೆಲ್ಲ ಹಗುರವಾದಂತೆ ಅನಿಸುತ್ತಿತ್ತು. ಯಾಕೋ ಗೊತ್ತಿಲ್ಲ. ತುಂಬಾ ನಿರಾಳವಾದಂತೆ ಅನಿಸುತ್ತಿತ್ತು. ಬಸ್ ಹತ್ತಿ ಊರಿಗೆ ವಾಪಸ್ ಮನೆಗೆ ಬಂದ ತಕ್ಷಣ ಅಪ್ಪ ಅಮ್ಮ ಇಬ್ಬರೂ ಒಟ್ಟಿಗೆ ಶುರು ಮಾಡಿದರು. ಅಲ್ವೋ ಭಗತ್ ಒಂದು ಫೋನ್ ಮಾಡೋದು ಬೇಡವ? ನಾವೆಷ್ಟು ಗಾಭರಿ ಆಗಿದ್ದೆವು ಗೊತ್ತ? ಯಾಕಮ್ಮ ಗಾಭರಿ ನಾನು ಮೊಬೈಲ್ ತಗೊಂಡು ಹೋಗಿರಲಿಲ್ಲ.ಇಲ್ಲೇ ಬಿಟ್ಟು ಹೋಗಿದ್ದೆ. ಅದಕ್ಕೆ ಮಾಡಲಿಲ್ಲ.ಗಾಭರಿ ಯಾಕೆ? ನಾನೇನೂ ಮಾಡಿಕೊಳ್ಳುವುದಿಲ್ಲ ಚಿಂತಿಸ ಬೇಡಿ. ಎಂದು ನಗುತ್ತ ರೂಮಿಗೆ ಹೋದೆ. ಅಪ್ಪ ಅಮ್ಮನಿಗೆ ನನ್ನ ಲವಲವಿಕೆಯ ಮಾತುಗಳಿಂದ ಆಶ್ಚರ್ಯವಾಗಿತ್ತು. ಸ್ನಾನ ಮಾಡಿ ಊಟ ಮಾಡಿ ಮಹಡಿಯ ಮೇಲೆ ಕುಳಿತಿದ್ದಾಗ ಅಮ್ಮ ಮತ್ತು ಪೂಜಾ ಮೇಲೆ ಬಂದರು.
ಹೇಗಾಯ್ತೋ ದರ್ಶನ ಎಲ್ಲ? ಚೆನ್ನಾಗಿ ಆಯ್ತಮ್ಮ...ಯಾಕೋ ಗೊತ್ತಿಲ್ಲ ಅಮ್ಮ ದೇವರ ದರ್ಶನ ಮಾಡಿಕೊಂಡು ಬಂದ ಮೇಲೆ ಮನಸಿನ ಭಾರವೆಲ್ಲ ಇಳಿದು ನಿರಾಳವಾಗಿದೆ ಅನಿಸುತ್ತಿದೆ. ಅಮ್ಮ ಆಕಾಶದ ಕಡೆ ಕೈ ಮುಗಿಯುತ್ತ ಸಧ್ಯ ನೀನು ನಗು ನಗುತ್ತ ಮಾತಾಡಿದೆಯಲ್ಲ ಅದೇ ಸಂತೋಷ ನಮಗೆ. ಭಗತ್ ಮತ್ತೆ ಅದೇ ವಿಷಯ ಕೇಳುತ್ತೇನೆ ಎಂದು ಕೋಪ ಮಾಡಿಕೊಬೇಡ, ನೆನ್ನೆ ನನ್ನ ಸ್ನೇಹಿತೆ ಒಬ್ಬಳು ಬಂದಿದ್ದಳು ಅವಳು ವಧು ವರಾನ್ವೇಷಣೆ ಮಾಡುತ್ತಾಳೆ. ಅವಳಿಗೆ ನಿನ್ನ ವಿಷಯ ಎಲ್ಲ ಹೇಳಿದ್ದೇನೆ. ಅವಳು ಒಂದು ಹುಡುಗಿಯ ಫೋಟೋ ಕೊಟ್ಟಿದ್ದಾಳೆ. ನೀನು ಹೂ ಎಂದರೆ ಒಂದು ಸಲ ನೋಡೋಣ. ಅಮ್ಮ ನಿಮ್ಮಿಷ್ಟ ಏನಾದರೂ ಮಾಡಿ ನಿಮಗೆ ಸಂತೋಷ ಆದರೆ ಅಷ್ಟೇ ಸಾಕು. ನಾನು ಯಾಕೆ ಹಾಗೆ ಎಂದೆನೋ ಗೊತ್ತಿಲ್ಲ.
ನಂತರದ ಎರಡು ತಿಂಗಳಲ್ಲಿ ಎಲ್ಲ ನಡೆದು ಹೋಯಿತು. ಮದುವೆಯ ಛತ್ರದ ಮುಂದೆ ಭಗತ್ ವೆಡ್ಸ್ ಭಾರತಿ ಎಂಬ ಬೋರ್ಡ್ ಇತ್ತು. ಮಂಟಪದ ಸುತ್ತ ಅಪ್ಪ ಅಮ್ಮ, ಪೂಜಾ, ಪಾವನಿಯ ಅಪ್ಪ ಅಮ್ಮ, ಭಾರತಿಯ ಅಪ್ಪ ಅಮ್ಮ ಎಲ್ಲ ನಿಂತಿದ್ದಾರೆ. ಪುರೋಹಿತರು ತಾಳಿಯನ್ನು ನನ್ನ ಕೈಗೆ ಕೊಟ್ಟು ಮಾಂಗಲ್ಯಧಾರಣೆ ಮಾಡು ಎಂದರು. ಮಾಂಗಲ್ಯ ಹಿಡಿದುಕೊಂಡು ಭಾರತಿಯ ಮುಖ ನೋಡಿದೆ. ಒಂದು ಕ್ಷಣಕ್ಕೆ ಅಲ್ಲಿ ಪಾವಿ ಕಂಡಿದ್ದಳು.
ಒಂದು ವರ್ಷದ ನಂತರ ಆಸ್ಪತ್ರೆಯ ಕೊಠಡಿಯ ಆಚೆ ನಾನು ಟೆನ್ಶನ್ ನಿಂದ ಓಡಾಡುತ್ತಿದ್ದೇನೆ. ಒಂದು ಮೂಲೆಯಲ್ಲಿ ಅಪ್ಪ, ಅಮ್ಮ, ಪೂಜಾ, ಪಾವಿಯ ಅಪ್ಪ, ಅಮ್ಮ, ಭಾರತಿಯ ಅಪ್ಪ ಅಮ್ಮ ಎಲ್ಲ ನಿಂತಿದ್ದಾರೆ. ಒಳಗಿನಿಂದ ಡಾಕ್ಟರ್ ಬಂದು ನನ್ನ ಕೈಗೆ ಮಗುವನ್ನು ಕೊಟ್ಟು ನಿಮಗೆ ಹೆಣ್ಣು ಮಗು ಎಂದರು. ಎಲ್ಲರೂ ಮಗುವಿನ ಸುತ್ತ ತುಂಬಿಕೊಂಡು ಒಬ್ಬೊಬ್ಬರು ಒಂದೊಂದು ಹೇಳುತ್ತಿದ್ದರು. ಅಪ್ಪ ಅಮ್ಮ ಇಬ್ಬರು ಮಗು ಭಗತ್ ಇದ್ದ ಹಾಗೆ ಎಂದರೆ, ಪಾವಿಯ ಅಪ್ಪ ಅಮ್ಮ, ಇಲ್ಲ ಭಾರತಿಯ ಹೋಲಿಕೆ ಎಂದರು. ಭಾರತಿಯ ಅಪ್ಪ ಅಮ್ಮ ಭಾರತಿಯ ಅಜ್ಜಿಯ ಹೋಲಿಕೆ ಇದೆ ಎಂದರು. ಆದರೆ ನನಗೆ ಮಾತ್ರ ಪಾವಿಯ ಮುಖ ಕಂಡಿತ್ತು. ಪೂಜಾ ಕೇಳಿದಳು ಮಗೂಗೆ ಏನೆಂದು ಹೆಸರು ಇಡುತ್ತೀಯೋ ಎಂದು. ನಾನು ಒಂದು ಕ್ಷಣ ಆಲೋಚಿಸದೆ ಪಾವನಿ ಎಂದೆ. ಮಗುವನ್ನು ಅಮ್ಮನ ಕೈಗೆ ಕೊಟ್ಟು ಹಿಂತಿರುಗಿ ನೋಡಿದರೆ ಅಲ್ಲಿನ ಡಿಜಿಟಲ್ ಗಡಿಯಾರದಲ್ಲಿ ದಿನಾಂಕ ಸೆಪ್ ೧೮ ಎಂದಿತ್ತು
Comments
ಉ: ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಕೊನೆಯ ಭಾಗ
In reply to ಉ: ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಕೊನೆಯ ಭಾಗ by kamath_kumble
ಉ: ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಕೊನೆಯ ಭಾಗ
ಉ: ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಕೊನೆಯ ಭಾಗ
In reply to ಉ: ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಕೊನೆಯ ಭಾಗ by vinuhegde
ಉ: ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಕೊನೆಯ ಭಾಗ
ಉ: ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಕೊನೆಯ ಭಾಗ
In reply to ಉ: ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಕೊನೆಯ ಭಾಗ by VeerendraC
ಉ: ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಕೊನೆಯ ಭಾಗ
ಉ: ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಕೊನೆಯ ಭಾಗ
In reply to ಉ: ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಕೊನೆಯ ಭಾಗ by Tejaswi_ac
ಉ: ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಕೊನೆಯ ಭಾಗ
ಉ: ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಕೊನೆಯ ಭಾಗ
In reply to ಉ: ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಕೊನೆಯ ಭಾಗ by partha1059
ಉ: ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಕೊನೆಯ ಭಾಗ