'ಮುಂಬೈನ ಶ್ರೀ. ರಾಜರಾಜೇಶ್ವರಿ ಭರತನಾಟ್ಯ ಕಲಾಮಂದಿರದ ಪ್ರಮುಖ ಗುರು, ಶ್ರೀ. ಕೆ. ಕಲ್ಯಾಣಸುಂದರಂರವರ ೮೦ ನೆ ಹುಟ್ಟುಹಬ್ಬದ ಸಡಗರ !

'ಮುಂಬೈನ ಶ್ರೀ. ರಾಜರಾಜೇಶ್ವರಿ ಭರತನಾಟ್ಯ ಕಲಾಮಂದಿರದ ಪ್ರಮುಖ ಗುರು, ಶ್ರೀ. ಕೆ. ಕಲ್ಯಾಣಸುಂದರಂರವರ ೮೦ ನೆ ಹುಟ್ಟುಹಬ್ಬದ ಸಡಗರ !

ಚಿತ್ರ

Link : [[http://radhatanaya-devanahalli.blogspot.in/]]

ಮುಂಬೈನ ಮಾತುಂಗ ಉಪನಗರದ ಅತ್ಯಂತ ಹಳೆಯ  ನೃತ್ಯಾಲಯದ ರುವಾರಿ, 'ಶ್ರೀ. ಗುರು ಕೆ.ಕಲ್ಯಾಣ ಸುಂದರಂರವರ ೮೦ ನೇ ಹುಟ್ಟು ಹಬ್ಬ'ವನ್ನು ಅವರ ಶಿಷ್ಯ-ಶಿಷ್ಯೆಯರು,  ಹಿತೈಷಿಗಳು, ಮತ್ತು ಗೆಳೆಯರಿಂದ, ಅತ್ಯಂತ ವಿಜೃಂಭಣೆಯಿಂದ ಮುಂಬೈನ ಹೆಸರಾಂತ 'ಶ್ರೀ. ಶಣ್ಮುಖಾನಂದ ಸಭಾಗೃಹದಲ್ಲಿ  ಸನ್. ೨೦೧೨ ರ, ಮಾರ್ಚ್  ೧  ನೆಯ ತಾರೀಖು, ನೆರವೇರಿಸಲಾಯಿತು.

ಅಲ್ಲಿ ನೆರೆದಿದ್ದವರಲ್ಲಿ ಅನೇಕರು, ದೇಶ ವಿದೇಶಗಳಿಂದ ಬಂದಿದ್ದರು. ಅವರಲ್ಲಿ ವಾಣಿ ಗಣಪತಿ, ಡಾ. ಪದ್ಮ ಸುಬ್ರಹ್ಮಣ್ಯಂ, 'ಕಥಕ್ ನೃತ್ಯಾಂಗನ' ಸಿತಾರ ದೇವಿ, 'ಶ್ರೀಮತಿ ಶ್ರೀ.ವಿಜಿ', ಮುಂತಾದವರಿದ್ದರು. ವೇದಿಕೆಯ ಮೇಲೆ 'ಜಸ್ಟಿಸ್ ಶ್ರೀ. ಶ್ರೀಕೃಷ್ಣ' ಮತ್ತು ಹಲವರು ಗಣ್ಯರು ಇದ್ದರು.

'ಕಲ್ಯಾಣ ಸುಂದರಂ'ರವರು 'ಶ್ರೀ.ರಾಜರಾಜೇಶ್ವರಿ ಭರತ ನಾಟ್ಯ ಕಲಾಮಂದಿರ' ವನ್ನು ಅವರ ಹಿರಿಯರ ಆದೇಶದ ಮೇಲೆ ಸ್ಥಾಪಿಸಿ, ಮುಂದೆ ನಡೆಸಿಕೊಂಡು ಬಂದ ದಾರಿಯನ್ನು ನಿರೂಪಿಸುವ  ೩೦೦ ವರ್ಷಗಳ ಇತಿಹಾಸದಲ್ಲಿ ಸುಮಾರು ೮ ಪೀಳಿಗೆಗಳ ಸಮಗ್ರ ಚಿತ್ರಣವನ್ನು ಸಾರುವ, ಒಂದು 'ವೃತ್ತ ಚಿತ್ರ', 'The Legacy of the Thanjavur Parampara'  ವನ್ನು ಪ್ರದರ್ಶಿಸಲಾಯಿತು.

ಇದಾದ ನಂತರ, 'ಮೈಥಿಲಿ ಪ್ರಕಾಶ್' ರವರಿಂದ 'ಭರತ ನಾಟ್ಯ ಪ್ರದರ್ಶನ' ವಿತ್ತು. ಮೈಥಿಲಿ ಪ್ರಕಾಶ್, ಅಮೆರಿಕಾದ ಲಾಸ್ ಎಂಜಲೀಸ್ ನಗರದಲ್ಲಿರುವ,  'ಶಕ್ತಿ ಸ್ಕೂಲ್ ಆಪ್ಹ್ ಭರತನಾಟ್ಯಂ', ನ ಸ್ಥಾಪಕಿ, ಆರ್ಟಿಸ್ಟಿಕ್ ಡೈರೆಕ್ಟರ್, ಶ್ರೀಮತಿ ವಿಜಿ ಪ್ರಕಾಶ್ ರವರ ಪುತ್ರಿ. 

ಈ ಸಮಾರಂಭದಲ್ಲಿ ಮಾಸ್ತರ್ ಜೀರವರನ್ನು  ಗುರವಿಸಲು ಹಾಜರಿದ್ದ ಪ್ರಸಿದ್ಧ ಗಾಯಕ, ಗಾಯಕಿಯರಲ್ಲಿ ಪ್ರಮುಖರು :

* ಸಂಗೀತ್ ಮಾರ್ತಾಂಡ್,  ಪಂ. ಜಸ್ ರಾಜ್,

* ಡಾ. ಪದ್ಮಾ ಸುಬ್ರಹ್ಮಣ್ಯಂ,

* ಶ್ರೀ. ಬಿ,ಎಂ.ಸುಂದರಂ

* ಮತ್ತು ಹಲವಾರು ಪ್ರಖ್ಯಾತ ಶಿಷ್ಯ ಶಿಷ್ಯೆಯರು.

 

 

-ಚಿತ್ರ ಮತ್ತು ನಿರೂಪಣೆ, ಹೊರಂಲವೆಂ 

 

Rating
No votes yet