ದುಸ್ಸಾಹಸ !

ದುಸ್ಸಾಹಸ !

ಕವನ

 ನೀನಾಡಿದ ಮೊದಲ ಪದ
ನನ್ನೆದೆಯ ಕದ ತೆರೆದು,
ಗರ್ಭಗುಡಿಯೊಳಗಿನ 
ಘಂಟೆ ಹೊಡೆದು
ಪ್ರೀತಿಯ ನಿನಾದ ಮೊಳಗಿಸಿತ್ತು !
ಎತ್ತ ಕಿವಿಗೊಟ್ಟರೂ
ಅದರದೇ ಪ್ರತಿದ್ವನಿ !!
ತಪ್ಪಿಸಿಕೊಂಡು ಹೋಗಬೇಕೆಂದರೆ
ಪ್ರೀತಿಯ ಪರಿಮಿತಿಯನ್ನೇ 
ಮೀರಬೇಕಿತ್ತು!!
ಅದು ಸಾಧ್ಯವಾಗದ ಕೆಲಸ.
ಪ್ರೀತಿಯ ಮಿತಿಮೀರುವುದೆಂದರೆ??
ಇರುವ ನಿನ್ನನ್ನೆ ಇಲ್ಲವೆಂದು
ಸಾಧಿಸುವ ಬಹು ಜಟಿಲ ಕೆಲಸ !!
ಇಲ್ಲದಿರೆ, ನಾನಿರುವ ಜಗತ್ತನ್ನೆ
ನನ್ನಿಂದ ದೂರವಾಗಿಸಿ
ಅದಕ್ಕೂ ನನಗೂ ಸಂಭಂದವಿಲ್ಲವೆನ್ನುವ
ಅಸಂಬದ್ಧ ದುಸ್ಸಾಹಸ !
ಆದರೂ ಇವನ್ನೆಲ್ಲಾ ಮಾಡಲೇಬೇಕು
"ಸುಖವಾಗಿ" ಜೀವಿಸಲು.
ಇದೊಂದೆ ಅಲ್ಲವೇ,
ಬಳಿಯಲ್ಲೆ ಇದ್ದರು 
ಇನ್ನೂ ಮರಿಚಿಕೆಯಾಗಿರುವುದು??

Comments