ಇದು ಪಾಳೇಗಾರಿಕೆ
ರೈಲು ಪ್ರಯಾಣ ದರ ಏರಿಕೆ ನಮಗೇನು ಇಷ್ಟವಾದದ್ದಲ್ಲ. ಆದರೆ ಇದಕ್ಕಾಗಿ ಮಂತ್ರಿಯ ತಲೆದಂಡ ಸಹಜ-ಸಾಮಾನ್ಯವೆನಿಸುವುದಿಲ್ಲ. ವಾರಕ್ಕೊಮ್ಮೆ ಎಂಬಂತೆ, ಡೀಸೆಲ್, ಪೆಟ್ರೋಲ್, ಸಿಎನ್‌ಜಿ ದರ ಏರುತ್ತಿರುತ್ತಿದೆಯಲ್ಲಾ, ಸರಕಾರ, ತೈಲ ಕಂನಿಗಳ ಮುಖ್ಯಾಧಿಕಾರಿಗಳನ್ನು ಡಿಸ್‌ಮಿಸ್ ಮಾಡಿದೆಯೇ? ಆಯ-ವ್ಯಯವೆನ್ನುವುದು ಒಂದು ಆರ್ಥಿಕ ಪ್ರಕ್ರಿಯೆ; ಮಂತ್ರಿ ರಾಜಿನಮೆ ರಾಜಕೀಯ ತೆವಲು. ಇದೆರಡೂ ಒಂದರೊಡನೊಂದು ಪೈಪೋಟಿ ಮಾಡಿದರೆ ಎರಡಕ್ಕೂ ಮುಖಭಂಗವೇ ಗತಿ. ಮಂತ್ರಿಯೊಬ್ಬರು ಪ್ರಯಾಣ ದರ ಹೆಚ್ಚಿಸಿದರು. ‘ಯಾಕೆ ಸ್ವಾಮಿ?’ ಎಂದು ಕೇಳುವಷ್ಟರಲ್ಲಿ ಕುರ್ಚಿ ಬಿಟ್ಟೆದ್ದಿದ್ದರು! ಒಬ್ಬ ಹಿರಿಯಕ್ಕ; ಬೇಕೆನಿಸಿದವರಿಗೆ ಪದವಿ ಕೊಡಿಸಬಲ್ಲಳು; ಸಾಕೆನಿಸಿದಾಗ ಜುಟ್ಟು ಹಿಡಿದು ಆಚೆ ಎಳೆದುಹಾಕಬಲ್ಲಳು. ಆದ್ದರಿಂದ ಮಂತ್ರಿಯಾದವನು ಸದಾ ಬಾಯಲ್ಲಿ ಅಕ್ಕಿಕಾಳು ಹಾಕಿಕೊಂಡು, ಆಕೆಯ ಮರ್ಜಿಗಾಗಿ, ಪ್ರಧಾನಮಂತ್ರಿಯನ್ನೂ ಉಚಾಯಿಸಿ, ಆಕೆಯನ್ನು ಓಲೈಸಬೇಕೇ? ಸರಕಾರದಲ್ಲಿ ಏನೂ ಅಲ್ಲದಿದ್ದರೂ, ನೀತಿ-ನಿರ್ಣಯಗಳಿಗಾಗಿ ಆಕೆಯ ಆಣತಿ ಬೇಡಬೇಕೇ?
ಇದು ಸಮ್ಮಿಶ್ರತೆ ಎಂಬ ರಾಜಕಿಯ ವ್ಯಭಿಚಾರದ ನಿಸ್ಹಾಯಕತೆ. ಅಂತಹ ಸರಕಾರ ಸಂಸದಿಯ ಪ್ರಜಾಸತ್ತೆಗೆ ಕಳಂಕ.
Comments
ಉ: ಇದು ಪಾಳೇಗಾರಿಕೆ
In reply to ಉ: ಇದು ಪಾಳೇಗಾರಿಕೆ by kavinagaraj
ಉ: ಇದು ಪಾಳೇಗಾರಿಕೆ
ಉ: ಇದು ಪಾಳೇಗಾರಿಕೆ
ಉ: ಇದು ಪಾಳೇಗಾರಿಕೆ
ಉ: ಇದು ಪಾಳೇಗಾರಿಕೆ