ಸರ್ರಿಯಲಿಸಂ

ಸರ್ರಿಯಲಿಸಂ

 
 
     ಫ್ರೆಂಚ್ ಸಾಹಿತ್ಯದ ಅದ್ವೀತಿಯ ಪಂಥ ಸರ್ರಿಯಲಿಸಂ ಪಂಥ. ಸರ್ರಿಯಲಿಸಂ ಎಂಬುದು ಅತಿ ವಾಸ್ತವವಾದ. ಸರ್ವಕಾಲಿಕ ಪ್ರತಿಫಲನವುಳ್ಳ ಸಾಹಿತ್ಯ ಪರಂಪರೆ, 20ನೇ ಶತಮಾನದಲ್ಲಿ ಕನ್ನಡ ಸಾಹಿತ್ಯದಲ್ಲಿ ಹೊಸ ಹೊಸ ಬೆಳವಣಿಗೆಗಳು ರೂಪುಗೊಳ್ಳುತ್ತಿದ್ದ ಸಂದರ್ಭದಲ್ಲಿ ಫ್ರಾನ್ಸ್ನಲ್ಲಿ ಈ ಚಳವಳಿ ರೂಪಿತವಾಯಿತು. ಈ ಪರಂಪರೆ ಮಾನವ ಮನಃಸ್ಥಿತಿಯಾಗಿ, ಧೋರಣೆಯಾಗಿ, ಪ್ರತಿರೋದವಾಗಿ ರೂಪಿತವಾಯಿತು. ಧರ್ಮ, ಯುದ್ದ ಬೂಜ್ವರ್ಾ ವ್ಯವಸ್ಥೆಯ ಸುಲಿಗೆಯ ಮಾಪನವಾದಾಗ ಸರ್ರಿಯಲಿಸಂ ಪ್ರತಿಭಟನೆಯಾಗಿ ರೂಪಿತವಾಯಿತ್ತು. ಸಿಗ್ಮಂಡ್ ಫ್ರಾಯ್ಡ್ ಮನಃಶಾಸ್ತ್ರ, ಫ್ರಾನ್ಸ್ನ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆ, ಕಾಲರ್ ಮಾಕ್ರ್ಸ ವೈಚಾರಿಕ ನಿಲುವು ಸರ್ರಿಯಲಿಸಂ ಪಂಥ ರೂಪುಗೊಳ್ಳಲು ಕಾರಣವಾಯಿತ್ತು.
 
   ಮನುಷ್ಯನ ಸುಪ್ತ ಮನಸ್ಸು ಹಾಗೂ ಚೇತನದ ಮಧ್ಯದ ಅನುಭವಗಳನ್ನು ಒಂದುಗೂಡಿಸುವ ಅತಿವಾಸ್ತವದ ಮಾರ್ಗ ಸರ್ರಿಯಲಿಸಂ ಆಗಿತ್ತು. ಮನುಷ್ಯನ ಸುಪ್ತ ಮನಸ್ಸಿನಲ್ಲಿರುವ ಕಲ್ಪನೆಗಳ ಚಿಲುಮೆ, ದೈನಂದಿನ ವ್ಯವಹಾರಿಕ ಸತ್ಯಕ್ಕೆ ಹೋಲಿಸಿ ಸಾಹಿತ್ಯ ಕೃಷಿ ಮಾಡುವುದೇ ಸರ್ರಿಯಲಿಸಂ ಉದ್ದೇಶವಾಗಿತ್ತು. ಸೌಂದರ್ಯ ಮತ್ತು ಕುರೂಪ, ಗಟ್ಟಿ ಮತ್ತು ಮೃದು, ಉಚ್ಚ ಮತ್ತು ನೀಚ ತನ್ನ ಪಾರಂಪರಿಕ ಅರ್ಥಗಳಿಗೆ ಬದಲಿ, ಹೊಸ ಆಳ ಅರಿವಿನ ಪ್ರಜ್ಞೆ ಬೆಳಗಲಾರಂಬಿಸಿತ್ತು. ಆಂತರಿಕ ಮಾನವಿಕ ತೊಳಲಾಟದ ಕ್ರಾಂತಿಯ ಶಿಶು ಸರ್ರಿಯಲಿಸಂ ಎನ್ನಬಹುದಾಗಿದೆ. ಆಂಡ್ರೆ ಬ್ರೆಟನ್ ಸರ್ರಿಯಲಿಸಂ ಚಳವಳಿಯ ಶ್ರೇಷ್ಠ ಪ್ರತಿಪಾದಕ.
 
 
ಸರ್ರಿಯಲಿಸಂ ಪ್ರಸ್ತುತ ಜಗತ್ತಿನ ಆಧುನಿಕ ಜನ ಜೀವನದ ಅಂತರಂಗದ ಶೈಲಿಯಾಗಿದೆ. ಕನಸ್ಸು ಮತ್ತು ವಾಸ್ತವದ ನಡುವಿನ ಮುಕ್ತ ನಿರೂಪಣೆ ವಿಚಾರ ಸರಣಿಯಾಗಿದೆ. ಸಹಜ ಬದುಕಿನ ವಾಸ್ತವತೆಯನ್ನು ಶಬ್ದಗಳ ರೂಪದಲ್ಲಿ ಪ್ರಸ್ತುತ ಪಡಿಸಲು ಸಾಲಾದಾದಾಗ ಅನುಭವತ್ಮಕ ಪ್ರತಿಮೆ ರೂಪಕಗಳನ್ನು ಹೊಸ ದೃಷ್ಠಿಕೋನದಲ್ಲಿ ರೂಪಿಸಲಾಯಿತು. ದೂರದ ದೇಶದಲೆಲ್ಲೊ ಉಂಟಾಗಿರುವ ನೋವು, ಯಾತನೆ, ತಳಮಳಗಳನ್ನು ದೂರದಲ್ಲಿಯೇ ಕೂತು ಕಲ್ಪಿಸಬಲ್ಲ ಶೈಲಿಯಾಗಿದೆ. ಸಾಂಪ್ರದಾಯಿಕ ಕ್ರಮ ವ್ಯವಸ್ಥೆಯನ್ನು ಹೊರದಬ್ಬಿ ಭಾವ ನಿರೂಪಣೆಯಲ್ಲಿ ಸ್ವೇಚ್ಛಾಯಜ್ಞ ಪ್ರಾರಂಭಿಸಿದ ಹೊಸ ಅಧ್ಯಾಯ ಸರ್ರಿಯಲಿಸಂ ಅಥವ ವಾಸ್ತವವಾದ.
 
    ಈ ಒಂದು ವಿಶಿಷ್ಠ ದೃಷ್ಠಿಕೋನದ ಸಾಹಿತ್ಯ ಪಂಥ ಭವಿಷ್ಯತ್ತಿಗೆ ಅವಶ್ಯಕವಾದ ಸರಕನ್ನು ಹೊತ್ತು ತರುವ ಜವಾಬ್ದಾರಿ ಹೊಂದಿದೆ ಎನ್ನಬಹುದು. ಇದು ಭವಿಷ್ಯವನ್ನು  ರೂಪಿಸಲು ಪೂರ್ವ ನಿರ್ಧರಿತ ರಚನಾತ್ಮಕ ರೂಪುರೇಶೆಯಾಗಿದೆ. ಸರ್ರಿಯಲಿಸಂ ಮನುಷ್ಯನ ಜೀವನೋತ್ಸಹ ಮತ್ತು ಜೀವನ ಪ್ರೇಮವನ್ನು ರೂಪಿಸುತ್ತದೆ. ಪ್ರಸ್ತುತ ಉಂಟಾಗಿರುವ ಸಮಸ್ಸೆಗಳಿಗೆ ಮುಂದೆ ಬದಲಾಗಬಲ್ಲ ವಸ್ತುಸ್ಥಿತಿಗೆ ಅಗತ್ಯವಾಗಿ ಬೇಕಿರುವ ಪರಿಹಾರಾತ್ಮಕ ಅಂಶಗಳನ್ನು ಇದು ಗುರುತಿಸುತ್ತದೆ. ಸಂಘರ್ಷಣಾತ್ಮಕ ಧೋರಣೆಯಲ್ಲಿ ನೊಂದವರ, ಶೋಷಿತರ ಪರ ಹೋರಾಡಬಲ್ಲ ಸಾಹಿತ್ಯ ಪಂಥವಾಗಿದೆ.