ಜೀವನ-ನಾಟಕ (ಶ್ರೀನರಸಿಂಹ 27)

ಜೀವನ-ನಾಟಕ (ಶ್ರೀನರಸಿಂಹ 27)

ನಾಟಕದಲಿ ಬರುವ ಪಾತ್ರಗಳನು ನಟರು ನಟಿಸುವ ತೆರದಿ

ಪಡೆವ ಪಾತ್ರಗಳಲಿ ನೀ ನಟಿಸು  ಜೇವನವೆನುವ ನಾಟಕದಿ

ನಟರಿಗೊಪ್ಪುವ ತೆರದಿ ಪಾತ್ರಗಳ ನೀಡುವನು ನಿರ್ದೇಶಕನು

ಜೀವನದ ಪಾತ್ರಗಳ ನಿರ್ದೇಶಕ ಶ್ರೀನರಹರಿಯೇ ಆಗಿಹನು

 

ಪಾತ್ರದ ಒಳಗಿಳಿದು ನೈಜತೆಯಿಂದಲಿ ನಟಿಸಿದರು ನಟನು

ಸತ್ಯವೇನಲ್ಲವದು ಎಂಬುದನು ತಾ ಮನಸಿನಲಿ ಅರಿತಿಹನು

ಶ್ರೀನರಹರಿಯೂ ಆಡಿಸುತಿಹ ನಾಟಕವಿದೆಂಬುದನು ತಿಳಿದು

ಜೀವನದ ಪಾತ್ರಗಳ ನೀ ನಟನಂತೆ ನಿರ್ವಹಿಸ ಬೇಕಿಹುದು

 

ಸತಿ,ಸುತರು,ಬಂಧು ಬಾಂಧವರುಗಳೆಲ್ಲ ಸಹ ಪಾತ್ರದಾರಿಗಳಾಗಿಹರು

ಹೊರಗವರೊಡನಿರುತಲಿ ಒಳಗೊಬ್ಬನೆ ಶ್ರೀನರಸಿಂಹನ ಸ್ಮರಿಸುತಲಿರು
Rating
No votes yet

Comments