ಗಜಲ್
ಕವನ
ಬೆಳ್ಲಿ ಮೋಡದ ಮೆರಗು ತೊಟ್ಟ, ಬಾನಿನಂಚಿನಲ್ಲಿ ಕೆಂಪು ತೋರಣ
ಜಾವದಿಂದ ಸಾಗಿ ಸಾಗಿ ದಣಿದು, ಕಡಲಲ್ಲಿ ಮೀಯಲು ಹೊರಟ ಸೂರ್ಯಕಿರಣ.
ಸಂಜೆಯತನಕ ಮೇದು ಕೆಚ್ಚಲು ತುಂಬಿ, ಮಮತೆಯ ಹಾಲು ಎರೆಯಲು
ತಾಯ್ಗುರಿ ಕರೆಯುವದು ತನ್ನ ಕಂದನ ಸಂಜೆಯಲ್ಲಿ
ಗುಡ್ಡಗಾಡಿನ ಹಸಿರು ಚಿಗುರು ಇಳಿಜಾರಿಗೆ ಹರಿದು ತೊರೆ ತೋರಣ
ಇಂಪಿನಲ್ಲಿ ಕೋಗಿಲೆಯು ಹಾಡ್ಶಿ ಕುಣಿಸುವುದು ಮಯೂರನ ಸ್ವಾಗತಿಸಲು ವಸಂತನ.
ದುಡಿದು, ದಣಿದು ಗೂಡು ಸೇರುವ ಜೀವಕ್ಕೆ ನೀಡಲು ಸಾಂತ್ವನ
ಕತ್ತಲು ಕರೆಯುವುದು ಬಾನಿನಂಗಳದಲ್ಲಿ , ಹಾಲ್ಬೆಳಕು ಚೆಲ್ಲಲು ಚಂದ್ರಮನ