ಮುಂದೇನು??? ..........(ಕಥೆ ) -ಕೊನೆಯ ಭಾಗ )

ಮುಂದೇನು??? ..........(ಕಥೆ ) -ಕೊನೆಯ ಭಾಗ )

ಚಿತ್ರ

 

 ಉದ್ಘೋಷಕಿ-

ಪ್ರಯಾಣಿಕ ರೆ ಗಮನಿಸಿ 'ಮುಂಬೈ ಎಕ್ಸ್ಪ್ರೆಸ್'  ಕೆಲವೇ ಕ್ಷಣಗಳಲ್ಲಿ ಪ್ಲಾಟ್ಫಾರ್ಮ್ ನಂಬರ್ ೭ ಕ್ಕೆ ಬರಲಿದೆ.ಎಂದದ್ದೆ ಜನ ಎದ್ದೋ -ಬಿದ್ದೋ ಅಂತ ಓಡಿದರು!!  


ತಡವಾಗಿ ಬಂದ 'ಮುಂಬೈ ಎಕ್ಸ್ಪ್ರೆಸ್'  ರೈಲು ಕಿಕ್ಕಿರಿದು ತುಂಬಿ  ಗಾರ್ಡ್ 'ಹಸಿರು ಚಿಹ್ನೆಗಾಗಿ'  ಕಾಯ್ತಿದ್ದಚಾಲಕ  ಅದು ಸಿಕ್ಕ ಕೂಡಲೇ ಜೋರಾಗಿ ರೈಲಿನ ಹಾರನ್ ಬಾರಿಸುತ್ತ ರೈಲು ಸ್ಟಾರ್ಟ್ ಮಾಡಿದ ರೈಲುಕದಲುತ್ತ ಸಾಗಿತು...

ಇತ್ತ 'ಅವನ' ಮನೆಯಲ್ಲಿ ಅವನ ತಾಯಿ ತನ್ನ ಪತಿಗೆ

ರೀ ಅವನು  ಸಿಟ್ ಆಗಿ ಹೋಗಿ  ತುಂಬಾ ಹೊತ್ತು ಆಯ್ತು, ಅವನ ಸ್ನೇಹಿತರಿಗೆಲ್ಲ ಫೋನ್ ಮಾಡಿದೆ ಆದರೆಯಾರೂ ಅವನಲ್ಲಿ ಇಲ್ಲ ಅಂದ್ರು, ನನಗೆ ಭಯ ಆಗುತ್ತಿದೆ, ಅವನು ಏನಾರ 'ಹೆಚ್ಹುಕಡಿಮೆ' ಮಾಡಿಕೊಂಡರೆ?

ಹೇಳುತ್ತಲೇ ಕಣ್ಣೀರು ಸುರಿಸುತ್ತ ರೋದಿಸತೊಡಗಿದ ಅವರನ್ನ ತಬ್ಬಿಕೊಂಡು ಸಂತೈಸಿದ ತಂದೆ, ಇಬ್ಬರುಮಕ್ಕಳ ಸಮೇತ  ಹೊರ ನಡೆದರೂ ಹೇಳುತ್ತಾ-

ನಾವ್ ಹೋಗಿ ಅವನೆಲ್ಲಿ ಇದ್ದರೂ ಹುಡುಕಿ ಕರೆ ತರುವೆವು, ನೀ ಚಿಂತಿಸಬೇಡ, ಧೈರ್ಯವಾಗಿರು..

 

ರೀ ಅವನಿಗೆ ಯಾವುದೇ ಕಾರಣಕ್ಕೂ 'ಹೊಡೆಯಬೇಡಿ' , ನೀವು 'ಸಮ್ಧಾನವಾಗಿ' ಹೇಳಿದ್ದರೆ ಅವನು ಮನೆಬಿಟ್ಟು ಸಿಟ್ ಆಗಿ ಹೋಗುತ್ತಿರಲಿಲ್ಲ,

ಅದ್ಕೆ ಅವ್ರು - ಅವನು ನನ್ನ ಮಗನೆ ಅಲ್ಲವೇ? 
ಕೋಪದಲ್ಲಿ ೨ ಮಾತು ಆಡಿದರೆ ಸಿಟ್ ಅಗೋದ?
 ಹಾಗಾದ್ರೆ ನಾವ್ ಏನೂ ಅನ್ನಬಾರದೆ?

ಆಯ್ತು ನಾ ಹೊಡೆಯೊಲ್ಲ, ಕರೆದುಕೊಂಡು ಬರುವೆ  ನೀ ಅಳಬೇಡ..
ಎಲ್ಲ ಒಳ್ಳೇದ್ ಆಗುವುದು ಅಂತ ಹೊರ ನಡೆದರು..

 

ಆಚೆ ಬಂದು  ತಮ್ಮ ಇಬ್ಬರು ಮಕ್ಕಳನ್ನ  ಅವನು ಎಲ್ಲೆಲ್ಲಿ ಹೆಚ್ಚು ಓಡಾಡುವನೋ ಅಲ್ಲೆಲ್ಲ ಹೋಗಿನೋಡಿಕೊಂಡು ಸಿಕ್ಕರೆ ನಂಗೆ ಫೋನ್ ಮಾಡಿ ಎಂದು ಹೇಳಿ,  ತನ್ ಪರಮಾಪ್ತ ಸ್ನೇಹಿತ ಶ್ರೀಧರ್ ಗೆ  ಈವಿಷ್ಯ ಹೇಳಿ ಸಂಕಟ ತೋಡಿಕೊಂಡಾಗ, ಅವರು ಹೇಳಿದ್ದು ಒಂದೇ ಮಾತು

ನೋಡೋ- ಇಂತ ಸಮಯದಲ್ಲಿ  ... ಹುಡುಗುರ್ ಯೋಚಿಸುವುದು 'ಆತ್ಮಹತ್ಯೆ'  ಬಗ್ಗೆನೇ  ಆದರೆ ನಿಮ್ಮಹುಡುಗನ ಬಗ್ಗೆ ನನಗೆ ಗೊತ್ತು ಅವನು ಹಾಗೇನು ಮಾಡಿಕೊಳ್ಳಲಾರ, ನೀ ಧೈರ್ಯವಾಗಿರು...

ಯಾವುದಕ್ಕೂ ಪೋಲಿಸ್  ಕಂಪ್ಲೇಟ್  ಕೊಡೋಣ ವೆ ?

ಬೇಡ- ಇವತ್ತು ಹುಡುಕೋಣ ಸಿಗದೇ ಇದ್ರೆ ಕಂಪ್ಲೇಟ್ ಮಾಡೋಣ ಎಂಬ ಶ್ರೀಧರ್ ಅವ್ರ ಮಾತಿನಂತೆಅವರೊಡನೆ  ಹೊರಟರು 'ಅವನನ' ಹುಡುಕಲು, ಹೋಗುತ್ತಾ ಆತ್ಮಹತ್ಯೆ ಮಾಡಿಕೊಳ್ಳುವವರುಆಯ್ದುಕೊ....  ಯಾವ ವಿಧಾನ ಜಾಸ್ತಿ ಎಂಬ  ಅವರ ಪ್ರಶ್ನೆಗೆ

ಶ್ರೀಧರ್ ಅವ್ರು-

ನೇಣು ಹಾಕಿಕೊಳ್ಳೋದು,

ವಿಷ ಕುಡಿಯೋದು,

ಬಸ್ಸು ಲಾರಿಗೆ ಬೀಳೋದು ,

ಆದರೆ ಜಾಸ್ತಿ ಎಂದರೆ 'ರೈಲು ಹಳಿ ' ಮೇಲೆ  ಬೀಳೋದು ಎಂದ ಕೂಡಲೇ ಮಿಕ್ಕೆಲ್ಲ ಬಿಟ್ಟು  ಮೊದಲುತಮ್ಮ ಮನೆಗೆ ಹತ್ತಿರ ಇರುವ ರೈಲು ಹಳಿಗುಂಟ  ಸರ್ವೀಸ್ ರಸ್ತೇಲಿ  ಬೈಕ್ ನಲ್ಲಿ ಹೋಗಿನೋಡಿದ್ದಾಯ್ತು  ಎಲ್ಲೋ ಇಲ್ಲ, ಅವರ ಬುಜ ತಟ್ಟಿ ಧೈರ್ಯವಾಗಿರು  ಎಂದರು ಶ್ರೀಧರ್..

 

ಸಿಟಿ ಬಿಟ್ಟು ಹೊರಗೆ ಇರುವ  ರೈಲು ಹಳಿಗಳನ್ ನೋಡೋಣವೇ? -ಶ್ರೀಧರ್ ಅವರ ಪ್ರಶ್ನೆ

 

ಅವ್ದಲ್ಲ ಅದು ಸರಿ, ಬನ್ನಿ ಅಲ್ಲೇ ನೋಡೋಣ, ಹಳಿಗುಂಟ  ಅಲ್ಲಲ್ಲಿ ಬೀಳುತ್ತಿದ್ದ  ಮಂದ ಬೆಳಕಲ್ಲೇನೋಡುತ್ತಾ ಸಾಗಿದರು..

 

ಅವನು ರೈಲು ಹಳಿಗೆ ತಲೆ ಕೊಟ್ಟು ಮಲಗಿದ  ಆ ಸಮಯದಲ್ಲಿ ಅವನು ಮಲಗಿದ್ದ ಸ್ಥಳಕ್ಕೆ ವಿರುದ್ಧದಿಕ್ಕಿನಲೀ  ಇದ್ದ  ಮನೆ ಒಂದರ ಮೇಲೆ  'ತಂಗಾಳಿ' ಸವಿಯಲು ಬಂದ ಹಿರಿಯರೊಬ್ಬರಿಗೆ ಈ ಹುಡುಗಹೀಗೆ   ಅಲ್ಲಿ ರೈಲು ಹಳಿಗುಂಟ ಸಾಗಿ ಬಂದು ಅತ್ತಿತ್ತ ನೋಡಿ ಕೆಳಗೆ ಬಗ್ಗಿ ನೋಡಿ ಏನೋ ಮಾಡಿ ಅಲ್ಲಿಮಲಗಿದ್ದು ನೋಡಿ ಮನ ಏನೋ 'ಕೇಡು' ಶಂಕಿಸಿ  ತಮ್ಮ 'ಗತ ನೆನಪು' ನೆನಪಿಗೆ ಬಂದು ಹೃದಯ ಧಗ್ದಆಗಿ ಓಡೋಡುತ್ತ  ಮೆಟ್ಟಿಲು ಇಳಿದರು...

ಎದುರು ಬ0ದ ಪತ್ನಿ,
ರೀ ಏನಾಯ್ತು?
ಯಾಕೆ ಓಡುತ್ತಿದ್ದೀರ?
ಎಲ್ಲಿಗೆ?
ಎಂಬೆಲ್ಲ ಪ್ರಶ್ನೆಗಳಿಗೆ,
ಇರು ಈಗ ಬಂದೆ ಎನ್ನುತ್ತಾ ದೂರ ಕಾಣುತ್ತಿದ್ದ ರೈಲು ಹಳಿ ಕಡೆ ಏದುಸಿರು ಬಿಡುತ್ತ ಓಡಿದರು..

 

ರೈಲು ಹಳಿಗಳು ಕಂಪಿಸುತ್ತಿರುವುದು  ಅವನಿಗೆ ಗೊತಾಗಿ  ಇನ್ನೇನು ರೈಲು ಇಲ್ಲೇ ಎಲ್ಲೋ ಹತ್ತಿರದಲ್ಲೇಬರುತ್ತಿದೆ  ಎನ್ನಿಸಿ ಮೈ ಕೈ ಎಲ್ಲ ಗಡ ಗಡ ನಡುಗಿ ಆದರೂ  ಮೈ ಮನ ಸ್ಟಿಫ್ ಮಾಡಿಕೊಂಡು ಮಲಗಿದ,ಕಣ್ಣು  ಮುಚ್ಚಲು ಪ್ರಯತ್ನಿಸಿದರೆ ಮುಚ್ಚಲೇ ಆಗುತ್ತಿಲ್ಲ,

ರೈಲು ಅವನಿಗೆ ಒಂದು ಕಿಲೋ ಮೀಟರ್ ದೂರದಲ್ಲಿ  ಬರುತ್ತಿದೆ ಅದು ಅವನನ ತಲುಪು ಕೆಲವೇನಿಮಿಷಗಳು...

 

ಹಳಿಗುಂಟ ಸಾಗುತ್ತಿದ್ದ ಬೈಕಿನಲ್ಲಿ  ಕುಳಿತಿದ್ದ  ಈರ್ವರು ಮೈ ಎಲ್ಲ ಕಣ್ಣಾಗಿಸಿಕೊಂಡು  ಎಲ್ಲೆಡೆನೋಡುತ್ತಿದ್ದರು ಸ್ವಲ್ಪ ಬಟ್ಟೆ ತರಹದ್ದು ಕಾನ್ಸೀದರೆ ಅವನೇನ? ಅಂತ ನಿಲ್ಲಿಸಿ ನೋಡುತ್ತಿದ್ದರು...

 

ಓಡೋಡುತ್ತ ಬಂದಿದ್ದ  ಹಿರಿಯರು ಬರುತ್ತಿದ್ದ ಈ ಟ್ರೇನ್ ನೋಡಿ ತಲೆ ಮೇಲೆ ಕೈ ಹೊತ್ತು ಉಸ್ಸಪ್ಪ

ಅಂತ ಕುಳಿತರು, ಛೆ  ನನ್ನಿಂದ ಒಂದು ವ್ಯಕ್ತಿ ಜೀವ ಕಾಪಾಡಲು ಆಗಲಿಲ್ಲವಲ್ಲ, ದೇವ್ರೇ ಏನಿದು?

ಅಂತ ಅಂದುಕೊಳ್ಳುತ್ತ ಇರುವಾಗಲೇ,  ಓಡೋಡುತ್ತ ಬಂದು ನೆಲದ ಮೇಲೆ ಮಂಡಿ ಊರಿ  ಕುಳಿತಿದ್ದ

ಹಿರಿಯರನ್ ನೋಡಿ ಬೈಕು ನಿಲ್ಲಿಸಿ  ಅವರ ಬಳಿ ಸಾರಿ ಎಬ್ಬಿಸಿ ಆಸರೆ ನೀಡಿ ನಿಲ್ಲಿಸಿ ಏನು ಆಯ್ತು?

ಎಂದುಕೇಳಲು , ದೂರದಲ್ಲಿ ಹಳಿ ಮೇಲೆ ಕೈ ತೋರ್ಸಿ  ಅಲ್ಲಿ ಯಾರೋ ಒಬ್ಬ ಹುಡುಗ ಸಾಯಲು ರೈಲು ಹಳಿಮೇಲೆ ಮಲಗಿದ್ದ ಅವನನ್ ಕಾಪಾಡಲು ಹೋದರೆ ..........  ಅಂತ ಕಣೀರು ಸುರಿಸಲು ಇಬ್ಬರೂ ಆ ದಿಕ್ಕಿನತ್ತ ಓಡಿದರು,

ಹತ್ತಿರವಾಗಿ ಇನ್ನೇನು ನಿಲ್ಲಿಸಿ ಓಡಬೇಕು ಅಸ್ತ್ರಲ್ಲಿ  ......

 

ಅವರಿಗೆ  ಅಡ್ಡಲಾಗಿ ಇನ್ನೊಂದು ದಿಕ್ಕ್ಕಿಂದ ಟ್ರೇನ್ ಒಂದು ಬರುತ್ತಿರುವುದು ಕಾಣಿಸಿ  ಪಕ್ಕಕೆ ಎಗರಿನಿಂತರು ಉಸಿರು ಬಿಗಿ ಹಿಡಿದುಕೊಂಡು..

ತಂ ಕಣ್ಣ ಮುಂದೆಯೇ ಮಗ ಸಾಯ ಹೊರಟಿರುವುದು
ನೋಡಲಾಗದೆ  ಅವನನ್ ಕಾಪಾಡಲು ಹೋದ
ಸ್ನೇಹಿತನನ್ನ ಗಟ್ಟಿಯಾಗಿ ಹಿಡಿದುಕೊಂಡು  ಶ್ರೀಧರ್ಹೇಳಿದರು-

ಟ್ರೇನ್ ಹತ್ತಿರ ಬರುತ್ತಿದೆ ಈಗ ಹೋದರೆ ಅಸ್ಟೇ-

ಏಯ್ ಏಯ್, ಟ್ರೇನ್ ಬರುತ್ತಿದೆ ದೂರ ಸರಿ, ನಾವ್ ಬಂದಿದಿವ್   ಎಂಬ 'ಇವರಿಬ್ಬರ'  ಕೂಗು ಆ ಟ್ರೇನ್

ಹಾಕಿದ ಎಂಜಿನ್ ಹಾರ್ನ್ ಶಬ್ಧದ ಮಧ್ಯೆ  ಸೇರಿ ಅವನಿಗೆ ಏನೂ ಕೇಳಿಸಲಿಲ...!!

 

 

 

ಅಧ್ರುಸ್ತವಾಶಾತ್  ಆ ಟ್ರೇನ್ ಬರುತ್ತಿದ್ದುದು  ಅವನು ಸಾಯಲು ಮಲಗಿದ್ದ  ರೈಲು ಹಳಿಯ  ಪಕ್ಕದ ಹಳಿಮೇಲೆ . ಅದು ರೈಲು ಗಳು ತನ್ನ 'ಪಥ ಬದಲಿಸಲು'  ಇದ್ದ ವ್ಯವಸ್ಥೆಯ  ಸ್ಥಳ, ಇನ್ನೇನು ರೈಲು ತನ್ನ ಮೇಲೆಹಾದೇ ಹೋಯ್ತು ಅಂತ ಉಸಿರು ಬಿಗಿ ಹಿಡಿದು  ಮಲಗಿದ್ದ ಅವನು  ಕಣ್ಣು ಬಿಟ್ಟು ನೋಡಿದರೆ  -ನಕ್ಚತ್ರ ಕಾಣ್ಸಿ !
ಛೆ!!
ನಾ ಇನ್ನು ...ವೆ?
 ದೂರ ಹೋಗುತ್ತಿದ್ದ ಟ್ರೇನ್ ನೋಡಲು ಗೊತ್ತಾಯ್ತು ಅದು'ಇನ್ನೊಂದು' ಹಳಿ ಮೇಲೆ ಹೋಗಿದೆ:((

 

 

 

ಎರಡು ಹಳಿಗಳು ಇವೆ, ಈ ಎರಡರಲ್ಲಿ ಟ್ರೇನ್ ಯಾವುದರ ಮೇಲೆ ಬರುತೋ? ಅದ್ಕೆ ಟ್ರೇನ್ ಹತ್ತಿರಬರುವವರೆಗೆ ನೋಡಿ, ಆ ಹಳಿ ಮೇಲೆ  ಹಾರಿದರೆ ಆಯ್ತು ಅಂತ ಅವನು  ಸಜ್ಜಾಗಿ ನಿಂತ..

ದೂರದಲಿ ಹಾರ್ನ್ ಹಾಕುತ್ತ ದಡ ಬಡ ಅಂತ ಬರುತ್ತಿದ್ದ ರೈಲಿನಲ್ಲಿ 'ಯಮನ ರೂಪ' ಕಂಡ ಅವನು ರೆಡಿಆದ..  ಮುಂಬೈ ಎಕ್ಸ್ಪ್ರೆಸ್ ರೈಲು  ಸ್ಪೀಡ್ನಲ್ಲಿ ಬರುತ್ತಿತ್ತು, ಆಗಲೇ ಓಡೋಡುತ್ತ ಬಂದ ಅವರಿಬ್ಬರಿಗೆ  ಅಲ್ಲಿರ್ರೈಲು ಹಳಿ ಪಕ್ಕ ಟ್ರೇನ್ ಬರುವುದನ್ನೇ ಕಾಯ್ತಾ ನಿಂತಿದ್ದವನು ಕಾಣಿಸಿ  ಅವನತ್ತ ಓಡಿದರು, ಜಲ್ಲಿಕಲ್ಲುಗ್ಗಳ ಕರಣ ವೇಗವಾಗಿ ಓಡಲು ಆಗದೆ  ಏಯ್ ದೂರ ಸರಿ  -ದೂರ ಸರಿ  ಅಂತ ಕೈ ಬೀಸಿ ಕಿರುಚುತ್ತಬರುತ್ತಿದ್ದ ತನ್ ತಂದೆ ಅವ್ರ ಸ್ನೇಹಿತರನ್ ನೋಡಿ ಅವನಿಗೆ ಭಯ ಆಯ್ತು, ಇಲ್ಲಿವರೆಗೂ ಹುಡುಕಿಕೊಂಡುಬಂದಿದ್ದಾರೆ,, ಕೈಗೆ ಸಿಕ್ಕರೆ ಅಸ್ಟೇ,

ಓಡಬೇಕು -ರೈಲಿಗೆ ವಿರುದ್ಧವಾಗಿ ಓಡಬೇಕು ಅಂತ ಅವನು ಓಡಲು ಶುರು ಮಾಡಿದ,

ಅವನು ನಿಲ್ಲುವನು -ನಮ್ ಹತ್ತಿರ ಬರುವನು ಅಂತ ಅಂದುಕೊಂಡಿದ್ದ ಅವರಿಬ್ಬರಿಗೆ ಅವನು ಹೀಗೆ ಓಡಲುಶುರು ಮಾಡಿದ್ದು ಮತ್ತು ದೂರ ಬರುತ್ತಿದ್ದ ಟ್ರೇನ್ ಕನಸಿ  ಅವನು 'ಏಕೆ ' ಓಡುತ್ತಿರುವನು ಅಂತ ಗೊತ್ತಾಗಿಅವರೂ ವೇಗವಾಗಿ ಓಡಲು ಶುರು ಮಾಡಿದರು..

 

ಟ್ರೇನ್ ಹತ್ತಿರ ಬರುತ್ತಿತ್ತು, ಹತ್ತಿರ ಬಂದೆ ಬಿಟ್ಟಿತು,

ಭಯಂಕರವಾದ ರೈಲು ಹಾರ್ನ್ ಮತ್ತು ದಡ -ಬಡ ಶಬ್ದ  ಹತ್ತಿರವಾಗಿ ಕೇಳಿಸಿ ಅವನಿಗೆ  ಭಯ ಆಯ್ತುಮೈ ಕೈ ನಡುಗಿತು..:())

 

ಅವನು ರೈಲಿಗೆ ಎದುರು ಕಣ್ಣು ಮುಚ್ಚಿಕೊಂಡು ಹಾರಿಯೇ ಬಿಟ್ಟ.............

 

ಆಗಲೇ ಹಿಂದಿನಿಂದ ಯಾವ್ದೋ ಕೈ ಗಳೆರಡು ಸೊಂಟಕ್ಕೆ  ಸುತ್ತಿಕೊಂಡು   ಅವನನ್ ಎಳೆದುಕೊಂಡುಪಕ್ಕಕ್ಕೆ ಬಿದ್ದ ಹಾಗಾಯ್ತು, ಇದೇನಾಯ್ತು ?

ಅಂತ ಅವನು ಕಣ್ಣು ಬಿಟ್ಟು ನೋಡಿದರೆ ಯಾರೋ 'ವಯಸ್ಸಾದ ' ಒಬ್ಬರು ರೈಲಿಗೆ ಬೀಳುತ್ತಿದ್ದ ಅವನನ್ಎಳೆದುಕೊಂಡು ಪಕ್ಕಕ್ಕೆ  ತಬ್ಬಿಕೊಂಡು ಬಿದ್ದಿದ್ದಾರೆ..

ಈ ಅನಿರೀಕ್ಷಿತ  ಸನ್ನಿವೇಶ ಮತ್ತ್ತು ಟ್ರೇನ್ ಶಬ್ಧಕ್ಕೆ ನೆಚ್ಚಿ ಬೀಳುತ್ತಾ ಗಡ ಗಡ ನಡುಗುತ್ತಿದ್ದ ಅವನನ್ಸಮಾಧಾನ ಅನ್ನುವಂತೆ  ತಲೆ ನೇವರಿಸಿ ಎಬ್ಬಿಸಿದರು, ಅವನು ದೂರ ಹೋಗುತ್ತಿದ್ದ ಟ್ರೇನ್ನೋಡತಿರಲು ಬುಜದ ಮೇಲೆ 'ಇನ್ನು ಎರಡು' ಕೈಗಳು, ಅವನ ತಂದೆ ಮತ್ತು ಶ್ರೀಧರ್ ಅವರದು...

 

ಹಿರಿಯರು- ಹೊಡಿ ಬೇಡಿ -ಹೊಡಿ ಬೇಡಿ, ಅನ್ನಲು,

ಇಲ್ಲ ಹಿರಿಯರೇ ನಾ ಹೊಡೆಯೊಲ್ಲ,

ಏನೋ ಕಾಲೇಜಿನಲ್ಲಿ ಓದಿನಲ್ಲಿ ಹಿಂದೆ ಬಿದ್ದಿದ್ದ ಅಂತ ಬೈದಿದ್ದಕ್ಕೆ  ಬುದ್ಧಿವಾದ ಹೇಳಿದ್ದಕ್ಕೆ  ಸಿಟ್ ಆಗಿಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದಾನೆ..

ಹೌದ?

ನಾ ಅಂದುಕೊಂಡಿದ್ದೆ ಈ ತರಹದ್ದು ಏನಾರ ಇರಬೇಕು ಅಂತ, ನನ್ನ ಇದ್ದ 'ಒಬ್ಬ ಮಗನೂ' ಹಿಂದೊಮ್ಮೆಇದೇ ಹಳಿಗಳ ಮೇಲೆ ಆತ್ಮಹತ್ಯೆ ಮಾಡಿಕೊಂಡಿರುವನು, ಅದನ್ನು ಮರೆಯಲು ಇನು ಆಗುತ್ತಿಲ್ಲ, ಅವನೂಓದಲ್ಲಿ ಹಿಂದೆ ಬಿದ್ದು ಅದ್ಯಾವ್ದೋ 'ಹುಡುಗಿ' ಹಿಂದೆ ಬಿದ್ದು  ಹಾಳಾಗಿ ಹೋಗುತ್ತಿದ್ದು ನೋಡಿ ಕೇಳಿಸುಮ್ಮನಿರದೆ ಬಯ್ದು ಮಾಡಿದ್ದೆ ಅದ್ಕೆ ಅವನು ನಮ್ ಕಣ್ಣು ಮುಂದೆಯೇ  ಓಡುತ್ತ ಬಂದು ಈ ಹಳಿ ಮೇಲೆಬಿದ್ದು....

ಮುಂದೆ ಹೇಳಲಾಗದೆ ಕಣೀರು ಸುರಿಸುತ  ಕುಸಿದು ಕೂತರು....

ಅವರನ್ನ ಸಂತೈಸುತ್ತ, ಹಳಿಯಿಂದ ಕೆಳಗಡೆ ಅವ್ರ ಮನೆ ಹತ್ತಿರ ಕರೆದುಕೊಂಡು ಬಂದರು….

 

ಓಡುತ್ತ   ಹೋದ ಪತಿ ಈಗ ಜೊತೆಗೆ ೩ ಜನ ಆಗಂತುಕರು  ನೋಡಿ ಏನೂ ಅರ್ಥ ಆಗದೆ ಏನೋ ಆಗಿದೆಅಂತ ಗೊತ್ತಾಗಿ ರೀ ಏನಾಯ್ತು?

ಯಾರು ಇವರೆಲ್ಲ ?

ಅಂತ ಕೇಳಲು

ಬನ್ನಿ ಅಮ್ಮ  ನಾವ್ ಹೇಳ್ತೇವೆ..

ನಾವ್ ಒಳಗಡೆ ಬರಬಹುದ?, ಅನ್ನಲು

ಬನ್ನಿ  -ಬನ್ನಿ  ಅಂತ ಮನೆ ಹೊಳಕ್ಕೆ ಆಹ್ವಾನಿಸಿದರು , ಹೊಳ ಹೀಗಿ ಕುಳಿತು ನೀರು ಕುಡಿದು -ಟೀ ಕುಡಿಯುತ್ತ ನಡೆದುದ್ದೆಲ್ಲವನ್ನು ಹೇಳಿದರು.,..

 

ಅವರೂ ಇದನ್ನೆಲ್ಲಾ ಕೇಳಿ ಕಣ್ಣೀರು ಹಾಕಿ ಗೋಡೆ ಮೇಲೆ ಹಾಕಿದ್ದ 'ಚಿತ್ರ ' ತೋರಿಸಿ  ಹೇಳಿದರು ಒಬ್ಬನೇಮಗ, ಈ ಹುಡುಗರೇ 'ಸೂಕ್ಷ್ಮ '  ನಾವ್ ಹೇಳಿದ್ದು ಹೇಳೋದು  ಎಲ್ಲವೂ  'ಅಸಹನೀಯ ' ಅನ್ನಿಸುತ್ತೆ, ಆದ್ರೆನಮ್ಮ ಮಕ್ಕಳು ನಮಗೆ  ಆ ಹಕ್ಕಿಲ್ಲವೇ?

ಅವರನ್ ಸಂತೈಸಿ  ಹೊರಡುವಾಗ 'ಅವನ' ತಲೆ ಮೇಲೇ ಕೈ ಆಡಿಸಿ ಮಗು ಇನ್ನು ಮುಂದೆ ಈ ರೀತಿ ಮಾಡಬೇಡ, ನಿಮ್ಮ 'ಅಮ್ಮನಿಗೆ'  ಎಷ್ಟು 'ದುಖ' ಆಗುತ್ತೆ ಅಂತ ನನ್ ನೋಡಿ ತಿಳಿದಿದೆ ಅಂದುಕೊಳ್ಳುವೆ,ಚೆನ್ನಾಗಿ ಓದಿ ಒಳ್ಳೆ ಕೆಲಸ ಹಿಡಿದು ಕೈ ತುಂಬಾ ಸಂಪಾದಿಸು  -ಆಗ ನೋಡು 'ಎಂತೆಂಥ'  ಹುಡುಗೀರುಸಿಗ್ತಾರೆ , ಸ್ವಲ್ಪ ಕಾಯಬೇಕು ಅಸ್ಟೇ , ನಿನಗೆ ಒಳ್ಳೆಯದಾಗಲಿ ಅಂತ ಹರಸಿ ಕಳಿಸಿದರು...

 

ಎಲ್ಲೆಲ್ಲು ಹುಡುಕಾಡಿ  ಅವನು ಸಿಗದೇ ಕಂಗಾಲಾಗಿ  ಬಸವಳಿದು ಬಂದಿದ್ದ ಹುಡಗರಿಬ್ರು  ಅದಾಗಲೇತಾಯಿಗೆ ಈ ವಿಷ್ಯ ತಿಳಿಸಿ  ಅವರ ದುಖ ಹೆಚ್ಚು ಆಗಿ, ಅವನಿಗೆ ಏನೋ ಆಗಿದೆ,  ಎಂದೆಲ್ಲ ರೋದಿಸಲು ಅವರ ಮಗಳು ಸಂತೈಸುತ್ತ  ಅಮ್ಮ ಅನ್ನಂಗೆ ಏನೂ ಆಗೋಲ್ಲ, ಪಪ ಹೋಗಿದ್ದಾರ?

ಇರು ಪಪ್ಪಂಗೆ  ಫೋನ್ ಮಾಡುವೆ ಅಂತ ಫೋನ್ ಹಚ್ಚಲು ,ಶ್ರೀಧರ್ ಅವ್ರು  ಬೈಕು ನಿಲ್ಲಿಸಿ

  ಹಾ!! ಸಿಕ್ಕಿರುವನು

ಕರೆದುಕೊಂಡು ಬರುತ್ತಿರುವೆವು  ಇನ್ನೇನು ೨೦ ನಿಮಿಷದಲ್ಲೇ  ಬರುವೆವು ಅಂತ ಹೇಳಲು  ಮನೆಯಲ್ಲಿ 'ಸಂತಸ ಸಡಗರ' ತುಂಬಿ ತುಳುಕಿ  ಎಲ್ಲರೂ ಗಡಿಬಿಡಿಯಲ್ಲಿ  ಅವನ್ನು 'ಸ್ವಾಗತಿಸಲು' ನಿಂತರುಬಾಗಿಲಲ್ಲಿ..

 

ದೂರದಲಿ ಬರುತ್ತಿರುವ ಬೈಕು ಮಧ್ಯದಲ್ಲಿ ಕುಳಿತಿರುವ ಅವನನ್ ನೋಡಿ  ಸಮಾಧಾನವಾಗಿ  ಅವನುಬೈಕಿಂದ ಇಳಿದದ್ದೇ ತಡ ಹೋಗಿ ಅಪ್ಪಿಕೊಂಡರು ತಾಯಿ . ಇಬ್ಬರ ಕಣ್ಣುಗಳಿಂದಲೂ   ಧಾರಾಕಾರವಾಗಿಕಣ್ಣೀರು ಹರಿದು ಬಂತು, ಇದನ್ನೆಲ್ಲಾ ನೋಡುತ್ತಿದ್ದ ಶ್ರೀಧರ್  , ಅವನ ಅಪ್ಪ, ತಮ್ಮ ತಂಗಿ ಯರ  ಕಣ್ಣು ತುಂಬಿ ಬಂತು..

ಶ್ರೀಧರ್ ಅವ್ರು ನನಗೆ ಹೊತ್ತಾಯ್ತು  ನಾ ಬರುವೆ ಅಂದರೂ  ಬಿಡದೆ  ಅವರನ್ನ  ಹೊಳ ಕರೆದು   ಟೀಕೊಟ್ಟು ಅವರು ಅವನ ತಲೆ ಮೇಲೆ ಕೈ ಆಡಿಸಿ ನೀ 'ಗುಡ್ ಸ್ಟುಡೆಂಟ್', ನಿನಗೆ ಏನೇತೊಂದ್ರೆ-ತಾಪತ್ರಯ ಆದರೆ ನನ್ ಕೇಳು, ನೀ 'ದೊಡ್ಡ ವ್ಯಕ್ತಿ ' ಆಗಬೇಕು ಒಳ್ಳೆ ಮಾರ್ಕ್ಸ್ ತೆಗೆದುಕೋ ಗುಡ್ ಲಕ್ ಎಂದು ಹೇಳಿ ಹೋದರು...

 

ಅಪ್ಪ-ಅಮ್ಮ- ಸಹೋದರ-ಸಹೋದರಿಯರ ಈ ಪ್ರೀತಿ-ಆದರ-ಖ್ಸುಷಿ  ನೋಡಿ 'ಅವನು'

ಛೆ! ನಾ ಏನು ಮಾಡಿಕೊಳ್ಳ ಹೊರಟಿದ್ದೆ ?

 ಅವಳಿಗಾಗಿ   ನಾ ಯಾಕೆ  ಕೊರಗಿ   ಸಾಯಬೇಕು ?

ಇಸ್ಟಕು  ಇದರಲ್ಲಿ ಅವಳ ತಪ್ಪು ಏನಿತ್ತು?

ನಾನೆ ಪ್ರೀತಿಸಿದ್ದು -ಹೇಳದೆ ಸುಮ್ಮನಿದ್ದು ಈಗ ಅವಳ ಮೇಲೆ ರೇಗಾಡಿ ಏನು ಉಪಯೋಗ?

ಶ್ರೀಧರ್ ಅಂಕಲ್  ಹೇಳಿದ ಹಾಗೆ ನಾ ಚೆನ್ನಾಗಿ ಓಡಬೇಕು,  ಒಳ್ಳೆ  ಮಾರ್ಕ್ಸ್ ತೆಗೆದುಕೊಂಡು ಡಿಗ್ರಿಮುಗಿಸಿ ಒಳ್ಳೆ ಜಾಬ್ ಹಿಡಿದು  ಕೈ ತುಂಬಾ ಹಣ ಸಂಪಾದಿಸಿ  ಅವಳಿಗಿಂತ  ಚೆನ್ನಗಿರುವವಳನ್ ಮದುವೆಆಗಬೇಕು..

 

ನಾ ಇವತ್ತಿಂದ ಹೊಸ ಮನುಷ್ಯ...

 

ಊಟ ಮಾಡಿ ಮಲಗಿ ಬೆಳಗ್ಗೆ ಎದ್ದು ಕಾಲೇಜಿಗೆ 'ಉತ್ಸಾಹದಿಂದಲೇ'  ಹೊರಟು ನಿಂತ ಮಗನಿಗೆ ತಲೆಸವರಿ  ಬಾಕ್ಸ್ ಕೊಟ್ಟ ತಾಯಿ  ಅವನತ್ತ ನೋಡಲು, ಮಮ್ಮಿ  ಡೋಂಟ್ ವರಿ  ನಾ ಇನ್ಯಾವತ್ತು ಹಾಗೆಮಾಡೋಲ್ಲ, ಅನ್ನಲು ಅವ್ರಿಗೆ ಸಮಾಧಾನ ಆಗಿ ಹೋಗಿ ಬಾ ಮಗನೆ ಅಂದರು,.

ಕಾಲೇಜಿಗೆ ಬಂದು  ಎದುರು ಬಂದ ವಿನೀತ -ವಿನೋದ್ ಗೆ  ಹಾಯ್ ಗುಡ್ ಮಾರ್ನಿಂಗ್ ಅನ್ನುತ್ತ ಹೊರಟ ಅವನನ್ನ ನೋಡಿ ವಿನೀತಳಿಗೆ ಮನಕೆ 'ರಿಲೀಫ್ ' ಅನ್ನಿಸಿತು..

'ಅವನ' ಸ್ನೇಹಿತರು  ಧಂಗಾಗಿ ಅವನಿಗೆ ಏನೂ ಆಗಲಿಲ್ಲವೇ?

ಎಂಬಂತೆ ಅಚ್ಚರಿಯಿಂದ  ನೋಡುತ್ತಾ ಮೂಖರಾಗಿ ಕುಳಿತರು...

 

ಮುಂದೆ ಎಲ್ಲವೂ ಸುಖಾಂತ್ಯ......

 

***ಸಾಯಲು ಇರಬಹುದು ೧-೨ ಕಾರಣ, ಆದ್ರೆ ಬಾಳಿ ಬದುಕಲು  ಉಲ್ಲಾಸ ಉತ್ಸಾಹದಿಂದ ಇರಲುಬಾಳಲ್ಲಿ ಇವೆ ೧೦೬ ಕಾರಣ***

------------------------------------------------------------

ಆಗಾಗ ಪತ್ರಿಕೆ-ಟೀ ವಿ ಗಳಲ್ಲಿ ಶಾಲಾ ಕಾಲೇಜು ವಿಧ್ಯಾರ್ಥಿಗಳ ಆತ್ಮಹತ್ಯೆ ಅದಕ್ಕೆ ಇದ್ದ ಕೆಲ ಸಣ್ಣ ಪುಟ ಕಾರಣಗಳು ಅದರಲ್ಲೂ  ಪ್ರೇಮ ವೈಫಲ್ಯ -ಮುಖ್ಯವಾಗಿ ಶಾಲಾ  ಕಾಲೇಜಿನ  'ಎಳೆ ' ವಿಧ್ಯಾರ್ಥಿಗಳಲಿಇದು ಹೆಚ್ಚಾಗಿದ್ದು 'ಮೊನ್ನೆ ಮೊನ್ನೆ'  ನಡೆದ  ಒಂದು ಘಟನೆ ಈ ಕಥೆಯಾಗಿ ಮೂಡಿ ಬಂತು, ಕಥೆಬರೆಯುವುವಾಗ ಹಲವು ಕಡೆ 'ಭಾವನಾತ್ಮಕ ' ಸನ್ನಿವೇಶಗಳನ್ನ -ಕಲ್ಪಿಸಿಕೊಂಡು ಅನುಭವಿಸಿಕೊಂಡು  ಬರೆಯುತ್ತ  ನಂಗೆ ಕಣ್ಣೀರು ಬಂದದ್ದು  ಉಂಟು...

 

  ಯಾವ ಪೋಷಕರು ಈ ಸಂಕಟ ಪಡಬಾರದು ,ಹೆತ್ತು ಹೊತ್ತು ಸಾಕಿ ಸಲಹಿದ  ಮಗ-ಮಗಳುಎಳವೆಯಲ್ಲೇ   ಆಕಸ್ಮಿಕ  ಅಕಾಲಿಕ ಮರಣ ಅಪ್ಪಿದರೆ ಅವರಿಗೆ ಆಗುವ ನೋವನ್ ಅದ್ಯಾವ ಚಿಕಿತ್ಸೆ-ಸಲಹೆ  ಸರಿ ಮಾಡಬಲ್ಲದು?...

ಪೋಷಕರು -ಮಕ್ಕಳ ಮಧ್ಯೆ ಆರೋಗ್ಯಕರ ಬಾಂಧವ್ಯ- ಗೆಳೆತನ  ಇದ್ದರೆ ಚೆನ್ನ ಅನ್ನಿಸುತ್ತಿದೆ...

 

ಆತ್ಮಹತ್ಯೆ ಮಹಾ ಪಾಪ.

 ಈಸಬೇಕು ಇದ್ದು ಜೈಸಬೇಕು  ಎಂಬ ಹಿರಿಯರ ನುಡಿ ಗಟ್ಟಿನ ನೆಲೆಯಲ್ಲಿ  ಅದನ್ನು ಅನ್ವಯಿಸಿ ಈ ಕಥೆಬರೆದಿರುವೆ...

 

 

ಶುಭವಾಗಲಿ....

 

ಚಿತ್ರ ಮೂಲ: http://farm3.staticflickr.com/2443/3990810349_e841c52906_z.jpg

 >>> ಮೊದಲ  -ಎರಡನೆಯ ಭಾಗಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಮುಂದೇನು??? ..............(ಕಥೆ)-ಭಾಗ -೧ | ಸಂಪದ - Sampada

http://sampada.net/blog/%E0%B2%AE%E0%B3%81%E0%B2%82%E0%B2%A6%E0%B3%87%E0%B2%A8%E0%B3%81-%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-%E0%B3%A7/25/03/2012/36105

 

ಮುಂದೇನು???.............(ಕಥೆ) ಭಾಗ -೨ | ಸಂಪದ - Sampada

http://sampada.net/blog/%E0%B2%AE%E0%B3%81%E0%B2%82%E0%B2%A6%E0%B3%87%E0%B2%A8%E0%B3%81%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-%E0%B3%A8/25/03/2012/36112

 

Rating
No votes yet

Comments